October 2025

ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಮೇಲೆ ಕೇಸ್‌: ಸಂಸದ ಕ್ಯಾ. ಚೌಟ ಆಕ್ರೋಶ

ಮಂಗಳೂರು: ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ಹಿಂದುತ್ವದ ಪ್ರಬಲ ಧ್ವನಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ರಾಜಕೀಯ ಪ್ರೇರಿತ ಮೊಕದ್ದಮೆ ಹೂಡಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆರೋಪಿಸಿದ್ದಾರೆ. ಹಿಂದೂ ಸಮಾಜದ ಆದರಣೀಯರಾಗಿರುವ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಅವರು ಕೇವಲವಾಗಿ ಮಾತಾಡಿರುವುದು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ರಾಷ್ಟ್ರೀಯ ವಿಚಾರಧಾರೆಗಾಗಿ […]

ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಡಾ. ಕಲ್ಲಡ್ಕ ಪ್ರಭಾಕರ ಭಟ್‌ ಮೇಲೆ ಕೇಸ್‌: ಸಂಸದ ಕ್ಯಾ. ಚೌಟ ಆಕ್ರೋಶ Read More »

ರಬ್ಬರ್ ಟ್ಯಾಪರ್ ಕುಸಿದು ಬಿದ್ದು ಸಾವು

ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತ ಪಟ್ಟ ಘಟನೆ ಕಡಬ ತಾಲೂಕಿನ ಮರ್ದಾಳ ಸಮೀಪದ ಐತ್ತೂರು ಗ್ರಾಮದಿಂದ ವರದಿಯಾಗಿದೆ.ಮ್ರತಪಟ್ಟ ವ್ಯಕ್ತಿಯನ್ನು ಸುರೇಶ ಎಂದು ಗುರುತಿಸಲಾಗಿದೆ.ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದರು.ಬಳಿಕ ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯಾಧಿಕಾರಿಯವರು ಪರಿಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿರುವುದಾಗಿ ತಿಳಿದು ಬಂದಿದೆ.ಪತ್ನಿ ದಿವ್ಯ ಅವರು ಒಂದು ವಾರದ ಹಿಂದೆ ದೀಪಾವಳಿ ಹಬ್ಬದ ಪ್ರಯುಕ್ತ ಅವರ ಮಕ್ಕಳನ್ನು ಕರೆದುಕೊಂಡು ಸುಳ್ಯ ತಾಲೂಕಿನ ಕೂಟೇಲು ಎಂಬಲ್ಲಿಗೆ ಹೋಗಿದ್ದರು.

ರಬ್ಬರ್ ಟ್ಯಾಪರ್ ಕುಸಿದು ಬಿದ್ದು ಸಾವು Read More »

ದೇಶದಲ್ಲೇ ವಿನೂತನ ಮಾದರಿಯಲ್ಲಿ ನಡೆಯಲಿದೆ ಹನುಮಗಿರಿ ಬ್ರಹ್ಮಕಲಶೋತ್ಸವ

2026ರ ಏಪ್ರಿಲ್ 9 ರಿಂದ 12ರ ವರೆಗೆ ನಡೆಯಲಿರುವ ಶ್ರೀಕ್ಷೇತ್ರ ಹನುಮಗಿರಿ ಶ್ರೀ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಮಿತಿ ರಚನೆ ಮತ್ತು ಸಮಾಲೋಚನಾ ಸಭೆಯು ಅಕ್ಟೋಬರ್ 26ರಂದು ಹನುಮಗಿರಿಯ ವೈದೇಹಿ ಸಭಾಭವನದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಮಾತನಾಡಿಬ್ರಹ್ಮಕಲಶೋತ್ಸವದ ಸಮಾಲೋಚನೆಗೆ ಕರೆದಿದ್ದ ಪ್ರಥಮ ಸಭೆಗೆ 500ಕ್ಕೂ ಅಧಿಕ ಜನ ಸೇರಿರುವುದು ಅತ್ಯದ್ಭುತ. ಶ್ರೀ ಕ್ಷೇತ್ರ ಹನುಮಗಿರಿಯ ಬ್ರಹ್ಮ ಕಲಶೋತ್ಸವ ರಾಷ್ಟ್ರಮಟ್ಟದಲ್ಲೇ ಶ್ರೇಷ್ಠ ಕಾರ್ಯಕ್ರಮವಾಗಿ ಮೂಡಿ ಬರಲಿದೆ.

