ಭಾವೈಕ್ಯತೆಯ ಸಂಗಮವಾದ ತೆಕ್ಕಿಲ್ ಇಫ್ತಾರ್ ಕೂಟ,ಮೂರು ಧರ್ಮದ ಧರ್ಮಗುರುಗಳಿಗೆ ಪ್ರತಿಷ್ಠಾನ ವತಿಯಿಂದ ಸನ್ಮಾನ
ಅರಂತೋಡು ಪ್ರತಿಷ್ಠಾನ ವತಿಯಿಂದ ಮಾ. 26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಇಪ್ಪತ್ತನೇ ವರ್ಷದ ಸರ್ವಧರ್ಮ ಸೌಹಾರ್ದ ಇಫ್ತಾರ್ ಕೂಟವು ಭಾವೈಕ್ಯದ ಸಂಗಮವಾಯಿತು. ಕಾರ್ಯಕ್ರಮದಲ್ಲಿ ಮೂರು ಧರ್ಮದ ಧರ್ಮ ಗುರುಗಳನ್ನು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೇಶ್ವರ ಸಿದ್ದ ಪುರುಷ ಮಠ ಮರ್ಕಂಜ ಇದರ ಧರ್ಮದರ್ಶಿ ರಾಜೇಶ್ ನಾಥ್ ಜಿ. ಸುಳ್ಯ ಬೀರಮಂಗಲ ಸೈಂಟ್ ವಿಕ್ಟರ್ ಚರ್ಚ್ ನ ಧರ್ಮ ಗುರು ಫಾದರ್ ವಿಕ್ಟರ್ ಡಿ’ಸೋಜಾ , ಅರಂತೋಡು ಬದ್ರಿಯಾ ಜುಮಾ […]