December 2024

ಗೋಕುಲದಾಸ್ ಅವರ ತೆರೆಮರೆಯ ಸಮಾಜ ಸೇವೆ ಸಮಾಜಕ್ಕೆ ಮಾದರಿ : ಸವಣೂರು ಸೀತಾರಾಮ ರೈ

ಯಾವುದೇ ಫಲಾಪೇಕ್ಷೆ ಬಯಸದೆ ಗೋಕುಲದಾಸರ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಅವರ ಸೇವೆಗೆ ತಕ್ಕ ಪ್ರತಿಫಲ ದೊರೆತ್ತಿರುವುದು ಸಂತೋಷ ನೀಡಿದೆ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರ ರತ್ನ ಹಿರಿಯ ಸಹಕಾರಿ ಸೀತಾರಾಮ ರೈ ಹೇಳಿದ್ದಾರೆ.ಅವರು ಡಿ.28ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಸಿ ಕೆ.ಗೋಕುಲ್‌ದಾಸ್ ಅಭಿನಂದನಾ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಕೆ.ಗೋಕುಲ್‌ದಾಸ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ […]

ಗೋಕುಲದಾಸ್ ಅವರ ತೆರೆಮರೆಯ ಸಮಾಜ ಸೇವೆ ಸಮಾಜಕ್ಕೆ ಮಾದರಿ : ಸವಣೂರು ಸೀತಾರಾಮ ರೈ Read More »

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ

ಸುಳ್ಯ ತಾಲೂಕಿನ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.ವಸಂತ ಸಂಭ್ರಮ ಸಮಿತಿಯ ಸಂಚಾಲಕ ಎಸ್.ಎನ್ ಮನ್ಮಥ ಮತ್ತು ಅಧ್ಯಕ್ಷೆ ರಾಜೀವಿ ರೈ ಯವರು ಹೇಳಿದರು. ಪ್ರಾಥಮಿಕ ಶಾಲಾ ವಿಭಾಗದ ಶತಮಾನೋತ್ತರ’, ಪ್ರೌಢಶಾಲಾ ವಿಭಾಗದ ‘ಅಮೃತ’ ಪದವಿಪೂರ್ವ ಕಾಲೇಜಿನ ‘ಸ್ವರ್ಣ ಸಂಭ್ರಮ’ ಕಾರ್ಯಕ್ರಮ ಒಟ್ಟಾಗಿ ವಸಂತ ಸಂಭ್ರಮ ಸಂಭ್ರಮಿಸಲಿದೆ. ಮೂರು ದಿನವೂ ಬೆಳಿಗ್ಗೆಯಿಂದ ರಾತ್ರಿವರೆಗೆ ನಿರಂತರ ಕಾರ್ಯಕ್ರಮಗಳ ನಡೆಯಲಿದೆ ಎಂದುಅವರು ಡಿ.28 ರಂದು ಬೆಳ್ಳಾರೆ ಕೆ.ಪಿ.ಎಸ್.ನಲ್ಲಿ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜ.03,4 ಮತ್ತು 5 ರಂದು ವಸಂತ ಸಂಭ್ರಮ ಕಾರ್ಯಕ್ರಮ Read More »

ಗಿರಿಧರ ಕುಂಟುಕಾಡು ನಿಧನ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಕುಂಟುಕಾಡು ಮುದ್ದಪ್ಪ ಗೌಡರ ಮಗ ಗಿರೀಧರ ಅಲ್ಪಕಾಲದ ಅಸೌಖ್ಯದಿಂದ ಡಿ.28ರಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರಾಜೇಶ್ವರಿ, ಇಬ್ಬರು ಸಹೋದರರು, ಇಬ್ಬರು ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಿರಿಧರ ಕುಂಟುಕಾಡು ನಿಧನ Read More »

ಅರಂತೋಡು-ತೊಡಿಕಾನ ಸೊಸೈಟಿ ಚುನಾವಣೆ:ಸಹಕಾರ ಭಾರತಿಗೆ ಕ್ಲೀನ್ ಸ್ವೀಪ್

ಸುಳ್ಯ : ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆಡಳಿತ ಮಂಡಳಿಯ ಎಲ್ಲಾ 12 ನಿರ್ದೇಶಕ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ‌ ಕುಕ್ಕುಂಬಳ, ಉದಯಕುಮಾರ್ ಉಳುವಾರು, ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ, ಚಂದ್ರಶೇಖರ ಎ.ಎಸ್, ಡಾ.ಲಕ್ಷ್ಮೀಶ ಕಲ್ಲುಮುಟ್ಲು, ದಿನೇಶ್ ಅರಮನೆಗಯ, ಹಾಗೂ ಪ್ರಶಾಂತ ಕಾಪಿಲ ಗೆಲುವು ಸಾಧಿಸಿದ್ದಾರೆ.

