August 2025

ಆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ ದಿನಾಂಕ 16-08-2025 ರ ಸಿಂಹ ಸಂಕ್ರಮಣದಂದು ಕಲಶ ಸೇವೆ ಇರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತಪ್ರಣೆ ರಾತ್ರಿ ಗಂಟೆ 7:00ಕ್ಕೆ ನಡೆಯಲಿದೆ. ವಿ. ಸೂ :ಅಗೇಲು ಸೇವೆ ಇರುವುದಿಲ್ಲ. ಈ ಸಲದ ಅನ್ನ ಸಂತರ್ಪಣೆ ಮಾಡಿಸುವರು ಗಿರಿಶ. ಬಿ. ಜಿ ಮತ್ತು ಮನೆಯವರು ಗೋಣಿಕೊಪ್ಪ. ಲೋಕೇಶ ಗೌಡ ಮತ್ತು ಮನೆಯವರು. ಶ್ರೀ ದುರ್ಗಾಪರಮೇಶ್ವರಿ ಹೋಟೆಲ್ ಸುಳ್ಯ

ಆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ Read More »

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಹರಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಪುನರಾಯ್ಕೆ

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ರಂಜಿತ್ ಅಡ್ತಲೆ ಸರ್ವರನ್ನು ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ, ಉಪಾಧ್ಯಕ್ಷರಾಗಿ ಶ್ರೀ ವಿನಯ್ ಬೆದ್ರುಪಣೆ,ಶ್ರೀ ಲೋಹಿತ್ ಮೇಲಡ್ತಲೆ,ಶ್ರೀ ಸ್ವಾತಿಕ್ ಕಿರ್ಲಾಯ, ಕಾರ್ಯದರ್ಶಿಯಿಗಿ ಶ್ರೀ ರಂಜಿತ್ ಅಡ್ತಲೆ,ಜೊತೆ ಕಾರ್ಯದರ್ಶಿಯಾಗಿ ಶ್ರೀ ಮೋಹನ ಕಿನಾಲ , ಖಜಾಂಜಿಯಾಗಿ ಶ್ರೀ ಶಶಿಕುಮಾರ್ ಉಳುವಾರು ಆಯ್ಕೆಗೊಂಡರು. ನೂತನ ನಿರ್ದೆಶಕ ರಾಗಿ

ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿ ಹರಿಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಪುನರಾಯ್ಕೆ Read More »

ಸಂಪಾಜೆ : ಸ್ವಚ್ಚತಾ ಕಾರ್ಯಕ್ರಮ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಆ.14ರಂದು ನಡೆಯಿತು.ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಮಟ್ಟದ ಎಲ್ಲಾ ಸಂಘಟನೆ ದಾರ್ಮಿಕ ಮುಖಂಡರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಕರು ಯುವಕ ಮಂಡಲ ಸಂಜೀವಿನಿ ಯೋಜನೆ ಒಕ್ಕೂಟ ಆಟೋ ಚಾಲಕ ಮಾಲಕರು, ಲಯನ್ಸ್ ಕ್ಲಬ್ ಊರ ನಾಗರಿಕರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಶಾಲಾ ವಠಾರ, ರಿಕ್ಷಾ ಪಾರ್ಕ್, ಸರಕಾರಿ ಕಟ್ಟಡ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ

ಸಂಪಾಜೆ : ಸ್ವಚ್ಚತಾ ಕಾರ್ಯಕ್ರಮ Read More »

ಸುಳ್ಯ ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ. ಯವರು ಜು.31ರಂದು ತಮ್ಮ 28 ವರ್ಷಗಳ ಶಿಕ್ಷಕ ಸೇವೆಯಿಂದ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಸುಳ್ಯ ನಗರ ಮಹಿಳಾ ಗೌಡ ಘಟಕದ ಸದಸ್ಯರು ಆ.13 ರಂದು ಅವರ ಮನೆಗೆ ತೆರಳಿ ಶಾಲು, ಪೇಟ, ಫಲ ಪುಷ್ಪ ನೀಡಿ ಗೌರವ ಸಲ್ಲಿಸಿದರು. ಶಿಕ್ಷಕಿ ಪ್ರೇಮಾವತಿ ಟೀಚರ್‌ರವರ ಕುರಿತು ತಾ.ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿಎಸ್ ಗಂಗಾಧರ್, ನಿವೃತ್ತ ವಿಜಯಬ್ಯಾಂಕ್ ಉದ್ಯೋಗಿ ಜನಾರ್ಧನ ಕೊಳಂಜಿರೋಡಿ ಮಾತನಾಡಿದರು.

