December 2024

ಮನೆಯಲ್ಲಿ ಭಾರೀ ಬೆಂಕಿ ಅವಘಡ: ನಾಲ್ವರು ದುರ್ಮರಣ

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ನಯಾಪುರ ಪ್ರದೇಶದ ಮನೆಯೊಂದರಲ್ಲಿ ಶನಿವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಅವಘಡದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ಘಟನೆಯಲ್ಲಿ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಸುಟ್ಟ ಗಾಯಗಳಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ಮನೆಯಲ್ಲಿ ಭಾರೀ ಬೆಂಕಿ ಅವಘಡ: ನಾಲ್ವರು ದುರ್ಮರಣ Read More »

ಅರಂತೋಡು‌ – ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಅರಂತೋಡು‌ – ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಶುಕ್ರವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.ತೀರ್ಥರಾಮ ಪರ್ನೂಜಿ, ತೇಜನಾಥ ಬನ,ಚೌಕರು ವಸಂತಿ ಬಾಳಕಜೆ ,ನಾರಾಯಣ ನಾಯಕ್ತಾಜುದ್ದೀನ್ ಅರಂತೋಡು ನಾಮ ಪತ್ರ ಸಲ್ಲಿಸಿದರು.ಸಾಲಗಾರ ಅಲ್ಲದ ಕ್ಷೇತ್ರಕ್ಕೆ ಹೂವಯ್ಯ ಚೂರ್ನಾಡು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್,ವಲಯ ಅಧ್ಯಕ್ಷ ಜನಾರ್ಧನ ಅಡ್ಕಬಳೆ,ಅಶ್ರಫ್ ಗುಂಡಿ,ತಿಮ್ಮಯ್ಯ ಮೆ ಜತ್ತಡ್ಕ,ಅಮೀರ್ ಕುಕ್ಕುಂಬಳ,ತಿಮ್ಮಪ್ಪ ಬಾಜಿನಡ್ಕ ,ಶೇಷಪ್ಪ ಬಾಳೆಕಜೆ ,

ಅರಂತೋಡು‌ – ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ Read More »

ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಿಡುಗಡೆಗೆ ಹೈ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ಸಿ.ಟಿ.ರವಿ ಪ್ರಸಕ್ತ ಎಲ್ಲಿದ್ದಾರೊ ಅಲ್ಲಿಯೇ ಬಿಡುಗಡೆ ಮಾಡಿ ಎಂದು ಹೈಕೋರ್ಟ್ ಆದೇಶ ಮಾಡಿದೆ.ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಬಾರೀ ಮುಖಭಂಗ ಆದಂತಾಗಿದೆ.

ಸಿ.ಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ Read More »

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾಪ್ರಸಾದ್ ಎರಡನೇ ಬಾರಿ ಆಯ್ಕೆ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಅಕಾಡೆಮಿ ಸುಳ್ಯದ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್‌ ಕೆ.ವಿ.ಆಯ್ಕೆಗೊಂಡಿದ್ದಾರೆ.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾ ಪ್ರಸಾದ್ ಎರಡನೇ ಬಾರಿ ಆಯ್ಕೆಯಾಗಿರುವುದು ಅವರ ಅಭಿಮಾನಿಗಳಿಗೆ ಸಂತೋಷ ಉಂಟು‌ ಮಾಡಿದೆ.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ಎರಡು ಅವಧಿಗೆ ಅವಿರೋಧವಾಗಿ ಮತ್ತುಮೂರನೇ ಅವಧಿಗೆ ಬಹುಮತದಿಂದ ಚುನಾಯಿತರಾಗಿದ್ದ ಡಾ. ರೇಣುಕಾಪ್ರಸಾದ್‌ ಕೆ.ವಿ.ಯವರು ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾಪ್ರಸಾದ್ ಎರಡನೇ ಬಾರಿ ಆಯ್ಕೆ Read More »

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ 6ನೇ ಆರೋಪಿ ಮಹಮ್ಮದ್ ಶರೀಫ್ ಬಂಧನ

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಬಿಜೆಪಿ ಜಿಲ್ಲಾ ಮುಖಂಡರಾಗಿದ್ದ ಪ್ರವೀಣ್ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 6ನೇ ಆರೋಪಿ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ (55) ಎಂಬಾತನನ್ನು ಎನ್.ಐ.ಎ ಪೊಲೀಸರು ಬಂಧಿಸಿದ್ದಾರೆ.ಮಹಮ್ಮದ್ ಶರೀಫ್ ನನ್ನು ದೆಹಲಿ ವಿಮಾನದಲ್ಲಿ ಎನ್‌.ಐ.ಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಈತನ ಪತ್ತೆಗಾಗಿ ಎನ್.ಐ.ಎ ಅಧಿಕಾರಿಗಳು 5 ಲಕ್ಷ ರಿವಾರ್ಡ್ ಘೋಷಿಸಿದ್ದರು. ಶರೀಫ್ ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡನಾಗಿದ್ದ.

