November 2024

ಕುಂತೂರು ಶಾಲೆಯ ಕೊಠಡಿ ನಿರ್ಮಾಣಕ್ಕೆ 29 ಲಕ್ಷರೂ. ಅನುದಾನ ಮಂಜೂರು

ಕಟ್ಟಡ ಕುಸಿದು ಬಿದ್ದು ವಿದ್ಯಾರ್ಥಿಗಳು ಗಾಯಗೊಂಡು ಭಾರೀ ಸುದ್ದಿಯಾಗಿದ್ದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ನೂತನ ಕೊಠಡಿ ನಿರ್ಮಾಣಕ್ಕಾಗಿ 29 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಆ.27 ರಂದು ಶಿಥಿಲಗೊಂಡಿದ್ದ ಶಾಲಾ ಕಟ್ಟಡದ ಪಂಚಾಂಗ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕುಂತೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಘಟನೆಯ ಹಿನ್ನೆಲೆಯಲ್ಲಿ ಜಿ.ಪಂ. […]

ಕುಂತೂರು ಶಾಲೆಯ ಕೊಠಡಿ ನಿರ್ಮಾಣಕ್ಕೆ 29 ಲಕ್ಷರೂ. ಅನುದಾನ ಮಂಜೂರು Read More »

ವರದಕ್ಷಿಣೆ ಕಿರುಕುಳದಿಂದು ತುಂಬು ಗರ್ಬಿಣಿ ಆತ್ಮ ಹತ್ಯೆ

ಬೆಂಗಳೂರು: ವರದಕ್ಷಿಣೆ ಕಿರುಕುಳ ಸಹಿಸದೆ ಗಂಡನ ಮನೆಯಲ್ಲೇ ಗರ್ಬಿಣಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ.ರೂಪ ಮೃತ ಮಹಿಳೆ ಎಂದು ತಿಳಿದುಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಎರಡು ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದ ರೂಪ ಮತ್ತು ಸುರೇಶ್ ಆರು ತಿಂಗಳವರೆಗೂ ಸುಖ ಸಂಸಾರ ಮಾಡಿದ್ದಾರೆ. ಆದರೆ ಆರು ತಿಂಗಳು ಕಳೆಯುತ್ತಿದ್ದಂತೆ ವರದಕ್ಷಿಣೆ ಕಿರುಕುಳ ಜಾಸ್ತಿಯಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳದಿಂದು ತುಂಬು ಗರ್ಬಿಣಿ ಆತ್ಮ ಹತ್ಯೆ Read More »

ಸೇಲ್ವಮ್ಮ ಅಡ್ಯಡ್ಕ ನಿಧನ

ತೊಡಿಕಾನ ಗ್ರಾಮದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿಯ ಸೆಲ್ವಮ್ಮ ಎಂಬವರು ಅಲ್ಪಕಾಲದ ಅಸೌಕ್ಯದಿಂದ ನ. 22 ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ನಾಲ್ಕು ಮಂದಿ ಪುತ್ರರು, ಮೂರು ಮಂದಿ ಹೆಣ್ಣುಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. .

ಸೇಲ್ವಮ್ಮ ಅಡ್ಯಡ್ಕ ನಿಧನ Read More »

ಕಾಂತಾರ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ, ಹಲವರಿಗೆ ಗಂಭೀರ ಗಾಯ

ಕಾಂತಾರ ಚಿತ್ರದ ಜ್ಯೂನಿಯರ್ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತವಾಗಿ ಅನೇಕ ಮಂದಿ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ಜಡ್ಕಳ್ ಎಂಬಲ್ಲಿ ನಿನ್ನೆ ರಾತ್ರಿ ವೇಳೆ ನಡೆದಿದೆ.ಮುದೂರಿನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ಮುಗಿಸಿ 20 ಜ್ಯೂನಿಯರ್ ಕಲಾವಿದರನ್ನು ಕೊಲ್ಲೂರಿಗೆ ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಯಿತ್ತೆನ್ನಲಾಗಿದೆ. ಇದರಿಂದ 6 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರೆಲ್ಲ ಜಡ್ಕಲ್ ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ

ಕಾಂತಾರ ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ, ಹಲವರಿಗೆ ಗಂಭೀರ ಗಾಯ Read More »

ಕನ್ನಡದ ಘನತೆಗೆ ಕುಂದುಟಾಗದಂತೆ ಕನ್ನಡವನ್ನು ರಕ್ಷಣೆ ಮಾಡುವುದು ಕನ್ನಡಿಗರಾದ ನಮ್ಮ ಹೊಣೆ : ಲೀಲಾ ದಾಮೋದರ್

ಅರಂತೋಡು : ಶಾಸ್ತ್ರೀಯ ಭಾಷೆಯ ಸ್ಥಾನಮಾನ ಹೊಂದಿದ ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸುವ, ಅದರ ಘನತೆಗೆ ಕುಂದುಟಾಗದಂತೆ ನೋಡಿಕೊಳ್ಳುವ ಜವಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಆಗಾದಾಗಲೇ ಕನ್ನಡ ಭಾಷೆ ಸಂಸ್ಕೃತಿ ಖಂಡಿತಾ ಸೋಲುವುದಿಲ್ಲ ಎಂದು ಸುಳ್ಯ ತಾಲೂಕು ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಲೀಲಾದಾಮೋದರ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ

ಕನ್ನಡದ ಘನತೆಗೆ ಕುಂದುಟಾಗದಂತೆ ಕನ್ನಡವನ್ನು ರಕ್ಷಣೆ ಮಾಡುವುದು ಕನ್ನಡಿಗರಾದ ನಮ್ಮ ಹೊಣೆ : ಲೀಲಾ ದಾಮೋದರ್ Read More »

