March 26, 2025

ಉಬರಡ್ಕ : ಮರವೇರಿ ಮಾವಿನ ಮಿಡಿ ಕೊಯ್ಯುವಾಗ ಗೆಲ್ಲು ತುಂಡಾಗಿ ವ್ಯಕ್ತಿ ಬಿದ್ದು ಸಾವು

ಸುಳ್ಯ: ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಬರಡ್ಕದಲ್ಲಿ ನಡೆದಿದೆ.ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ ಮೃತ ದುರ್ದೈವಿ. ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿಯವರ ಮಾ.೨೨ರಂದು ಕೆಲಸಕ್ಕೆ ಹೋಗಿದ್ದಲ್ಲಿ ಮಾವಿನ ಮರ ಹತ್ತಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದು ಇವರು ಕೂಡಾ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ […]

ಉಬರಡ್ಕ : ಮರವೇರಿ ಮಾವಿನ ಮಿಡಿ ಕೊಯ್ಯುವಾಗ ಗೆಲ್ಲು ತುಂಡಾಗಿ ವ್ಯಕ್ತಿ ಬಿದ್ದು ಸಾವು Read More »

ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ ಕೆ.ಎಸ್.ಆರ್‌.ಟಿ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ ಕೆಳಗಡೆ ಪೇರಿಸಿದ ಇಟ್ಟಿದ್ದ ವಿದ್ಯುತ್ ಕಂಬದಲ್ಲಿ ವೃದ್ಧನೋರ್ವನ ಮಲಗಿದ ಸ್ಥಿತಿಯಲ್ಲೇ ಶವ ಪತ್ತೆಯಾದ ಘಟನೆ ಬುಧವಾರ ವರದಿಯಾಗಿದೆ. ಈ ಶವ ಕನಕಮಜಲಿನ‌ ವ್ಯಕ್ತಿಯ ಶವ ಎಂದು ಹೇಳಲಾಗುತ್ತಿದೆ.

ಸುಳ್ಯ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ Read More »

ಭಾರೀ ಗಾಳಿಮಳೆಗೆ ಕಾರಿನ ಮೇಲೆ ಉರುಳಿ ಬಿದ್ದು ಜಖಂಗೊಂಡ ಕಾರು

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಸುರಿದ ಭಾರೀ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ಮರ ಬಿದ್ದು, ಕಾರು ಜಖಂಗೊಂಡ ಘಟನೆ ಮಾ.26 ರಂದು ಸಂಜೆ ನಡೆದಿದೆ.ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೇಲ್ಸ್ ಮಾಲೀಕ ಬಿ.ಆರ್ ಪದ್ಮಯ್ಯ ಅವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಸಂಜೆ ವೇಳೆ ಸುರಿದ ಭಾರೀ ಮಳೆ – ಗಾಳಿಗೆ ಮರವೊಂದು ದಿಢೀರ್ ಕಾರಿನ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡಿದೆ.

ಭಾರೀ ಗಾಳಿಮಳೆಗೆ ಕಾರಿನ ಮೇಲೆ ಉರುಳಿ ಬಿದ್ದು ಜಖಂಗೊಂಡ ಕಾರು Read More »

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ

ಅರಂತೋಡು : ಅರಂತೋಡು ಗ್ರಾಮ ಪಂಚಾಯತ್ ಸದಸ್ಯೆ ಸುಜಯ ಲೋಹಿತ್ ಅವರ ತೊಟಕ್ಕೆ ಕಾಡಾನೆ ದಾಳಿ ಅಪಾರ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.ತೆಂಗಿನ ಮರ ಬಾಳೆ ಇತರ ಕ್ರಷಿ ಬೆಳೆಗಳನ್ನು ನಾಶ ಮಾಡಿದೆ.ಅನೇಕ ತಿಂಗಳಿನಿಂದ ಅಡ್ತಲೆ ಪರಿಸರ ದಲ್ಲಿ ಕಾಡಾನೆಗಳು ಬೀಡು ಬಿಟ್ಟು ಆಗಾಗ್ಗೆ ಕೃಷಿ ನಾಶ ಮಾಡುತ್ತಿದೆ. ಕಾಡು ಕೋಣ ಹಾವಳಿಯು ಹೆಚ್ಚಾಗಿದ್ದು ಅನೇಕ ರೈತರ ಕ್ರಷಿ ಮಾಶ ಮಾಡಿವೆ.ಆನೆ ಹಾಗೂ ಕಾಡು ಕೋಣಗಳ ಹಾವಳಿ ವಿಪರೀತ ಆಗುತ್ತಿದ್ದು, ಜನಪ್ರತಿನಿದಿನಗಳು ದಯವಿಟ್ಟು

ಅರಂತೋಡು : ಗ್ರಾಮ ಪಂಚಾಯತ್ ಸದಸ್ಯೆಯ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕ್ರಷಿ ನಾಶ Read More »

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ

ಸುಳ್ಯ ತಾಲೂಕಿನಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿ ಮಳೆ ಸುರಿದಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗುತ್ತಿದೆ.ಅರಂತೋಡಿನಲ್ಲಿ ಸಂಜೆ ಬಿಸಿದ ಗಾಳಿ ಮಳೆ ಗೆ ಅರಂತೋಡು ಶಾಲಾ ಬಳಿ ತೆಂಗಿನ ಮರ ಮುರಿದು ಬಿದ್ದು ಅರಂತೋಡು ಅಂಗಡಿ ಮಜಲು ರಸ್ತೆ ತಡೆ ಉಂಟಾಗಿ ಸಂಚಾರಕ್ಕೆ ಬಂದ್ ಆಗಿತ್ತು .ಇದನ್ನು ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆಶಿಕ್ ಅರಂತೋಡು, ಕೃಷ್ಣ ದಾಸರ ಹಿತ್ಲು,ಹಮೀದ್ ಕುಕ್ಕಂಬಳ,ಮುನೀರ್ ಸಂಟ್ಯಾರ್,ತಾಜುದ್ದೀನ್ ಅರಂತೋಡು ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.ಇನ್ನು ಕೆಲವು ಕಡೆ

ಸುಳ್ಯ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕಹಾನಿ Read More »

error: Content is protected !!
Scroll to Top