January 2025

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಬೆಳಿಗ್ಗೆ ನವಗ್ರಹ ಹೋಮ, ಚಂಡಿಕಾ ಹೋಮ ನಡೆದು ಪೂರ್ಣಾಹುತಿ ನಂತರ ಮಹಾಮಂಗಳಾರತಿ,ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಗಂಟೆ 5.00ರಿಂದ ರಂಗ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಲಿದೆ.ಹೆಚ್ಚಿನ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದುಕ್ಷೇತ್ರದ ಧರ್ಮದರ್ಶಿಗಳಾದ ಡಾ.ಕೆ.ವಿ ರೇಣುಕಾಪ್ರಸಾದ್ ವಿನಂತಿಸಿಕೊಂಡಿದ್ದಾರೆ.

ನಾಳೆ (ಜ.31) ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ Read More »

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ !

ಪ್ರೇತ ಕಾಟ ಅಧಿಕವಾಗಿದೆ ಎಂದು ಅವುಗಳ ಉಚ್ಛಾಟನೆಗಾಗಿ ಮಂಗಳೂರು ನಗರದ ಕೊಟ್ಟಾರ ಸಮೀಪ ಬುಧವಾರ ಮಧ್ಯರಾತ್ರಿ ರಸ್ತೆ ಸಂಚಾರವನ್ನೇ ನಿಷೇಧ ಮಾಡಲಾಗಿತ್ತು!ಇಲ್ಲಿನ ಅಬ್ಬಕ್ಕನಗರ ಭಾಗದಲ್ಲಿ ಪ್ರೇತಕಾಟ ಅಧಿಕವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಇದರಂತೆ ತಾಂಬೂಲ ಪ್ರಶ್ನೆ ಇಟ್ಟು ಪರಿಶೀಲಿಸಿದಾಗ ಉಚ್ಛಾಟನೆ ಕ್ರಮ ಮಾಡಬೇಕು ಎಂದು ತಿಳಿಸಲಾಗಿತ್ತು. ಇದರಂತೆ ಉಚ್ಚಾಟನೆ ಕ್ರಮವನ್ನು ಬುಧವಾರ ರಾತ್ರಿ ಮಾಡಲಾಗಿದೆ. ದರ್ಶನ ಸೇವೆ ನಡೆಸಿದ ಬಳಿಕ ಈ ಕ್ರಮ ನೆರವೇರಿದೆ. ಈ ಸಂದರ್ಭ ಜನರ ಹಿತದೃಷ್ಟಿಯಿಂದ ರಸ್ತೆ ಸಂಚಾರವನ್ನು ಸ್ಥಳೀಯರೇ ನಿರ್ಬಂಧಿಸಿದ್ದರು.

ಪ್ರೇತ ಕಾಟ ಅಧಿಕವಾಗಿದೆಯೆಂದು ರಸ್ತೆ ಬಂದ್ ! Read More »

ಅರಂತೋಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡುಕೋಣಗಳ ಸಂಚಾರ,ವಾಹನ ಸವಾರರೇ ಎಚ್ಚರ !

ಸುಳ್ಯ ತಾಲೂಕಿನ ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ವೈಎಂಕೆ ಜಾಡಾವು ಬಳಿ ಕಾಡು ಕೋಣಗಳು ಆಗಾಗ ರಸ್ತೆ ದಾಟುತ್ತಿದ್ದು ವಾಹನ ಸವಾರರಿಗೆ ಅಪಾಯ ಎದುರಾಗಿದೆ.ವಾಹನ ಸವಾರರಲ್ಲಿ ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ವಾಹನ ಚಲಾಯಿಸುತ್ತಿರುವ ಸಂದರ್ಭದಲ್ಲಿ ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.ತಪ್ಪಿದಲ್ಲಿ ಕಾಡುಕೋಣಗಳು ವಾಹನಗಳಿಗೆ ಡಿಕ್ಕಿ ಹೊಡೆದರೆ ಅಪಾಯ ಎದುರಾಗಬಹುದು.

