June 2025

ಯೋಗ ಶಾರೀರಿಕ ,ಮಾನಸಿಕ ಸದೃಡತೆಯ ಕೊಂಡಿ : ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ

ಯೋಗದಿಂದ ಶಾರೀರಿಕ, ಮಾನಸಿಕತೆ ಸದೃಡತೆಗೊಳ್ಳುತ್ತದೆ. ಇದು ಮನುಷ್ಯನ ಶಾರೀರಿಕ ಮತ್ತು ಮಾನಸಿಕತೆ ಕೊಂಡಿಯಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಹಾಗೂ ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು.ಅವರು ಸುಳ್ಯ ಕೆ. ವಿ ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಇದರ ಸಹಯೋಗದಲ್ಲಿ ಪಯಸ್ವಿನಿ ಪ್ರೌಢಶಾಲೆಯಲ್ಲಿ ನಡೆದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.ಆಯುರ್ವೇದ ಕಾಲೇಜಿನ ವೈದ್ಯೆ ಡಾ. […]

ಯೋಗ ಶಾರೀರಿಕ ,ಮಾನಸಿಕ ಸದೃಡತೆಯ ಕೊಂಡಿ : ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ Read More »

ಲಾರಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಟಯರ್

ಭತ್ತ ಸಾಗಿಸುತ್ರಿದ್ದ ಲಾರಿಯೊಂದಕ್ಕೆ ಬೆಂಕಿ ಹತ್ರಿಕೊಂಡ ಘಟನೆ ಶನಿವಾರ ಸಂಪಾಜೆ ಸಮೀಪದ ದೇವರಕೊಲ್ಲಿಯಿಂದ ವರದಿಯಾಗಿದೆ.ಮಡಿಕೇರಿ‌ ಕಡೆಯಿಂದ ಕಾರ್ಕಳಕ್ಕೆ ಲಾರಿಯಲ್ಲಿ ಭತ್ತ ಸಾಗಿಸಲಾಗುತ್ತಿತ್ತು.ಲಾರಿಯ ಒಂದು ಟಯರ್ ಸಂಪೂರ್ಣ ಸುಟ್ಟು ಹೋಗಿದೆ.ಲೈನರ್ ಬಿಸಿಯಾಗಿ ಬೆಂಕಿ ಹತ್ತಿಕೊಂಡಿರಬೇಕೆಂದು ಅಂದಾಜಿಸಲಾಗಿದೆ.

ಲಾರಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಟಯರ್ Read More »

ಸುಳ್ಯ : ಕಲ್ಕುಡ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ

ಸುಳ್ಯ ನಾವೂರು ಶ್ರೀ ಕಲ್ಕುಡ ದೈವಸ್ಥಾನದದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜೂ.20ರಂದು ನಡೆಯಿತು‌.ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ,ಧರ್ಮದರ್ಶಿಗಳಾದ ಬಿ. ಭಾಸ್ಕರ ಐಡಿಯಲ್ ,ಕೆ. ಪ್ರಕಾಶ್ ಹೆಗ್ಡೆಪಿ.ಆರ್. ಚಂದ್ರಶೇಖರ ಕೆ. ಸೋಮನಾಥ ಪೂಜಾರಿ ಹರೀಶ್ ಬೂಡುಪನ್ನೆ ಕೇಶವ ನಾಯಕ್ಸತ್ಯಪ್ರಸಾದ್ ಕೆ. ದೈವಸ್ಥಾನದ ಪೂಜಾರಿಗಳಾದ,ತಿಮ್ಮಪ್ಪ ಗೌಡ ನಾವೂರು ಮೋನಪ್ಪ ಹಾಗೂ ಭಕ್ತರು ಉಪಸ್ಥಿತರಿದ್ದರು.

