March 12, 2025

ಕೊಡಗಿನಲ್ಲಿ ಲಘು ಭೂಕಂಪನ ಸಂಭವಿಸಿರುವುದು ನಿಜ! ಭೂಕಂಪನದ ತೀವ್ರತೆ ಎಷ್ಟಿತ್ತು ? ನೋಡಿ

ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನವಾಗಿರುವುದು ಹೌದೆಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ‌. ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಜೋಡುಪಾಲ ಸುತ್ತಮುತ್ತಲ ಪ್ರದೇಶದ,ಮಡಿಕೇರಿ‌ ನಗರದ ಎರಡು ಕಡೆಗಳಲ್ಲಿ ಬುಧವಾರ ಭೂಮಿ ಕಂಪಿಸಿತ್ತು.2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಸೇರಿದಂತೆ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳಿಗ್ಗೆ 10.50 ರ ಸುಮಾರಿನಲ್ಲಿಭೂಮಿ ಕಂಪಿಸಿದೆ. ಮದೆ ಗ್ರಾಮಪಂಚಾಯಿತಿಯಲ್ಲಿ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ತಿಳಿಸಲಾಗಿದೆ.ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ದೂರದಲ್ಲಿತ್ತು ಎಂದು […]

ಕೊಡಗಿನಲ್ಲಿ ಲಘು ಭೂಕಂಪನ ಸಂಭವಿಸಿರುವುದು ನಿಜ! ಭೂಕಂಪನದ ತೀವ್ರತೆ ಎಷ್ಟಿತ್ತು ? ನೋಡಿ Read More »

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ

ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಮಾ.11ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 30 ವರ್ಷ ಪ್ರಾಯವಾಗಿತ್ತು.ಹ್ರದಯಘಾತಕ್ಕೆ ಒಳಗಾದಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದರು.

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ Read More »

ಅತ್ಯಾಚಾರಕ್ಕೆ ಯತ್ನಿಸಿದಾತನ ಬಂಧನ

ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಬರುತ್ತಿದ್ದ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದಾತನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.ಮಾರ್ಪಾಡಿ ಗ್ರಾಮದ ಅಲಂಗಾರು ಉಳಿಯಾ ನಿವಾಸಿ ಪವನ್ ಕುಮಾರ್ ಬಂಧಿತ ಆರೋಪಿ.ಆರೋಪಿ ಪವನ್ ಮಾರ್ಚ್ 8ರಂದು ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಆರೋಪಿ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಬಾಲಕಿ ಆತನಿಂದ ತಪ್ಪಿಸಿಕೊಂಡು ಸೈಕಲ್ ಅಲ್ಲೇ ಬಿಟ್ಟು, ಮನೆಗೆ ಓಡಿ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಘಟನೆಯ ಬಳಿಕ

ಅತ್ಯಾಚಾರಕ್ಕೆ ಯತ್ನಿಸಿದಾತನ ಬಂಧನ Read More »

ಪೆರಾಜೆ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ

ಪೆರಾಜೆ ಶ್ರೀ ಶಾಸ್ತಾವು ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆಯನ್ನು ಪುದುವಟ್ಟು ಕಾಪುಸ್ಥಾನ ಮೂಲೆಮಜಲು ನಿಂದ ಕಡಿಯುವುದರ ಮಖಾಂತರ ಶ್ರೀ ದೇವರ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯವರು ಊರವರು ಉಪಸ್ಥಿತರಿದ್ದರು.

ಪೆರಾಜೆ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ Read More »

ಸುಳ್ಯ : ಮಳೆ ಬಂತು ಮಳೆ ಬಂತು

ಸುಳ್ಯ ನಗರ ಸೇರಿದಂತೆ ತಾಲೂಕಿನ ಕೆಲ ಭಾಗದಲ್ಲಿ ಬುಧವಾರ ಮಳೆಸುರಿದಿರುವ ಬಗ್ಗೆ ವರದಿಯಾಗಿದೆ.ಸುಳ್ಯ ನಗರ,ಆಲೆಟ್ಟಿ,ಅರಂತೋಡು,ತೊಡಿಕಾನ ಸಂಪಾಜೆ ಇತರ ಭಾಗದಲ್ಲಿ ಸಾಧಾರಣವಾಗಿ ಮಳೆ ಸುರಿದಿವೆ.

ಸುಳ್ಯ : ಮಳೆ ಬಂತು ಮಳೆ ಬಂತು Read More »

ಮದೆನಾಡು,ಜೋಡುಪಾಲದಲ್ಲಿ ಭೂಕಂಪ?

ಕೊಡಗು ಜಿಲ್ಲೆಯಲ್ಲಿ ಇಂದು ಭೂಮಿ ಕಂಪಿಸಿದ ಅನುಭವ ಆಗಿರುವ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯ ಮದೆನಾಡು ಜೋಡುಪಾಲ ಮತ್ತು ಮೊಣ್ಣಂಗೇರಿ ಭಾಗದಲ್ಲಿ ಬುಧವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ‌ ಎಂದು ಸ್ಥಳೀಯರು ತಿಳಿಸಿದ್ದಾರೆ‌.ಭೂಮಿ ದೊಡ್ಡದಾಗಿ ಗುಡುಗಿ ನಡುಗಿದ ಅನುಭವ ಉಂಟಾಗಿದ್ದು ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಓಡಿ ಬಂದಿದ್ದಾರೆ.ಆದರೆ ರಿಕ್ಟರ್ ಮಾಪಕದಲ್ಲಿ ಭೂಕಂಪನದ ಬಗ್ಗೆ ದಾಖಲು ಆಗಿಲ್ಲ ಎಂದು ಹೇಳಲಾಗಿದೆ.

