November 2024

ಭಜನೆ ಇದ್ದಲ್ಲಿ ವಿಭಜನೆ ಇಲ್ಲ :ರಾಜಶೇಖರಾನಂದ ಸ್ವಾಮೀಜಿ

ಹಿಂದೂ ಸಮಾಜವನ್ನು ಒಗ್ಗೂಡಿಸಲು ಭಜನೆಯೊಂದೆ ಅಸ್ತ್ರ.ಭಜನೆ ಇದ್ದಲಿ ವಿಭಜನೆ ಇಲ್ಲ ಭಜನೋತ್ಸವದಂತಹ ಕಾರ್ಯಕ್ರಮಗಳು ಧರ್ಮದ ಜಾಗೃತಿ ಮಾಡುತ್ತವೆ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಯವರು ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕು ಸುಳ್ಯ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ ಸಮಿತಿ ಸಂಪಾಜೆ ವಲಯ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಭಜನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಅವರು ದೀಪ […]

ಭಜನೆ ಇದ್ದಲ್ಲಿ ವಿಭಜನೆ ಇಲ್ಲ :ರಾಜಶೇಖರಾನಂದ ಸ್ವಾಮೀಜಿ Read More »

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ

ಇಂದು ಸಂಜೆ ಕಲ್ಲುಗುಂಡಿ ಸಮೀಪ ವಾಹನ ಅಪಘಾತವಾಗಿದ್ದು ಅದರಲ್ಲಿ ಓರ್ವ ಗಾಯಾಳುವನ್ನು ಆಂಬುಲೆನ್ಸ್ ನಲ್ಲಿ ಸುಳ್ಯ ತಾಲೂಕು ಆಸ್ಪತ್ರೆಗೆ ಕರೆ ತಂದಾಗ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಇರುವ ಜಾಗದಲ್ಲಿ ವೈದ್ಯರೊಬ್ಬರ ಕಾರು ನಿಲ್ಲಿಸಿದ್ದು ಗಾಯಳುವನ್ನು ಇಳಿಸಲು ಜಾಗವಿಲ್ಲದ ಪರಿಸ್ಥಿತಿ ಉಂಟಾಯಿತು.ಈ ವೇಳೆ ಕಾರನ್ನು ತೆಗೆಯಲು ಆಂಬುಲೆನ್ಸ್ ಚಾಲಕ ಹೇಳಿದರೂ ಕಾರು ತೆಗೆಯದೆ ವೈದ್ಯರು ಸಿಟ್ಟುಗೊಂಡರು.ಬಳಿಕ ಆಂಬುಲೆನ್ಸ್‌ ಚಾಲಕ ಮತ್ತು ವೈದ್ಯರ ನಡುವೆ ಅಲ್ಪ ಸ್ವಲ್ಪ ಮಾತಿಗೆ ಮಾತು ಬೆಳೆಯಿತು. ಬಳಿಕ ಕಾರಿನಳಿನಲ್ಲಿದ್ದ ಗಾಯಳುವನ್ನು ಹೊರಗೆ

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್‌ ಮಾಡಿದ್ದ ವೈದ್ಯರು !ಆಂಬ್ಯುಲೆನ್ಸ್ ನಲ್ಲಿ ಕರೆ ತಂದ ರೋಗಿಯನ್ನು ಆಸ್ಪತ್ರೆಯ ಎದುರು ಇಳಿಸಲು ಜಾಗವಿಲ್ಲದೇ ಸಮಸ್ಯೆಗೊಳಗಾದ ಚಾಲಕ Read More »

ನೆಲ್ಯಾಡಿ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕುಂಬ್ರ ನಿವಾಸಿ ಸಾವು

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರುಮೃತಪಟ್ಟ ಘಟನೆ ವರದಿಯಾಗಿದೆ.ಮ್ರತ ವ್ಯಕ್ತಿ ಕುಂಬ್ರ ನಿವಾಸಿ ಎಂದು ಹೇಳಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ .ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನೆಲ್ಯಾಡಿ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕುಂಬ್ರ ನಿವಾಸಿ ಸಾವು Read More »

ಕಲ್ಲುಗುಂಡಿಯಲ್ಲಿ ಕಾರು ಟಾಟಾ ಏಸ್ ಭೀಕರ ಅಪಘಾತ

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಬಂಗ್ಲಗುಂಡ್ಡೆ ಬಳಿಯಲ್ಲಿ ಕಾರಿಗೆ ಡಿಕ್ಕಿಯಾಗಿ ಟಾಟಾ ಏಸ್ ವಾಹನ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಪ್ರಯಾಣಿಕರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಲ್ಲುಗುಂಡಿಯಲ್ಲಿ ಕಾರು ಟಾಟಾ ಏಸ್ ಭೀಕರ ಅಪಘಾತ Read More »

