August 2025

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ

ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವು ನಾಳೆ (ಆ.3ರಂದು) ಸುಳ್ಯದ ಕೋಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮೂಲಕ ಈ ಬಾರಿಯ ಆಟಿ […]

ನಾಳೆ (ಆ.3) ಸುಳ್ಯ ಗೌಡರ ಯುವ ಸೇವಾ ಸಂಘದ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ Read More »

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್‌ ಸವಾರ ಸುಳ್ಯ ತಾಲೂಕಿನ ವ್ಯಕ್ತಿ ಮೃತಪಟ್ಟ ಘಟನೆ ಕೊಡಗಿನ ಆನೆಕಾಡು ಬಳಿ ಇಂದು ಸಂಭವಿಸಿದೆ. ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯಿತು.ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಡಿಕ್ಕಿ ಹೊಡೆದ ಬಳಿಕ ಚರಂಡಿಯೊಳಕ್ಕಾಗಿ ಕಾಡಿನೊಳಗೆ ಕಾರು ಸಾಗಿತ್ತು ಎಂದು ತಿಳಿದುಬಂದಿದೆ.

ಕಾರು ಬೈಕ್ ಅಪಘಾತದಲ್ಲಿ ಪೆರುವಾಜೆಯ ವ್ಯಕ್ತಿ ಸಾವು Read More »

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆ.2 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು. ಬೆಳಿಗ್ಗೆ 10 ಗಂಟೆಗೆ ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು

ಆ.10 : ಅರೆಭಾಷೆ ಅಕಾಡೆಮಿ ಮತ್ತು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅಡ್ಕಾರಿನಲ್ಲಿ ಅರೆಭಾಷೆ ಜಂಬರ – ಆಟಿಕೂಟ Read More »

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ

ಕಾಡುಕೋಣ ತಿವಿದು ರೈತರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಜಾಲ್ಸೂರಿನಿಂದ ವರದಿಯಾಗಿದೆ.ಜಾಲ್ಸೂರು ಗ್ರಾನದ ರವಿಶಂಕರ ಭಟ್‌ ಅವರು ಕಾಡುಕೋಣ ತಿವಿದು ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.ಜಾಲ್ಲೂರು ಗ್ರಾಮದ ನಂಗಾರು ಎಂಬಲ್ಲಿ ಇದೀಗ ಸಂಭವಿಸಿದೆ.ಜಾಲ್ಲೂರಿನ ನಂಗಾರು ರವಿಶಂಕರ ಭಟ್‌ರವರು ತನ್ನ ಮನೆಯ ತೋಟದಲ್ಲಿರುವಾಗ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗುತ್ತಿದೆಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಜಾಲ್ಸೂರು : ಕಾಡುಕೋಣ ತಿವಿದು ವ್ಯಕ್ತಿ ಗಂಭೀರ Read More »

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು

ಸುಳ್ಯ ತಾಲೂಕಿನ ಅರಂತೋಡು ಗ್ತಾಮದ ಉಳುವಾರು ರಮೇಶ ಅವರ ಪತ್ನಿ ನಳೀನಿ(51)ಶಂಕಿತ ಇಲಿ ಜ್ವರದಿಂದ ಜು.31ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಪತಿ ರಮೇಶ್ ಸೇರಿದಂತೆ ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.

ಅರಂತೋಡು : ಶಂಕಿತ ಇಲಿ ಜ್ವರಕ್ಕೆ ಮಹಿಳೆ ಸಾವು Read More »

error: Content is protected !!
Scroll to Top