June 2025

ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ತನ್ನ ಪತಿ ಡಾ.ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಅನೂಹ್ಯ ಎಂಬವರು ಮೈಸೂರಲ್ಲಿ ಪೋಲೀಸರಿಗೆ ನೀಡಿರುವ ಕೇಸಿಗೆ ರಾಜ್ಯ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿರುವುದಾಗಿ ತಿಳಿದುಬಂದಿದೆ.ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ಡಾ.ಆದರ್ಶ ನಿರಾಕರಿಸಿ ವರದಕ್ಷಿಣೆಗಾಗಿ ಶರತ್ತು ವಿಧಿಸಿರುವುದಾಗಿ ಅನೂಹ್ಯ ದೂರಿನಲ್ಲಿ ತಿಳಿಸಿದ್ದರು.ಪಂಜ ಮೂಲದ ಡಾ.ಆದರ್ಶ, ಅವರ ತಂದೆ ಪಂಜದ ಸಂಗಾತಿ ವೆಂಕಟ್ರಮಣ ಭಟ್, ತಾಯಿ ಶಶಿಕಲಾ, ಅಣ್ಣ ಆದಿತ್ಯ ಬಂಧು ರಜಿತ್ ಭಟ್ ರವರ […]

ಪಂಜ ಮೂಲದ ವೈದ್ಯ ಆದರ್ಶ ಮತ್ತು ಕುಟುಂಬದವರ ಮೇಲಿನ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ Read More »

ಗುಜರಾತ್ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರು

ಏರ್ ಇಂಡಿಯಾ ವಿಮಾನ Al171 ದರಂತದಲ್ಲಿ ಪವಾಡಸದೃಶವಾಗಿ ಪ್ರಯಾಣಿಕರೊಬ್ಬರು ಬದುಕುಳಿದಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಮೇಶ್‌ ವಿಶ್ವಾಸ್‌ಕುಮಾ‌ರ್ ಬುಚರ್ವಾಡಾ ಭೀಕರ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಿಗೆ ಸಿಲುಕಿ ಸಾವು ಗೆದ್ದಿದ್ದಾರೆ.ಸೀಟ್ 11A ನಲ್ಲಿ ಕುಳಿತಿದ್ದ 38 ವರ್ಷದ ರಮೇಶ್ ಘಟನೆಯ ಸಮಯದಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರದಿಂದ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ.ಗಾಯಗೊಂಡ ರಮೇಶ್ ಘಟನೆ ಕುರಿತು ವಿವರಿಸುತ್ತಾ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.ಅಹಮದಾಬಾದ್ ಪೊಲೀಸ್ ಕಮಿಷನ‌ರ್ ಜಿ.ಎಸ್. ಮಲಿಕ್ ಅವರು ರಮೇಶ್ ಅವರು ಬದುಕುಳಿದಿದ್ದಾರೆ ಎಂದು ಸುದ್ದಿಗಾರರಿಗೆ

ಗುಜರಾತ್ ವಿಮಾನ ದುರಂತದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶವಾಗಿ ಪಾರು Read More »

ಗುಜರಾತ್ : ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 242 ಮಂದಿ ಸಾವು

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ (68) ಅವರು ಮೃತಪಟ್ಟಿದ್ದು, ವಿಮಾನದಲ್ಲಿದ್ದ 242ಕ್ಕೂ ಮಂದಿ ಮೃತಪಟ್ಟಿದ್ದಾರೆಂದು ಅಲ್ಲಿನ ಮೂಲಗಳು ತಿಳಿವೆ.ಇಂದು ಮಧ್ಯಾಹ್ನ 1.50 ರ ಸುಮಾರಿಗೆ ವಿಮಾನ ಟೇಕ್ ಆಫ್ ಆದ ಬಳಿಕ ಇಪ್ಪತ್ತು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಈ ವೇಳೆ ವಿಮಾನದ ಎಂಜಿನ್‌ನಲ್ಲಿ ತೀವ್ರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಪೈಲಟ್ ಈ ವಿಷಯವನ್ನು ‘ಎಟಿಸಿ’ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಕೆಲವೇ ನಿಮಿಷಗಳಲ್ಲಿ

ಗುಜರಾತ್ : ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಹಿತ 242 ಮಂದಿ ಸಾವು Read More »

ಏರ್ ಇಂಡಿಯಾ ವಿಮಾನ ಪತನ

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಇಂದು) ಮಧ್ಯಾಹ್ನ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾದ ಘಟನೆ ವರದಿಯಾಗಿದೆ.230 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಾಜ್ಯ ಪೊಲೀಸ್‌ ನಿಯಂತ್ರಣ ಕೊಠಡಿ ದೃಢಪಡಿಸಿದೆ. ಬೋಯಿಂಗ್ 787-8 ಗ್ರೀಮ್‌ಲೈನ‌ರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ದಿತ್ತು.ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಮೇಘನಿನಗರ ಬಳಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾದ ಸ್ಥಳವು ವಸತಿ