ಅರಂತೋಡು-ತೊಡಿಕಾನ ಸೊಸೈಟಿ ಚುನಾವಣೆ:ಸಹಕಾರ ಭಾರತಿಗೆ ಕ್ಲೀನ್ ಸ್ವೀಪ್ Read More »

ಅರಂತೋಡು ಸಹಕಾರಿ ಸಂಘದ ಚುನಾವಣೆಬಿಜೆಪಿ ಬೆಂಬಲಿತ ಅಭ್ಯರ್ಥಿ ಡಾ. ಲಕ್ಷ್ಮೀಶ ಅವರಿಗೆ ಭಾರೀ ಅಂತರದ ಗೆಲುವು

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜನ ಸ್ನೇಹಿ ವೈದ್ಯ ಡಾ. ಲಕ್ಷ್ಮೀಶ ಅವರು 702 ಮತಗಳನ್ನು ಪಡೆದು ತನ್ನ ಪ್ರತಿ ಸ್ಪರ್ಧಿ ತೀರ್ಥರಾಮ ಪರ್ನೋಜಿ ಅವರ ವಿರುದ್ದ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.ಪ್ರತಿ ಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿದ್ದ ತೀರ್ಥರಾಮ ಪರ್ನೋಜಿ ಅವರು 164 ಮತ ಪಡೆದು ಪರಾಭವಗೊಂಡಿದ್ದಾರೆ.

ಅರಂತೋಡು ಸಹಕಾರಿ ಸಂಘದ ಚುನಾವಣೆಬಿಜೆಪಿ ಬೆಂಬಲಿತ ಅಭ್ಯರ್ಥಿ ಡಾ. ಲಕ್ಷ್ಮೀಶ ಅವರಿಗೆ ಭಾರೀ ಅಂತರದ ಗೆಲುವು Read More »

ಅರಂತೋಡು ತೊಡಿಕಾನ ಸಹಕಾರಿ ಸಂಘದ ಚುನಾವಣೆಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಶಾಂತ್ ಕಾಪಿಲರಿಗೆ ಭರ್ಜರಿ ಗೆಲುವು

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಶಾಂತ್ ಕಾಪಿಲ ಅವರು 162 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಪ್ರತಿ ಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣದಲ್ಲಿದ್ದ ಹೂವಯ್ಯ ಚೂರ್ನಾಡು ಅವರು ಕೇವಲ ಕೇವಲಬ19 ಮತ ಪಡೆದು ಪರಾಭವಗೊಂಡಿದ್ದಾರೆ.

ಅರಂತೋಡು ತೊಡಿಕಾನ ಸಹಕಾರಿ ಸಂಘದ ಚುನಾವಣೆಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಶಾಂತ್ ಕಾಪಿಲರಿಗೆ ಭರ್ಜರಿ ಗೆಲುವು Read More »

ಕಾಣಿಕೆ ಹುಂಡಿಯಲ್ಲಿ ಅತ್ತೆ ಸಾಯಲೆಂದು ಬರೆದ ನೋಟು ಪತ್ತೆ

ಅಫಜಲಪುರ: ಇಲ್ಲೊಂದು ಘಟನೆ ನಡೆದಿದೆ ಮುಂದೆ ಓದಿ.ಅಘಪುರ ಸುಕ್ಷೇತ್ರ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ಹುಂಡಿಯಲ್ಲಿ “ಅತ್ತೆಯ ಸಾವು’ ಬಯಸಿದ ನೋಟು ಪತ್ತೆಯಾಗಿದೆ.ದೇವಸ್ಥಾನದ ಹುಂಡಿಗಳ ಎಣಿಕೆ ವೇಳೆ 20 ರೂ. ನೋಟಿನ ಮೇಲೆ “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು’ ಎನ್ನುವ ಬರಹ ಇರುವ ನೋಟು ಪತ್ತೆಯಾಗಿದ್ದು ಇದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಕಾಣಿಕೆ ಹುಂಡಿಯಲ್ಲಿ ಅತ್ತೆ ಸಾಯಲೆಂದು ಬರೆದ ನೋಟು ಪತ್ತೆ Read More »

