October 2024

ವಿಧಾನಪರಿಷತ್ ಚುನಾವಣೆ : ಆಲೆಟ್ಟಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಮತದಾನ

ವಿಧಾನಪರಿಷತ್‌ ಚುನಾವಣೆ ಹಿನ್ನಲೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಮತ ಚಲಾವಣೆ ಮಾಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ,ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ, ಸದಸ್ಯರಾದ ದಿನೇಶ್ ಕಣಕ್ಕೂರು, ಸುದೇಶ್ ಅರಂಬೂರು, ಶಿವಾನಂದ ರಂಗತ್ತಮಲೆ, ಪುಷ್ಪಾವತಿ ಕುಡೆಕಲ್ಲು, ಶಶಿಕಲಾ ದೋಣಿಮೂಲೆ,ಭಾಗೀರಥಿ ಪತ್ತುಕುಂಜ,ಅನಿತಾ ಅರಂಬೂರು, ಶಾಂತಪ್ಪ ಪಿಂಡಿಬನ ಮತ ಚಲಾಯಿಸಿದರು.

ವಿಧಾನಪರಿಷತ್ ಚುನಾವಣೆ : ಆಲೆಟ್ಟಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಮತದಾನ Read More »

ವಿಧಾನ ಪರಿಷತ್ ಚುನಾವಣೆಗೆ ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ

ಅಜ್ಜಾವರ : ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದರು.ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ ಕರ್ಲಪ್ಪಾಡಿ, ಸತ್ಯವತಿ ಬಸವನಪಾದೆ, ದಿವ್ಯಾ ಪಡ್ಡಂಬೈಲು, ಸರೋಜಿನಿ ಕರಿಯಮೂಲೆ, ರತ್ನಾವತಿ ಹನಿಯಡ್ಕ ತಮ್ಮ ಮತವನ್ನು ಚಲಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಅಜ್ಜಾವರ ಶಕ್ತಿ ಕೇಂದ್ರ ಪ್ರಮುಖರಾದ ರಾಜೇಶ್ ಮೇನಾಲ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ

ವಿಧಾನ ಪರಿಷತ್ ಚುನಾವಣೆಗೆ ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ Read More »

ನಿವೃತ್ತ ಕ್ರಷಿ ಇಲಾಖೆಯ ಉದ್ಯೋಗಿ ಕೇಶವ ನಾಯಕ್ ಬೆಟ್ಟಂಪಾಡಿ ನಿಧನ

ಸುಳ್ಯ ನಗರದ ಬೆಟ್ಟಂಪಾಡಿ ಕೇಶವ ನಾಯಕ್ ಅಸೌಖ್ಯದಿಂದು ಅ.21 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅವರಿಗೆ 67 ವರ್ಷ ಪ್ರಾಯವಾಗಿತ್ತು.ಅವರು ಕ್ರಷಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು.ಮ್ರತರು ಪತ್ನಿ ಉಷಾ,ಮಕ್ಕಳಾದ ಶರ್ಮಿಳ,ರೇಷ್ಮಾ,ರಮ್ಯ, ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.

ನಿವೃತ್ತ ಕ್ರಷಿ ಇಲಾಖೆಯ ಉದ್ಯೋಗಿ ಕೇಶವ ನಾಯಕ್ ಬೆಟ್ಟಂಪಾಡಿ ನಿಧನ Read More »

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಇನ್ನಿಲ್ಲ!

ತೆಂಕುತಿಟ್ಟು ಪ್ರಸಿದ್ದ ಹಾಸ್ಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇಂದು (ಸೋಮವಾರ) ಬೆಳಗ್ಗೆ ನಿಧನ ಹೊಂದಿದ್ದಾರೆ.ಅವರಿಗೆ 67 ವರ್ಷ ಪ್ರಾಯವಾಗಿತ್ತು.ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ತೆರಳಿದ್ದ ಅವರಿಗೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ಹೃದಯಘಾತವಾಗಿದೆ ಎಂದು ತಿಳಿದು ಬಂದಿದೆ.ಹಿರಿಯ ಯಕ್ಷಗಾನಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋಗಿದ್ದರು. ಅವರನ್ನು‌ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.ಅನೇಕ ಅಭಿಮಾನಿಗಳು,ಯಕ್ಷಗಾನ ಕಲಾವಿದರು ಜಯರಾಮ ಆಚಾರ್ಯರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಇನ್ನಿಲ್ಲ! Read More »

