February 2025

ಸುಳ್ಯ : ನಾಗಪಟ್ಟಣ ಪಯಸ್ವಿನಿ ಹೊಳೆಯಲ್ಲಿ ಮೀನುಗಳ ಮಾರಣ ಹೋಮ!

ನಾಗಪಟ್ಟಣ ವೆಂಟೆಡ್ ಡ್ಯಾಮ್ ಕೆಳಬದಿಯ ಪಯಸ್ವಿನಿ ನದಿಯಲ್ಲಿ ಮೀನುಗಳು ಸಾವಿಗೀಡಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.ಡ್ಯಾಮ್ ನಿಂದ ಬಿಟ್ಟ ನೀರಿನ ಹರಿವಿನೊಂದಿಗೆ ಬಂದ ಮೀನುಗಳ ಮಾರಣ ಹೋಮವಾಗುತ್ತಿದೆಯೆಂದು ಸ್ಥಳೀಯರು ತಿಳಿಸಿದ್ದಾರೆ.ಮೀನುಗಳು ಸಾವನ್ನಪ್ಪಲು ನಿಖರ ಕಾರಣ ತಿಳಿದು ಬಂದಿಲ್ಲ.

ಸುಳ್ಯ : ನಾಗಪಟ್ಟಣ ಪಯಸ್ವಿನಿ ಹೊಳೆಯಲ್ಲಿ ಮೀನುಗಳ ಮಾರಣ ಹೋಮ! Read More »

ಸುಳ್ಯದಲ್ಲಿ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ, ಮರಾಟಿ ಬಾಂಧವರು ಸಂಘಟಿತರಾಗಬೇಕು- ತಿಮ್ಮಪ್ಪ ನಾಯ್ಕ್

ಮರಾಟಿಗರು ಇನ್ನಷ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.ಮರಾಟಿಭಾಷೆಯನ್ನು ಮಾತನಾಡಿ,ಭಾಷೆಯನ್ನು ಬೆಳೆಸಬೇಕು ಎಂದು ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಹೇಳಿದರು.ಅವರು ಇಂದು ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ನಡೆದ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು.ಇಂತಹ ಕ್ರೀಡಾಕೂಟಗಳ ಸಂಘಟನೆಯಿಂದ ಮರಾಟಿ ಸಮಾಜದ ಸಂಘಟನೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆಯ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟಿ ಸಮಾಜದ

ಸುಳ್ಯದಲ್ಲಿ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ, ಮರಾಟಿ ಬಾಂಧವರು ಸಂಘಟಿತರಾಗಬೇಕು- ತಿಮ್ಮಪ್ಪ ನಾಯ್ಕ್ Read More »

ಕನಕಮಜಲು ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ವ್ಯಕ್ತಿಗಳು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು

ಕನಕಮಜಲು ಸಮೀಪ ಫೆ.8ರಂದು ರಾತ್ರಿ ಇಬ್ಬರು ಪಾದಚಾರಿಗಳಿಗೆ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಕನಕಮಜಲು ಕೋಡಿಯ ರಾಮಯ್ಯ ಶೆಟ್ಟಿ (67 ವ) ಹಾಗೂ ಜನಾರ್ದನ ಶೆಟ್ಟಿ (50 ವ) ಅವರು ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಕನಕಮಜಲು ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ವ್ಯಕ್ತಿಗಳು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು Read More »

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಆಯ್ಕೆ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಹಾಗೂ ಉಪಾಧ್ಯಕ್ಷರಾಗಿ ಮೀನಾಕ್ಷಿ ಕುದ್ಕುಳಿ ದೊಡ್ಡಕುಮೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲಾ ನಿರ್ದೇಶಕರ ಆಯ್ಕೆ ಅವಿರೋಧವಾಗಿ ನಡೆಯಿತು. ಜನವರಿ 22ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ನಿರ್ದೇಶಕರುಗಳಾಗಿ ಸರೋಜ ಕೋಣಗುಂಡಿ, ಸುಶೀಲ ಕೋಣಗುಂಡಿ, ರಾಧಮ್ಮ ಪಡ್ಡು, ಕೆ ಎಮ್ ಶೇಷಮ್ಮ ಕುಂಟುಕಾಡು, ಲೀಲಾವತಿ ಮುಪ್ಪಸೇರು, ಎಂ ಟಿ

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾವಿತ್ರಿ ಐ ಭಟ್ ಆಯ್ಕೆ Read More »

