March 2025

ಅರಂಬೂರು : ನಾಳೆಯಿಂದ ದೈವಂಕಟ್ಟು ಮಹೋತ್ಸವ,ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ದೈವಸ್ಥಾನಗಳು

ಅರಂಬೂರು : ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದ್ದು ಸಕಲ ಸಿದ್ಧತೆಗಳಿದ್ದು ಅಂತಿಮ ಹಂತದಲ್ಲಿದೆ.ಎಲ್ಲರ‌ ಸಹಕಾರದಲ್ಲಿ ಉತ್ಸವ ನಡೆಯಲಿದ್ದು, 4 ದಿನದ ಉತ್ಸವದಲ್ಲಿ ಸುಮಾರು ಎಂಬತ್ತು ಸಾವಿರದಿಂದ ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಪಾರ್ಕಿಂಗ್, ಊಟದ ವ್ಯವಸ್ಥೆ, ಜನರಿಗೆ ಕುಳಿತು ಕೊಳ್ಳುವ ವ್ಯವಸ್ಥೆ ಸೇರಿ ಸಕಲ‌ ವ್ಯವಸ್ಥೆಗಳು ನಡೆಯುತಿದ್ದು, ಭಕ್ತರ ಹಾಗೂ ಊರವರ ಸಹಕಾರದಲ್ಲಿ […]

ಅರಂಬೂರು : ನಾಳೆಯಿಂದ ದೈವಂಕಟ್ಟು ಮಹೋತ್ಸವ,ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ ದೈವಸ್ಥಾನಗಳು Read More »

ಜಟ್ಟಿಪಳ್ಳ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಮೂರು ವಿದ್ಯುತ್ ಕಂಬ ತಂಡು,ಜನರು ಪ್ರಾಣಾಪಾಯದಿಂದ ಪಾರು

ಸುಳ್ಜ ಜಟ್ಟಿಪಳ್ಳ ರಸ್ತೆಯಲ್ಲಿ ತೆಂಗಿನ ಮರವೊಂದು ವಿದ್ಯುತ್ ಲೈನ್ ಮೇಲೆ ಮುರಿದ್ದು ಪವಾಡ ಸದೃಶ ವಾಗಿ ಜನರು ಪ್ರಾಣಾಪಾಯದಿಂದ ಪಾರಾದ ಘಟನೆ ಇದೀಗ ವರದಿಯಾಗಿದೆ‌.ಬ್ರಹತ್ ಗಾತ್ರದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಯಾವುದೇ ಅಪಾಯ ಸಂಭವಿಸಿಲ್ಲ.ಜಟ್ಟಿಪಳ್ಳ ರಸ್ತೆ ಬಂದ್ ಆಗಿದೆ.

ಜಟ್ಟಿಪಳ್ಳ ರಸ್ತೆಗೆ ಉರುಳಿ ಬಿದ್ದ ತೆಂಗಿನ ಮರ,ಮೂರು ವಿದ್ಯುತ್ ಕಂಬ ತಂಡು,ಜನರು ಪ್ರಾಣಾಪಾಯದಿಂದ ಪಾರು Read More »

ಅಪರಾಹ್ನ 2 ಗಂಟೆ ನಂತರ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಸಾಧ್ಯತೆ

ಮಾ.12 ರಂದು ಸಂಜೆ ಸುರಿದ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದ ಹಿನ್ನೆಲೆಯಲ್ಲಿ ಸುಳ್ಯಕ್ಕೆ ವಿದ್ಯುತ್‌ ವ್ಯತ್ಯಯ ಕಳೆದ ರಾತ್ರಿ 9 ಗಂಟೆಯಿಂದ ವಿದ್ಯುತ್ ಕಡಿತ ಉಂಟಾಗಿದ್ದು, ಜತೆಗೆ ಇಲ್ಲಿ ಕಾವು ಸಬ್ ಸ್ಟೇಷನ್ ನಿಂದ ಬರುವ ಕನಕಮಜಲು 11 ಕೆ.ವಿ.ಪೀಡರ್‌ ನ 2 ಕಂಬಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಅಪರಾಹ್ನ ಎರಡು ಗಂಟೆ ವೇಳೆಗೆ ದುರಸ್ತಿ ಕಾರ್ಯ ಮುಗಿದು

