October 2024

ಸೌಮ್ಯಲತಾರಿಗೆ ಪ್ರಶಂಸಾ ಪತ್ರ ನೀಡಿ ಗೌರವಾರ್ಪಣೆ

ಅರಂತೋಡು : ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಇದರ ವತಿಯಿಂದ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಉತ್ತಮವಾಗಿ ಕಾರ್ಯಕ್ರಮಗಳನ್ನು ನಡೆಸಿರುವ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಸಂಘ (ರಿ) ಇದರ ಮೇಲ್ವಿಚಾರಕರಾದ ಸೌಮ್ಯಲತಾ ಇವರನ್ನು ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ.ಸೌಮ್ಯಲತಾರು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಶಟ್ಟಿ‌ಅವರ ಪತ್ನಿ.

ಸೌಮ್ಯಲತಾರಿಗೆ ಪ್ರಶಂಸಾ ಪತ್ರ ನೀಡಿ ಗೌರವಾರ್ಪಣೆ Read More »

ಹೆಲಿಕ್ಯಾಪ್ಟ‌ರ್ ಪತನ: ಮೂವರು ಸಾವು

ಪುಣೆ : ಹೆಲಿಕ್ಯಾಪ್ಟ‌ರ್ ಪತನವಾಗಿ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿರವ ಬವ್ಹಾನ್ ಬದ್ರುಕ್ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ಸ್ಥಳೀಯರು ಹಿಂಜೇವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಪಡೆಗಳು ಹಾಗೂ ಆಂಬುಲೆನ್ಸನ್ ಕೂಡಲೇ ಸ್ಥಳಕ್ಕೆ ಧಾವಿಸಿತಾದರೂ ಮೂವರು ಸಾವನ್ನಪ್ಪಿದ್ದರು. ಇದು ಖಾಸಗಿ ಹೆಲಿಕ್ಯಾಪ್ಟರ್ ಆಗಿದ್ದು, ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.

ಹೆಲಿಕ್ಯಾಪ್ಟ‌ರ್ ಪತನ: ಮೂವರು ಸಾವು Read More »

ಮುಖ್ಯ ಮಂತ್ರಿಯವರ ವಿರುದ್ದ ಪ್ರಕರಣ ದಾಖಲಿಸಲು ಕಾರಣರಾದ ಸ್ನೇಹಮಯಿ ಕೃಷ್ಣರಿಗೆ ಜಾಮೀನು ರಹಿತ ಬಂಧನ ವಾರಂಟ್

ಮೈಸೂರು: ಮುಡಾ ಹಗರಣ ನಡೆದಿದೆ ಎಂದು ದೂರು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ ವಿರುದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.ಹಳಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಎನ್.ಕುಮಾರ್ ಎಂಬುವವರು 2015ರಲ್ಲಿ ರಲ್ಲಿ ಆರ್‌ಟಿಐ ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.ಅಕ್ಟೋಬ‌ರ್ 1ರಂದು ಮಂಗಳವಾರ ವಿಚಾರಣೆಗೆ ದಿನಾಂಕ

ಮುಖ್ಯ ಮಂತ್ರಿಯವರ ವಿರುದ್ದ ಪ್ರಕರಣ ದಾಖಲಿಸಲು ಕಾರಣರಾದ ಸ್ನೇಹಮಯಿ ಕೃಷ್ಣರಿಗೆ ಜಾಮೀನು ರಹಿತ ಬಂಧನ ವಾರಂಟ್ Read More »

ಮನೆಯಲ್ಲಿ ಗಿಳಿ ಸಾಕಿದ್ರೆ ಏನಾಗುತ್ತದೆ ?ಇಲ್ಲಿದೆ ಮಾಹಿತಿ

ಮನೆಯಲ್ಲಿ ಗಿಳಿ ಸಾಕುವುದರಿಂದ ವಾಸ್ತು ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.ಮನೆಯಲ್ಲಿ ಯಾವುದೇ ಸಾಕು ಪ್ರಾಣಿಗಳಿದ್ದರೆ ನಮ್ಮ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ .ಮನೆಯಲ್ಲಿ ನಡೆಯುವ ಶುಭ ಅಶುಭ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಮನೆಯಲ್ಲಿ ಎರಡು ಜೋಡಿ ಗಿಳಿಗಳನ್ನು ಸಾಕುವುದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿ ಲಕ್ಷ್ಮಿಯ ಕೃಪೆ ಕಟಾಕ್ಷ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ದೊಡ್ಡ ಸ್ಥಳ ಇದ್ದರೆ ಮಾತ್ರ ಗಿಳಿಯನ್ನು ಸ್ವಚಂದವಾಗಿ ಹಾರಾಡಲು ಬಿಟ್ಟು ನೀವು

