December 15, 2024

ನಾಳೆಯಿಂದ(ಡಿ.16) ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನು ಪೂಜೆ ಆರಂಭ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ.16ರಿಂದ ಧನು ಪೂಜೆ ಆರಂಭಗೊಳ್ಳಲಿದೆ.ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ ವಿಧಿವಿಧಾನಗಳು ನಿಂತಿರುವ ಬಗ್ಗೆ ತಿಳಿದುಕೊಂಡು ಅವುಗಳ ಪೈಕಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ‘ಧನುಪೂಜೆ”ಯನ್ನು ಕಳೆದ ಹದಿಮೂರು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.ಶ್ರೀ ಮಲ್ಲಿಕಾರ್ಜುನ ದೇವರ […]

ನಾಳೆಯಿಂದ(ಡಿ.16) ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನು ಪೂಜೆ ಆರಂಭ Read More »

ಹಮಿಧಾಬಿ ಕಾವಿನಮೂಲೆ ನಿಧನ

ಬೆಳ್ಳಾರೆ ಗ್ರಾಮದ ಕಾವಿನ ಮೂಲೆ ದಿ! ಅಬ್ದುಲ್ ಲತೀಫ್ ಸಾಹೇಬ್ ರ ಧರ್ಮಪತ್ನಿ ಹಮಿದಾಭಿ ಕಾವಿನ ಮೂಲೆ ರವರು ಹೃದಯಾಘಾತ ದಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 10 ರಂದು ನಿಧನರಾದರು.ಅವರಿಗೆ 72 ವರ್ಷ ಪ್ರಾಯವಾಗಿತ್ತು.ಮೃತರು ಮೂರು ಮಂದಿ ಪುತ್ರರು ಮೂರು ಮಂದಿ ಪುತ್ರಿಯರನ್ನು ಸೇರಿದಂತೆ ಕುಟುಂಬಸ್ಥರನ್ನು ಆಗಲಿದ್ದಾರೆ.

ಹಮಿಧಾಬಿ ಕಾವಿನಮೂಲೆ ನಿಧನ Read More »

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ !

ಪೆರಾಜೆ ಗ್ರಾಮದಲ್ಲಿ ಬೇಟೆಗಾರರೊಬ್ಬರು ಕಾಡು ಪ್ರಾಣಿ ಎಂದು ತಿಳಿದು ಸಾಕು ನಾಯಿಯೊಂದಕ್ಕೆಕೋವಿಯಿಂದ ಗುಂಡು ಹಾರಿಸಿ ಸಾಕು ನಾಯಿ ಗುಂಡೇಟಿಗೆ ಬಲಿಯಾದ ಘಟನೆ ಶನಿವಾರ ವರದಿಯಾಗಿದೆ.ರಾತ್ರಿ ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಮನೆಯ ಬಳಿ ಬೇಟೆಗೆ ಬಂದ ವ್ಯಕ್ತಿ ಅವದ ಸಾಕು ನಾಯಿಗೆ ರಾತ್ರಿ 11 30 ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ.ಸಾಕು ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಇದರಿಂದ ಮನೆಯವರು ಆಕ್ರೋಶಗೊಂಡಿದ್ದಾರೆ.

ಪೆರಾಜೆ ಗ್ರಾಮದಲ್ಲಿ ಸಾಕು ನಾಯಿ ಬೇಟೆಗಾರನ ಗುಂಡೇಟಿಗೆ ಬಲಿ ! Read More »

error: Content is protected !!
Scroll to Top