ಸುಳ್ಯ : ಮಳೆ ಬಂತು ಮಳೆ ಬಂತು
ಸುಳ್ಯ ನಗರ ಸೇರಿದಂತೆ ತಾಲೂಕಿನ ಕೆಲ ಭಾಗದಲ್ಲಿ ಬುಧವಾರ ಮಳೆಸುರಿದಿರುವ ಬಗ್ಗೆ ವರದಿಯಾಗಿದೆ.ಸುಳ್ಯ ನಗರ,ಆಲೆಟ್ಟಿ,ಅರಂತೋಡು,ತೊಡಿಕಾನ ಸಂಪಾಜೆ ಇತರ ಭಾಗದಲ್ಲಿ ಸಾಧಾರಣವಾಗಿ ಮಳೆ ಸುರಿದಿವೆ.
ಸುಳ್ಯ : ಮಳೆ ಬಂತು ಮಳೆ ಬಂತು Read More »
ಸುಳ್ಯ ನಗರ ಸೇರಿದಂತೆ ತಾಲೂಕಿನ ಕೆಲ ಭಾಗದಲ್ಲಿ ಬುಧವಾರ ಮಳೆಸುರಿದಿರುವ ಬಗ್ಗೆ ವರದಿಯಾಗಿದೆ.ಸುಳ್ಯ ನಗರ,ಆಲೆಟ್ಟಿ,ಅರಂತೋಡು,ತೊಡಿಕಾನ ಸಂಪಾಜೆ ಇತರ ಭಾಗದಲ್ಲಿ ಸಾಧಾರಣವಾಗಿ ಮಳೆ ಸುರಿದಿವೆ.
ಸುಳ್ಯ : ಮಳೆ ಬಂತು ಮಳೆ ಬಂತು Read More »
ಕೊಡಗು ಜಿಲ್ಲೆಯಲ್ಲಿ ಇಂದು ಭೂಮಿ ಕಂಪಿಸಿದ ಅನುಭವ ಆಗಿರುವ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯ ಮದೆನಾಡು ಜೋಡುಪಾಲ ಮತ್ತು ಮೊಣ್ಣಂಗೇರಿ ಭಾಗದಲ್ಲಿ ಬುಧವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಭೂಮಿ ದೊಡ್ಡದಾಗಿ ಗುಡುಗಿ ನಡುಗಿದ ಅನುಭವ ಉಂಟಾಗಿದ್ದು ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಜನರು ಹೊರಗೆ ಓಡಿ ಬಂದಿದ್ದಾರೆ.ಆದರೆ ರಿಕ್ಟರ್ ಮಾಪಕದಲ್ಲಿ ಭೂಕಂಪನದ ಬಗ್ಗೆ ದಾಖಲು ಆಗಿಲ್ಲ ಎಂದು ಹೇಳಲಾಗಿದೆ.
ಮದೆನಾಡು,ಜೋಡುಪಾಲದಲ್ಲಿ ಭೂಕಂಪ? Read More »
ತುಮಕೂರು: ಮನುಷ್ಯರಿಗೆ ವಾಮಚಾರ ಮಾಡುವ ಸುದ್ದಿಗಳು ಆಗಾಗ ವರದಿಯಾಗುತ್ತಿರುತ್ತವೆ.ಆದರೆ ದೇವರಿಗೆ ವಾಮಾಚಾರ ಮಾಡಿದಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಟ್ನಾ ಗ್ರಾಮದಲ್ಲಿ ಮಾ. 11ರ ಮಂಗಳವಾರ ಮಧ್ಯರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.ಹಟ್ನಾ ಗ್ರಾಮ ಸೇರಿದಂತೆ 32 ಗ್ರಾಮಗಳ ಗ್ರಾಮ ದೇವತೆ ಕೆಂಪಮ್ಮ ದೇವಿಗೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಂದು (ಮಾ. 12ರ ಬುಧವಾರ) ಮುಂಜಾನೆ ಪೂಜೆ ಸಲ್ಲಿಸಲು ದೇವಸ್ಥಾನದಕ್ಕೆ ಅರ್ಚಕರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.ವಾಮಾಚಾರಕ್ಕೆ
ದೇವರಿಗೆ ವಾಮಚಾರ ಮಾಡಿದ ಕಿಡಿಗೇಡಿಗಳು Read More »
ಸುಳ್ಯ ತಾಲೂಕಿನ ಐನೆಕಿದು ಗ್ರಾಮದ ಬಾಣೂರು ಕಟ್ಟೆಮನೆ ಜಯಂತ ಗೌಡರ ತೋಟಕ್ಕೆ ಕಳೆದ ತಡ ರಾತ್ರಿ ಆನೆ ದಾಳಿ ಮಾಡಿ ಅಪಾರ ಪ್ರಮಾಣದ ಕ್ರಷಿಗೆ ಹಾನಿ ಮಾಡಿವೆ.ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಈ ಪ್ರದೇಶದಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ.ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ತೋಟಕ್ಕೆ ಕಾಡಾನೆ ದಾಳಿಯಿಂದ ಅಪಾರ ನಷ್ಟ Read More »
ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಲಾಗಿದೆ.ಜಿಲ್ಲೆಯಲ್ಲಿ ಪ್ರಸ್ತುತ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಮುಂದಿನ ಎರಡು ದಿನ ಮುಂದುವರಿ ಯುವ ಮುನ್ಸೂಚನೆ ಇದೆ. ಇದರಿಂದ ಹೀಟ್ ವೇವ್ ಸ್ಟೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್
ದ.ಕ ದಲ್ಲಿ ಹೆಚ್ಚಿದ ಉರಿ ಬಿಸಿಲು,ಸುಳ್ಯದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಉಷ್ಣಾಂಶ ದಾಖಲು! Read More »
ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾ.11 ರಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಎರಡು ದಿನಗಳ ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಗೊಳ್ಳುವರು.ದಕ್ಷಿಣ ಭಾರತದ ಸುಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅನೇಕ ಬಾಲಿವುಡ್, ಹಾಲಿವುಡ್ ನಟ ನಟಿಯರು ಆಗಮಿಸುತ್ತಿದ್ದು, ಸಂತಾನ ಭಾಗ್ಯವಿಲ್ಲದವರು, ಚರ್ಮರೋಗ ವ್ಯಾಧಿ, ಆರೋಗ್ಯ ವೃದ್ಧಿಗಾಗಿ ಸೇವೆಯನ್ನು ಸಲ್ಲಿಸುವಂಥದ್ದು ಸರ್ವೇಸಾಮಾನ್ಯವಾಗಿದೆ.ಅದೇ ರೀತಿ ಕತ್ರಿನಾ ಕೈಫ್ ಅವರು ಕೂಡ ಕುಕ್ಕೆ ಸುಬ್ರಹ್ಮಣ್ಯನ ಸೇವೆಯನ್ನು ಸಲ್ಲಿಸುವುದಕ್ಕೋಸ್ಕರ ಎರಡು ದಿನಗಳ ಸರ್ಪ ಸಂಸ್ಕಾರ ಸೇವೆಯಲ್ಲಿ ಪಾಲ್ಗೊಳ್ಳಲಿರುವರು ಎಂದು ಹೇಳಲಾಗಿದೆ.ಮಾ.11 ರಂದು ಆರಂಭವಾದ ಸರ್ಪ
ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ Read More »
ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ಹಿಡಿದು ಪೋಲೀಸರಿಗೊಪ್ಪಿಸಿರುವ ಘಟನೆ ಬುಧವಾರ ವರದಿಯಾಗಿದೆ.ಕನಕಮಜಲು ಗ್ರಾಮದ ಧನಂಜಯ ಎಂಬವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಸುಮಾರು 3.30 ಕ್ಕೆ ಜೋರು ಶಬ್ದ ಕೇಳುತ್ತಿತ್ತೆಂದೂ, ಇದು ಸೀತಾರಾಮ ಗೌಡರ ಮಗನಿಗೆ ಕೇಳಿ ಅವರು ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿದರುಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರುನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದುಕೊಂಡರು.ವಿಚಾರಿಸಿದಾಗಬಂಟ್ವಾಳದ
ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಊರವರು Read More »
ಗ್ರಾಮ ಪಂಚಾಯತು ಬೆಳ್ಳಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಧನಲಕ್ಷ್ಮೀ ಸ್ತ್ರೀಶಕ್ತಿ ಗೊಂಚಲು ಸಮಿತಿ ಬೆಳ್ಳಾರೆ, ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಬೆಳ್ಳಾರೆ, ಸೆಲ್ಕೋ ಸೋಲಾರ್ ಲೈಟ್ಸ್ ಪ್ರೈ.ಲಿ. ಬೆಂಗಳೂರು ಮತ್ತು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿಮಹಿಳಾ ಸಬಲೀಕರಣದತ್ತ ನಮ್ಮ ಚಿತ್ತ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮವು ಮಾ.11 ರಂದು ಬೆಳ್ಳಾರೆ ರಾಜೀವ್ ಗಾಂಧಿ
ಬೆಳ್ಳಾರೆ : ಮಹಿಳಾ ಸಬಲೀಕರಣದತ್ತ ನಮ್ಮ ಚಿತ್ತ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ Read More »
ಕರ್ತವ್ಯ ನಿರತರಾಗಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಅರಣ್ಯ ವೀಕ್ಷಕ ಸಾವನ್ನಪ್ಪಿರುವ ಘಟನೆ ಮಾರ್ಚ್ 11 ರಂದು ಗುರುವಾಯನಕೆರೆಯಲ್ಲಿ ನಡೆದಿದೆ. ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಗಫೂರ್ (59) ಮೃತ ವ್ಯಕ್ತಿ.ಮೃತ ಗಫೂರ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
ಕುಸಿದು ಬಿದ್ದು ಅರಣ್ಯ ವೀಕ್ಷಕ ಸಾವು Read More »
ಉಪ್ಪಿನಂಗಡಿ ಕುಮಾರಧಾರ ನದಿಯಲ್ಲಿ ಯುವಕನೋರ್ವನ ಶವ ಪತ್ತೆಯಾದ ಘಟನೆ ಮಾ.11 ರಂದು ನಡೆದಿದೆ.ಕಡಬ ತಾಲೂಕಿನ ಗೋಳಿತೊಟ್ಟು ನಿವಾಸಿ ರವಿಚಂದ್ರ ಅವರ ಪುತ್ರ ಗಗನ್ ಮೃತ ಯುವಕ ಎಂದು ಗುರುತಿಸಲಾಗಿದೆ.ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ನಿನ್ನೆ ಬಾಡಿಗೆ ಎಂದು ಮನೆಯಿಂದ ಹೋಗಿದ್ದು, ಇಂದು ಮೃತದೇಹ ಉಪ್ಪಿನಂಗಡಿ ನದಿಯಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಮಾರಧಾರ ನದಿಯಲ್ಲಿ ರಿಕ್ಷಾ ಚಾಲಕನ ಶವ ಪತ್ತೆ Read More »