ಮನೆಯಲ್ಲಿ ಗಿಳಿ ಸಾಕಿದ್ರೆ ಏನಾಗುತ್ತದೆ ?ಇಲ್ಲಿದೆ ಮಾಹಿತಿ Read More »

ಕಾರು ಡಿಕ್ಕಿ ಹೊಡೆದು ಬಾಲಕ ದುರ್ಮರಣ

ಕೊಕ್ಕಡ : ಕೊಕ್ಕಡದಲ್ಲಿ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ಘಟನೆ ಮಂಗಳವಾರ ವರದಿಯಾಗಿದೆ.ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ನಿವಾಸಿ ಅಬ್ದುಲ್ ಹಮೀದ್ ರವರ ಮಗ ನವಾಫ್ ಇಸ್ಮಾಯಿಲ್ (10 ವ.) ಮೃತಪಟ್ಟ ವಿದ್ಯಾರ್ಥಿ. ಆತೂರಿನ ಆಯಿಷಾ ಸ್ಕೂಲ್ ನ ನಾಲ್ಕನೇ ತರಗತಿಯ ವಿಧ್ಯಾರ್ಥಿ.ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು ಎನ್ನಲಾಗಿದೆ. ಅವರ ಮೇಲೆಯೇ ಕಾರು ಹರಿದ ಪರಿಣಾಮ ತಲೆ ಮತ್ತು

ಕಾರು ಡಿಕ್ಕಿ ಹೊಡೆದು ಬಾಲಕ ದುರ್ಮರಣ Read More »

(ಲೇಖನ) ಫೋಟೋಶೂಟ್‌ಗಾಗಿ ನಾನಾ ವೇಷ..!

ನಾವೆಲ್ಲಾ ಸಣ್ಣವರಿದ್ದಾಗಿನ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ದೃಷ್ಟಿ ಬೀಳುತ್ತದೆ ಎಂದು ಇಡೀ ಮುಖದಲ್ಲಿ ಜಾಗವಿದ್ದ ಕಡೆಯಲೆಲ್ಲಾ ಕಪ್ಪು ಬೊಟ್ಟುಗಳಿಂದ ತುಂಬಿಸುತ್ತಿದ್ದರು. ಬಾಲ್ಯದ ದಿನಗಳ ಯಾವುದಾದರೂ ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೋ ಸಿಕ್ಕಿದರೆ ನಮ್ಮ ಮುಖವನ್ನು ನೋಡಿ ನಮಗೇ ನಗು ಬರುವಷ್ಟು..ಆದರೀಗ ಕಾಲ ಸಂಪೂರ್ಣ ಬದಲಾಗಿದೆ. ಈಗೇನಿದ್ದರೂ ಫೋಟೋಶೂಟ್‌ ಕಾಲ. ಹುಟ್ಟಿದ ಕೂಡಲೇ ಆರಂಭವಾಗುವ ಫೋಟೋಶೂಟ್‌, ನಾಮಕರಣ, ಒಂದನೇ ವರ್ಷ, ಎರಡನೇ ವರ್ಷ..ಹೀಗೆ ಸಾಗುತ್ತದೆ. ಇನ್ನು ಮೆಟರ್ನಿಟಿ ಫೋಟೋಶೂಟ್‌, ಪ್ರಿ ವೆಡ್ಡಿಂಗ್‌‌, ಪೋಸ್ಟ್‌ ವೆಡ್ಡಿಂಗ್ ಫೋಟೋಶೂಟ್‌, ಅಷ್ಟೇ ಏಕೆ? ವಿಚ್ಚೇದನಕ್ಕೂ

(ಲೇಖನ) ಫೋಟೋಶೂಟ್‌ಗಾಗಿ ನಾನಾ ವೇಷ..! Read More »

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರದ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿ

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷವು ಮಂಗಳವಾರ (ಅ.1) ಅಭ್ಯರ್ಥಿ ಅಂತಿಮಗೊಳಿಸಿದೆ.ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕಾರಣದಿಂದ ತೆರವಾಗಿದ್ದ ವಿಧಾನ ಪರಿಷತ್ ಕ್ಷೇತ್ರದ ಸದಸ್ಯತ್ವಕ್ಕೆ ಚುನಾವಣೆ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಬೊಟ್ಯಾಡಿ ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸಿದೆ.

ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರದ ಉಪಚುನಾವಣೆ,ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಬೊಟ್ಯಾಡಿ Read More »

ವಿದ್ಯಾರ್ಥಿನಿ ಆತ್ಮಹತ್ಯೆ

ಮುಲ್ಕಿ: ವಿದ್ಯಾರ್ಥಿನಿ ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಮುಲ್ಕಿ ಸಮೀಪದ ಅತಿಕಾರಿಬೆಟ್ಟು ರೈಲ್ವೆ ಗೇಟ್ ಬಳಿಯ ಕ್ವಾಟರ್ಸ್‌ನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಕೊಂಕಣ ರೈಲ್ವೆ ಗೇಟ್ ಸಿಬ್ಬಂದಿ ಮಹೇಶ್ ನಾಯಕ್ ಎಂಬವರ ಪುತ್ರಿ ಉಜ್ವಲ (17) ಎಂದು ಗುರುತಿಸಲಾಗಿದೆ.ರೈಲ್ವೇ ಕ್ವಾಟರ್ಸ್‌ನ ಮನೆಯ ಎದುರು ಬದಿಯ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಪ್ಯಾನ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಉಜ್ವಲ ಮುಲ್ಕಿ ಖಾಸಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿನಲ್ಲಿ ನಡೆದ ಮೀಟಿಂಗ್ ಮುಗಿದ ಬಳಿಕ ಮನೆ ಕಡೆ ಬಂದಿದ್ದು,

ವಿದ್ಯಾರ್ಥಿನಿ ಆತ್ಮಹತ್ಯೆ Read More »

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ

ಸುಳ್ಯ : ಈ ವರ್ಷ ರಾಜ್ಯ ಮಟ್ಟದಲ್ಲಿ ನಡೆದಿರುವ ಪಿಜಿಸಿಇಟಿ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಜ್ಜಾವರ ಗ್ರಾಮದ ಮೇನಾಲ ಸುಭೋದ್ ಶೆಟ್ಟಿ – ಶ್ರೀಮತಿ ಶಿಲ್ಪಾ ದಂಪತಿಗಳ ಪುತ್ರ ಪ್ರಣಾಮ್ ಶೆಟ್ಟಿ ಮೇನಾಲ ರಾಜ್ಯದಲ್ಲಿ 8 ನೇ ರ್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ರಾಜ್ಯದಲ್ಲಿ ಒಟ್ಟು 47436 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು, ಅವರಲ್ಲಿ ಪ್ರಣಾಮ್ ಶೆಟ್ಟಿಯವರು 8 ಸ್ಥಾನ ಪಡೆದಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಳ್ಯ ರೋಟರಿ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿ, ಪುತ್ತೂರು

ಪ್ರಣಾಮ್ ಶೆಟ್ಟಿ ಮೇನಾಲರಿಗೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ Read More »

ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಈಡಿ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (MUDA)ಹಗರಣ ನಡೆದಿದೆ ಎನ್ನಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯವು (ಈಡಿ) ಸೋಮವಾರ(ಸೆ.30) ಪ್ರಕರಣ ದಾಖಲಿಸಿದೆ.ಲೋಕಾಯುಕ್ತ ಎಫ್ ಐಆರ್ ನಲ್ಲಿ ಉಲ್ಲೇಖವಾದ ಹೆಸರುಗಳ ಮೇಲೆ ಇಡಿ ಇಸಿಐಅರ್ ದಖಾಲಾಗಿದೆ.ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ಹೆಸರುಗಳ ಉಲ್ಲೇಖವಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಈಡಿ Read More »

error: Content is protected !!
Scroll to Top