ದೇಶದಲ್ಲೇ ವಿನೂತನ ಮಾದರಿಯಲ್ಲಿ ನಡೆಯಲಿದೆ ಹನುಮಗಿರಿ ಬ್ರಹ್ಮಕಲಶೋತ್ಸವ Read More »

ಬಾಲಕಿಯರು ನಾಪತ್ತೆ

ದಿನಾಂಕ 24.10.2025 ರಂದು ಮುಳಬಾಗಿಲು ನಗರದ ಮುತ್ಯಾಲಾಪೇಟೆಯ ವಾಸಿ ರಮೇಶ್‌ ರವರ ಮಕ್ಕಳಾದ ತನುಶ್ರೀ 11 ವರ್ಷ ಹಾಗೂ ಮೋನಿಕಾ 14 ವರ್ಷ ಇವರು ಮುಳಬಾಗಿಲು ನಗರದ ಜ್ಞಾನ ವಾಹಿನಿ ಶಾಲೆಯಲ್ಲಿ ಓದುತ್ತಿದ್ದು ಇಂದು ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಮನೆಯಿಂದ ಹೋಗಿದ್ದು ಶಾಲೆಗೂ ಹೋಗದೆ ಮನೆಗೂ ಬರದೇ ಕಾಣೆಯಾಗಿರುತ್ತಾರೆ. ಎಲ್ಲ ಕಡೆ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ .ಕಾಣೆಯಾದ ತಮ್ಮ ಮಕ್ಕಳ ಪತ್ತೇಗಾಗಿ ಕೋರಿರುತ್ತಾರೆ. ಸದರಿ ಮಕ್ಕಳ ಮಾಹಿತಿಗಾಗಿ ಎಲ್ಲ ಬೀಟ್ ಗ್ರೂಪ್ ಗಳಿಗೆ ಶೇ‌ರ್ ಮಾಡಲು ಮೇಲಾಧಿಕಾರಿಗಳು

ಬಾಲಕಿಯರು ನಾಪತ್ತೆ Read More »

ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ ಉಳಿವಿಗೆ ಪ್ರಯತ್ನ : ಸದಾನಂದ ಮಾವಜಿ

ಇಂದು ಬಡ್ಡಡ್ಕದಲ್ಲಿ ಅರೆಭಾಷೆ ಗ್ರಾಮೋತ್ಸವಕ್ಕೆ ಚಾಲನೆ ನೀಡಲಾಗಿದೆ‌.ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ,ಆಚರಣೆಗಳ ಉಳಿವಿಗೆ ಪ್ರಯತ್ನಿಸಲಾಗುವುದೆಂದು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಆಲೆಟ್ಟಿಯ ಬಡ್ಡಡ್ಕ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಅ. 26 ರಂದು ನಡೆದ ಅರೆಭಾಷೆ ಗ್ರಾಮೋತ್ಸವ 2025ರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸುಳ್ಯ

ಅರೆಭಾಷೆ ಗ್ರಾಮೋತ್ಸವ ಮೂಲಕ ಅರೆಭಾಷಿಕರ ಸಂಸ್ಕ್ರತಿ, ಸಂಪ್ರದಾಯ ಉಳಿವಿಗೆ ಪ್ರಯತ್ನ : ಸದಾನಂದ ಮಾವಜಿ Read More »

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ನಾಲ್ಕನೇ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ (ರಿ.)ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ನಾಲ್ಕನೇ ಕಾರ್ಯಕ್ರಮ ಅರಂತೋಡು ಗ್ರಾಮ ಪಂಚಾಯತಿಯ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ನಡೆಯಿತು.ಗ್ರಾಮ ಪಂಚಾಯತ್ ಅರಂತೋಡು,ಚಂದನ ಯುವತಿ ಮಂಡಲ (ರಿ.) ಅಡ್ತಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆಯ ಸಹಯೋಗದೊಂದಿಗೆ ನಡೆದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಮಿಕ್ಕಿ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಸಹಿತ ಅರಂತೋಡು ಪೇಟೆಯಲ್ಲಿ

ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ನಾಲ್ಕನೇ ಕಾರ್ಯಕ್ರಮ Read More »

