October 2025

ಕೊಡಿಯಾಲ : ಜಾತಿ ಸಮೀಕ್ಷೆ ನಡೆಸಲು ಆಗಮಿಸಿದ ಶಿಕ್ಷಕಿಗೆ ಕಚ್ಚಿ ಬಟ್ಟೆ ಹರಿದು ಹಾಕಿದ ನಾಯಿ

ಜಾತಿ‌ ಸಮೀಕ್ಷೆ ನಡೆಸಲು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿನಡೆಸಿದ ಘಟನೆ ಬಾಳಿಲ‌ ಸಮೀಪದ ಕೊಡಿಯಾಲ ಎಂಬಲ್ಲಿಂದ ವರದಿಯಾಗಿದೆ.ಕೊಡಿಯಾಲದ ನಿಡ್ಮಾರು ಎಂಬಲ್ಲಿನ ಮನೆಗೆ ಮೂವಪ್ಪೆ ಶಾಲಾಶಿಕ್ಷಕಿಯೋರ್ವರು ಸಮೀಕ್ಷೆಗೆ ತೆರಳಿದ ವೇಳೆ ಮನೆಯ ನಾಯಿ ಕಚ್ಚಿದೆ.ಪರಿಣಾಮ ಶಿಕ್ಷಕಿಯ ಉಡುಪು ಹರಿದು ಹೋಗಿದೆ.

ಕೊಡಿಯಾಲ : ಜಾತಿ ಸಮೀಕ್ಷೆ ನಡೆಸಲು ಆಗಮಿಸಿದ ಶಿಕ್ಷಕಿಗೆ ಕಚ್ಚಿ ಬಟ್ಟೆ ಹರಿದು ಹಾಕಿದ ನಾಯಿ Read More »

ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿಯ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿ

ಗಣತಿ ಮಾಡುತ್ತಿದ್ದ ಶಿಕ್ಷಕಿಯ ಕಾರಿಗೆ ಹಾನಿ ಮಾಡಿರುವ ಘಟನೆ ಅ.5ರಂದು ಬೆಳಿಗ್ಗೆ ಕಡಬ ತಾಲೂಕಿನ ಕೋಡಿಂಬಾಳದಿಂದ ವರದಿಯಾಗಿದೆ.ಕೊಣಾಲು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ರಮಣಿ ಬಿ ಎಂಬವರು ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ಶಂಕರ ಪಾಜೋವು ಎಂಬವರು ರಸ್ತೆ ಬದಿಯಲ್ಲಿದ್ದ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿಗೊಳಿಸಿ ಕಾರಿನ ಹಿಂಬದಿ ಗಾಜನ್ನು ಪುಡಿಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಮಣಿಯವರು ಕಡಬ ಠಾಣೆ ಹಾಗೂ ಕಡಬ ತಹಶೀಲ್ದಾ‌ರ್ ಅವರಿಗೆ ದೂರು

ಗಣತಿ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕಿಯ ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಾನಿ Read More »

ಜಾತಿ ಗಣತಿಗೆ ತೆರಳಿದ ಶಿಕ್ಷಕಿ ಹಾಗೂ ಅವರ ಪತಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು!

ಹಾಸನ ಜಿಲ್ಲೆಯಲ್ಲಿ ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಬೀದಿ ನಾಯಿಗಳು ಓಡಿಸಿಕೊಂಡು ಬಂದು ಕಚ್ಚಿರುವ ಘಟನೆ ವರದಿಯಾಗಿದೆ.ಶಿಕ್ಷಕಿಗೆ ಮುಖ, ಕೈ-ಕಾಲು, ದೇಹದ ಹಲವು ಭಾಗಗಳಿಗೆ ಕಚ್ಚಿ ಗಂಭೀರವಾಗಿ ಗಾಯವಾಗಿವೆ.ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ಘಟನೆ ನಡೆದಿದೆ. ಶಿಕ್ಷಕಿಯನ್ನು ಬಚಾವ್ ಮಾಡಲು ಬಂದ ಇತರ ಏಳು ಮಂದಿ ಮೇಲೂ ನಾಯಿಗಳ ದಾಳಿ ಮಾಡಿವೆ. ಬೀದಿ ನಾಯಿಗಳ ದಾಳಿಗೆ ಒಳಗಾಗಿ ಶಿಕ್ಷಕಿ ಚಿಕ್ಕಮ್ಮ ತೀವ್ರ ಗಾಯಗೊಂಡಿದ್ದು ಇವರು ಪಟ್ಟಣದ ಜಿಎಚ್‌ಪಿಎಸ್‌ ಶಾಲೆಯ