ಸುಳ್ಯ ನಗರ ಮಹಿಳಾ ಗೌಡ ಘಟಕದ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ಸಿ.ಯವರಿಗೆ ಗೌರವ Read More »

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಶಮುಕ್ತ ಭಾರತ ಅಭಿಯಾನ ಕಾರ್ಯಕ್ರಮ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13/08/2025ರಂದು ಕಾಲೇಜಿನ ಎನ್.ಎಸ್.ಎಸ್. ಘಟಕವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕದ ಸಹಯೋಗದೊಂದಿಗೆ ನಶಮುಕ್ತ ಭಾರತ ಅಭಿಯಾನವನ್ನು ನಡೆಸಲಾಯಿತುಈ ಕಾರ್ಯಕ್ರಮದ ಪ್ರಯುಕ್ತ ಜನಜಾಗೃತಿ ಜಾಥಾ ಮತ್ತು ಮಾನವ ಸರಪಳಿಯನ್ನು ಸುಳ್ಯ ನಗರದಲ್ಲಿ ದಿನಾಂಕ 11.08.2025 ರಂದು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ನಶಮುಕ್ತ ಭಾರತದ ಸಾಮೂಹಿಕ ಪ್ರತಿಜ್ಞೆ ಯನ್ನು ದಿನಾಂಕ 13.08.2025 ರಂದು ತೆಗೆದುಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಶಲ್ಯ ತಂತ್ರ ವಿಭಾಗದ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನಶಮುಕ್ತ ಭಾರತ ಅಭಿಯಾನ ಕಾರ್ಯಕ್ರಮ Read More »

ಗೂನಡ್ಕ : ಕಾರು ಅಪಘಾತ

ಸುಳ್ಯ ತಾಲೂಕಿನ ಗೂನಡ್ಕ‌ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಅಪಘಾತವಾಗಿ ಪ್ರಯಾಣಿಕರು ಅಪಾಯದಿಂದ ಪರಾದ ಘಟನೆ ಗುರುವಾರ ವರದಿಯಾಗಿದೆ.ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಗೂನಡ್ಕ : ಕಾರು ಅಪಘಾತ Read More »

ಜಾಲ್ಸೂರು : ವೀಲ್ ಚೇರ್ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಜಾಲ್ಸೂರು ವಲಯದ ಪೈಲಾರು ಕಾರ್ಯಕ್ಷೇತ್ರದ ಕುಕ್ಕುಜಡ್ಕ ಒಕ್ಕೂಟದ ಅನ್ನಪೂರ್ಣ ಸಂಘದ ಸದಸ್ಯರ ಮನೆಯವರಾದ ರೇವತಿ ಅವರಿಗೆ ಹತ್ತು ವರ್ಷಗಳಿಂದ ಅನಾರೋಗ್ಯ ವಿದ್ದು ನಡೆಯಲು ಅಶಕ್ತರಾಗಿದ್ದು ಅವರಿಗೆ ಧರ್ಮಸ್ಥಳ ಯೋಜನೆಯಿಂದ ವೀಲ್ ಚೇರ್ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಹಾ ವಿಷ್ಣು ಭಜನ ಮಂಡಳಿಯ ಗೌರವ ಸಲಹೆಗಾರರಾದ ಕೃಷ್ಣ ಭಟ್ ರವರು ಹಸ್ತಾಂತರ ಮಾಡಿದರು ವಲಯದ ಮೇಲ್ವಿಚಾರಕರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಸೇವಾ ಪ್ರತಿನಿಧಿ ಹಾಗೂ

ಜಾಲ್ಸೂರು : ವೀಲ್ ಚೇರ್ ಹಸ್ತಾಂತರ Read More »