ಸುಳ್ಯ : ಕಲ್ಕುಡ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ Read More »

ಮೇದಿನಡ್ಕ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

ಅರಣ್ಯ ಇಲಾಖೆ ಸುಳ್ಯ ವಲಯ ಇದರ ಸಹಯೋಗದೊಂದಿಗೆ ಚೈತ್ರ ಯುವತಿ ಮಂಡಲ(ರಿ)ಅಜ್ಜಾವರ ಪ್ರತಾಪ ಯುವಕ ಮಂಡಲ (ರಿ)ಅಜ್ಜಾವರ,ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕರ್ಲಪ್ಪಾಡಿ, ಅರಿವು ಕೇಂದ್ರ ಅಜ್ಜಾವರ, ಸ. ಹಿ. ಪ್ರಾ ಶಾಲೆ ಅಡ್ಪoಗಾಯ ಇವುಗಳ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮೇದಿನಡ್ಕ ಅರಣ್ಯದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗಸ್ತು ಅರಣ್ಯ ಪಾಲಕರಾದ ಗೀತಾ ಬಿ, ದೀಪಕ್ ಕೆ.ಎಸ್, ಭಾಗ್ಯ ಪಿ.ಸಿ, ಅರಣ್ಯ ವೀಕ್ಷಕರಾದ ಶ್ರೀಧರ್, ಭವಿತ್, ಮಾಯಿಲಪ್ಪ ಹಾಗೂ

ಮೇದಿನಡ್ಕ : ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ Read More »

ಸಂಪಾಜೆ : ಚರಂಡಿಗೆ ಬಿದ್ದ ಪಿಕಪ್

ಸಂಪಾಜೆ ಗೇಟ್ ಸಮೀಪದ ಪೆಟ್ರೋಲ್ ಪಂಪ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದ ಘಟನೆ ವರದಿಯಾಗಿದೆ.ಸಂಪಾಜೆಯಿಂದ ಅರಮನೆ ಎಂಬಲ್ಲಿಯ ತೋಟಕ್ಕೆ ಪಿಕಪ್ ನಲ್ಲಿ ಕೆಲಸದವನ್ನು ಮತ್ತು ಸಿಮೆಂಟ್ ಲೋಡ್ ಕೊಂಡೊಯ್ಯುವ ವೇಳೆ ಪೆಟ್ರೋಲ್ ಪಂಪ್ ತಿರುವಿನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ಪಿಕಪ್ ವಾಹನದಲ್ಲಿರುವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದುದೇವರಗುಂಡ ಪ್ರಸಾದ್ ಅವರ ಪಿಕಪ್ ಎಂದು ತಿಳಿದುಬಂದಿದೆ.

ಸಂಪಾಜೆ : ಚರಂಡಿಗೆ ಬಿದ್ದ ಪಿಕಪ್ Read More »

ಸುಳ್ಯದಲ್ಲಿ‌ ಸರಣಿ‌ ಅಪಘಾತ

ಸುಳ್ಯದ ಶ್ರೀ ರಾಂಪೇಟೆಯ ಬಾಳೆಮಕ್ಕಿಯಲ್ಲಿ ರಸ್ತೆ ಮಧ್ಯೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ ಕಾರಿಗೆ ಹಿಂದುಗಡೆಯಿಂದ ಬರುತ್ತಿದ್ದ ಸ್ಕೂಟಿ ಡಿಕ್ಕಿ ಹೊಡೆಯಿತು. ಇದರ ಹಿಂದುಗಡೆಯಿಂದ ಬಂದ ಬೈಕ್ ಸ್ಕೂಟಿಗೆ ತಾಗಿ ದ್ವಿಚಕ್ರ ವಾಹನಗಳ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.ಮಹಾರಾಷ್ಟ್ರ ನೋಂದಾವಣೆಯ ಕಾರು ರಸ್ತೆ ಮಧ್ಯೆ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ಸ್ಕೂಟಿ ಸವಾರರು ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ತಾಗಿ ರಸ್ತೆ ಮೇಲೆ ಬಿದ್ದರು. ಪರಿಣಾಮವಾಗಿ ಸವಾರರಿಬ್ಬರು ಅಲ್ಪ ಸ್ವಲ್ಪ ಗಾಯಗೊಂಡಿರುವುದಾಗಿ ತಿಳಿದು

ಸುಳ್ಯದಲ್ಲಿ‌ ಸರಣಿ‌ ಅಪಘಾತ Read More »

ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರು ಸಿಂಗರ್ ಅಖಿಲ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರುವ ಅಖಿಲಾ ಪಜಿಮಣ್ಣು ಅವರ ದಾಂಪತ್ಯದಲ್ಲಿ ಇದೀಗ ಬಿರುಕು ಮೂಡಿದೆ. ವಿಚ್ಛೇದನಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ಬೆಳಗಾವಿ ಮೂಲದ ಅಮೆರಿಕ ನಿವಾಸಿ ಧನಂಜಯ್ ಶರ್ಮ ಜೊತೆ ಅಖಿಲಾ ವಿವಾಹ ನೆರವೇರಿತ್ತು. ಆದರೆ ಅವರ ಸಂಸಾರದಲ್ಲಿ ಸಾಮರಸ್ಯ ಮಾಯವಾಗಿದೆ. ಸದ್ಯ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ. ಇವರಿಬ್ಬರು ಪುತ್ತೂರಿನ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಅನೇಕ ಅಭಿಮಾನಿಗಳ ಮನಗೆದ್ದು ಜನಪ್ರಿಯರಾಗಿರು ಸಿಂಗರ್ ಅಖಿಲ ಪಜಿಮಣ್ಣು ಅವರ ದಾಂಪತ್ಯ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ Read More »

ಸುಳ್ಯದ ಎ.ಸಿ.ಎಫ್ ವರ್ಗಾವಣೆ

ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರು ವರ್ಗಾವಣೆಗೊಂಡಿದ್ದಾರೆ.ಸುಳ್ಯಕ್ಕೆ ಮಂಗಳೂರು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಎ.ಸಿ.ಎಫ್. ಆಗಿರುವ ಪ್ರಶಾಂತ್ ಪೈ ಯವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.ಪ್ರವೀಣ್ ಕುಮಾ‌ರ್ ಶೆಟ್ಟಿಯವರ ನ್ನು ಪ್ರಶಾಂತ್ ಕುಮಾರ್ ಪೈ ಯವರ ಜಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಪ್ರಶಾಂತ್ ಪೈಯವರು ಜೂ.20ರಂದು ಸುಳ್ಯಕ್ಕೆ ಬಂದು ಅಧಿಕಾರ ಸ್ವೀಕರಿಸಲಿದ್ದಾರೆಂದು ತಿಳಿದುಬಂದಿದೆ.

ಸುಳ್ಯದ ಎ.ಸಿ.ಎಫ್ ವರ್ಗಾವಣೆ Read More »

ಸೈನಿಕ ಹ್ರದಯಘಾತದಿಂದ ನಿಧನ

ವರ್ಷದ ಹಿಂದೆ ನಿವೃತ್ತಿ ಹೊಂದಿದ್ದ ಸೈನಿಕ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕಡಬ ತಾಲೂಕಿನ ಕರಾಳ ಸಮೀಪದ ಅಲಾರ್ಮೆಯಲ್ಲಿ ನಡೆದಿದೆ. ಪ್ರಭಾಕರನ್ ಮೃತರು.ಒಂದು ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಅಡ್ಡಗದ್ದೆ ಬಳಿ ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು .ರಂಗಸ್ವಾಮಿ ಮತ್ತು ಸೆಲ್ಲಾಯಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಕೊನೆಯ ಮಗನಾಗಿದ್ದರು..ಪ್ರಸ್ತುತ ಮಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ನಂತರ ಕಡಬ ಕಳಾರ ಬಳಿ ಖರೀದಿಸಿದ್ದ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಎರಡು ವಾರದ ಹಿಂದೆಯಷ್ಟೇ

ಸೈನಿಕ ಹ್ರದಯಘಾತದಿಂದ ನಿಧನ Read More »

ಗರ್ಭಿಣಿ ಪತ್ನಿಯನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ಪತಿ

ಗರ್ಭಿಣಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಜೂ.19ರಂದು ನಡೆದಿದೆ.ತಿಮ್ಮಪ್ಪ ಮೂಲ್ಯ (50) ಅವರು ತಮ್ಮ ಪತ್ನಿ ಜಯಂತಿ (40) ಅವರನ್ನು ಕೊಲೆ ಮಾಡಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದರೆ ತಿಮ್ಮಪ್ಪ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜಯಂತಿ ಅವರು ಗರ್ಭಿಣಿಯಾಗಿದ್ದು, ಜುಲೈ 2 ರಂದು ಸೀಮಂತ ದಿನ ನಿಗದಿಯಾಗಿತ್ತು. ಆದರೆ ಈ ನಡುವೆ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು

ಗರ್ಭಿಣಿ ಪತ್ನಿಯನ್ನು ಕೊಂದು ತಾನು ಆತ್ಮ ಹತ್ಯೆ ಮಾಡಿಕೊಂಡ ಪತಿ Read More »

error: Content is protected !!
Scroll to Top