ಏರ್ ಇಂಡಿಯಾ ವಿಮಾನ ಪತನ Read More »

ಮದುವೆಯಾಗುವುದಾಗಿ ನಂಬಿಸಿ ವೈದ್ಯನಿಂದ ಯುವತಿಗೆ ಹಲವು ಬಾರಿ ದೈಹಿಕ ಸಂಪರ್ಕ,ವೈದ್ಯನ ಬಾವನನ್ನು ಬಂಧಿಸಿದ ಪೊಲೀಸರು!

ಸುಳ್ಯ ತಾಲೂಕಿನ ಪಂಜದ ವೈದ್ಯರೊಬ್ಬರು ಮೈಸೂರಿನ ಯುವತಿಗೆ ಮದುವೆಯಾಗೋದಾಗಿ ಹೇಳಿ ವಂಚಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಾವನೋರ್ವನನ್ನು ಮೈಸೂರಿನ ಪೊಲೀಸರು ಸುಳ್ಯದಲ್ಲಿ ಸಿ‌ನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.ಆದರ್ಶ್ ಅವರ ಬಾವ ರಜಿತ್ ಭಟ್ ಬಂಧನಕೊಳಗಾದ ಆರೋಪಿ. ವಂಚನೆಗೊಳಗಾದ ಯುವತಿ ಪೊಲೀಸರಿಗೆ ದೂರು ನೀಡಿದ್ದರು.ಪಂಜ ಮೂಲದ ಡಾ.ಆದರ್ಶ್ ಅವರಿಗೆ ಫೇಸ್ಟುಕ್ ಮೂಲಕ ಯುವತಿಯ ಪರಿಚಯವಾಗಿದೆ. ಬಳಿಕ ವಿವಾಹದ ಭರವಸೆ ನೀಡಿ ಆದರ್ಶ್ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿ, ರಿಜಿಸ್ಟರ್ಡ್ ವಿವಾಹವಾಗಿದ್ದರಾಂತೆ. ಆದರೆ ಇದೀಗ ಇದಕ್ಕೆ ತಮ್ಮ ತಂದೆ

ಮದುವೆಯಾಗುವುದಾಗಿ ನಂಬಿಸಿ ವೈದ್ಯನಿಂದ ಯುವತಿಗೆ ಹಲವು ಬಾರಿ ದೈಹಿಕ ಸಂಪರ್ಕ,ವೈದ್ಯನ ಬಾವನನ್ನು ಬಂಧಿಸಿದ ಪೊಲೀಸರು! Read More »

ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಸುರಿಯುತ್ತಿರುವ ಹಿನ್ನಲೆಯಲ್ಲಿ ಜೂ.12ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಜಿಲ್ಲೆಯಲ್ಲಿ ಮಳೆಯಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು ಸಾರ್ವಜನಿಕರು ಎಚ್ಚರ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಅಂಗನವಾಡಿ ಶಾಲೆಗಳಿಗೆ ರಜೆ ಘೋಷಣೆ Read More »

ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಕೃಷಿಕರು, ಉದ್ದಿಮೆದಾರರು, ಕೂಲಿಕಾರ್ಮಿಕರಿಗಾಗಿ ಇಲಾಖೆಗಳ ವತಿಯಿಂದ ವಿಶೇಷವಾಗಿ ಮಾಹಿತಿ ಗೇರು ಸಂಶೋಧನಾ ಮಂಡಳಿಯಿಂದ ಆಸಕ್ತ ಗೇರು ಕೃಷಿಕರು ಮತ್ತು ಈಗಾಗಲೇ ಗೇರು ಬೆಳೆಯುತ್ತಿರುವ ಕೃಷಿಕರಿಗೆ ಅದರ ಮೌಲ್ಯ ವರ್ಧನೆ ಮಾಡುವ ಕುರಿತು ಉಚಿತವಾಗಿ ಯಂತ್ರೋಪಕರಣಗಳನ್ನು ಅವಶ್ಯಕತೆ ಇದ್ದಲ್ಲಿ ನೀಡುವ ಕುರಿತು ಹಾಗೂ ಎರಡರಿಂದ ಮೂರು ವರ್ಷಗಳ ತನಕ ಗಿಡಗಳ ಆರೈಕೆಯನ್ನು ಮಾಡುವುದರ ಕುರಿತು ಪೂರ್ಣ ಮಾಹಿತಿ

ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ವಿಕಸಿತ ಭಾರತ ಕೃಷಿ ಸಂಕಲ್ಪ ಅಭಿಯಾನ Read More »