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ 6ನೇ ಆರೋಪಿ ಮಹಮ್ಮದ್ ಶರೀಫ್ ಬಂಧನ Read More »

ಕೃತಕ ಗರ್ಭಧಾರಣೆ ಮಾಡಿಸಿಕೊಂಡ ಮಹಿಳೆ ನಿಧನ

ಕೃತಕ ಗರ್ಭಧಾರಣೆ ಮಾಡಿಸಿಕೊಂಡ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಡೆಕ್ಕಳ ದಿನೇಶ್ ಎಂಬವರ ಪತ್ನಿ ಶೀಲಾವತಿ (38) ಅಸೌಖ್ಯದಿಂದ ಡಿ. 18ರಂದು ಮಂಗಳೂರಿನಲ್ಲಿ ನಿಧನರಾದರು.ದಿನೇಶ್ ಎಡಮಂಗಲದಲ್ಲಿ ಅಟೋ ಚಾಲಕರಾಗಿದ್ದರು. ಮದುವೆಯಾಗಿ 17 ವರ್ಷ ಆಗಿತ್ತು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಸುಮಾರು 3 ತಿಂಗಳ ಹಿಂದೆ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿದ್ದರು.ವೈದ್ಯರ ಸೂಚನೆಯಂತೆ 20 ದಿವಸಗಳಿಗೊಮ್ಮೆ ತಪಾಸಣೆ ಮಾಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಶೀಲಾವತಿಯವರಿಗೆ ಅಸೌಖ್ಯಕ್ಕೆ ಒಳಗಾಗಿದ್ದರು. ಇದು ನಿನ್ನೆ

ಕೃತಕ ಗರ್ಭಧಾರಣೆ ಮಾಡಿಸಿಕೊಂಡ ಮಹಿಳೆ ನಿಧನ Read More »

ಕೋಳಿ ಸಾಕಾಣೆಗೆ ಕೇಂದ್ರ ಸರಕಾರದಿಂದ ಭಾರೀ ಸಹಾಯಧನ,ಈ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ

ಕೋಳಿ ಸಾಕಣೆ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸ್ವ ಉದ್ಯೋಗ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿಯನ್ನು ನೀಡಿದೆ. ಕೋಳಿ ಸಾಕಣೆ ಕೇಂದ್ರ ಸ್ಥಾಪಿಸಲು ಶೇ.50ರಷ್ಟು ಸಬ್ಸಿಡಿಯೊಂದಿಗೆ 50 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸಾಲ ಪಡೆಯಲು ಬಯಸುವವರು ಒಂದು ಎಕರೆ ಭೂಮಿಯನ್ನ ಹೊಂದಿರಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ಜನರಿಗೆ ಸಾಲವನ್ನ ನೀಡುತ್ತವೆ. ಹೆಚ್ಚಿನ ವಿವರಗಳನ್ನ ಹತ್ತಿರದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳಬಹುದು

ಕೋಳಿ ಸಾಕಾಣೆಗೆ ಕೇಂದ್ರ ಸರಕಾರದಿಂದ ಭಾರೀ ಸಹಾಯಧನ,ಈ ಕೆಳಗಿನ ಮಾಹಿತಿಯನ್ನು ತಪ್ಪದೆ ಓದಿ Read More »

ರೂ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸ್ ಬಲೆಗೆ !

ಪಹಣಿಯಲ್ಲಿ ವಾರಸುದಾರರ ಹೆಸರನ್ನುಸೇರ್ಪಡೆಗೊಳಿಸಲು 4ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ವ್ಯಕ್ತಿಯೊಬ್ಬರು ತನ್ನ ಅಜ್ಜಿಯ ಮರಣಾನಂತರ ಆಕೆಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರೀಸುದಾರರ ಹೆಸರನ್ನು ಸೇರ್ಪಡೆ ಮಾಡುವಂತೆ ಮೂಲ್ಕಿ ತಹಶೀಲ್ದಾರ್ ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಮೂಲ್ಕಿ ಕಂದಾಯ ನಿರೀಕ್ಷಕರ ಕಛೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಯಾವುದೇ ಕ್ರಮ ಕೈಗೊಳ್ಳದೆ ಕಂದಾಯ ನಿರೀಕ್ಷಕ ಜಿ ಎಸ್ ದಿನೇಶ್ ಅರ್ಜಿಯನ್ನು ತಮ್ಮಲ್ಲಿ ಉಳಿಸಿಕೊಂಡಿದ್ದರು. ವರ್ಷದ ಬಳಿಕ ಅರ್ಜಿದಾರರು

ರೂ 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಪೊಲೀಸ್ ಬಲೆಗೆ ! Read More »

ತೊಡಿಕಾನ : ಶಾಲೆಗೆ ಬೆಂಚು ಡೆಸ್ಕ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ )ಸುಳ್ಯ ತಾಲೂಕು ಸಂಪಾಜೆ ವಲಯದ ತೊಡಿಕಾನ ಕಾರ್ಯಕ್ಷೇತ್ರದ ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಶಾಲೆಗೆ 42500 ಮೌಲ್ಯದ 5ಜೊತೆ ಬೆಂಚು ಡೆಸ್ಕ್ ಅನ್ನು ವಿತರಣೆ ಮಾಡುವ ಕಾರ್ಯಕ್ರಮ ಇಂದು ನಡೆಯಿತು ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ ಅಮೆಚೂರು ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಯೋಜನೆ ಕಾರ್ಯಕ್ರಮಗಳ ಬಗ್ಗೆ

ತೊಡಿಕಾನ : ಶಾಲೆಗೆ ಬೆಂಚು ಡೆಸ್ಕ್ ವಿತರಣೆ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಆಶ್ಲೇಷ ಬಲಿ ಪೂಜೆ

ಸುಳ್ಯ ಸೀಮೆ ದೇವಸ್ಥಾನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ ಗುರುವಾರ ರಾತ್ರಿ ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ,ಮಾಜಿ ಅಧ್ಯಕ್ಷಕರು ಸದಸ್ಯರು,ಸೀಮೆಯ ಭಕ್ತಾಧಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಆಶ್ಲೇಷ ಬಲಿ ಪೂಜೆ Read More »

error: Content is protected !!
Scroll to Top