ಆ. 17ಕ್ಕೆ  ಅಡ್ತಲೆಯಲ್ಲಿ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆ

ಸ್ಪಂದನ ಗೆಳೆಯರ ಬಳಗ(ರಿ) ಅಡ್ತಲೆ ಇವರ ಆಶ್ರಯದಲ್ಲಿ ಆ.17ರಂದು ಆದಿತ್ಯವಾರ ಅಡ್ತಲೆ ಶಾಲಾ ವಠಾರದಲ್ಲಿ 7 ನೇ ವರ್ಷದ ಶ್ರೀನಾಥ್ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆಯು ನಡೆಯಲಿದೆ ಸಂಘಟಕರು ತಿಳಿಸಿದ್ದಾರೆ. ಪುಟಾಣಿಗಳಿಗೆ,ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ , ಹಿರಿಯ ನಾಗರಿಕರಿಗೆ ವಿವಿದ ಕ್ರೀಡಾ ಹಾಗೂ ಮನರಂಜನಾ ಸ್ಪರ್ಧೆಗಳು ನಡೆಯಲಿವೆ.ಕಾರ್ಯಕ್ರಮವನ್ನು ಅಡ್ತಲೆ- ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ಸ್ಥಾನದ ಅಧ್ಯಕ್ಷರಾದ ಶ್ರೀ ಸದಾನಂದ ಅಡ್ತಲೆ ಉದ್ಘಾಟಿಸಲಿದ್ದಾರೆ.ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಪಂದನ

ಆ. 17ಕ್ಕೆ  ಅಡ್ತಲೆಯಲ್ಲಿ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಶ್ರೀ ಕೃಷ್ಣ ವೇಷ‌ ಸ್ಪರ್ಧೆ Read More »

ನಿಲ್ಲಿಸಿದ ಪಿಕಪ್ ನಾಪತ್ತೆ

ಐವರ್ನಾಡು ಎನ್.ಎಸ್ ಶಾಮಿಯಾನ ಎದುರು ನಿಲ್ಲಿಸಿದ ಸುನೀಲ್ ನಿಡ್ಡಾಜೆಯವರ ಪಿಕಪ್ ವಾಹನ ಕಳವಾದ ಘಟನೆ ವರದಿಯಾಗಿದೆ.ಪಿಕಪ್ ಕಂಡಲ್ಲಿ ಈ ನಂಬರ್ ಗೆ ತಿಳಿಸಬೇಕಾಗಿದೆ ಎಂದು ಕೋರಲಾಗಿದೆ. -9008888121

ನಿಲ್ಲಿಸಿದ ಪಿಕಪ್ ನಾಪತ್ತೆ Read More »

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ 75 ವರ್ಷ,ಡಿಸೆಂಬರ್ ತಿಂಗಳಲ್ಲಿ ಅಮೃತಮಹೋತ್ಸವ ಆಚರಣೆ

ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು 75 ವರ್ಷ ಗಳನ್ನು ಪೂರೈಸುತ್ತಿದ್ದು ಇದರ ಅಮೃತಮಹೋತ್ಸವ ಕಾರ್ಯಕ್ರಮ 2025 ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಅಮೃತಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಜು.12ರಂದು ಪೂರ್ವಭಾವಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸಮಿತಿ ಅಧ್ಯಕ್ಷರಾಗಿ ಸವಣೂರು ಸೀತಾರಾಮ ರೈ, ಉಪಾಧ್ಯಕ್ಷರಾಗಿ ಡೇವಿಡ್ ಧೀರಾ ಕ್ರಾಸ್ತ, ಲಿಂಗಪ್ಪ ಗೌಡ, ಮಂಜುಳಾ ಬಡಿಗೇ‌ರ್, ಪಿ.ಬಿ.ಸುಧಾಕರ ರೈ, ಡಾ.ರಂಗಯ್ಯ, ಗಿರೀಶ್ ಡಿ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಸದಾಶಿವ,

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ 75 ವರ್ಷ,ಡಿಸೆಂಬರ್ ತಿಂಗಳಲ್ಲಿ ಅಮೃತಮಹೋತ್ಸವ ಆಚರಣೆ Read More »

error: Content is protected !!
Scroll to Top