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಕಾರು ಅಪಘಾತ

ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಡಿಸೈರ್ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನಕ್ಕೆ ತಿರುಗುವ ವಿಷ್ಣು ಸರ್ಕಲ್ ಬಳಿ ವಿದ್ಯುತ್‌ ಕಂಬಕ್ಕೆ ಹೊಡೆದಿದೆ.ಅಪಘಾತಕ್ಕೆ ಕಾರಿನ ಮುಂಭಾಗ ಜಖಂಗೊಂಡಿದ್ದು ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ.ಪ್ರಯಾಣಿಕರು ಗಾಯಗೊಂಡು ಪ್ರಾಣಾಪಾಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ‌ ತಿಳಿದು ಬರಬೇಕಾಗಿದೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಕಾರು ಅಪಘಾತ Read More »

Prime Minister Internship Scheme 1 Crore Youth 2024: Overview, Benefits, and Application Process

The Government of India has introduced the Prime Minister Internship Scheme 1 Crore Youth 2024, announced by Finance Minister Nirmala Sitharaman during the Union Budget presentation. This scheme aims to provide internships and financial support to students who have completed their education, helping them gain valuable industry experience and become self-sufficient. Key Highlights of the

Prime Minister Internship Scheme 1 Crore Youth 2024: Overview, Benefits, and Application Process Read More »

ಬೆಡ್ ಶೀಟ್ ವಿಚಾರಕ್ಕೆ ಅಕ್ಕ ತಂಗಿ ಜಗಳ; ಯುವತಿ ಆತ್ಮಹತ್ಯೆಗೆ ಶರಣು

ಬೆಂಗಳೂರು : ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ವರದಿಯಾಗಿದೆ. ಶ್ರಾವ್ಯ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶ್ರಾವ್ಯ ತನ್ನ ಅಕ್ಕನ ಜೊತೆ ಬೆಡ್ ಶೀಟ್ ಬಗ್ಗೆ ಜಗಳವಾಡಿದ್ದಳು. ಇದರಿಂದ ಮನನೊಂದು ಶ್ರಾವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಡ್ ಶೀಟ್ ವಿಚಾರಕ್ಕೆ ಅಕ್ಕ ತಂಗಿ ಜಗಳ; ಯುವತಿ ಆತ್ಮಹತ್ಯೆಗೆ ಶರಣು Read More »

ಮನೆಯ ಬಾಗಿಲ ಬೀಗ ಮುರಿದು ರೂ.12 ಲಕ್ಷ 28 ಪವನ್ ಚಿನ್ನ ಕಳವು

ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ಅಕ್ಕೇಣಿ ಸುಂದರ ಗೌಡ ಎಂಬವರ ಮನೆಯಿಂದ ರೂ. 12 ಲಕ್ಷ ಮತ್ತು ಅಂದಾಜು 28 ಪವನ್ ಚಿನ್ನ ಕಳ್ಳತನವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಅಕ್ಕೇಣಿ ಸುಂದರ ಗೌಡರು ತಮ್ಮ ಕುಟುಂಬದೊಂದಿಗೆ ಅ. 17ರಂದು ಸಂಜೆ ಮನೆಗೆ ಬೀಗ ಹಾಕಿ ತಮ್ಮ ಮಗಳ ಮನೆ ಪೆರಿಗೇರಿಗೆ ಹೋಗಿದ್ದರು. ಇಂದು ಮಧ್ಯಾಹ್ನ ಮನೆಗೆ ಹಿಂತಿರುಗಿ ಬಂದಾಗ ಮನೆಯ ಎದುರು ಬಾಗಿಲಿನ ಬೀಗ ಮುರಿದಿರುವುದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ರೂ. 12

ಮನೆಯ ಬಾಗಿಲ ಬೀಗ ಮುರಿದು ರೂ.12 ಲಕ್ಷ 28 ಪವನ್ ಚಿನ್ನ ಕಳವು Read More »

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ

ಕುಕ್ಕೆ ಸುಬ್ರಹ್ಮಣ್ಯದ ಪರಿಸರದಲ್ಲಿ ಭಾನುವಾರ ಭಾರೀ ಸುರಿದಿರುವ ಬಗ್ಗೆ ವರದಿಯಾಗಿದೆ.ಮಳೆ ನೀರು ತುಂಬಿ ಹರಿದಿದ ಪರಿಣಾಮ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಹೊರ ಭಾಗಕ್ಕೆ ನೀರು ಆವರಿಸಿದೆ. ಆದಿ ಸುಬ್ರಹ್ಮಣ್ಯ ದ ಕೆಲ ಅಂಗಡಿಗೆ ನೀರು ನುಗ್ಗಿರುವುದಾಗಿ ತಿಳಿದು ಬಂದಿದೆ. ಸುತ್ತಮುತ್ತಲಿನ ತೋಟಕ್ಕೂ ನೀರು ನುಗ್ಗಿ ಹಾನಿ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆ Read More »

error: Content is protected !!
Scroll to Top