ಆರಂಬೂರು ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ ಕಲೋತ್ಸವ ಕಾರ್ಯಕ್ರಮ

ಸುಳ್ಯ ಕ್ಲಸ್ಟರ್ ಮಟ್ಟದ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯದ ಪ್ರೋತ್ಸಾಹ ವಾಗಿ ಅರಂಬೂರು ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನ.17 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಹಾಜಿ ರಜಾಕ್ ಕರಾವಳಿ ವಹಿಸಿದರು.ಕಾರ್ಯಕ್ರಮದಲ್ಲಿಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಬಾಷಾ ಸಾಹೇಬ್ , ಬದ್ರ್ ಜುಮಾ ಮಸೀದಿ ಖತೀಬ್ ಮೊಹಿ ನುದ್ದೀನ್ ಫೈಝಿ,ಎಸ್ ಕೆ ಎಸ್ ಎಸ್ ಎಫ್ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ ,ಎಸ್ ಕೆ ಎಸ್

ಆರಂಬೂರು ಎಸ್ಕೆಎಸ್ಎಸ್ಎಫ್ ಸುಳ್ಯ ಕ್ಲಸ್ಟರ್ ಕಲೋತ್ಸವ ಕಾರ್ಯಕ್ರಮ Read More »

ಮರದಲ್ಲಿ ಮೃತದೇಹ ಪತ್ತೆ

ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಕೊಡಂಗೆ ಎಂಬಲ್ಲಿ ಹರಿಯುವ ನದಿಯಲ್ಲಿ ಅಡ್ಡವಾಗಿ ಬಿದ್ದಿರುವ ಮರದ ಕೊಂಬೆಯಲ್ಲಿ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವೊಂದು ಪತ್ತೆಯಾಗಿದೆ. ಮೃತ ದೇಹವನ್ನು ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಶೀತಲಿಕರಣ ಶವಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಗುರುತು/ವಾರಿಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಸಂರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿಂದು ತಿಳಿಸಲಾಗಿದೆ.

ಮರದಲ್ಲಿ ಮೃತದೇಹ ಪತ್ತೆ Read More »

ಅರಂತೋಡು ಭಾಸ್ಕರ ಗೌಡ ಉಳುವಾರು ನಿಧನ

ಅರಂತೋಡು ಗ್ರಾಮದ ಉಳುವಾರು ಯು. ಪಿ.ಭಾಸ್ಕರ ಗೌಡ ( 83 ವ)ರವರು ಅಲ್ಪಕಾಲ ಅಸೌಖ್ಯ ದಿಂದ ನ.17 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನ ರಾದರು.ಮೃತರು ಪತ್ನಿ ಜಲಜಾಕ್ಷಿ, ಗಂಡು ಮಕ್ಕಳಾದ ಶಿವ ಶಂಕರ ,ಚಿದಂಬರ ಹೆಣ್ಣು ಮಗಳಾದ ಚಿತ್ರ ಹಾಗೂ ಅಪಾರ ಕುಟುಂಬ ಸ್ಥರನ್ನು ಅಗಲಿದ್ದಾರೆ.

ಅರಂತೋಡು ಭಾಸ್ಕರ ಗೌಡ ಉಳುವಾರು ನಿಧನ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಟನೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವರ ಮೇಲೆ ಪ್ರಕರಣ ದಾಖಲು

ಕಸ್ತೂರಿರಂಗನ್ ವರದಿ ವಿರೋಧಿಸಿ ಶುಕ್ರವಾರ ಮಧ್ಯಾಹ್ನ ಗುಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿ ಗುಂಡ್ಯದಲ್ಲಿ ಅನುಮತಿ ಪಡೆಯದೆ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋ‌ರ್ ಶಿರಾಡಿ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್.ಐ.ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಟನೆ ನಡೆಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವರ ಮೇಲೆ ಪ್ರಕರಣ ದಾಖಲು Read More »

ಪೂಜಾ ಬೋರ್ಕರ್ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ

ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಕಲೆ,ಸಾಹಿತ್ಯ ಭಾಷೆ, ನೆಲ- ಜಲ ,ಸಂಸ್ಕೃತಿ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಗೈದ ಗಣ್ಯರಿಗೆ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರವನ್ನೂ ನೀಡಿ ಗೌರವಿಸಲಾಗುತ್ತಿದೆ. ಪೆನ್ಸಿಲ್ ಆರ್ಟ್, ವಾಲ್ ಆರ್ಟ್ ಆರ್ಕಿಲಿಕ್ ಆರ್ಟ್ ಮುಖವಾಡ ತಯಾರಿ ಕ್ಯಾನ್ವಾಸ್ ಆರ್ಟ್ ಹಾಗೂ ಇತರ ಚಿತ್ರಕಲೆ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಪೂಜಾ ಬೋರ್ಕರ್ ಅವರನ್ನು ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿ ಪುರಸ್ಕಾರವನ್ನು ನವಂಬರ್

ಪೂಜಾ ಬೋರ್ಕರ್ ಬೆಳಗಾವಿ ಸುವರ್ಣ ಮಹೋತ್ಸವ ಪುರಸ್ಕಾರಕ್ಕೆ ಆಯ್ಕೆ Read More »

ನ.23ಕ್ಕೆ ಅರಂತೋಡಿನಲ್ಲಿ 27 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 23.11.2024ರ ಶನಿವಾರದಂದು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ.ಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ ಶಿಕ್ಷಕರಾದ

ನ.23ಕ್ಕೆ ಅರಂತೋಡಿನಲ್ಲಿ 27 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ Read More »

error: Content is protected !!
Scroll to Top