ಜಾತಿ ಗಣತಿಗೆ ತೆರಳಿದ ಶಿಕ್ಷಕಿ ಹಾಗೂ ಅವರ ಪತಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿಗಳು! Read More »

ನವೆಂಬರ್ 22ರೊಳಗೆ ಚುನಾವಣೆ

ನವೆಂಬರ್ 22ರೊಳಗೆ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ಇಂದು ಪಾಟ್ನಾದಲ್ಲಿ ತಿಳಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಬೂತ್ ಮಟ್ಟದ ಅಧಿಕಾರಿಗಳ ಭತ್ಯೆ ಹೆಚ್ಚಳ, ಪ್ರತಿ ಬೂತ್‌ನಲ್ಲಿ 1,200 ಕ್ಕಿಂತ ಹೆಚ್ಚು ಮತದಾರರಿಲ್ಲದಂತೆ ನೋಡಿಕೊಳ್ಳುವುದು, 100% ವೆಬ್‌ ಕಾಸ್ಟಿಂಗ್ ಕುರಿತು ಅವರು ಮಾಹಿತಿ ನೀಡಿದರು. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಬಣಗಳಲ್ಲಿ ಭಾರೀ ಸ್ಪರ್ಧೆ ಇದ್ದು, ಬಿಹಾರ್ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಹುದ್ದೆ ಮೇಲೆ ನೇರ ಪರಿಣಾಮ

ನವೆಂಬರ್ 22ರೊಳಗೆ ಚುನಾವಣೆ Read More »

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಸಿಕೊಂಡ ಹಾಸ್ಯ ನಟ ಚಿಕ್ಕಣ್ಣ

ಹಾಸ್ಯ ನಟ ಚಿಕ್ಕಣ್ಣ ಗುಟ್ಟಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಹುಡುಗಿ ಪಾವನಾರೊಂದಿಗೆ ನಿಶ್ಚಿತಾರ್ಥ ಮಾಡಿಸಿಕೊಂಡಿದ್ದಾರೆ.ಇದು ಅರೇಂಜ್ ಮ್ಯಾರೇಜ್ ಎಂದು ತಿಳಿಸಿದ್ದಾರೆ. ‘ಜೋಡೆತ್ತು’ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ತಮ್ಮ ಮದುವೆಯೂ ಆಗಿರುತ್ತದೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಭೂಮಿ ಫಲ ಕೊಡಲು ಉಳುಮೆಗೆ ಜೋಡೆತ್ತು ಬೇಕು, ಬದುಕಿನ ಬಂಡಿ ಸಾಗಲೂ ಪತಿ-ಪತ್ನಿ ಜೋಡೆತ್ತಿನಂತೆ ಸಾಗಬೇಕು ಎಂಬ ಮಾತನ್ನು ಉಲ್ಲೇಖಿಸಿ, ವೃತ್ತಿಯಲ್ಲೂ ವೈಯಕ್ತಿಕವಾಗಿಯೂ ಜೋಡೆತ್ತಿನ ಜೊತೆ ಪ್ರಯಾಣ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಗುಟ್ಟಾಗಿ ನಿಶ್ಚಿತಾರ್ಥ ಮಾಡಿಸಿಕೊಂಡ ಹಾಸ್ಯ ನಟ ಚಿಕ್ಕಣ್ಣ Read More »