ಅಪರಾಹ್ನ 2 ಗಂಟೆ ನಂತರ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಸಾಧ್ಯತೆ Read More »

ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ಶಾಲಾ ಮಕ್ಕಳಿಗೆ ಗಾಯ

ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಶಾಲಾ ಮಕ್ಕಳ ಸಹಿತ 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಮಾ.13 ರಂದು ಬೆಳಿಗ್ಗೆ ನಡೆದಿದೆ.ಸುಬ್ರಹ್ಮಣ್ಯದಿಂದ ಮಂಗಳೂರುಗೆ ಹೋಗುತ್ತಿದ್ದ ಬಸ್‌ ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿಯಿಂದ ಅಂಡರ್ ಪಾಸ್ ನಿಂದ ಮುಂದೆ ಹೋಗುತ್ತಿದ್ದಂತೆ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಬಸ್ ನ ಹಿಂಬದಿಗೆ ಡಿಕ್ಕಿಯಾಗಿದೆ.ಘಟನೆಯಲ್ಲಿ ಶಾಲಾ ಮಕ್ಕಳ ಸಹಿತ ಬಸ್ ನ ಹಿಂಬದಿ ಸೀಟು ಹಾಗೂ ಬಾಗಿಲಲ್ಲಿ ನಿಂತುಕೊಂಡಿದ್ದ

ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಲಾರಿ ಡಿಕ್ಕಿ ಹೊಡೆದು ಶಾಲಾ ಮಕ್ಕಳಿಗೆ ಗಾಯ Read More »

ಮಂಡೆಕೋಲು : ಹೈನುಗಾರಿಕೆ ಮಾಹಿತಿ ಶಿಬಿರ ಉದ್ಘಾಟನೆ

ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹೈನುಗಾರಿಕೆ ಮಾಹಿತಿ ಶಿಬಿರ ಮಾ 10ರಂದು ಸಂಘದ ಧವಳಧಾರೆ ಸಭಾಂಗಣದಲ್ಲಿ ನಡೆಯಿತು. ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನುಸುಳ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕಿ ಮಧುರ ಎಂ.ಆ‌ರ್. ಉದ್ಘಾಟಿಸಿದರು. ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ. ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ

ಮಂಡೆಕೋಲು : ಹೈನುಗಾರಿಕೆ ಮಾಹಿತಿ ಶಿಬಿರ ಉದ್ಘಾಟನೆ Read More »

ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿ,ಕತ್ತಲೆಯಲ್ಲಿ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳು

ಸುಳ್ಯದಲ್ಲಿ ಮೊದಲ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು ಸುಳ್ಯ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಕತ್ತೆಲೆಯಲ್ಲಿ ಕಾಲ ಕಳೆಯುವಂತಾಗಿದೆ.ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಕೈ ಕೊಟ್ಟ ವಿದ್ಯುತ್ ಇನ್ನು ಬಂದಿಲ್ಲ.ಇಂದು ಸುರಿದ ಪ್ರಥಮ ಮಳೆಗೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿಯಲ್ಲಿ 33/11 ಕೆ.ವಿ. ಲೈನ್ ಗೆ ಮರ ಬಿದ್ದ ಕಾರಣ ವಿದ್ಯುತ್ ಕಂಬ ಮುರಿದಿರುತ್ತದೆ. ಈ ಲೈನ್ ನಿಂದ ಸುಳ್ಮ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸರಬರಾಜಾಗುವ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ‌.ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ

ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿ,ಕತ್ತಲೆಯಲ್ಲಿ ಸುಳ್ಯ ಮತ್ತು ಗ್ರಾಮೀಣ ಪ್ರದೇಶಗಳು Read More »

