February 2025

ಅರಂತೋಡು : ಉಮ್ರಾ ಯಾತ್ರಾರ್ಥಿ ಸೈಫುದ್ಧೀನ್ ಪಠೇಲ್ ಗೆ ಬೀಳ್ಕೊಡುಗೆ

ದುಬೈಯಲ್ಲಿ ಉಧ್ಯಮಿಯಾಗಿರುವ ಅರಂತೋಡಿನ ಸೈಫುದ್ಧೀನ್ ಪಠೇಲ್ ತನ್ನ ಧರ್ಮ ಪತ್ನಿಯೊಂದಿಗೆ ಪವಿತ್ರಾ ಉಮ್ರಾ ಯಾತ್ರೆಗೆ ತೆರಳಲಿರುವುದರಿಂದ ಅವರನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಫೆ.19 ಬೀಳ್ಕೊಡಲಾಯಿತು.ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಎ.ಹೆಚ್.ವೈ.ಎ ಅಧ್ಯಕ್ಷ ಅಬ್ದುಲ್ ಮಜೀದ್ ಯಾತ್ರಾರ್ಥಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ಕೆ.ಎಂ ಮೂಸಾನ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ನಿವೃತ್ತ […]

ಅರಂತೋಡು : ಉಮ್ರಾ ಯಾತ್ರಾರ್ಥಿ ಸೈಫುದ್ಧೀನ್ ಪಠೇಲ್ ಗೆ ಬೀಳ್ಕೊಡುಗೆ Read More »

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ.ಕೆ ಅಭಿಲಾಷ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾ‌ರ್ ಆದೇಶ

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ.ಕೆ ಅಭಿಲಾಷ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾ‌ರ್ ಫೆ.19ರಂದು ಆದೇಶಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಪಿ.ಕೆ ಅಭಿಲಾಷ್ ಅವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ನೂಜಿಬಾಳ್ತಿಲ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರಾಗಿ, ನೂಜಿಬಾಳ್ತಿಲ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಉಸ್ತುವಾರಿಯಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್‌ ಚುನಾಯಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಚುಣಾವಣೆ ಸಂದರ್ಭಗಳಲ್ಲಿ ಬಿಳಿನೆಲೆ ಗ್ರಾಮದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುವ ಪಿ.ಕೆ ಅಭಿಲಾಷ್ ಅವರು ಸಾಮಾಜಿಕ,

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ.ಕೆ ಅಭಿಲಾಷ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾ‌ರ್ ಆದೇಶ Read More »

ನೆರೆ ಮನೆಯ ಕೋಳಿ ಕೂಗಿ ನಿದ್ರೆಗೆ ಭಂಗ,ಪೊಲೀಸ್ ಠಾಣೆಯಲ್ಲಿ ದೂರು ದಾಖಲು!

ನೆರೆ ಮನೆಯ ಕೋಳಿ ಮುಂಜಾನೆ 3 ಗಂಟೆಗೆ ಕೂಗಿ ತಮ್ಮ ನಿದ್ರೆಗೆ ಭಂಗ ತರುತ್ತಿದೆ ಎಂದು ಅದರ ವಿರುದ್ಧ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಕೇರಳದ ಪಥನಾಂತಿಟ್ಟ ಪ್ರದೇಶದ ಪಲ್ಲಿಕಲ್ ನಲ್ಲಿ ನಡೆದಿದೆ. ದೂರು ದಾಖಲಾದ ಬೆನ್ನಲ್ಲೇ ಆ ಊರಿನಲ್ಲಿ ಗಲಾಟೆ ಭುಗಿಲೆದ್ದಿದೆ. ರಾಧಾಕೃಷ್ಣ ಕುರುಪ್ ಎಂಬ ವೃದ್ಧನಿಗೆ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವದಲ್ಲಿ ಇನ್ನೇನು ನಿದ್ರೆ ಹತ್ತುತ್ತಿದೆ ಎನ್ನುವಾಗ ದಿನವೂ ಬೆಳಗಿನ ಜಾವವೇ ಕೂಗಿ ತನ್ನ ಶಾಂತಿಯುತ ನಿದ್ರೆಗೆ

ನೆರೆ ಮನೆಯ ಕೋಳಿ ಕೂಗಿ ನಿದ್ರೆಗೆ ಭಂಗ,ಪೊಲೀಸ್ ಠಾಣೆಯಲ್ಲಿ ದೂರು ದಾಖಲು! Read More »

