October 2025

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಭಾವನ್ಮಾಕವಾಗಿ, ಧಾರ್ಮಿಕವಾಗಿ ಸದೃಢ ಯುವಜನತೆ ಹುಟ್ಟಿದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ಎಂದು ಸುಳ್ಯ ಎನ್ನೆಂ ಸಿ ಉಪನ್ಯಾಸಕಿ ಡಾ. ಅನುರಾಧ ಕುರುಂಜಿ ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸುಳ್ಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ ಹಾಗೂ ಅಖಿಲ ಭಾರತ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸೂರು ವಲಯ ಹಾಗೂ ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು ಇದರ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ […]

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ Read More »

ಶರಣ್ ಪಂಪ್ವೆಲ್ ಬಂಧನ

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಶರಣ್ ಪಂಪ್ವೆಲ್ ಅವರ ಆರ್ ಎಸ್ಎಸ್ ಮುಖಂಡರೊಬ್ಬರ ಪ್ರಚೋದರಕಾರಿ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣ ವಿಶ್ವ ಹಿಂದೂ ಪರಿಷತ್ ಖಾತೆಯಲ್ಲಿ ಈ ವಿಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಕದ್ರಿ ಠಾಣಾ‌ ಪೊಲೀಸರು ಅವರನ್ನು ಬಂಧಿಸಿದ್ದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಶರಣ್ ಪಂಪ್ವೆಲ್ ಬಂಧನ Read More »

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ ಗಪೂರ್ ಅರಂತೋಡು ಮಸೀದಿಗೆ ಭೇಟಿ,ಜಮಾಅತ್ ವತಿಯಿಂದ ಸನ್ಮಾನ

ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಪೂರ್ ರವರು ಒ. 31 ರಂದು ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜಮಾಅತ್ ವತಿಯಿಂದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸನ್ಮಾನಿಸಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಪೈಝಿ ದುವಾ ನೆರವೇರಿಸಿದರು. ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮೊಹಮ್ಮದ್,

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ ಗಪೂರ್ ಅರಂತೋಡು ಮಸೀದಿಗೆ ಭೇಟಿ,ಜಮಾಅತ್ ವತಿಯಿಂದ ಸನ್ಮಾನ Read More »

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತ್ರತ್ವದಲ್ಲಿ ನ.1ರಿಂದ ಸಾಹಿತ್ಯ ಸಂಭ್ರಮ‌ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ -೨೦೨೫ ಕಾರ್ಯಕ್ರಮವು ದಿನಾಂಕ ೦೧.೧೧.೨೦೨೫ ರಿಂದ ೦೭.೧೧.೨೦೨೫ರ ವರೆಗೆ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ,ವಲಯ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ ಚಂದ್ರಾವತಿ ಬಡ್ಡಡ್ಕ ತಿಳಿಸಿದರು.ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದದಿನಾಂಕ ೦೧.೧೧.೨೦೨೫ ಶನಿವಾರ ಅಪರಾಹ್ನ ೨.೦೦ಗಂಟೆಗೆ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತ್ರತ್ವದಲ್ಲಿ ನ.1ರಿಂದ ಸಾಹಿತ್ಯ ಸಂಭ್ರಮ‌ ಕಾರ್ಯಕ್ರಮ Read More »

ಆರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಮರು ಆಯ್ಕೆ

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರಂತೋಡು ರಬ್ಬರ್ ಉತ್ಪಾದಕರ ಸಂಘವನ್ನು ಕಳೆದೆರಡು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ ಶಶಿಕುಮಾರ್ ಉಳುವಾರು, ಅಡ್ತಲೆಯವರು ಮುಂದಿನ ಅವಧಿಗೂ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದಾರೆ. ಇವರೊಂದಿಗೆ ಆರಂತೋಡು ಗ್ರಾಮದಿಂದ ಯಶೋದರ ಪಿಂಗಾರ ತೋಟ, ಯು. ಎಂ. ಕಿಶೋರ್ ಕುಮಾರ್ ಉಳುವಾರು, ಮೋಹನ್ ಕುಮಾರ್ ಪಾರೆಮಜಲು, ತೊಡಿಕಾನ ಗ್ರಾಮದಿಂದ ಕೇಶವ ಕೊಳಲುಮೂಲೆ, ವೆಂಕಟ್ರಮಣ ಪೆತ್ತಾಜೆ ಮತ್ತು ಕಮಲಾಕ್ಷ ಕಾಟೂರು (ಪಡ್ಪು )ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಆರಂತೋಡು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಮರು ಆಯ್ಕೆ Read More »

