ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 2ನೇ ವಾರ್ಷಿಕ ಮಹಾಸಭೆ ರೂ. 19.22 ಕೋಟಿ ವ್ಯವಹಾರ, 1.28 ಲಕ್ಷ ನಿವ್ವಳ ಲಾಭ
ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ 2ನೇ ವರ್ಷದ ವಾರ್ಷಿಕ ಸಭೆಯು ಜೂ. 08ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಜನಾರ್ದನ ದೋಳ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2024-25ನೇ ಸಾಲು ಸಹಕಾರಿಗೆ ಆರ್ಥಿಕವಾಗಿ ವ್ಯವಹಾರ ಮಾಡಲು ಪೂರ್ಣವಾಗಿ ದೊರಕಿದ ಪ್ರಥಮ ವರ್ಷವಾಗಿದ್ದು ಈ ಅವಧಿಯಲ್ಲಿ ಸಂಘವು ಸದಸ್ಯರ ಸಹಕಾರದೊಂದಿಗೆ ಒಟ್ಟು ರೂ. 19,22,00,192.00 ಕೋಟಿ ವ್ಯವಹಾರ […]









