December 2024

ಯುವ ಸಂಸದ ತೇಜಸ್ವಿಸೂರ್ಯರಿಗೆ ಕೂಡಿ ಬಂತುಕಂಕಣ ಭಾಗ್ಯ , ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಆ ಸ್ಟಾರ್ ಸಿಂಗಾರ್ ಯಾರು ?

ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ಸ್ಪುರದ್ರೂಪಿ ಯುವಕ ತೇಜಸ್ವಿ ಸೂರ್ಯ ಅವರು ಜೀವನದ ಪ್ರಮುಖ ಕಾಲಘಟ್ವದ ಹೊಸ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು ಮದುವೆಗೆ ದಿನ ನಿಗದಿಪಡಿಸಲಾಗಿದೆ. ಯುವ ಸಂಸದರು ಕೈ ಹಿಡಿಯುತ್ತಿರುವ ಆ ಹುಡುಗಿ ಯಾರೆಂದು ಎಲ್ಲರಲ್ಲೂ ಕುತೂಹಲ ಇರಬಹುದು.ತೇಜಸ್ವಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಪಡೆದಿದ್ದರು. 2024ರಲ್ಲೂ ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಅವರ ಹುಡುಗಿ […]

ಯುವ ಸಂಸದ ತೇಜಸ್ವಿಸೂರ್ಯರಿಗೆ ಕೂಡಿ ಬಂತುಕಂಕಣ ಭಾಗ್ಯ , ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಆ ಸ್ಟಾರ್ ಸಿಂಗಾರ್ ಯಾರು ? Read More »

ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎನ್ ಮನ್ಮಥ ಮೂರನೇ ಬಾರಿ ಆಯ್ಕೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿ ಮರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ‌ ಮಹೇಶ್‌ ಜಬಳೆ ಆಯ್ಕೆಯಾದರು.ಇಂದು ಸಂಘದ ಸಭಾಭವನದಲ್ಲಿ ಅವಿರೋಧ ಆಯ್ಕೆ ನಡೆಯಿತು.ಡಿ.22 ರಂದು ಚುನಾವಣೆ ನಡೆದು ಎಸ್.ಎನ್.ಮನ್ಮಥರವರ ತಂಡದ 11 ಮಂದಿ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಬಿಜೆಪಿ ಬೆಂಬಲಿತ ಅಭ್ಯರ್ಥಿ ಒಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ರವರು ಉಪಸ್ಥಿತರಿದ್ದು ಶುಭಹಾರೈಸಿದರು.ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಚಂದ್ರಶೇಖರ ಎಸ್,ರವಿನಾಥ ಮಡ್ತಿಲ,ಮಧುಕರ ನಿಡುಬೆ,ಅನಂತಕುಮಾ‌ರ್

ಐವರ್ನಾಡು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎನ್ ಮನ್ಮಥ ಮೂರನೇ ಬಾರಿ ಆಯ್ಕೆ Read More »

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗೆ ಪೊಲೀಸರಿಂದ ಗುಂಡು ಹಾರಾಟ

ಹಳೇಹುಬ್ಬಳ್ಳಿ ಘೋಡ್ಕೆ ಪ್ಲಾಟ್‌ನಲ್ಲಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಸೆರೆ ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ ಓರ್ವನ ಕಾಲಿಗೆ ಪೊಲೀಸರು ಗುಂಡು ಹೊಡೆದು ಆತನನ್ನು ವಶಕ್ಕೆ ಪಡೆದಿದ್ದಾರೆಈತನು ಕ್ಷುಲಕ ವಿಷಯವಾಗಿ ಸೋಮವಾರ ರಾತ್ರಿ ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಘೋಡ್ಕೆ ಪ್ಲಾಟ್‌ನ ತಬ್ಲಿಕ್ ಮಸೀದಿ ಬಳಿ ಅದೇ ಪ್ರದೇಶದ ಸಮೀರ ಶೇಖ್ (18) ಹಾಗೂ ಈತನ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬುವರಿಗೆ ಚಾಕುವಿನಿಂದ ತಲೆಮರೆಸಿಕೊಂಡಿದ್ದ.ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗೆ ಪೊಲೀಸರಿಂದ ಗುಂಡು ಹಾರಾಟ Read More »

ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಯತ್ನ

ಶಿಕ್ಷಕರ ಕಿರುಕುಳದಿಂದ ಪುತ್ತೂರಿನ ಹೈಸ್ಕೂಲ್ ಒಂದರ ವಿದ್ಯಾರ್ಥಿಯೊಬ್ಬಳು ನೋವಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಬೀರವಾಗಿ ಅಸ್ವಸ್ಥಗೊಂಡ ಬಗ್ಗೆ ವರದಿಯಾಗಿದೆ. ಶಾಲಾ ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದಾಗಿ ತಂದೆ ಆರೋಪಿಸಿದ್ದು. ಮಗಳು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ ಸದ್ಯ ಪಡೀಲುನಲ್ಲಿದ್ದು ಪುತ್ತೂರು ನಗರದಲ್ಲಿರುವ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಓದುತ್ತಿರುವ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದವಳು.

ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಯತ್ನ Read More »

ಗಿರಿಜಾಶಂಕರ ತುದಿಯಡ್ಕ ವಿಧಿವಶ

ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ಆಲೆಟ್ಟಿ ಗ್ರಾಮದ ದಿ.ತುದಿಯಡ್ಕ ವಿಷ್ಣಯ್ಯ ರವರ ಪುತ್ರ ರೊ.ಗಿರಿಜಾ ಶಂಕರ ತುದಿಯಡ್ಕ ಅವರು ಅನಾರೋಗ್ಯ ದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.ಮನೆಯಲ್ಲಿ ಕುಸಿದು ಬಿದ್ದ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಕಾರಣದಿಂದಾಗಿ ಚಿಕಿತ್ಸೆಗೆ ಸ್ಪಂದಿಸಿದೆ ಆಸ್ಪತ್ರೆಯಲ್ಲಿಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಪತ್ನಿ ಜಯಶ್ರೀ,ಇಬ್ಬರು ಪುತ್ರರಾದ ಸುಬ್ರಹ್ಮಣ್ಯ, ವಿಷ್ಣು ಪ್ರಕಾಶ್ ಮತ್ತು ಓರ್ವ ‌ಪುತ್ರಿ ಸುಶ್ಮಿತಾ ಹಾಗೂ ಸಹೋದರರಾದ

ಗಿರಿಜಾಶಂಕರ ತುದಿಯಡ್ಕ ವಿಧಿವಶ Read More »

ಕಲಾವಿದೆ ಪೂಜಾ ಬೋರ್ಕರ್ ಅವರಿಗೆ ಪುತ್ತೂರು ಶಾಸಕರಿಂದ ಸನ್ಮಾನ

ಸುಳ್ಯ ಬೆಟ್ಟಂಪಾಡಿಯ ಹವ್ಯಾಸಿ ಚಿತ್ರ ಕಲಾವಿದರಾದ ಪೂಜಾ ಬೋರ್ಕರ್ ಅವರು ಪೆನ್ಸಿಲ್ ಆರ್ಟ್ ಮೂಲಕ ಪುತ್ತೂರು ಶಾಸಕ ಆಶೋಕ್ ರೈ ಅವರ ಭಾವಚಿತ್ರವನ್ನು ಬಿಡಿಸಿ ಶಾಸಕರ ಪುತ್ತೂರು ಕಚೇರಿಯಲ್ಲಿ ಅವರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಶಾಸಕರು ಪೂಜಾರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.

ಕಲಾವಿದೆ ಪೂಜಾ ಬೋರ್ಕರ್ ಅವರಿಗೆ ಪುತ್ತೂರು ಶಾಸಕರಿಂದ ಸನ್ಮಾನ Read More »

ಶಿವಣ್ಣ ಗೌಡ ಅಡ್ತಲೆ ನಿಧನ

ಅರಂತೋಡು ಗ್ರಾಮದ ಅಡ್ತಲೆ ಶಿವಣ್ಣ ಗೌಡ ಡಿ.30ರಂದು ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ಪ್ರಾಯವಾಗಿತ್ತು.ಶಿವಣ್ಣ ಗೌಡರವರು ಪತ್ನಿ,ಪುತ್ರರಾದ ಜಯರಾಮ, ಪ್ರಭಾಕರ, ಸುಧಾಕರ, ತೀರ್ಥಕರ ಹಾಗೂ ಪುತ್ರಿಯರಾದ ರಾಜೀವಿ ಕಿರಿಭಾಗ , ಜಯಂತಿ ಮೇಲಡ್ತಲೆ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ಕ್ರಿಯಾದಿಗಳು ಇಂದು ಸಂಜೆಯೊಳಗೆ ನಡೆಯಲಿವೆ ಎಂದು ಮನೆಯವರು ತಿಳಿಸಿದ್ದು ಕುಟುಂಬಸ್ಥರು,ಬಂಧುಗಳು,ಹಿತೈಷಿಗಳು ಹಾಗೂ ಅಡ್ತಲೆ ಊರುಕಟ್ಟಿನ ಸರ್ವರೂ ಆಗಮಿಸಿ ಅಂತಿಮ ನಮನಗಳನ್ನು ಸಲ್ಲಿಸಬೇಕೆಂದು ಮೃತ

ಶಿವಣ್ಣ ಗೌಡ ಅಡ್ತಲೆ ನಿಧನ Read More »

ಹಣವೆಂಬ ಮಾಯೆ,ಹಣಕೆ ಮರುಳಾಗದವರು ಯಾರು ಇಲ್ಲ !

