June 2025

ಜೂ.26ರ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ

ಜೂನ್ 26ರ ನಂತರ ಮಳೆ ಹೆಚ್ಚಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಂದಿನ ದಿನಗಳಲ್ಲಿಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಗದಗ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲೂ ಮಳೆಯಾಗಲಿದೆ.ಭಾನುವಾರ ಶೃಂಗೇರಿ, ಕಳಸ, ಭಾಗಮಂಡಲ, ಗುಬ್ಬಿ, ಕಮ್ಮರಡಿ, ಮಾಣಿ, ಉಪ್ಪಿನಂಗಡಿ, […]

ಜೂ.26ರ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ Read More »

ಕಾಡು ಕೋಣಗಳ ಹಿಂಡು ನೋಡಿ ಆತಂಕಗೊಂಡ ಜನರು!

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಬಳಿ ರಾತ್ರಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ವೇಳೆ ದೇವಚಳ್ಳ ಗ್ರಾಮ ಪಂಚಾಯತ್ ಬಳಿಯ ಮುಖ್ಯ ರಸ್ತೆಯಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿತ್ತು. ಅದೇ ದಾರಿಯಲ್ಲಿ ಉಜ್ವಲ್ ಮತ್ತಿತರರು ಹಾದುಹೋಗುತ್ತಿದ್ದ ವೇಳೆ ಕಾಡುಕೋಣಗಳ ಹಿಂಡು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ವಸತಿ ಪ್ರದೇಶಗಳ ಬಳಿ ಇಂತಹ ಕಾಡು ಪ್ರಾಣಿಗಳ ಸಂಚಾರವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕಾಡು ಕೋಣಗಳ ಹಿಂಡು ನೋಡಿ ಆತಂಕಗೊಂಡ ಜನರು! Read More »

ಅರಂತೋಡು : ರಾಜ್ಯ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅರೋಪಿಸಿ ಜೂ. 23ರಂದು ಅರಂತೋಡು ಗ್ರಾ.ಪಂ. ಮುಂಭಾಗ ಬಿಜೆಪಿಯವರು ಪ್ರತಿಭಟನೆ ಸಭೆ ನಡೆಸಿದರು. ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ. ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳ, ಸತೀಶ್ ನಾಯ್ಕ, ರೋಹಿತ್ ಕಲ್ಲುಗದ್ದೆ ಭಾರತೀ ಪುರುಷೋತಮ, ಪುಷ್ಪಾ ಮೇದಪ್ಪ, ಚಂದ್ರಶೇಖರ ಆಚಾರ್ಯ, ಕಿಶೋ‌ರ್ ಉಳುವಾರ್, ಸೋಮಶೇಖರ ಪೈಕ, ದಯಾನಂದ ಕುರುಂಜಿ, ಪಂಚಾಯತ್

ಅರಂತೋಡು : ರಾಜ್ಯ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ Read More »

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮುರುಳ್ಯ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಜೂ.23ರಂದು ಬಿಜೆಪಿ ವತಿಯಿಂದ ಎಲ್ಲಾ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಯುತ್ತಿದ್ದು ಮುರುಳ್ಯ ಗ್ರಾಮ ಪಂಚಾಯತಿ ಎದುರು ನಡೆದ ಪ್ರತಿಭಟನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ರಾಜ್ಯ ಸರಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಲಾಯಿತು.ಆ ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಲಾಯಿತು.ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಲಾಯಿತು.ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮುರುಳ್ಯ ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ Read More »

ವಿಷ ಸೇವಿಸಿದ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಿದ ಜನರು

ಯುವಕ ಮತ್ತು ಯುವತಿ ವಿಷ ಸೇವಿಸಿ ಒದ್ದಾಡುತ್ತಿದ್ದ ವೇಳೆ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.ಯುವಕ ಮತ್ತು ಯುವತಿ ಮೂಲತಃ ಯಲಹಂಕದವರಾಗಿದ್ದು ಶ್ರೀಶಾ ಮತ್ತು ಪ್ರಜ್ವಲ ಎಂದು ಗುರುತಿಸಲಾಗಿದೆ.ನೆಲ್ಯಾಡಿ ಬಳಿ ವಿಷ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ಗಮನಿಸಿದ ಸ್ಥಳೀಯರು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆತಂದಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಷ ಸೇವಿಸಿದ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಿದ ಜನರು Read More »

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ

ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡದಲ್ಲಿ ಸೋಮವಾರದಿಂದ ಜೂನ್ 29ರ ವರಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಉಳಿದಂತೆ ಇತರ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.ಸೋಮವಾರ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಪ್ರತಿ ಗಂಟೆಗೆ 50 ಕಿ.ಮೀ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಬಾಗಲಕೋಟೆ, ಕೊಪ್ಪಳ, ಬೀದರ್, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಒಂದು ಅಥವಾ 2 ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ.ಬೆಂಗಳೂರಿನಲ್ಲಿ ಮೋಡ ಕವಿದ

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ Read More »