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ದಿನಾಂಕ 30.10.2025ನೇ ಗುರವಾರದಂದು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ “ಗ್ರಾಮ ಸ್ವರಾಜ್ ” ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಪ್ರಮುಖವಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲಿ ವ್ಯಾಪಕವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಶಾಶ್ವತ ಫ್ಲಕ್ಸ್ ಅಳವಡಿಸಿದ್ದು. ಆದರೆ ಕೆಲವರು ಪಂಚಾಯತ್ ಅನುಮತಿ ಪಡೆಯದೆ, ಪ್ಲೆಕ್ಸ್ ಅಳವಡಿಸಿದ ಸ್ಥಳದ ಮಾಹಿತಿ ನೀಡದಿರುವುದರಿಂದ ಪ್ರಯಾಣಿಕರಿಗೂ ಹಾಗೂ ವ್ಯಾಪಾರಸ್ಥರಿಗೂ ತೊಂದರೆಯಾಗುವುದರಿಂದ ಇದರ ಬಗ್ಗೆ ಕ್ರಮ ಕೈಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಾಮಾನ್ಯ ಸಭೆಯಲ್ಲಿ ನವಂಬರ್

ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ Read More »

ಆ್ಯಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಸ್ಕೂಟಿ ಸವಾರನ ಮೇಲೆ ಪ್ರಕರಣ ದಾಖಲು

ಅ.30ರಂದು ಬಿಸಿಲೆ ಘಾಟ್ ನಲ್ಲಿ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ಸಮಯ ಅಲ್ಲಿನ ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಂಭೀರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ KA.22.C.1382 ನೇ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದ ಸಮಯ ಮದ್ಯಾಹ್ನ 1.30 ಗಂಟೆಗೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್‌ ಎನ್ ಜಿ ಸರ್ಕಲ್ನಂದ ಅಂಬ್ಯುಲೆನ್ಸ್ ಮುಂದಿನಿಂದ ಸೈರನ್ ಶಬ್ದ ಕೇಳಿಯೂ ಅಂಬ್ಯುಲೆನ್ಸ್ ಗೆ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್‌ ಸಂಚಾರಕ್ಕೆ ಅಡಚಣೆ ಉಂಟು

ಆ್ಯಂಬ್ಯುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ ಸ್ಕೂಟಿ ಸವಾರನ ಮೇಲೆ ಪ್ರಕರಣ ದಾಖಲು Read More »

ಶುಭವಿವಾಹ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಬಾಳೆಕಜೆ ಜನಾರ್ಧನ ಮತ್ತು ಚಂದ್ರಕಲಾ ದಂಪತಿ ಪುತ್ರ ಶ್ರೀನಿಧಿಯವರ ವಿವಾಹವುಸುಳ್ಯ ತಾಲೂಕು ತೊಡಿಕಾನ ಗ್ರಾಮದ ಊರುಪಂಜ ಹಿರಣ್ಯ ಮತ್ತು ಹೊನ್ನಮ್ಮ ದಂಪತಿ ಪುತ್ರಿ ಯೋಗಿತಾರೊಂದಿಗೆ ಅ.30ರಂದು ತೊಡಿಕಾನ ಬಿ.ಎಸ್.ಗೌಡ ಸಭಾಭವನದಲ್ಲಿ ನಡೆಯಿತು.

ಶುಭವಿವಾಹ Read More »

ಸುಳ್ಯ : ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ರಾಜಕೀಯ ನಿವೃತ್ತಿ ಘೋಷಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ರಾಜಕೀಯ ನಿವೃತ್ತಿ ಪ್ರಕಟಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರಿಗೆ ಪತ್ರ ಬರೆದಿರುವ ಅವರು ಜಿಲ್ಲಾ ಉಪಾಧ್ಯಕ್ಷತೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿಯೂ, ಪ್ರಸ್ತುತ ರಾಜಕೀಯ ನಿವೃತ್ತಿ ಬಯಸಿರುವುದಾಗಿಯೂ ತಿಳಿಸಿದ್ದಾರೆ.

ಸುಳ್ಯ : ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ರಾಜಕೀಯ ನಿವೃತ್ತಿ ಘೋಷಣೆ Read More »

ಮದುವೆ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು

ಸಕಲೇಶಪುರ ತಾಲೂಕಿನ ವನಗೂರಿನಿಂದ ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ವ್ಯಾನ್ ಚಾಲಕ‌ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಅ.30ರ ಗುರುವಾರ ಬೆಳಿಗ್ಗೆ ನಡೆದಿದ್ದು, ಈ ಪರಿಣಾಮ ಓರ್ವ ಮೃತಪಟ್ಟು, 6 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಶಿವರಾಜ್ ( 50) ಮೃತಪಟ್ಟವರು.ಈ ವಾಹನದಲ್ಲಿ ಒಟ್ಟು ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ

ಮದುವೆ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವು Read More »

error: Content is protected !!
Scroll to Top