ಜಗತ್ತು ಒಂದು ಮಾಯೆ, ಆ ಮಾಯೆಯ ಒಳಗೆ ನಾವು ಒಂದು ಕೀಲು ಗೊಂಬೆ ಇದ್ದ ಹಾಗೆ. ಈ ಮಾಯದ ಜಗತ್ತಿನಲ್ಲಿ ಗುಣಕ್ಕಿಂತ ಹಣವೇ ಮೇಲಾಗಿದೆ.“ಹಣ ಕಂಡರೆ  ಹೆಣವು ಬಾಯಿ ಬಿಡುತ್ತದೆ” ಎಂಬ ಮಾತು ನೂರಕ್ಕೆ ನೂರು ಸತ್ಯವಾದದ್ದು. ಆ ಕಾಗದದ ಚೂರು ನಮಗೆ ಬೇಕಾದಷ್ಟು ಗೌರವವನ್ನು ಕೊಡಿಸುತ್ತದೆ. ಆದರೆ ನಿಜವಾದ ವ್ಯಕ್ತಿಗಳನ್ನಲ್ಲ .ಈ ಮಾಯದ ಜಗತ್ತಿನಲ್ಲಿ ಹಲವಾರು ಬದಲಾವಣೆ ಆಗುವುದು ಆದರೆ ಮಾನವ ಕುಲವು ಕೆಲವೊಮ್ಮೆ  ಮಾನವೀಯತೆಗಿಂತ,ಸ್ನೇಹ- ಸಂಬಂಧಗಳಿಗಿಂತ ಹೆಚ್ಚು ಮಾನವ ಒಲವನ್ನು ನೀಡುವುದು ಹಣಕ್ಕೆ ಮಾತ್ರ.

ಹಣವೆಂಬ ಮಾಯೆ,ಹಣಕೆ ಮರುಳಾಗದವರು ಯಾರು ಇಲ್ಲ ! Read More »

ಉಗುರು ಕಚ್ಚುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳೇನು ? ಇಲ್ಲಿದೆ ಮಾಹಿತಿ!

ಕೆಲವರು ಉಗುರು ಕಚ್ಚುವುದನ್ನು ನಾವು ನೋಡುತ್ತಿರುತ್ತೇವೆ.ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಕರೆಯಲಾಗುತ್ತದೆ.ಪದೇ ಪದೇ ಉಗುರು ಕಚ್ಚುವುದರಿಂದ, ಅವುಗಳಲ್ಲಿ ಇರುವ ಬ್ಯಾಕ್ಟಿರಿಯಾಗಳು ಬೆರಳುಗಳ ಮೂಲಕ ಬಾಯಿಗೆ ಹೋಗುತ್ತವೆ. ಇದು ಹೊಟ್ಟೆ ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಉಗುರು ಕಚ್ಚುವಿಕೆಯು ಬೆರಳುಗಳ ಹೊರಚರ್ಮವನ್ನು ಹಾನಿಗೊಳಿಸುತ್ತದೆ. ಉಗುರುಗಳ ಸುತ್ತಲೂ ಹುಣ್ಣುಗಳನ್ನು ಉಂಟುಮಾಡುತ್ತದೆ. ಸ್ವಚ್ಛವಿಲ್ಲದ ಉಗುರುಗಳನ್ನು ಬಾಯಿಗೆ ಹಾಕಿಕೊಂಡರೆ ಸೋಂಕು ಉಂಟಾಗುತ್ತದೆ. ಇದರಿಂದ ಆರೋಗ್ಯ ಕೇಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ಈ ಕಾರಣದಿಂದ ಉಗುರು ಕಚ್ಚದಿರುವುದೇ ಸೂಕ್ತವಾಗಿದೆ.ಉಗುರು ಕಚ್ಚದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

ಉಗುರು ಕಚ್ಚುವುದರಿಂದ ದೇಹದ ಮೇಲೆ ಬೀರುವ ಪರಿಣಾಮಗಳೇನು ? ಇಲ್ಲಿದೆ ಮಾಹಿತಿ! Read More »

ವಿವಿಧ ಬೇಡಿಕೆಗಳ ಇಡೇರಿಕೆಗೆ ಕ್ರಿಯಾ ಸಮಿತಿ ಕರೆ ನೀಡಿದ ಸಾರಿಗೆ ಮುಷ್ಕರ ಹಿಂದೆಗೆತ

ವಿವಿಧ ಬೇಡಿಕೆಗಳ ಇಡೇರಿಕೆಗೆ ಕ್ರಿಯಾ ಸಮಿತಿ ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ. ಡಿ.31ರ ಮಧ್ಯರಾತ್ರಿಯಿಂದ ತೊಡಗಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಸಾರಿಗೆ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ಕರೆನೀಡಿತ್ತು. ಆದರೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಹೀಗಾಗಿ ಡಿ.31ರಂದು ಎಂದಿನಂತೆ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗಿಳಿಯಲಿವೆ.38 ತಿಂಗಳ ಎರಿಯರ್ಸ್ ಬಿಡುಗಡೆ ಮಾಡಬೇಕು

ವಿವಿಧ ಬೇಡಿಕೆಗಳ ಇಡೇರಿಕೆಗೆ ಕ್ರಿಯಾ ಸಮಿತಿ ಕರೆ ನೀಡಿದ ಸಾರಿಗೆ ಮುಷ್ಕರ ಹಿಂದೆಗೆತ Read More »

error: Content is protected !!
Scroll to Top