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂಕಂಪನ

ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ.ಇಂದು ಬೆಳಗಿನ ಜಾವ 1.35-1.40 ಮಧ್ಯೆಯ ಸಮಯದಲ್ಲಿ ಭಾರೀ ಶಬ್ದದೊಂದಿಗೆ ಭೂಕಂಪನ ಸಂಭವಿಸಿದೆ. ಕೋಡೋಂ ಬೇಳೂ‌ರ್, ವೆಸ್ಟ್ ಎಳೇರಿ, ಕಿನಾನೂರ್ ಕರಿಂದಳಂ, ಬಳಾಲ್ ಪಂಚಾಯತ್‌ಗಳ ಪರಪ್ಪ, ಒಡೆಯಂಚಲ್‌, ಬಳಾಲ್, ಕೊಟ್ಟೋಡಿ, ಚುಳ್ಳಿಕ್ಕರ, ಮತ್ತು ಪೂಡಂಕಲ್ಲು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಶಬ್ದ ಕೇಳಿ ಬಂದು ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಭಾರೀ ಶಬ್ದದಿಂದ ಜನರು ಆತಂಕಗೊಂಡಿದ್ದಾರೆ. ಯಾವುದೆ ಅನಾಹುತಗಳು ಸಂಭವಿಸಿಳ ಎಂದು ಸಂಬಂಧಿಸಿದ

ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂಕಂಪನ Read More »

ದೆಹಲಿ ಚುನಾವಣೆ ಬಿಜೆಪಿ ಮುನ್ನಡೆ,ಬಿಜೆಪಿಯಿಂದ ವಿಜಯೋತ್ಸವ ಆಚರಣೆ

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿ ಮುಂದೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷಚಾರಣೆಯನ್ನು ವ್ಯಕ್ತಪಡಿಸಿದರು.ಸ್ಥಳೀಯ ಬಿಜೆಪಿ ನಾಯಕರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭಿಮಾ‌‌ನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ದೆಹಲಿ ಚುನಾವಣೆ ಬಿಜೆಪಿ ಮುನ್ನಡೆ,ಬಿಜೆಪಿಯಿಂದ ವಿಜಯೋತ್ಸವ ಆಚರಣೆ Read More »

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ಅನುರಾಧಾ ಕುರುಂಜಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘ, ವಿಕಾಸದಕಾರ್ಯಕಾರಿ ಸಮಿತಿಗೆ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಈ ಸಮಿತಿಯು ಮುಂದಿನ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರ ಸಂಘದ ಕಾರ್ಯಕಾರಿ ಸಮಿತಿಗೆ ಎನ್ನೆಂಸಿಯ ಡಾ. ಅನುರಾಧಾ ಕುರುಂಜಿ ಆಯ್ಕೆ Read More »

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ

ಅಜ್ಜಾವರ ಗ್ರಾಮದ ಪಡ್ಡಂಬೈಲು ನಲ್ಲಿ ಮನೆಯ ಅಂಗಳಕ್ಕೆ ಬುಧವಾರ ರಾತ್ರಿ ಚಿರತೆಯೊಂದು ಬಂದು ಸಾಕು ನಾಯಿ ಕೊಂದು ತಿಂದಿದೆ. ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ಶಂಕರ ಪಾಟಾಳಿಯವರ ಅಂಗಳದಲ್ಲಿ ಫೆ.4ರಂದು ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದ ಒಳಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ ವೇಳೆ ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ ನಂತರ

ಸಾಕು ನಾಯಿಯನ್ನು ಕೊಂದು ತಿಂದ ಚಿರತೆ Read More »

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ

ಸುಳ್ಯ ತಾಲೂಕಿನ ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೆಟ್ ಬೈಕ್ ಸ್ಕಿಡ್ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಫೆ.5ರಂದು ಮುಂಜಾನೆ ನಡೆದಿದೆ. ಗಾಯಾಳು ಮೈಸೂರು ಮೂಲದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗುತ್ತಿದೆ.ಗಾಯಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಅರಂತೋಡು : ಭೀಕರ ಬೈಕ್ ಅಪಘಾತದಲ್ಲಿ ಪೊಲೀಸ್ ಸಿಬ್ಬಂದಿ ಗಂಭೀರ Read More »

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವು

ಪುತ್ತೂರಿನ ಮುರ ಎಂಬಲ್ಲಿ ಬೈಕ್ ಹಾಗೂ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮ್ರತಪಟ್ಟ ಬೈಕ್ ಸವಾರನನ್ನು ಚೇತನ್ ಕೆಮ್ಮಿಂಜೆ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸಾವು Read More »

error: Content is protected !!
Scroll to Top