April 2025

ಮಂಗಳೂರು : ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಾಧಿಕಾರದ ಆಯುಕ್ತರಿಗೆ ಬ್ರೋಕರ್ ಗಳಿಂದ ವಾಮಾಚಾರದ ಬೆದರಿಕೆ!

ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಾಧಿಕಾರದ ಆಯುಕ್ತರು ಬ್ರೋಕರ್‌ ವಿರುದ್ದ ಕಠಿಣ ಕ್ರಮ ಕೈಗೊಂಡಿದ್ದು ಬ್ರೋಕರ್ ಗಳು ಸೇರಿ ಆಯುಕ್ತರ ವಿರುದ್ದವೇ ವಾಮಾಚಾರದ ಬೆದರಿಕೆಯೊಡ್ಡಿದ ಘಟನೆ ವರದಿಯಾಗಿದೆ.ಬ್ರೋಕರ್‌ಗಳ ಅಟ್ಟಹಾಸದಿಂದ ಕಂಗಾಲಾದ ಮುಡಾ ಆಯುಕ್ತ ನೂರ್ ಝಹರಾ ಖಾನ್ ಪೊಲೀಸರಿಗೆ ದೂರು ನೀಡಿದ್ದಾರೆ.ಮುಡಾ ಕಚೇರಿಗೆ ದಲ್ಲಾಳಿಗಳನ್ನು ನಿರ್ಬಂಧಿಸಿದ್ದಕ್ಕೆ ಕಮಿಷನ‌ರ್ ಮೇಲೆ ವಾಮಾಚಾರ ಪ್ರಯೋಗದ ಬೆದರಿಕೆಯೊಡ್ಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆಯೆಂದು ದೂರಲಾಗಿದೆ. ಈ ಬಗ್ಗೆ ಅವರು ಮಂಗಳೂರಿನ ಉರ್ವಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದುದೂರಿನ ಆಧಾರದಲ್ಲಿ ಇಬ್ಬರು ದಲ್ಲಾಳಿಗಳಾದ […]

ಮಂಗಳೂರು : ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪ್ರಾಧಿಕಾರದ ಆಯುಕ್ತರಿಗೆ ಬ್ರೋಕರ್ ಗಳಿಂದ ವಾಮಾಚಾರದ ಬೆದರಿಕೆ! Read More »

ಪ್ರತಿಪಕ್ಷಗಳ ಭಾರೀ ಆಕ್ಷೇಪ,ಗದ್ದಲದ ನಡುವೆಯೂ, ವಕ್ಸ್ ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ : ಪ್ರತಿಪಕ್ಷಗಳ ಆಕ್ಷೇಪದನಡುವೆಯೂ ಏ.02ರಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಸ್ ತಿದ್ದುಪಡಿ ಮಸೂದೆ(2024)ಯನ್ನು ಮಂಡಿಸಿದ್ದಾರೆ.ಲೋಕಸಭೆ ಕಲಾಪದ ಪ್ರಶೋತ್ತರ ವೇಳೆಯಲ್ಲಿ ಸಚಿವ ರಿಜಿಜು ಅವರು ವಕ್ಸ್ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಮಾತನಾಡಿ ಜಗತ್ತಿನ ಅತೀ ಹೆಚ್ಚು ವಕ್ಸ್ ಆಸ್ತಿ ಭಾರತದಲ್ಲಿದೆ. ಆದರೂ ಭಾರತದ ಮುಸ್ಲಿಮರು ಬಡವರಾಗಿದ್ದಾರೆ. ಆ ನಿಟ್ಟಿನಲ್ಲಿ ಆರ್ಥಿಕವಾಗಿ ಶ್ರೀಮಂತವಾಗಿರುವ ವಕ್ಸ್ ಮಂಡಳಿಯನ್ನು ಬಡ ಮುಸ್ಲಿಮರ ಏಳಿಗೆಗಾಗಿ ಬಳಸಲಾಗುವುದು ಎಂದು ತಿಳಿಸಿದ್ದಾರೆ.ವಕ್ಸ್ ಕಾಯ್ದೆ ಸ್ವಾತಂತ್ರ್ಯಕ್ಕಿಂತಲೂ ಪೂರ್ವದಲ್ಲೇ ಚಾಲ್ತಿಯಲ್ಲಿತ್ತು. ವಕ್ಸ್ ಮಸೂದೆ

ಪ್ರತಿಪಕ್ಷಗಳ ಭಾರೀ ಆಕ್ಷೇಪ,ಗದ್ದಲದ ನಡುವೆಯೂ, ವಕ್ಸ್ ತಿದ್ದುಪಡಿ ಮಸೂದೆ ಮಂಡನೆ Read More »

ಡಾ. ಲೀಲಾಧರ್ ಡಿ. ವಿ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಯ ನೂತನ ಚೇರ್ ಮೆನ್ ಆಗಿ ನೇಮಕ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ ಚೆರ್ ಮೆನ್ ಆಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಭಗವಾನ್ ಬಿ ಸಿ ಅವರ ಅನುಮೋದನೆಯ ಮೇರೆಗೆ ವಿಶ್ವವಿದ್ಯಾಲಯದ ಕುಲ ಸಚಿವರಾದ ಶ್ರೀ. ಶಿವಪ್ರಸಾದ್ ಪಿ. ಆರ್. ರವರು ದಿನಾಂಕ 27.03.2025 ರಂದು ಬೆಂಗಳೂರಿನ