ಅರಂತೋಡು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡುಕೋಣಗಳ ಸಂಚಾರ,ವಾಹನ ಸವಾರರೇ ಎಚ್ಚರ ! Read More »

ಪೆರಾಜೆ : ದೇವಸ್ಥಾನದಲ್ಲಿ ಶಾಮಿಯಾನ ಹಾಕಲು ಅನ್ಯಮತಿಯರಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆ

ಪೆರಾಜೆ ದೇವಸ್ಥಾನದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ಅನ್ಯಮತೀಯರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ಇಂದು ವರದಿಯಾಗಿದೆ. ಸುಳ್ಯದ ಸಹನಾ ಶಾಮಿಯಾನದವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದಕ್ಕೆ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ದೇವಳದವರು ಸ್ವಾತಿ ಸೌಂಡ್ಸ್ ನವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಿದ್ದರು.ಅವರು ಸಹನಾ ದವರಿಗೆ ಸಬ್ ಕಾಂಟ್ರಾಕ್ಸ್ ನೀಡಿದ್ದಾರೆ ಎಂದು ದೇವಳದಿಂದ ತಿಳಿದು ಬಂದಿದೆ.ಇದೀಗ ಹಿಂದು ಸಂಘಟನೆಯವರ ವಿರೋಧದ ಹಿನ್ನಲೆಯಲ್ಲಿ ಜಿ.ಜಿ.ನಾಯಕ್ ಅವರಿಗೆ ಶಾಮಿಯಾನ ಹಾಕಲು ಅವಕಾಶ ನೀಡಲಾಗಿದೆ.

ಪೆರಾಜೆ : ದೇವಸ್ಥಾನದಲ್ಲಿ ಶಾಮಿಯಾನ ಹಾಕಲು ಅನ್ಯಮತಿಯರಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದು ಸಂಘಟನೆ Read More »

ಸುಳ್ಯದ ಕಾಂತಮಂಗಲ ಪಯಸ್ವಿ‌‌ನಿ ನದಿ ತಟದಲೊಂದು ವರ್ಷಕ್ಕೆ ಒಂದು ಬಾರಿ ಮಾತ್ರ ಗರ್ಭಗುಡಿಯ ಭಾಗಿಲು ತೆಗೆಯುವ ಗುತ್ಯಮ್ಮ ದೇವಾಲಯ!

ಶ್ರದ್ದಾ ಕೇಂದ್ರಗಳಲ್ಲಿ ವಿಭಿನ್ನ ಶ್ರದ್ದಾ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.ಅಲ್ಲಿಯ ಪರ್ವ ದಿನಗಳು ಉತ್ಸಾವಾದಿ ದಿನಗಳ ಆಚರಣೆಗಳ ದಿನಗಳಲ್ಲಿ ಭಿನ್ನತೆಯನ್ನು‌ ಕಾಣಬಹುದಾಗಿದೆ. ಆದರೆ ಸುಳ್ಯ ತಾಲೂಕಿನಲ್ಲಿ ಬಹಳ ಅಪರೂಪವಾದ ದೇವಾಲಯವೊಂದಿದೆ. ಪ್ರತೀ ವರ್ಷ ಜ.31ರಂದು ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುವ ಜಿಲ್ಲೆಯ ಕ್ಷೇತ್ರ ಅದು ಸುಳ್ಯದ ಕಾಂತಮಂಗಲದಲ್ಲಿರುವ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ. ಅಕಾಡೆಮಿ ಆಫ್ ಲಿಬರಲ್‌ ಎಜ್ಯುಕೇಷನ್ ಕಮಿಟಿ ಬಿ ಇದರ ಅದ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಂಘದ

ಸುಳ್ಯದ ಕಾಂತಮಂಗಲ ಪಯಸ್ವಿ‌‌ನಿ ನದಿ ತಟದಲೊಂದು ವರ್ಷಕ್ಕೆ ಒಂದು ಬಾರಿ ಮಾತ್ರ ಗರ್ಭಗುಡಿಯ ಭಾಗಿಲು ತೆಗೆಯುವ ಗುತ್ಯಮ್ಮ ದೇವಾಲಯ! Read More »

