ಹೆಣ್ಣು ಸಹನಾಮೂರ್ತಿ ಆದರೆ ಬೇರೆಯವರನ್ನು ಸಮಾಧಾನ ಮಾಡುವಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದಕ್ಕೆ ಸಹನೆ ಎಂದು ಕರೆದರೇನೋ. ಯಾಕೆಂದರೆ ಆಕೆಗಾಗಿ ಬದುಕಲು ಸಮಯ ಇಲ್ಲ ಇನ್ನೊಬ್ಬರಿಗಾಗಿಯೇ ಬದುಕಿ ಯಾರನ್ನೋ ತೃಪ್ತಿಪಡಿಸುವುದರಲ್ಲೇ ತಲ್ಲೀನರಾಗಿರುತ್ತಾಳೆ. ಹಾಗಾದರೆ ಆಕೆಯ ಸಂತೋಷ ಇರುವುದು ಬೇರೆಯವರ ಖುಷಿಯಲ್ಲಿ ಎನ್ನುವುದೇ ಸತ್ಯ. ಆಕೆಗಾಗಿ ಬದುಕಬೇಕಾದ ಮಾನಸಿಕ ಪರಿಸ್ಥಿತಿ ಎದುರಾದರೂ ಕೂಡ ಇನ್ನೊಬ್ಬರು ಏನೋ ಹೇಳುವರೇನೋ ಎಂಬ ಭಯದಲ್ಲೆ ತನ್ನ ಸಂತೋಷಕ್ಕೆ ವಿದಾಯ ಹೇಳಿ ನಿರ್ಜೀವ ಬದುಕನ್ನು ಆಯ್ಕೆ ಮಾಡಿಕೊಂಡ ಹೆಚ್ಚಿನವರು ಮಹಿಳೆಯರೆ.
ಆಧುನಿಕ ಯುಗದಲ್ಲಿ ಹೆಣ್ಣೋಬ್ಬಳು ತನ್ನೆಲ್ಲ ಸಮಯದಲ್ಲಿ ಮನೆಕೆಲಸ, ಮಕ್ಕಳ ಬೆಳವಣಿಗೆ, ಪತಿಯ ಬೇಕು-ಬೇಡ ಹಾಗೂ ಕುಟುಂಬದ ಕಾಳಜಿ ಇದನ್ನೆಲ್ಲ ಪೂರೈಸಿ ಉಳಿಕೆ ಸಮಯದಲ್ಲಿ ಕ್ರಮವಾಗಿ ಸಮಯ ಮೀರುವುದರೊಳಗೆ ವೈಯಕ್ತಿಕ ಏನೇ ಸಮಸ್ಯೆ ಇರಬಹುದು ಆದರೆ ಗಂಡು ಮಕ್ಕಳಿಗೆ ಸರಿ ಸಮಾನವಾಗಿ ಕರ್ತವ್ಯ ನಿರ್ವಹಿಸಲು ಆಕೆ ತಯಾರಾಗಿರುತ್ತಾಳೆ.
ಆದರೆ ಆಕೆಗೆ ಬೇಕಾದಂತೆ ಎಲ್ಲವನ್ನೂ ಬೇಕಾ ಬಿಟ್ಟಿ ಕೊಂಡು ಕೊಳ್ಳುವ ಅರ್ಹತೆ ಇದ್ದರೂ ತನ್ನ ಸಂತೋಷದಂತೆ ಮನಸಾರೆ ಬದುಕುವ ಅರ್ಹತೆ ಕೆಲಸಕ್ಕೆ ಹೋಗುವ ಮಹಿಳೆಗೆ ತೀರಾ ವಿರಳ.
ಎಲ್ಲರನ್ನು ಸಂಭಾಳಿಸಿಕೊಂಡು ಯಾರಿಗೂ ನೋವು ಮಾಡದೆ
ಕೇವಲ ಇನ್ನೊಬ್ಬರಿಗಾಗಿಯೇ ಬದುಕುವ ತ್ಯಾಗ ಜೀವಿ ಮಹಿಳೆ. ಅಂತಹ ಹೆಣ್ಣನ್ನು ಗೌರವಿಸಿ.
✍️ಅಕ್ಷತಾ ನಾಗನಕಜೆ*