March 2025

ಗಂಟಲಲ್ಲಿ ಮೀನು ಸಿಲುಕಿಕೊಂಡು ಯುವಕ‌ ಸಾವು

ಯುವಕನೊರ್ವನ ಗಂಟಲಲ್ಲಿ ಮೀನು ಸಿಲುಕಿಕೊಂಡು ಯುವಕ ಸಾವನ್ನಪ್ಪಿದ ಘಟನೆ ಭಾನುವಾರ ಕೇರಳ ರಾಜ್ಯದ ಆಲಪ್ಪುಳ ಬಳಿಯ ಕಾಯಂಕುಳಂನಲ್ಲಿ ನಡೆದಿರುವ ಘಟನೆ ವರದಿಯಾಗಿದೆ.ಪುತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (25 ವರ್ಷ.) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ 4.30 ಗಂಟೆಗೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ತನ್ನ ಸ್ನೇಹಿತರೊಂದಿಗೆ ಆದರ್ಶ್ ಭತ್ತದ ಗದ್ದೆಯನ್ನು ಬರಿದು ಮಾಡಿ ಮೀನುಗಾರಿಕೆ ನಡೆಸುತ್ತಿದ್ದನು. ಈ ವೇಳೆ ಆತನು ತನ್ನ ಬಾಯಿಯಲ್ಲಿ ಹಿಡಿದಿದ್ದ ಮೀನು ಜಾರಿ ಗಂಟಲಲ್ಲಿ ಸಿಲುಕಿಕೊಂಡಿತ್ತು. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ […]

ಗಂಟಲಲ್ಲಿ ಮೀನು ಸಿಲುಕಿಕೊಂಡು ಯುವಕ‌ ಸಾವು Read More »

ಪೆರಾಜೆ : ಭೀಕರ ಅಪಘಾತದಲ್ಲಿ ಮೂವರಿಗೆ ಗಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ ನಿಂತಿದ್ದ ಟೆಂಪೊ ಒಂದಕ್ಕೆ ಮೈಸೂರು ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.ಗಾಯಗೊಂಡವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಗಿದೆ.ಕಾರು ಜಖಂಗೊಂಡಿದೆ.

ಪೆರಾಜೆ : ಭೀಕರ ಅಪಘಾತದಲ್ಲಿ ಮೂವರಿಗೆ ಗಾಯ Read More »

ಶಾಸಕ ವೇದವ್ಯಾಸ ಕಾಮತ್ ಸಹಿತ ಅವರ ಬೆಂಬಲಿಗರ ಮೇಲೆ ಪ್ರಕರಣ ದಾಖಲು

ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಬೆಂಬಲಿಗರೆನ್ನಲಾದ 11 ಮಂದಿ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಎಂಬವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ರವಿವಾರ ರಾತ್ರಿ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳನ್ನು ಸ್ವಾಗತಿಸಲು ಸ್ವಯಂಸೇವಕ ಎಂಬ ನೆಲೆಯಲ್ಲಿ ನಾನು ಆಶಾಲತಾ

ಶಾಸಕ ವೇದವ್ಯಾಸ ಕಾಮತ್ ಸಹಿತ ಅವರ ಬೆಂಬಲಿಗರ ಮೇಲೆ ಪ್ರಕರಣ ದಾಖಲು Read More »

ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ ಕಾರ್ಯಕ್ರಮ

ಕಾಸರಗೋಡು : ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ’ ಎಂದು ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ತರ್ ಹೇಳಿದರು. ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ

ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ ಕಾರ್ಯಕ್ರಮ Read More »

ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ” ಇಂದ್ರಜಿತು “ಯಕ್ಷಗಾನ ತಾಳಮದ್ದಳೆ

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ಪ್ರಯುಕ್ತ ದೇವಾಲಯದ ಸಭಾಭವನದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ” ಇಂದ್ರಜಿತು “ಯಕ್ಷಗಾನ ತಾಳಮದ್ದಳೆ ಜರಗಿತು. ಯಕ್ಷಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ರಮಾನಂದ ರೈ ದೇಲಂಪಾಡಿ ಅವರ ಸಂಯೋಜನೆಯೊಂದಿಗೆ ನಾರಾಯಣ ದೇಲಂಪಾಡಿ ಅವರ ಅರ್ಥಸಾಹಿತ್ಯ ಕೃತಿಯನ್ನೊಳಗೊಂಡ ಈ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಕುಮಾರಿ ರಚನಾ ಚಿದ್ಗಲ್‌, ಹಾಗೂ ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ ಅವರು ಹಾಡಿ ರಂಜಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ

ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯೆಯರಿಂದ ” ಇಂದ್ರಜಿತು “ಯಕ್ಷಗಾನ ತಾಳಮದ್ದಳೆ Read More »

ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಬೀಳ್ಕೊಡುಗೆ ಸಮಾರಂಭ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ಸುಳ್ಯ ಇಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಫೆಬ್ರವರಿ ತಿಂಗಳಲ್ಲಿ ವಯೋ ನಿವೃತ್ತಿ ಹೊಂದಿದ ಮೆಕ್ಯಾನಿಕಲ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕ ಮೇಘರಾಜ ಹಾಗೂ ಸಿವಿಲ್ ವಿಭಾಗದ ಮೆಕ್ಯಾನಿಕ್ ಪರಮೇಶ್ವರ ಕೇರ್ಪಳ ಇವರ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕೆವಿಜಿ ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತರನ್ನು ಸನ್ಮಾನಿಸಿ ಮಾತನಾಡುತ್ತಾ ಇಂದು ನಿವ್ರತ್ತಿಗೊಂಡ ಇಬ್ಬರೂ ಸಿಬ್ಬಂದಿಗಳು ತಮ್ಮ ವೃತ್ತಿಗೆ ನ್ಯಾಯ ಒದಗಿಸಿರುವುದಲ್ಲದೆ ಕೌಟುಂಬಿಕವಾಗಿಯೂ

ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಬೀಳ್ಕೊಡುಗೆ ಸಮಾರಂಭ Read More »

ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ ತಾಲೂಕಿನ ನವ ವಿವಾಹಿತೆ ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ(23) ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೆಲಸ ಹುಡುಕುತ್ತಿದ್ದ ಪೂಜಾರನ್ನು ಪತಿ ಪ್ರಕಾಶ್ ಅವರು ಬೆಂಗಳೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆಕಳುಹಿಸಿದ್ದರು.ಪ್ರಕಾಶ್ ಬದ್ಯಾರು ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಪೂಜಾ ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜ ಹಾಗೂ ಸೇಸಪ್ಪ ಪೂಜಾರಿ ದಂಪತಿಯ ಪುತ್ರಿಯಾಗಿದ್ದು,

ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ Read More »

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ

ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಕೆಲವು ಕಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಕೆಎಸ್‌ಎನ್‌ಡಿಎಂಸಿ ಮಾಹಿತಿಯಂತೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ 40 ಡಿ.ಸೆ. ತಾಪಮಾನ ದಾಖಲಾಗಿದೆ. ಉಳಿದಂತೆ ಅಜೆಕಾರಿನಲ್ಲಿ 39.8, ಉಪ್ಪಿನಂಗಡಿ 39.6, ಮೂಡುಬಿದಿರೆ 39, ಹೆಬ್ರಿಯಲ್ಲಿ 39 ಡಿ.ಸೆ. ಮತ್ತು ಮಂಗಳೂರಿನಲ್ಲಿ 35.2 ತಾಪಮಾನ ದಾಖಲಾಗಿದೆ. .

ಮುಂದಿನ 48 ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ Read More »

ಪುತ್ತೂರು : ರೈಲು ಕೆಟ್ಟು ಸಮಸ್ಯೆಗೊಳಗಾದ ಪ್ರಯಾಣಿಕರು

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಪುತ್ತೂರಿನಲ್ಲಿ ಕೆಟ್ಟು ನಿಂತ ಘಟನೆ ಭಾನುವಾರ ರಾತ್ರಿ ನಡೆದಿದೆ.ಮಂಗಳೂರಿನಿಂದ ಹೊರಟಿದ್ದ ಕಣ್ಣೂರು ಎಕ್ಸ್’ಪ್ರೆಸ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪರದಾಡುವ ಸ್ಥಿತಿ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ.ರಾತ್ರಿ 9.30ಕ್ಕೆ ಕಣ್ಣೂರು ಎಕ್ಸ್’ಪ್ರೆಸ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿತ್ತು.ಪುತ್ತೂರಿನಿಂದ ಸುಮಾರು 1.ಕಿ.ಮೀ ಮುಂದೆ ಸಾಗಿದ ರೈಲು ಅಚಾನಕಾಗಿ ನಿಂತಿತುಸುಬ್ರಹ್ಮಣ್ಯದಿಂದ ರೈಲು ಇಂಜಿನ್ ತರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪುತ್ತೂರು : ರೈಲು ಕೆಟ್ಟು ಸಮಸ್ಯೆಗೊಳಗಾದ ಪ್ರಯಾಣಿಕರು Read More »

ಪುತ್ತೂರು : ಭೀಕರ ಅಪಘಾತದಲ್ಲಿ ತಾಯಿ ಮಗು ಸಾವು

ಬಸ್‌ ಹಾಗೂ ಆಟೋ ರಿಕ್ಷಾ ನಡುವೆ ಪುತ್ತೂರಿನ ನೆಹರು ನಗರದಲ್ಲಿ ಮಾ.2ರಂದು ಅಪಘಾತ ಸಂಭವಿಸಿ ಘಟನೆಯಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.ಕುಂಬ್ರ ನಿವಾಸಿ ಜಮೀಲಾ(52.ವ) ಹಾಗೂ ತನ್ನೀರ್ (4 ವ.) ಮೃತರು. ಇನ್ನೂ ಆಟೋರಿಕ್ಷಾ ಚಾಲಕ ಮಹಮ್ಮದ್, ಒರ್ವ ಮಹಿಳೆ ಮತ್ತು ಮಗು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುತ್ತೂರು : ಭೀಕರ ಅಪಘಾತದಲ್ಲಿ ತಾಯಿ ಮಗು ಸಾವು Read More »

error: Content is protected !!
Scroll to Top