ಡಾ. ಲೀಲಾಧರ್ ಡಿ. ವಿ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಯ ನೂತನ ಚೇರ್ ಮೆನ್ ಆಗಿ ನೇಮಕ Read More »

ಸುಳ್ಯದ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ನಿಧನ

ಸುಳ್ಯ: ಆಯುರ್ವೇದ ಔಷದಿ ವೃತ್ತಿಯಲ್ಲಿ ಭಾರೀ ಪರಿಣತಿ ಹೊಂದಿದ ಸುಳ್ಯಕ್ಕೆ 60 ವರ್ಷಗಳಿಂದ ಕೋಟೆಕಲ್ಲು ಔಷದಿಗಳ ಹಂಚಿಕೆ ದಾರರಾಗಿದ್ದು. ಸುಳ್ಯ ದಲ್ಲಿ ಆಯುರ್ವೇದ ಪಂಡಿತರಾಗಿ ಪ್ರಸಿದ್ಧ ರಾಗಿದ್ದ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ಏ.1ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಇವರ ವೈದ್ಯ ವೃತ್ತಿ ಜೀವನದಲ್ಲಿ ಸಾವಿರಾರು ವಿವಿಧ ತರದ ರೋಗಿಗಳನ್ನು ತನ್ನ ಆಯುರ್ವೇದ ಔಷದಿಗಳಿಂದ ಗುಣಪಡಿಸಿ ನಿಷ್ಠಾವಂತ ವೈದ್ಯರು ಎಂದು ಹೆಸರುವಾಸಿಯಾಗಿದ್ದರು.ತನ್ನ ವೈದ್ಯ ವೃತ್ತಿ ಯೊಂದಿಗೆ ವಾಲಿಬಾಲ್ ಕ್ರೀಡೆಯನ್ನು

ಸುಳ್ಯದ ಹಿರಿಯ ಆಯುರ್ವೇದ ಪಂಡಿತ ಕುಂಞಿರಾಮನ್ ವೈದ್ಯರ್ ನಿಧನ Read More »

ಪತ್ನಿ ಮೇಲಿನ ಸಿಟ್ಟಿನಿಂದ ಮಗಳು,ನಾದಿನಿ,ಅತ್ತೆಯನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪಾಪಿ ಪತಿ!

ಚಿಕ್ಕಮಗಳೂರು; ತನ್ನ ಹೆಂಡತಿ ಮೇಲಿನ ಕೋಪಕ್ಕೆ ಮಗಳು, ಅತ್ತೆ, ನಾದಿನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಿಂದ ವರದಿಯಾಗಿದೆ.ಮಗಳು ಮೌಲ್ಯ. (7) ಅತ್ತೆ ಜ್ಯೋತಿ(55), ನಾದಿನಿ ಸಿಂಧು(24) ಕೊಲೆಯಾದವರು. ರತ್ನಕಾರ್ ಮೂವರನ್ನು ಗುಂಡಿ ಹಾರಿಸಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ನಾದಿನಿಯ ಗಂಡನ ಕಾಲಿಗೂ ಗುಂಡು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ.ರತ್ನಾಕರ್ ಸ್ವಾತಿ ಎಂಬುವರನ್ನ 8 ವರ್ಷದ ಹಿಂದೆ ಮದುವೆಯಾಗಿದ್ದ. ಎರಡು ವರ್ಷದಿಂದ ಅವರು ರತ್ನಾಕರ್ ನಿಂದ ದೂರವಾಗಿದ್ದರು.

ಪತ್ನಿ ಮೇಲಿನ ಸಿಟ್ಟಿನಿಂದ ಮಗಳು,ನಾದಿನಿ,ಅತ್ತೆಯನ್ನು ಗುಂಡಿಕ್ಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಪಾಪಿ ಪತಿ! Read More »

ರಾಜ್ಯದ ಜನತೆಗೆ ಮತ್ತೆ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರಕಾರ, ಡಿಸೇಲ್ ಬೆಲೆ ಮತ್ತೆ ಏರಿಕೆ

ಬೆಂಗಳೂರು: ವಿದ್ಯುತ್ ಹಾಗೂ ಹಾಲಿನ ದರ ಏರಿಕೆ ಮತ್ತು ಮುದ್ರಾಂಕ ಶುಲ್ಕಗಳ ಹೆಚ್ಚಳದ ಬೆನ್ನಲ್ಲೇ ಡೀಸೆಲ್ ಬೆಲೆಯೂ ಹೆಚ್ಚಾಗಿದ್ದು ಏಪ್ರಿಲ್ 1ರ ಮಂಗಳವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.ಏರುಗತಿಯಲ್ಲಿ ಸಾಗಿರುವ ತೆರಿಗೆ ಹೇರಿಕೆಯ ಭಾರ ಇದೀಗ ಡೀಸೆಲ್ ಮಾರಾಟದ ಮೇಲೂ ಬಿದ್ದಿದ್ದು ಶೇ.18.44ರಷ್ಟಿದ್ದ ಮಾರಾಟ ತೆರಿಗೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಶೇ.21.17ಕ್ಕೆ ಏರಿಸಿದೆ. ತತ್ಪರಿಣಾಮ ಡೀಸೆಲ್ ದರ ಸರಾಸರಿ 2 ರೂ. ಹೆಚ್ಚಳವಾಗಿದೆ. ಪ್ರಸ್ತುತ 88.99 ರೂ. ಇರುವ ಪ್ರತಿ ಲೀಟ‌ರ್