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ

ಮೈಕ್ರೋ ಪೈನಾನ್ಸ್ ಅವರ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜ್ಯ ಮಟ್ಟದಲ್ಲಿ ಇದು ಭಾರೀ ಸುದ್ದಿಯಾಗುತ್ರಿದೆ.ಮೈಕ್ರೋ ಫೈನಾನ್ಸ್‌ನವರ ಕಿರುಕುಳತಾಳಲಾರದೆ ದಾವಣಗೆರೆಯ ಶಿಕ್ಷಕಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ದಿನಗಳ ಬಳಿಕ ಅವರ ಶವ ಇಂದು ಪತ್ತೆಯಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನಗ ಹಿಂದೆ ತುಂಗಭದ್ರಾ ನದಿಗೆ ಹಾರಿದ್ದರು. ಮೃತದೇಹ ಇಂದು ಬೆಳಗ್ಗೆ ನದಿಯಲ್ಲಿ ಪತ್ತೆಯಾಗಿದೆ.ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್‌ ಮನೆ

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ Read More »

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾರಣೀಕ ದೈವ ಶ್ರೀ ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ ಜನವರಿ 28ರಂದು ದೈವಸ್ಥಾನದಲ್ಲಿ ನಡೆಯಿತು.ಜನವರಿ 27ರಂದು ರಾತ್ರಿ ಭಂಡಾರ ತೆಗೆಯಲಾಯಿತು. ಜನವರಿ 28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಿತು. ನಂತರ ಪ್ರಸಾದ ವಿತರಣೆ ನಡೆದು ಹರಕೆ ಸಮರ್ಪಣೆ ನಡೆಯಿತು.ಬಳಿಕ ಅನ್ನಸಂತರ್ಪಣೆ ನಡೆಯಿತು.ಈ‌ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಸದಸ್ಯರು,ಜೀರ್ಣೊದ್ದಾರ ಸಮಿತಿಯವರು,ಸಿಬ್ಬಂದಿಗಳು ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

ತೊಡಿಕಾನ : ಪಾಷಾಣಮೂರ್ತಿ ಅಮ್ಮನವರ ಕಾಲಾವಧಿ ಕೋಲ Read More »

ಶತಮಾನದ ಗಡಿಯಾಚೆಗಿನ ಅರಂತೋಡು ಪಟೇಲ್ ಅಹಮದ್ ಕುಂಞಿ ಹಾಜಿ ಮನೆತನದ (ತರವಾದಡಿನ) ಸಮಿತಿ ರಚನೆ

ದಿನಾಂಕ 21.01.2025 ರಂದು ದಿವಂಗತ ಅರಂತೋಡಿನ ಪಟೇಲರಗಿದ್ದ ದಿವಂಗತ ಅಹಮದ್ ಕುಂಞಿ ಹಾಜಿ ಅವರ ಮೊಮ್ಮಗ ವ್ಯಾಪಾರಿ, ಸಮಾಜ ಸೇವಕ, ಅರಂತೋಡು ಪಾಪ್ಯುಲರ್ ಎಜುಕೇಶನ್ ರಿ ಇದರ ಸ್ಥಾಪಕ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಇದರ ಸ್ಥಾಪಕ ಕಾರ್ಯದರ್ಶಿ,ಅರಂತೋಡು ಮಸೀದಿಯ ಅಧ್ಯಕ್ಷರಾಗಿದ್ದ ಅಹಮದ್ ಪಟೇಲ್ ಅವರು ನಿಧನ ಹೊಂದಿ 40ನೇ ದಿನದ ತಹಲೀಲ್ ದುವಾ ಕಾರ್ಯಕ್ರಮ ಪಟೇಲ್ ಮನೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಶತಮಾನದ ಗಡಿ ದಾಟಿದ ಅರಂತೋಡು ಪಟೇಲರಾಗಿ ಜನನುರಾಗಿ ಕುಂಬ್ಳೆ

ಶತಮಾನದ ಗಡಿಯಾಚೆಗಿನ ಅರಂತೋಡು ಪಟೇಲ್ ಅಹಮದ್ ಕುಂಞಿ ಹಾಜಿ ಮನೆತನದ (ತರವಾದಡಿನ) ಸಮಿತಿ ರಚನೆ Read More »

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು (ಜ.28) ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.ಪ್ರಸ್ತುತ ಚಂದ್ರ ಕೋಲ್ಟಾರು ರವರು ದ.ಕ.ಜಿಲ್ಲಾ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಲ ಬೆಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಆಯ್ಕೆ Read More »

error: Content is protected !!
Scroll to Top