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ವತಿಯಿಂದ ಅರಂತೋಡಿನ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಮಲಾರುಣ ಪಡ್ಡಂಬೈಲು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಕವಿಗೋಷ್ಠಿಯಲ್ಲಿ ಕವಿಗಳಾದ ಲೀಲಾಕುಮಾರಿ ತೊಡಿಕಾನ, ಭೀಮರಾವ್ ವಾಷ್ಠರ್, ಹೇಮಲತಾ ಕಜೆಗದ್ದೆ, ಶಿವದೇವಿ ಅವನೀಶ್ಚಂದ್ರ, ತೀರ್ಥರಾಮ ಹೊದ್ದೆಟ್ಟಿ, ವಿಜಯಕುಮಾರ್ ಕಾಣಿಚ್ಚಾರ್,ಅನುರಾಧ ಉಬರಡ್ಕ ಅವರು ತಮ್ಮ ಸ್ವರಚಿತ ಕವನ ವಾಚನ ಮಾಡಿದರು‌. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ರಮೇಶ್ ನೀರಬಿದಿರೆ

ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ Read More »

ಕನ್ನಡ ಶಾಲೆಗಳಲ್ಲಿ ಕನ್ಮಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು : ಧನಂಜಯ ಕುಂಬ್ಳೆ

ಅರಂತೋಡು, ನ.23 : ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು ಎಂದು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಧನಂಜಯ ಕುಂಬ್ಳೆ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ

ಕನ್ನಡ ಶಾಲೆಗಳಲ್ಲಿ ಕನ್ಮಡದ ಬೇರುಗಳು ಗಟ್ಟಿಯಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಕೇಂದ್ರ ಸಾಹಿತ್ಯ ಪರಿಷತ್ ಅಗತ್ಯವಾಗಿ ಮಾಡಬೇಕು : ಧನಂಜಯ ಕುಂಬ್ಳೆ Read More »

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ

ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ (82)ಕೋಟೆಯವರು ನ. 23 ರಂದು ನಿಧನರಾದರು.ಮೃತರು ಪುತ್ರರಾದ ಖ್ಶಾತ ಹಾಡುಗಾರ ಶಿಶಿಧರ ಕೋಟೆ, ರಘುರಾಮ ಕೋಟೆ ಪುತ್ರಿ ಶಶಿಕಲಾ ಗಣಪಯ್ಯ ವನಶ್ರಿ ಪೆರುವಾಜೆ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ

ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ Read More »

ಗುತ್ತಿಗಾರು ಸಹಕಾರಿ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರಿ ಸಂಘ : ಕಟೀಲ್

ಗುತ್ತಿಗಾರು: ಶತಮಾನವನ್ನು ಕಂಡ ಗುತ್ತಿಗಾರು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರ ಸಂಘ ಎಂದು ಮಾಜಿ ಸಂಸದರಾದ ನಳಿನ್‌ಕುಮಾ‌ರ್ ಕಟೀಲ್ ಹೇಳಿದ್ದಾರೆ.ಅವರು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ – 2024 ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಛೇರಿಯ ಶತ ಸೌಧದ ದೀನ್ ದಯಾಳ್ ರೈತ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ನಡೆದ ಸಹಕಾರಿ ಚಳುವಳಿಯಿಂದ ದೇಶದ ಆರ್ಥಿಕ ಸ್ಥಿತಿಗೆ ಸಹಕಾರಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಿ ನೆಲೆಯೂರಿದೆ

ಗುತ್ತಿಗಾರು ಸಹಕಾರಿ ಸಂಘ ಸಮಾಜಕ್ಕೆ ಮಾದರಿಯಾದ ಸಹಕಾರಿ ಸಂಘ : ಕಟೀಲ್ Read More »

SKSSF ಸುಳ್ಯ ವಲಯಇದರ ವತಿಯಿಂದಸುಗಂಧ ಸಾಗರಕಲೋತ್ಸವ -2024 ಕಾರ್ಯಕ್ರಮ

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ ಕಾರ್ಯಕ್ರಮ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಾಳೆ ನ.24 ರಂದು ನಡೆಯಲಿದೆ.9:00 ಗಂಟೆಗೆ ಹಸೈನಾರ್ ಕೆ.ಸಿ ಅಧ್ಯಕ್ಷರು ಜುಮಾ ಮಸೀದಿ ಸುಣ್ಣಮೂಲೆ ಧ್ವಜಾರೋಹಣ ನೆರವೇರಿಸಲಿದ್ದಾರೆ .ನೂರಾರು ಸ್ಪರ್ಧಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .ಪೂರ್ವಾಹ್ನ 9 ಗಂಟೆಗೆ ಸ್ಪರ್ಧಾರ್ಥಿ ಗಳ ನೋಂದಾವಣಿ ನಡೆಯಲಿದೆ.ಸಮಾರಂಭದಲ್ಲಿಸಿರಾಜುದ್ದೀನ್ ಇರ್ಫಾನಿ ಖತೀಬರು BJM ಸುಣ್ಣಮೂಲೆ ದುವಾ ನೆರವೇರಿಸಲಿದ್ದಾರೆ.ಹಸೈನಾರ್ ಫೈಝಿ ಖತೀಬರು MJM ಅಜ್ಜಾವರ ಕಾರ್ಯಕ್ರಮ

SKSSF ಸುಳ್ಯ ವಲಯಇದರ ವತಿಯಿಂದಸುಗಂಧ ಸಾಗರಕಲೋತ್ಸವ -2024 ಕಾರ್ಯಕ್ರಮ Read More »

error: Content is protected !!
Scroll to Top