ನಾಳೆ ಅಂಗವಾಡಿಗಳಿಗೆ ರಜೆ ಘೋಷಣೆ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜೂ.12ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಗುರುವಾರ ಜಿಲ್ಲೆಯಾದ್ಯಂತ ಗಾಳಿ ಮಳೆಯಾಗುವ ಸಂಭವವಿದ್ದು ಅದರಂತೆ ಹವಾಮಾನ ಇಲಾಖೆ ರೆಡ್‌ ಅಲರ್ಟ್ ಘೋಷಣೆ ಮಾಡಿದೆ ಇದರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಒಂದು ದಿನದ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಮಕ್ಕಳು ನೀರಿನ ಜಾಗಗಳಿಗೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆಯಲ್ಲಿ ತಿಳಿಸಿದ್ದಾರೆ

ನಾಳೆ ಅಂಗವಾಡಿಗಳಿಗೆ ರಜೆ ಘೋಷಣೆ Read More »

ಪಯಸ್ವಿನಿ ಪ್ರಾ ಕೃ ಪ ಸ ಸಂಘದಿಂದ ಕೆಸಿಸಿ ಸಾಲ ಕುರಿತಾದ ಮಾಹಿತಿ ಕಾರ್ಯಾಗಾರ

ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ತಾ.10 ರಂದು ಸಂಪಾಜೆಯಲ್ಲಿ ಮತ್ತು ತಾ.11 ರಂದು ಚೆಂಬು ಬಾಲಂಬಿಯಲ್ಲಿ ಸಂಘದ ಸದಸ್ಯರಿಗೆ ಸಿಗುತ್ತಿರುವ ಶೂನ್ಯ ಬಡ್ಡಿದರದ ಕೆಸಿಸಿ ಸಾಲದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಸಭೆಯ ಅದ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷರಾದ ಶ್ರೀ. ಯನ್.ಸಿ.ಅನಂತ್ ಊರುಬೈಲುರವರು ಕೆಸಿಸಿ ಸಾಲದ ವ್ಯವಸ್ಥೆ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿ,ಸಾಲ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಮತ್ತು ಅನುಸರಿಸಬೇಕಾದ ನಿಯಮಗಳು ಮತ್ತು ಕೆಸಿಸಿ ಸಾಲ ವಿತರಣೆಯಲ್ಲಿ ಸಂಘದ ಪಾತ್ರದ ಬಗ್ಗೆ ವಿವರಿಸಿದರು.

ಪಯಸ್ವಿನಿ ಪ್ರಾ ಕೃ ಪ ಸ ಸಂಘದಿಂದ ಕೆಸಿಸಿ ಸಾಲ ಕುರಿತಾದ ಮಾಹಿತಿ ಕಾರ್ಯಾಗಾರ Read More »

ಕಥೆ, ಪ್ರೀತಿ..,

ಶರಧಿ ಕೋಪದಿಂದಲೇ ದಡ ದಡನೇ ಕಛೇರಿಯ ಒಳಗೆ ನುಗ್ಗಿ ದೊಪ್ಪನೆ ಕುಸಿದು ತನ್ನ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಕೊಂಡಳು. ಕೆಕ್ಕರಿಸಿ ನೋಡುವ ಆತನ ಮುಖವೇ ಕಣ್ಣ ಮುಂದೆ ನಗುತ್ತಿದೆ. ಅಸಹಾಯಕಳಾಗಿ ಕಣ್ಣೀರು ಅರಿವಿಲ್ಲದೆ ಜಾರುತ್ತಿದೆ. ತಾನೊಬ್ಬಳು ವಿಧವೆ ಎಂಬ ಅರಿವು ತನಗಿದೆ ಆದರೆ ಅರಿವಿರದೆ ಆತನ ಪ್ರೇಮಪೂರಿತ ದೃಷ್ಟಿ ದಿನ ದಿನವೂ ಕೊಲ್ಲುತ್ತಿದೆ. ಇಂದು ಕೂಡ ಬಸ್‌ ಸ್ಟ್ಯಾಂಡ್‌ ನಲ್ಲಿ ಕಾಯುತ್ತ ಕುಳಿತಿದ್ದ ಮನಸ್ಸು ಒಂದು ಕ್ಷಣ ವಿಚಲಿತಗೊಂಡರೂ ಸಂಭಾಳಿಸಿಕೊಂಡು ಕಷ್ಟಪಟ್ಟು ಸಮಾಜಕ್ಕೆ ಹೆದರಿ ನಗುವನ್ನು ಮಾಸಿ

ಕಥೆ, ಪ್ರೀತಿ.., Read More »

error: Content is protected !!
Scroll to Top