ಅಣ್ಣ-ತಮ್ಮನಿಗೆ ಒಂದೆ ದಿನ ಹೃದಯಾಘಾತ: ಇಬ್ಬರೂ ಸಾವು

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿಯಲ್ಲಿ ಶನಿವಾರ ಹೃದಯಾಘಾತದಿಂದಾಗಿ ಇಬ್ಬರು ಸಹೋದರರು ಮೃತಪಟ್ಟ ದುರ್ಘಟನೆ ನಡೆದಿದೆ. 16 ವರ್ಷದ ಸತೀಶ ಬಾಗನ್ನವರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಈ ದುಃಖದ ಸುದ್ದಿ ತಿಳಿದ ತಕ್ಷಣವೇ, ಅವನ ಅಣ್ಣ 24 ವರ್ಷದ ಬಸವರಾಜ ಬಾಗನ್ನವರ ಕೂಡ ಶಾಕ್‌ನಿಂದ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಪತಿ ಹಾಗೂ ಮೈದುನನ ಕಳೆದುಕೊಂಡ ಬಸವರಾಜನ ಗರ್ಭಿಣಿ ಪತ್ನಿ ಪವಿತ್ರಾ ಕುಸಿದು ಬಿದ್ದಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಣ್ಣ-ತಮ್ಮನಿಗೆ ಒಂದೆ ದಿನ ಹೃದಯಾಘಾತ: ಇಬ್ಬರೂ ಸಾವು Read More »

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಳ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ‘ಶಕ್ತಿ’ ಚಂಡಮಾರುತದಿಂದ ರಾಜ್ಯದಲ್ಲಿ ವಾರಪೂರ್ತಿ ಗುಡುಗು ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ 11ರವರೆಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಳ Read More »

ಸುಳ್ಯ : ದಸರಾದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಚಂಡಿಕಾ ಮಹಾಯಾಗ

ಸುಳ್ಯದ ದಸರಾ ಉತ್ಸವ ವೈಭವದೊಂದಿಗೆ ಸುಳ್ಯ ಚೆನ್ನಕೇಶವ ದೇವಳದ ವಠಾರದಲ್ಲಿ ನಡೆಯುತ್ತಿದ್ದು 6 ನೇ ದಿನವಾದ ಅ.4ರಂದು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗವು ನಡೆಯಿತು.ಪುರೋಹಿತ ನಾಗರಾಜ ಭಟ್ಟರ ನೇತೃತ್ವದಲ್ಲಿ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ದ ಸಹಕಾರದಲ್ಲಿ ಚಂಡಿಕಾ ಯಾಗ ನಡೆಯಿತು.ಸಾವಿರಾರು ಮಂದಿ ಈ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸುಳ್ಯ : ದಸರಾದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ಚಂಡಿಕಾ ಮಹಾಯಾಗ Read More »

ತೊಡಿಕಾನ : ಡಿ.26,27,28ಕ್ಕೆ ಪಡ್ಪು ಶ್ರೀ ಮಹಾವಿಷ್ಣು ದೈವದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ದೈವದ ದೈವಸ್ಥಾನ ಜೀರ್ಣೊದ್ದಾರಗೊಳ್ಳುತ್ತಿದ್ದು ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಡಿ.26,27,28ರಂದು ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ವಿವಿಧ ಸಮಿತಿಗಳ ಪೂರ್ವಭಾವಿ ಸಭೆ ಹಾಗೂ ಜೀರ್ಣೊದ್ದಾರ ಪ್ರಯುಕ್ತ ಲಕ್ಕಿಕೂಪನ್ ಬಿಡುಗಡೆ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ಅಕ್ಷಯ ಮಂದಿರದಲ್ಲಿ ಅ.4ರಂದು ನಡೆಯಿತು.ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ ಅಧ್ಯಕ್ಷತೆ ವಹಿಸಿದ್ದರು.ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು. ವ್ಯವಸ್ಥಾಪನಾ ಸಮಿತಿ (ಟ್ರಸ್ಟ್ ) ಅಧ್ಯಕ್ಷ

ತೊಡಿಕಾನ : ಡಿ.26,27,28ಕ್ಕೆ ಪಡ್ಪು ಶ್ರೀ ಮಹಾವಿಷ್ಣು ದೈವದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ Read More »

ರಾಜ್ಯಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ

ಕರ್ನಾಟಕದಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ ಇದ್ದು ಅ. 9ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದ‌ರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

ರಾಜ್ಯಾದ್ಯಂತ ಮತ್ತೆ ಮಳೆ ಸುರಿಯುವ ಸಾಧ್ಯತೆ Read More »

error: Content is protected !!
Scroll to Top