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಣೆ

ಯೋಗ ಸಾಧಕರು ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಗ್ರಂಥಾಲಯ* *ಮೇಲ್ವಿಚಾರಕರು ಸಂತೋಷ್ ಮುಂಡಕಜೆ, ಯೋಗ ಸಾಧಕಿ ಪ್ರಶ್ವೀಜಾ ಸಂತೋಷ್* *ಮುಂಡಕಜೆಯವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಮಾಡಿದರು ಇವರ  ಸಾಧನೆಯ ಖುಷಿಗಾಗಿ ನಮ್ಮ  ಗ್ರಂಥಾಲಯದ ಎಲ್ಲಾ ಮಕ್ಕಳಿಂದ ಅವರನ್ನು ಗೌರವಿಸಲಾಯಿತು**ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿಕಣೆಮರಡ್ಕರವರು ಸ್ವಾಗತಿಸಿ, ಕೃತಜ್ಞತೆಸಲ್ಲಿಸಿದರು

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಣೆ Read More »

ಸಮಾಜ‌ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಯುವಕ ಸಾವು

ಪುತ್ತೂರು ಬನ್ನೂರು ಮೇಲ್ಮಜಲು ಚರ್ಚ್ ಬಳಿ ನಿವಾಸಿ ಅಣ್ಣಪ್ಪ (26 ವ.) ಜೂ.21 ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ವಿಶೇಷ ವೇಷ ಧರಿಸಿ ಪುತ್ತೂರಿನ ಸೇವಾ ಸಂಸ್ಥೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮೂಲಕ ಹಲವಾರು ಬಡ ಕುಟುಂಬದ ಮಕ್ಕಳಿಗೆ ಮತ್ತು ಆರೋಗ್ಯದ ಸಮಸ್ಯೆ ಇರುವಂತಹ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದ್ದರು. ಕಲಾಸಿರಿ ಗೊಂಬೆ ಬಳಗ (ರಿ) ಪುತ್ತೂರು ಸಂಸ್ಥೆಯನ್ನು ಪ್ರಾರಂಭಿಸಿ, ಜಾತ್ರೆ ಮತ್ತೀತರ ಕಾರ್ಯಕ್ರಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅದರಲ್ಲಿ ಬಂದಂತಹ ಹಣವನ್ನು ಒಟ್ಟು ಮಾಡಿ ಸಹಾಯ ಮಾಡುತ್ತಿದ್ದರು.

ಸಮಾಜ‌ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಯುವಕ ಸಾವು Read More »

ಅಜ್ಜಾವರ : ವಿಶ್ವ ಯೋಗ ದಿನಾಚರಣೆ

ಸರಕಾರಿ ಪ್ರೌಢಶಾಲೆ ಅಜ್ಜಾವರ ದಲ್ಲಿ ವಿಶ್ವ ಯೋಗ ದಿನಾಚರಣೆ, ವನಮಹೋತ್ಸವ ಹಾಗೂ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹೊಸದಾಗಿ ಶಾಲೆಗೆ ದಾಖಲಾತಿಯಾದ ವಿದ್ಯಾರ್ಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಇಕೋ ಕ್ಲಬ್ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಉಪ ವಲಯ ಅರಣ್ಯಾಧಿಕಾರಿ ಶ್ರೀ ಸಂದೀಪ್ ಅವರು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಸುಂದರ ಭಾರತ್ ಟ್ರಸ್ಟ್ ವತಿಯಿಂದ ನೀಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಶಾಲಾ ಮುಖ್ಯ್ಯೋಪಾಧ್ಯಯರಾದ ಗೋಪಿನಾಥ್ ಮೆತ್ತಡ್ಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ

ಅಜ್ಜಾವರ : ವಿಶ್ವ ಯೋಗ ದಿನಾಚರಣೆ Read More »

ನಗರ ಪಂಚಾಯತ್ ಸದಸ್ಯ ದಿಡೀರ್ ಸಾವು

ಪುತ್ತೂರು ಬಿಜೆಪಿ ಹಾಗೂ ಪುತ್ತೂರು ನಗರಸಭೆ ಮತ್ತೋರ್ವ ನಿಧನರಾಗಿದ್ದಾರೆ.ಇತ್ತೀಚೆಗಷ್ಟೇ ನಗರಸಭಾ ಸದಸ್ಯ ರಮೇಶ್ ರೈ ಮೃತಪಟ್ಟ ಬೆನ್ನಲ್ಲೇ ಇದೀಗ ನಗರಸಭೆ ಸದಸ್ಯ ಶೀನಪ್ಪ ನಾಯ್ಕ ಅವರು ನಿಧನರಾಗಿದ್ದಾರೆ.ಮುಕ್ರಂಪಾಡಿ ಸಮೂಪದ ಆನಂದಾಶ್ರಮ ಸಮೀಪದ ನಿವಾಸಿ ಶೀನಪ್ಪ ನಾಯ್ಕ ಅವರು ಅನಾರೋಗ್ಯದಿಂದ ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಕಳೆದ ಅರು ತಿಂಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಬಳಿಕ ಅವರು ನಗರಸಭೆ ಸದಸ್ಯರಾಗಿ ಕೆಲಸಕ್ಕೆ ಮರಳಿದ್ದರು. ಇದೀಗ ಅವರು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ

ನಗರ ಪಂಚಾಯತ್ ಸದಸ್ಯ ದಿಡೀರ್ ಸಾವು Read More »

error: Content is protected !!
Scroll to Top