ರಾಜ್ಯದ ಜನತೆಗೆ ಮತ್ತೆ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರಕಾರ, ಡಿಸೇಲ್ ಬೆಲೆ ಮತ್ತೆ ಏರಿಕೆ Read More »

ರಸ್ತೆಯಲ್ಲಿ ಮತ್ತೊಂದು ಹೆಣ್ಣು ಮಗು ಪತ್ತೆ!

ದ.ಕ ಜಿಲ್ಲೆಯಲ್ಲಿ ಕಾಡಿನಲ್ಲಿ ನಾಲ್ಕು ತಿಂಗಳ ಮಗುವೊಂದು ಪತ್ತೆಯಾದ ಕೆಲವೇ ದಿನಗಳಲ್ಲಿ ಕೂಡೋಳುಕೆರೆ -ಮುಂಡೋಟ್ಟು ರಸ್ತೆಯಲ್ಲಿ ಅಂದಾಜು 3 ತಿಂಗಳ ಹೆಣ್ಣು ಮಗು ಪತ್ತೆಯಾಗಿದ್ದು ಪುತ್ತೂರಿನ ನೆಲ್ಲಿಕಟ್ಟೆ, ಕೇರ್ ಆಫ್ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ಮಕ್ಕಳ ದತ್ತು ಕೇಂದ್ರದಲ್ಲಿ ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, 0824-2440004 ಸಂಪರ್ಕಿಸುವುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಇಂದು

ರಸ್ತೆಯಲ್ಲಿ ಮತ್ತೊಂದು ಹೆಣ್ಣು ಮಗು ಪತ್ತೆ! Read More »

ಪೆರಾಜೆ : ಶ್ರದ್ಧಾ ಭಕ್ತಿಯಿಂದ ನಡೆದ ಭಗವತಿ ದೊಡ್ಡ ಮುಡಿ ಉತ್ಸವ

ಪೆರಾಜೆ ಶ್ರೀ ಶಾಸ್ತಾವು ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಶ್ರೀ ಭಗವತಿ ದೊಡ್ಡಮುಡಿ ಏ.1ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಸಹಸ್ರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದ ಆಡಳಿತ ಮಂಡಳಿಯವರು,ಸಮಿತಿ ಸದಸ್ಯರು, ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು.

ಪೆರಾಜೆ : ಶ್ರದ್ಧಾ ಭಕ್ತಿಯಿಂದ ನಡೆದ ಭಗವತಿ ದೊಡ್ಡ ಮುಡಿ ಉತ್ಸವ Read More »

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವದಿ ಜಾತ್ರೋತ್ಸವ ಏ.13ರಿಂದ ಆರಂಭಗೊಳ್ಳಲಿದ್ದುಏಪ್ರಿಲ್ 1ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಈ ಸಂದರ್ಭಗಳಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ ವ್ಯವಸ್ಥಾಪನಾ ಸಮಿತಿಸದಸ್ಯರಾದ ತೀರ್ಥರಾಮ ಪರ್ನೋಜಿ,ಬಾಲಕೃಷ್ಣ ಕುಂಟುಕಾಡು, ತಿಮ್ಮಯ್ಯ ಮೆತ್ತಡ್ಕ,ವಸಂತ ಪೆಲ್ತಡ್ಕ,ಮಾಲತಿ ಬೋಜಪ್ಪ,ಚಂಚಲಾಕ್ಷ್ಮಿನಾಗೇಂದ್ರ,ಮಾಜಿ ಸದಸ್ಯರಾದ

ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಕಾಲಾವಧಿ ಜಾತ್ರೋತ್ಸವಕ್ಕೆ ಗೊನೆ ಮೂಹೂರ್ತ Read More »

ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್: ಪರಮಾಣು ಒಪ್ಪಂದಕ್ಕೆ  ಸಹಿ ಹಾಕದಿದ್ದರೆ ಮತ್ತು ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ಮಾತುಕತೆಗೆ ಒಪ್ಪದಿದ್ದರೆ ಇರಾನ್‌ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಇಂದು ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಯುಎಸ್ ಮತ್ತು ಇರಾನಿನ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದರು.ಈ ಬಗ್ಗೆ ಅಂತಿಮ ಎಚ್ಚರಿಕೆಯ ಸಂದೇಶ ರವಾನಿಸಿದ ಟ್ರಂಪ್, “ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದೆಂದೂ

ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ Read More »

error: Content is protected !!
Scroll to Top