February 2025

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕಾರು ಕಾಸರಗೋಡಿನಲ್ಲಿ ಅಪಘಾತ ಪ್ರಾಣಾಪಯದಿಂದ ಪಾರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ಕಾರು ಕಾಸರಗೋಡಿನಲ್ಲಿ ಅಪಘಾತವಾಗಿ ಕಾರು ಜಖಂಗೊಂಡು ಅವರು ಸಹಿತ ಸಹ ಪ್ರಯಾಣಿಕರು ಪ್ರಾಣಾಪಯದಿಂದ ಪಾರಾದ ಘಟನೆ ಸೋಮವಾರ ವರದಿಯಾಗಿದೆ.ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೆರಿಯ ಕಲ್ಯೊಟ್ ನಲ್ಲಿ ಕೃಪೆಶ್ ಮತ್ತು ಸಜಿತ್ಲಾಲ್ ಅವರ 6 ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ತರ್ಜುಮೆ ಮಾಡಲು ಅವರ ವಾಹನದ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಸರಗೋಡು ನಗರದ ಟ್ರಾಫಿಕ್ […]

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕಾರು ಕಾಸರಗೋಡಿನಲ್ಲಿ ಅಪಘಾತ ಪ್ರಾಣಾಪಯದಿಂದ ಪಾರು Read More »

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ರವರಿಗೆ ಹೃದಯಾಘಾತ ಸಂಭವಿಸಿದ್ದು ಇಂದು(ಫೆ.17) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಇವರು ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಜ. 22 ರಂದು ಬೆಳಿಗ್ಗೆ ಏಕಾಏಕಿ ಹೃದಯಾಘಾತ ಸಂಭವಿಸಿದ್ದು ಬೈನ್ ಸ್ಟೋಕ್ ಕೂಡ ಸಂಭವಿಸಿತ್ತು ಈ ವೇಳೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಜಯರಾಮ ರವರು ಚಿಕಿತ್ಸೆ ಫಲಾಕಾರಿಯಾಗದೆ ಫೆ.17

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು Read More »

ತೊಡಿಕಾನ ದೇವಳದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ‌ ದೇವಳದ ವ್ಯವಸ್ಥಾಪನಾ ಸಮಿತಿಗೆ 9ಜನ ನೂತನ ಸದಸ್ಯರನ್ನು ಸರಕಾರ ನೇಮಕ ಮಾಡಿದೆ.ಯು.ಕೆ.ತೀರ್ಥರಾಮ ಪರ್ನೋಜಿ, ಯು.ಕೆ.ಕೇಶವ ಕೊಳಲುಮೂಲೆ, ವಸಂತ ಪೆಡ್ಕ, ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ, ಸತ್ಯಪ್ರಸಾದ್‌ ಗಬ್ಬಲ್ಕಜೆ, ಚಂಚಲಾಕ್ಷಿ ಕಲ್ಟಾರು, ಮಾಲತಿ ಭೋಜಪ್ಪ ಹಾಸ್ಸಾರೆ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರನ್ನು ನೂತನ ವ್ಯವಸ್ಥಾಪನ ಸಮಿತಿ ಸದಸ್ಯರನ್ನಾಗಿ ಸರಕಾರ ನೇಮಕ ಮಾಡಿದೆ.

ತೊಡಿಕಾನ ದೇವಳದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ Read More »

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಕಾಪಿಲ ನಿಧನ

ಸುಳ್ಯ ತಾಲೂಕಿನ‌ ಕನಕಮಜಲು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿಚಂದ್ರ ಕಾಪಿಲ ಅಸೌಖ್ಯದಿಂದ ಫೆ.17ರಂದು ಮುಂಜಾನೆ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಹೊನ್ನಮ್ಮ, ಪತ್ನಿ ಹೇಮಾವತಿ, ಪುತ್ರರಾದ ಮೌರ್ಯ, ಆರ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.ಇಂದು ಅವರ ಮನೆಯಲ್ಲಿ‌ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಕಾಪಿಲ ನಿಧನ Read More »

ಬಾಣಂತಿ ಸಾವು

ಬಾಣಂತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಮಾಳೂರು ಗ್ರಾಮದ ಮಂಜುಳಾ (25) ಮೃತ ಬಾಣಂತಿ. ಫೆಬ್ರವರಿ .10 ರಂದು ಅವರಿಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.ಈ ಹಿನ್ನಲೆ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಸಾವಿಗೀಡಾಗಿದ್ದಾರೆ. ಮಂಜುಳಾ ಅವರಿಗೆ ಒಂದು ವರ್ಷದ ಹಿಂದೆ ವಿವಾಹವಾಗಿತ್ತು.

ಬಾಣಂತಿ ಸಾವು Read More »

ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಬೆಳೆಯಲು ಅರೆಭಾಷೆ ಕಾಮಿಡಿ ವಿನೂತನ ಕಾರ್ಯಕ್ರಮ : ಸದಾನಂದ ಮಾವಂಜಿ

ಅರೆಭಾಷೆ ಅಕಾಡೆಮಿಯು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಅರೆಭಾಷೆ ಕಾಮಿಡಿ ಕೂಡ ಇದರಲ್ಲಿ ಒಂದು. ಅರೆಭಾಷೆ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಲು ಉತ್ತಮ ಅವಕಾಶ ಎಂದು ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ ಹೇಳಿದರು.V4 ನ್ಯೂಸ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಸಹಯೋಗದಲ್ಲಿ ‘ಅರೆಭಾಷೆಕಾಮಿಡಿ’ ರಿಯಾಲಿಟಿ ಶೋ ಗೆ ತಂಡಗಳ ಆಯ್ಕೆಗಾಗಿ ಆಡಿಷನ್ ನನ್ನು ಸುಳ್ಯದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಅವರು

ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಬೆಳೆಯಲು ಅರೆಭಾಷೆ ಕಾಮಿಡಿ ವಿನೂತನ ಕಾರ್ಯಕ್ರಮ : ಸದಾನಂದ ಮಾವಂಜಿ Read More »

ಸುಳ್ಯ : ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ!

ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾದ ಶವದ ಗುರುತು ಪತ್ತೆಯಾಗಿದ್ದು, ಇದು ಪಿರಿಯಾಪಟ್ಟಣದ ಅಜಿತ್ (24) ಎಂಬರ ಶವ ಎಂದು ತಿಳಿದುಬಂದಿದೆ.ಈತ ಸುಳ್ಯದ ವೆಲ್ಕಮ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದೂ, ಕೆಲ ತಿಂಗಳ ಹಿಂದೆ ಊರಿಗೆ ಹೋಗುತ್ತೇನೆ ಎಂದು ತೆರಳಿದ್ದ ಎನ್ನಲಾಗಿದೆ. ಫೆ.16ರಂದು ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಿಗೆ ಕೊಳೆತ ಶವ ಕಂಡುಬಂತೆನ್ನಲಾಗಿದೆ. ಪೋಲೀಸರಿಗೆ ವಿಷಯ ತಿಳಿಸಲಾಯಿತು. ಪರಿಶೀಲನೆ ನಡೆಸಿದಾಗ ದಾಖಲೆ ಇದ್ದುದನ್ನು ಕಂಡು ಪ್ರದೀಪ್ ಪಿರಿಯಾಪಟ್ಟಣ ಆತ ಸುಳ್ಯದ

ಸುಳ್ಯ : ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ! Read More »

ಅರಂತೋಡು ಎಲಿಮಲೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆಗೆ ಅಭಿವೃದ್ಧಿ ಗೆ ಅನುದಾನ ಒದಗಿಸಿ ಕೊಡುವೆ : ಸಚಿವ ಜಾರಕಿಹೊಳಿ ಭರವಸೆ

ಕರ್ನಾಟಕ ಘನ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರು ಬಹು ಬೇಡಿಕೆಯ ಅರಂತೋಡು ಎಲಿಮಲೆ ರಸ್ತೆ ಯನ್ನು ವೀಕ್ಷಿಸಿ ಆರಂತೋಡಿನಿಂದ ಮರ್ಕಂಜದ ಸನಿಹವರೆಗೆ ಸುಮಾರು 8ಕಿ. ಮೀ ರಸ್ತೆ ಸ್ವತಃ ವೀಕ್ಷಿಸಿದರು. ಶೀಘ್ರದಲ್ಲಿ ರಸ್ತೆಯನ್ನು ಸಂಪೂರ್ಣ ಅಗಲೀಕರಣಗೊಳಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಕಾಂಗ್ರೆಸ್ ಮುಖಂಡ ಟಿ. ಎಂ. ಶಾಹಿದ್ ಆರಂತೋಡು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ಅರಂತೋಡು ಎಲಿಮಲೆ ಸುಬ್ರಹ್ಮಣ್ಯ ಸಂಪರ್ಕ ರಸ್ತೆಗೆ ಅಭಿವೃದ್ಧಿ ಗೆ ಅನುದಾನ ಒದಗಿಸಿ ಕೊಡುವೆ : ಸಚಿವ ಜಾರಕಿಹೊಳಿ ಭರವಸೆ Read More »

ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ವಾರ್ನಿಂಗ್ ಮಾಡಿದ ಪೋಷಕರು

ಪ್ರತಿದಿನ ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ಪೋಷಕರು ಶಾಲೆಗೆ ಬಂದು ವಾರ್ನಿಂಗ್ ಕೊಟ್ಟ ಘಟನೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರು ಸರಕಾರಿ ಶಾಲೆಯಲ್ಲಿ ನಡೆದಿದೆ.ಈ ಶಾಲೆಯಲ್ಲಿ 46 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ ಮೂವರು ಶಿಕ್ಷಕರನ್ನು ಶಿಕ್ಷಣ ಇಲಾಖೆ ನಿಯೋಜಿಸಿತ್ತು, ಮುಖ್ಯ ಶಿಕ್ಷಕಿ ಅನಿತಾ,ಲವಿನಾ ಮತ್ತು ಸುಮಯ್ಯ, ಮುಖ್ಯ ಶಿಕ್ಷಕಿ ಅನಿತಾ ಮತ್ತು ಸುಮಯ್ಯ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆ ಇಬ್ಬರು ಪ್ರತಿದಿನ ಶಾಲೆಯಲ್ಲೇ ಜಗಳವಾಡುತ್ತಿದ್ದರು ಎನ್ನಲಾಗಿದೆ.ಇದರಿಂದ ಬೇಸತ್ತ ವಿದ್ಯಾರ್ಥಿಗಳಿಂದ ಸೀದಾ ಮನೆಯಲ್ಲಿ

ಶಾಲೆಯಲ್ಲಿ ಜಗಳ ಮಾಡುತ್ತಿದ್ದ ಶಿಕ್ಷಕಿಯರಿಗೆ ವಾರ್ನಿಂಗ್ ಮಾಡಿದ ಪೋಷಕರು Read More »

ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೋಳ್ಳೂರು ಆಯ್ಕೆ

ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೋಳ್ಳೂರು ಆಯ್ಕೆಗೊಂಡಿದ್ದಾರೆ.

ಸುಳ್ಯ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೋಳ್ಳೂರು ಆಯ್ಕೆ Read More »

error: Content is protected !!
Scroll to Top