ಭಾರತೀಯ ಸಂಸ್ಕೃತಿಯಲ್ಲಿ ಆಹಾರಕ್ಕೆ ಪೂಜನೀಯ ಸ್ಥಾನವಿದೆ.ಹಲವಾರು ಹಬ್ಬಗಳನ್ನು ಸಂಸ್ಕೃತಿ ಬದ್ದವಾಗಿ ಆಚರಿಸುವ ದೇಶ ನಮ್ಮದು.ಅನ್ನದಾನ ಎಂಬುದನ್ನು ಪರಮ ಪುಣ್ಯದ ಕೆಲಸ ಎನ್ನುವ ನಂಬಿಕೆ. ಆದರೆ ಎಷ್ಟೋ ಜನ ರೈತರು ಬೆಲೆದ ಅಕ್ಕಿಯಿಂದ,ಅನೇಕ ದೇವಸ್ಥಾನದಲ್ಲಿ ಅನ್ನವನ್ನು ಮಾಡಿ ದೇವಸ್ಥಾನದಲ್ಲಿ ಅನ್ನದಾನ ಸೇವೆಯನ್ನು ಮಾಡುತ್ತಾರೆ. ದೇವಸ್ಥಾನದಲ್ಲಿ ಅನ್ನದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ.
ನಮ್ಮ ದೇವಸ್ಥಾನ/ದೈವಸ್ಥಾನಗಳಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಅನ್ನದಾನಕ್ಕೆ ಬಹಳ ಪ್ರಾಮುಖ್ಯತೆ ಇದೆ . ಈ ಅನ್ನದಾನವು ಶ್ರೀದೇವರ ಪ್ರಸಾದ. ಅನ್ನದ ಮೌಲ್ಯವನ್ನು ಅರಿಯದೆ ಪೂರ್ತಿಯಾಗಿ ಸೇವಿಸದೆ ಅಲ್ಲಲ್ಲಿ ಬಿಸಾಡು ತ್ತಿದ್ದಾರೆ ಎನ್ನುವುದೇ ಅತ್ಯಂತ ದುಃಖಕರ ಸಂಗತಿ.
ಅನ್ನಕ್ಕೆ ಬಡವ ಶ್ರೀಮಂತ ಎಂಬ ಬೇಧ ಇಲ್ಲ. ಕೆಲವು ವ್ಯಕ್ತಿಗಳು ಅನ್ನದಾನದ ಮಹತ್ವ ತಿಳಿಯದೆ ಇನ್ನು ಕೆಲವರು ಸಿರಿ ಸಂಪತ್ತಿನಿಂದ ಜೀವಿಸಿ ಬಡತನದ ಜ್ಞಾನವೇ ಇಲ್ಲದಿರಬಹುದು. ಬಡವರಿಗೆ ಅನ್ನದಾನದ ಬೆಲೆ ತಿಳಿದಿರುತ್ತದೆ. ಆದರೆ ಸಿರಿ ಸಂಪತ್ತನ್ನು ಹೊಂದಿರುವ ಶ್ರೀಮಂತರಿಗೆ ಅನ್ನದಾನದ ಬೆಲೆ ಏನೆಂದು ತಿಳಿಯದೆ ಇರುತ್ತದೆ.
ಎಷ್ಟೋ ಜನ ಒಂದು ಹೊತ್ತಿನ ಊಟಕ್ಕಾಗಿ ಬಡವರು ಪರದಾಡುತ್ತಿದ್ದಾರೆ. ಆದರೆ ದೈವಸ್ಥಾನಗಳಲ್ಲಿ ಟ್ರಾಲಿಯಲ್ಲಿ ಶೇಖರಿಸಿ ಅನ್ನವನ್ನು ವಿಲೇವಾರಿ ಮಾಡುತ್ತಾರೆ.
ರೈತರು ಬೆಳೆದ ಅಕ್ಕಿಯಿಂದ ದೇವಸ್ಥಾನಗಳಲ್ಲಿ ಅನ್ನದಾನ ಸೇವೆಯನ್ನು ಮಾಡುತ್ತಾರೆ.
ಕೆಲವು ಕಡೆ ಬಡವರು ಬೀದಿಯಲಿ ಊಟ ಇಲ್ಲದೆ ಪರದಾಡುತ್ತಿದ್ದಾರೆ .ಟ್ರಾಲಿ ಯಲ್ಲಿ ಶೇಕರಿಸುದಕಿಂತ ಬಡವರಿಗೆ ಒಂದು ಹೊತ್ತಿನ ಊಟ ಮಾಡಲು ಅನ್ನು ನೀಡಬೇಕು . ಟ್ರಾಲಿಯಲ್ಲಿ ಹಾಕಿ ಎಲ್ಲೋ ಬಿಸಾಕುವುದಕ್ಕಿಂತ ಅನ್ನಕ್ಕೆ ಗೌರವ ನೀಡಬೇಕು. ಅಥವಾ ಪ್ರಾಣಿ ಪಕ್ಷಿಗಳಿಗೆ ಅದು ನೀಡಬೇಕು
ದೇವಸ್ಥಾನಗಳಲ್ಲಿ ನಮಗೆ ಸೇವಿಸಲು ಎಷ್ಟು ಆಹಾರ ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಹಾಕಲು ಹೇಳಬೇಕು.
ನಮಗೆ ಉಣ್ಣುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ. ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಬಡೆಸಿದ ಅನ್ನ ಪ್ರಸಾದವನ್ನು ಸಂಪೂರ್ಣವಾಗಿ ಸೇವಿಸಬೇಕೆಂದು ಪ್ರತಿಜ್ಞೆ ಮಾಡೋಣ..
✍️ *ಮೋಕ್ಷಿತ್ ಗೌಡ*. ಬಂದಿಯಡ್ಕ ಜಾಲ್ಸೂರು.
ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ
ವಿವೇಕಾನಂದ ಕಾಲೇಜು ಪುತ್ತೂರು