ಕೊಡಗಿನಲ್ಲಿ ಲಘು ಭೂಕಂಪನ ಸಂಭವಿಸಿರುವುದು ನಿಜ! ಭೂಕಂಪನದ ತೀವ್ರತೆ ಎಷ್ಟಿತ್ತು ? ನೋಡಿ

ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಘು ಭೂಕಂಪನವಾಗಿರುವುದು ಹೌದೆಂದು ಸಂಬಂಧಪಟ್ಟ ಇಲಾಖೆ ತಿಳಿಸಿದೆ‌. ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಜೋಡುಪಾಲ ಸುತ್ತಮುತ್ತಲ ಪ್ರದೇಶದ,ಮಡಿಕೇರಿ‌ ನಗರದ ಎರಡು ಕಡೆಗಳಲ್ಲಿ ಬುಧವಾರ ಭೂಮಿ ಕಂಪಿಸಿತ್ತು.2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಸೇರಿದಂತೆ ಸೇರಿದಂತೆ ಕೆಲವು ಭಾಗಗಳಲ್ಲಿ ಬೆಳಿಗ್ಗೆ 10.50 ರ ಸುಮಾರಿನಲ್ಲಿಭೂಮಿ ಕಂಪಿಸಿದೆ. ಮದೆ ಗ್ರಾಮಪಂಚಾಯಿತಿಯಲ್ಲಿ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ತಿಳಿಸಲಾಗಿದೆ.ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ದೂರದಲ್ಲಿತ್ತು ಎಂದು

ಕೊಡಗಿನಲ್ಲಿ ಲಘು ಭೂಕಂಪನ ಸಂಭವಿಸಿರುವುದು ನಿಜ! ಭೂಕಂಪನದ ತೀವ್ರತೆ ಎಷ್ಟಿತ್ತು ? ನೋಡಿ Read More »

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ

ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಮಾ.11ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರಿಗೆ 30 ವರ್ಷ ಪ್ರಾಯವಾಗಿತ್ತು.ಹ್ರದಯಘಾತಕ್ಕೆ ಒಳಗಾದಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದರು.

ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ ಹೃದಯಾಘಾತದಿಂದ ನಿಧನ Read More »

ಅತ್ಯಾಚಾರಕ್ಕೆ ಯತ್ನಿಸಿದಾತನ ಬಂಧನ

ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಬರುತ್ತಿದ್ದ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದಾತನನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.ಮಾರ್ಪಾಡಿ ಗ್ರಾಮದ ಅಲಂಗಾರು ಉಳಿಯಾ ನಿವಾಸಿ ಪವನ್ ಕುಮಾರ್ ಬಂಧಿತ ಆರೋಪಿ.ಆರೋಪಿ ಪವನ್ ಮಾರ್ಚ್ 8ರಂದು ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದ ಬಾಲಕಿಯನ್ನು ಆರೋಪಿ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಅಡ್ಡಗಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಬಾಲಕಿ ಆತನಿಂದ ತಪ್ಪಿಸಿಕೊಂಡು ಸೈಕಲ್ ಅಲ್ಲೇ ಬಿಟ್ಟು, ಮನೆಗೆ ಓಡಿ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಘಟನೆಯ ಬಳಿಕ

ಅತ್ಯಾಚಾರಕ್ಕೆ ಯತ್ನಿಸಿದಾತನ ಬಂಧನ Read More »

ಪೆರಾಜೆ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ

ಪೆರಾಜೆ ಶ್ರೀ ಶಾಸ್ತಾವು ದೇವರ ಕಾಲಾವಧಿ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆಯನ್ನು ಪುದುವಟ್ಟು ಕಾಪುಸ್ಥಾನ ಮೂಲೆಮಜಲು ನಿಂದ ಕಡಿಯುವುದರ ಮಖಾಂತರ ಶ್ರೀ ದೇವರ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿಯವರು ಊರವರು ಉಪಸ್ಥಿತರಿದ್ದರು.

ಪೆರಾಜೆ : ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆಮೂಹೂರ್ತ Read More »

error: Content is protected !!
Scroll to Top