ದೆಹಲಿ ನೂತನ ಮುಖ್ಯಮಂತ್ರಿ ಯಾಗಿ ರೇಖಾ ಗುಪ್ತ ಆಯ್ಕೆ

ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯ ಬಳಿಕ ನೂತನ ಮುಖ್ಯಮಂತ್ರಿ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ರೇಖಾ ಗುಪ್ತ ಅವರೇ ರಾಷ್ಟ್ರ ರಾಜಧಾನಿಯ ನೂತನ ಸಿಎಂ ಎಂದು ಕಮಲ ಪಕ್ಷ ಘೋಷಣೆ ಮಾಡಿದೆ.ನೂತನ ಬಿಜೆಪಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವೂ ಇರಲಿದ್ದು, ಮಾಜಿ ಸಿಎಂ ಪುತ್ರ ಪರ್ವೇಶ್ ವರ್ಮಾ ಅವರನ್ನು ಈ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದೆ.

ದೆಹಲಿ ನೂತನ ಮುಖ್ಯಮಂತ್ರಿ ಯಾಗಿ ರೇಖಾ ಗುಪ್ತ ಆಯ್ಕೆ Read More »

ಫೆ.22 ಮತ್ತು ಫೆ.23 ರಂದು ಐವರ್ನಾಡಿನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

ಸುಳ್ಯ ತಾಲೂಕಿನ ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತ‌ರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ.ಕಬಡ್ಡಿ ಪಂದ್ಯಾಟವನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ ಎಂದು ಫೆ.19

ಫೆ.22 ಮತ್ತು ಫೆ.23 ರಂದು ಐವರ್ನಾಡಿನಲ್ಲಿ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ Read More »

ಕಾಣಿಕೆ ಡಬ್ಬಿ ಒಡೆದು ಕಳ್ಳತನ

ಬೆಳ್ತಂಗಡಿ ತಾಲೂಕಿನ ಚಿಬಿದ್ರೆ- ಮುಂಡಾಜೆ ಗಡಿ ಭಾಗದ ರಸ್ತೆ ಬದಿ ಇರುವ ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ಮಂಗಳವಾರ ಹಾಡ ಹಗಲೇ ನಡೆದಿದೆ.ಮಧ್ಯಾಹ್ನ 11ರಿಂದ ಒಂದು ಗಂಟೆ ಅವಧಿಯೊಳಗೆ ಯಾರೋ ಕಳ್ಳರು ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ವಾರಕ್ಕೆ ಒಮ್ಮೆ ಕಾಣಿಕೆ ಡಬ್ಬಿಯಿಂದ ಸಮಿತಿಯವರು ಹಣ ಸಂಗ್ರಹಿಸುತ್ತಿದ್ದರು. ಸುಮಾರು 3 ಸಾವಿರ ರೂ.ಗಿಂತ ಅಧಿಕ ಕಾಣಿಕೆ ಜಮೆಯಾಗುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಹಣ ಸಂಗ್ರಹಿಸಿದ್ದು, 2 ಸಾವಿರ

ಕಾಣಿಕೆ ಡಬ್ಬಿ ಒಡೆದು ಕಳ್ಳತನ Read More »

7ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಫೆ.18ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ನಿವಾಸಿ ಶ್ರವಣ್ (13) ಮೃತ ವಿದ್ಯಾರ್ಥಿ. ಈತ ಉಪ್ಪಿನಂಗಡಿಯ ಖಾಸಗಿ ಶಾಲಾ ವಿದ್ಯಾರ್ಥಿ.ನಿನ್ನೆ ರಾತ್ರಿ ಮನೆಯ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

7ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಅರಂತೋಡಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ ಕುಡಿಯುವ ನೀರಿಗೆ ಪರದಾಟ!

ಅರಂತೋಡು ಭಾಗದಲ್ಲಿಯು ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ ದಿನ ನಿತ್ಯ ಟ್ರಿಪ್ ಆಗುತ್ತಿರುವುದರಿಂದ ಗ್ರಾಮ ಪಂಚಾಯತ್ ನ ಸಾರ್ವಜನಿಕ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ, ಅಲ್ಲದೆ ಕೃಷಿಕರಿಗೆ, ಬೆಳಗ್ಗಿನ ಹೊತ್ತು ಅಡಚಣೆಯಾಗುತ್ತಿರುವುದರಿಂದ ನೌಕರಿಗೆ ತೆರಳುತ್ತಿರುವವರಿಗೆ ತುಂಬಾ ತೊಂದರೆಯಾಗಿದೆ. ದಿನ ಪತ್ರಿಕೆಯಲ್ಲಿ ಈ ಬಾರಿ ಲೋಡ ಶೆಡ್ ಇಲ್ಲ ಎಂದು ತಿಳಿಸಿದರು ಈ ಭಾಗದಲ್ಲಿ ದಿನಾಲು ಲೋಡ್ ಶೆಡ್ಡಿಂಗ್ ಇರುತ್ತದೆ. ಆದುದರಿಂದ ಮೆಸ್ಕಾಂ ಇಲಾಖೆ ಈ ಭಾಗಕ್ಕೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳ

ಅರಂತೋಡಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ ಕುಡಿಯುವ ನೀರಿಗೆ ಪರದಾಟ! Read More »

ಗುತ್ತಿಗಾರಿನಲ್ಲಿ ಕೈ ಕೊಟ್ಟ ವಿದ್ಯುತ್,ಕುಡಿಯುವ ನೀರಿಗೂ ಸಮಸ್ಯೆ

ಗುತ್ತಿಗಾರು ಭಾಗಕ್ಕೆ ಕಳೆದ ಮೂರು ದಿನಗಳಿಂದ ತ್ರೀ ಫೇಸ್ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮ ಪಂಚಾಯತ್, ಸಾರ್ವಜನಿಕರು ಕೃಷಿಕರು ಕಂಗಾಲಾಗಿದ್ದಾರೆ.ಫೆಸ್‌ ಇಲ್ಲದಿರುವುದರಿಂದ ಗ್ರಾ.ಪಂ ಗೆ ಕುಡಿಯುವ ನೀರಿನ ಸರಬರಾಜು ಸಂಕಷ್ಟ ಉಂಟಾಗಿದೆ. ಕೃಷಿಕರಿಗೆ ಕೃಷಿಗೆ, ಗೃಹಪಯೋಗಕ್ಕೂ ನೀರಿನ ಕೊರತೆ ಉಂಟಾಗಿರುವುದಾಗಿ ತಿಳಿದು ಬಂದಿದೆ. ಸುಬ್ರಹ್ಮಣ್ಯದಿಂದ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದ್ದರೂ ಲೋ ವೋಲ್ವೇಜ್ ಮತ್ತಿತರರ ಸಮಸ್ಯೆಗಳಿವೆ. ಬೆಳ್ಳಾರೆಯಲ್ಲಿ ಮೂರು ಕಡೆ ೩೩ ಕೆ.ವಿ ಭೂಗತ ಕೇಬಲ್ ನಲ್ಲಿ ಫಾಲ್ಟ್ ಕಂಡು ಬಂದ ಕಾರಣ ವಿದ್ಯುತ್ ಸರಬರಾಜು ವ್ಯತ್ಯಯ

ಗುತ್ತಿಗಾರಿನಲ್ಲಿ ಕೈ ಕೊಟ್ಟ ವಿದ್ಯುತ್,ಕುಡಿಯುವ ನೀರಿಗೂ ಸಮಸ್ಯೆ Read More »

ರಾಜ್ಯದಲ್ಲಿ ದಿನದ 7 ಗಂಟೆ ಕೃಷಿಗೆ ವಿದ್ಯುತ್ ಪೂರೈಕೆ : ಸಚಿವ ಕೆ.ಜೆ ಜಾರ್ಜ್

ರಾಜ್ಯ ಸರ್ಕಾರವು ರೈತರ ಕೃಷಿ ಕೆಲಸಗಳಿಗೆ ದಿನದ 7 ಗಂಟೆ ವಿದ್ಯುತ್ ಪೂರೈಸಲು ಆದೇಶ ನೀಡಿದೆ.ಕೃಷಿ ಪಂಪ್ ಸೆಟ್ ಗಳಿಗೆ ದಿನದ 7 ತಾಸು ತ್ರಿ ಫೇಸ್ ಹಾಗೂ ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವುದು ಸರ್ಕಾರದ ನೀತಿಯಾಗಿದ್ದು, ಇದಕ್ಕೆ ಬದ್ಧವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ರಾಜ್ಯದಲ್ಲಿ ಈ ವರ್ಷ ವಿದ್ಯುತ್ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವು ಪ್ರದೇಗಳಲ್ಲಿ ನಿರ್ವಹಣಾ ಕಾರ್ಯಗಳಿಗಾಗಿ ವಿದ್ಯುತ್ ಕಡಿತ

ರಾಜ್ಯದಲ್ಲಿ ದಿನದ 7 ಗಂಟೆ ಕೃಷಿಗೆ ವಿದ್ಯುತ್ ಪೂರೈಕೆ : ಸಚಿವ ಕೆ.ಜೆ ಜಾರ್ಜ್ Read More »

error: Content is protected !!
Scroll to Top