ಡಿ 31ರಂದು ಕೆಎಸ್‌ಆರ್ಟಿಸಿ ಬಂದ್ ?

ರಾಜ್ಯದ 4 ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಡಿಸೆಂಬ‌ರ್ 31ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ. ಇತ್ತ ನಗರದಲ್ಲಿ ಕಾರ್ಮಿಕ ಸಂಘಟನೆ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ. ಸಭೆ ನಡೆಸಿ ಸಿಎಂ, ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರೂ ಭರವಸೆಯಿಲ್ಲ. ತಮ್ಮ ಬೇಡಿಕೆ ಈಡೇರಿಕೆಗಾಗಿ ಡಿ.31ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಸಾರಿಗೆ 4 ನಿಗಮಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಉಮೇಶ್ ಆಗ್ರಹಿಸಿದ್ದಾರೆ.

ಡಿ 31ರಂದು ಕೆಎಸ್‌ಆರ್ಟಿಸಿ ಬಂದ್ ? Read More »

ಅಹಿಂದಕ್ಕೆ ಸರ್ಕಾರ ಏನೂ ನೀಡಿಲ್ಲ; ಶಾಸಕ ವೇದವ್ಯಾಸ ಕಾಮತ್

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರವು ಈ ಸಮುದಾಯಗಳಿಗೆ ಹೊಸ ಅನುದಾನ ನೀಡಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಬಿಡುಗಡೆಗೊಳಿಸಲಾಗಿದ್ದ ಕೋಟ್ಯಂತರ ರೂಪಾಯಿ ಅನುದಾನಗಳನ್ನು ರದ್ದುಪಡಿಸುವ ಆದೇಶ ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ. ಮಂಗಳೂರಲ್ಲಿರೋ ತನ್ನ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಹಿಂದಕ್ಕೆ ಸರ್ಕಾರ ಏನೂ ನೀಡಿಲ್ಲ; ಶಾಸಕ ವೇದವ್ಯಾಸ ಕಾಮತ್ Read More »

ಪುತ್ತೂರು ಪರ್ಲಡ್ಕದಲ್ಲಿ ಭೀಕರ ಕಾರು ಅಪಘಾತ, ಸುಳ್ಯ ಮೂಲದವರ ಮೂವರ ದುರ್ಮರಣ

ಪುತ್ತೂರು: ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ‌ ಕಾರೊಂದು ಹೊಂಡಕ್ಕೆ ಉರುಳಿ ಬಿದ್ದು, ಮೂವರು ದಾರುಣವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆಮೃತಪಟ್ಟವರನ್ನು ಸುಳ್ಯ ಮೂಲದವರು ಎಂದು ಹೇಳಲಾಗಿದ್ದು ಸುಳ್ಯ, ಜಟ್ಟಿಪಳ್ಳದ ಕಾನತ್ತಿಲ ನಿವಾಸಿ ಅಣ್ಣು ನಾಯ್ಕ ಮತ್ತು ಅವರ ಪುತ್ರ ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿ ಚಿದಾನಂದ ನಾಯ್ಕ ಮತ್ತು ಸಂಬಂಧಿ ರಮೇಶ್ ನಾಯ್ಕ್ ಮೃತಪಟ್ಟವರು. ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯಲ್ಲೇ ಘಟನೆ ನಡೆದಿದ್ದು, ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ.ಮುಂಜಾನೆ ವೇಳೆ

ಪುತ್ತೂರು ಪರ್ಲಡ್ಕದಲ್ಲಿ ಭೀಕರ ಕಾರು ಅಪಘಾತ, ಸುಳ್ಯ ಮೂಲದವರ ಮೂವರ ದುರ್ಮರಣ Read More »

error: Content is protected !!
Scroll to Top