ಮದೆನಾಡು,ಜೋಡುಪಾಲದಲ್ಲಿ ಭೂಕಂಪ? Read More »

ದೇವರಿಗೆ ವಾಮಚಾರ ಮಾಡಿದ ಕಿಡಿಗೇಡಿಗಳು

ತುಮಕೂರು: ಮನುಷ್ಯರಿಗೆ ವಾಮಚಾರ ಮಾಡುವ ಸುದ್ದಿಗಳು ಆಗಾಗ ವರದಿಯಾಗುತ್ತಿರುತ್ತವೆ.ಆದರೆ ದೇವರಿಗೆ ವಾಮಾಚಾರ ಮಾಡಿದಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಟ್ನಾ ಗ್ರಾಮದಲ್ಲಿ ಮಾ. 11ರ ಮಂಗಳವಾರ ಮಧ್ಯರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.ಹಟ್ನಾ ಗ್ರಾಮ ಸೇರಿದಂತೆ 32 ಗ್ರಾಮಗಳ ಗ್ರಾಮ ದೇವತೆ ಕೆಂಪಮ್ಮ ದೇವಿಗೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಂದು (ಮಾ. 12ರ ಬುಧವಾರ) ಮುಂಜಾನೆ ಪೂಜೆ ಸಲ್ಲಿಸಲು ದೇವಸ್ಥಾನದಕ್ಕೆ ಅರ್ಚಕರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.ವಾಮಾಚಾರಕ್ಕೆ

ದೇವರಿಗೆ ವಾಮಚಾರ ಮಾಡಿದ ಕಿಡಿಗೇಡಿಗಳು Read More »

ತೋಟಕ್ಕೆ ಕಾಡಾನೆ ದಾಳಿಯಿಂದ ಅಪಾರ ನಷ್ಟ

ಸುಳ್ಯ ತಾಲೂಕಿನ ಐನೆಕಿದು ಗ್ರಾಮದ ಬಾಣೂರು ಕಟ್ಟೆಮನೆ ಜಯಂತ ಗೌಡರ ತೋಟಕ್ಕೆ ಕಳೆದ ತಡ ರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ಕ್ರಷಿಗೆ ಹಾನಿ ಮಾಡಿವೆ.ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಈ ಪ್ರದೇಶದಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ.ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ತೋಟಕ್ಕೆ ಕಾಡಾನೆ ದಾಳಿಯಿಂದ ಅಪಾರ ನಷ್ಟ Read More »

ದ.ಕ ದಲ್ಲಿ ಹೆಚ್ಚಿದ ಉರಿ ಬಿಸಿಲು,ಸುಳ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲು!

ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಲಾಗಿದೆ.ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಮುಂದುವರಿ ಯುವ ಮುನ್ಸೂಚನೆ ಇದೆ. ಇದರಿಂದ ಹೀಟ್ ವೇವ್ ಸ್ಟೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್

ದ.ಕ ದಲ್ಲಿ ಹೆಚ್ಚಿದ ಉರಿ ಬಿಸಿಲು,ಸುಳ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲು! Read More »

ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾ.11 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಎರಡು ದಿನಗಳ ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಗೊಳ್ಳುವರು.ದಕ್ಷಿಣ ಭಾರತದ ಸುಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅನೇಕ ಬಾಲಿವುಡ್, ಹಾಲಿವುಡ್ ನಟ ನಟಿಯರು ಆಗಮಿಸುತ್ತಿದ್ದು, ಸಂತಾನ ಭಾಗ್ಯವಿಲ್ಲದವರು, ಚರ್ಮರೋಗ ವ್ಯಾಧಿ, ಆರೋಗ್ಯ ವೃದ್ಧಿಗಾಗಿ ಸೇವೆಯನ್ನು ಸಲ್ಲಿಸುವಂಥದ್ದು ಸರ್ವೇಸಾಮಾನ್ಯವಾಗಿದೆ.ಅದೇ ರೀತಿ ಕತ್ರಿನಾ ಕೈಫ್ ಅವರು ಕೂಡ ಕುಕ್ಕೆ ಸುಬ್ರಹ್ಮಣ್ಯನ ಸೇವೆಯನ್ನು ಸಲ್ಲಿಸುವುದಕ್ಕೋಸ್ಕರ ಎರಡು ದಿನಗಳ ಸರ್ಪ ಸಂಸ್ಕಾರ ಸೇವೆಯಲ್ಲಿ ಪಾಲ್ಗೊಳ್ಳಲಿರುವರು ಎಂದು ಹೇಳಲಾಗಿದೆ.ಮಾ.11 ರಂದು ಆರಂಭವಾದ ಸರ್ಪ

ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ Read More »

error: Content is protected !!
Scroll to Top