ಬಸ್ ಡೋರ್ ತೆಗೆಯಲು ಸತಾಯಿಸಿದ ಡ್ರೈವರ್ : ಪ್ರಯಾಣಿಕರಿಂದ ದೂರು,ಡ್ರೈವರ್ ರೂಟ್ ಬದಲಾವಣೆ

ಸುಳ್ಯ‌ ಕೊಯನಾಡು ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಪ್ರಯಾಣಿಕರು ಬಸ್‌ನಿಂದ ಇಳಿಯಲು ಕೇಳಿಕೊಂಡರೆ ಬಸ್ ಡೋರ್ ತೆಗೆಯದೇ ಸತಾಯಿಸುತ್ತಿರುವ ಕುರಿತು ಸಾರ್ವಜನಿಕರಿಂದ ಡಿಪ್ಪೋ ಮ್ಯಾನೇಜರ್ ರಿಗೆ ದೂರು ಹೋದ ಪರಿಣಾಮ, ವಿಚಾರಣೆ ‌ನಡೆಸಿದ ಅಧಿಕಾರಿಗಳು ಆ ಡ್ರೈವರ್ ರೂಟ್ ಬದಲಾವಣೆ ಮಾಡಿರುವುದಾಗಿ ತಿಳಿದು ಬಂದಿದೆ. ಸುಳ್ಯ – ಕೊಯನಾಡು‌ ನಡುವೆ ಸಂಚಾರಿಸುವ ಕೆ.ಎಸ್.ಆರ್.ಟಿ‌. ಸಿ ಬಸ್ ನಲ್ಲಿ ಚಾಲಕನೋರ್ವ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡುತ್ತಾನೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಪ್ರಯಾಣಿಕರು ಹಲವು ಬಾರಿ

ಬಸ್ ಡೋರ್ ತೆಗೆಯಲು ಸತಾಯಿಸಿದ ಡ್ರೈವರ್ : ಪ್ರಯಾಣಿಕರಿಂದ ದೂರು,ಡ್ರೈವರ್ ರೂಟ್ ಬದಲಾವಣೆ Read More »

ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ

ಚಂದನ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷರಾದ ಸಂಧ್ಯಾ (ಸಾನು ) ಉಬರಡ್ಕ ಅವರ ನೇತೃತ್ವದಲ್ಲಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ದೀಪಾವಳಿ ಕವಿಗೋಷ್ಠಿ-2025” ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಅ. 26ರಂದು ಜರುಗಿತು. ದೀಪಾವಳಿ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಗೌರವಾಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಾನು ಉಬರಡ್ಕ ವಹಿಸಿದ್ದರು.

ಚಂದನ ಸಾಹಿತ್ಯ ವೇದಿಕೆ ವತಿಯಿಂದ ದೀಪಾವಳಿ ಕವಿಗೋಷ್ಠಿ Read More »

ಹಿರಿಯ ಯಕ್ಷಗಾನ ಕಲಾವಿದ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ತಂದೆ ಸುಜನ ಸುಳ್ಯ ಇನ್ನಿಲ್ಲ

ಹಿರಿಯ ಯಕ್ಷಗಾನ ಕಲಾವಿದ ಖ್ಯಾತ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ತೀರ್ಥರೂಪರಾದ ರಂಗಮನೆಯ ಸುಜನಾ ಸುಳ್ಯ ( ಎಸ್.ಎನ್‌.ಜಯರಾಮ)ರವರು ಸೆ.24ರಂದು ಮುಂಜಾನೆ 5.50 ಕ್ಕೆ ವಿಧಿವಶರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ನಿಶ್ಯಕ್ತಿಯಿಂದಿದ್ದ ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹಿರಿಯ ಯಕ್ಷಗಾನ ಕಲಾವಿದ, ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ತಂದೆ ಸುಜನ ಸುಳ್ಯ ಇನ್ನಿಲ್ಲ Read More »

ಅರಂತೋಡು : ಸ್ಕೂಟಿಗಳ ನಡುವೆ ಅಪಘಾತ

ಅರಂತೋಡಿನಲ್ಲಿ ಎರಡು ಸ್ಕೂಟಿಗಳ ನಡುವೆ ಗುರುವಾರ ಅಪಘಾತವಾಗಿ ಸ್ಕೂಟಿಗಳು ಜಖಂಗೊಂಡ ವರದಿಯಾಗಿದೆ.ಕಾಸರಗೋಡು ಮೂಲದ ಕಬೀರ್ ಎಂಬವರು ಮಡಿಕೇರಿಯಿಂದ ಕಾಸಗೋಡಿಗೆ ತೆರಳುತ್ತಿದ್ದಾಗ ತೊಡಿಕಾನ ಕಡೆಯಿಂದ ಬರುತ್ತಿದ್ದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ‌ ನಿವಾಸಿ ಗುಣಶೀಲ ಅವರ ಸಹೋದರ ದೊರೈಸ್ವಾಮಿ ‌.ಪಿ ಅವರ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.ಪರಿಣಾಮವಾಗಿ ಸ್ಕೂಟಿ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಪ್ರಕರಣವ‌ನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಅರಂತೋಡು : ಸ್ಕೂಟಿಗಳ ನಡುವೆ ಅಪಘಾತ Read More »

error: Content is protected !!
Scroll to Top