October 2025

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ ಗೆ ಗ್ರಾಹಕರ ಉತ್ತಮ ಸ್ಪಂದನೆ

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಅ 15 ರಿಂದ ಅ.25 ರವರೆಗೆ ಪ್ರತೀ ಆಭರಣಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ ನೀಡಲಾಗಿದ್ದು ಚಿನ್ನ ಖರೀದಿಯಲ್ಲಿ ಗ್ರಾಹಕರು ಉತ್ತಮ ಸ್ಪಂದನೆ ನೀಡಿದ್ದಾರೆ.ಸ್ವರ್ಣಂ ಜ್ಯುವೆಲ್ಸ್ ನ ಪ್ರತೀ ಆಯೋಜನೆಗೂ ಗ್ರಾಹಕರ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ದೀಪಾವಳಿ ಹಬ್ಬದ ಪ್ರಯುಕ್ತ, ಪ್ರತೀ ಚಿನ್ನದ ಆಭರಣಗಳಿಗೆ ಒಂದು ಪವನ್ ಗೆ ರೂ 3000 ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ಗ್ರಾಹಕರು ಆಯ್ಕೆಯ, ಮನಕ್ಕೊಪ್ಪುವ […]

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ “ಸ್ವರ್ಣಂ ದೀಪಂ ದೀಪಾವಳಿ ವಿಶೇಷ ಆಫರ್ ಗೆ ಗ್ರಾಹಕರ ಉತ್ತಮ ಸ್ಪಂದನೆ Read More »

ಅರಂತೋಡು : ಸಹಕಾರಿ ಸಂಘದ ವತಿಯಿಂದ ಸಿಸಿ ಟಿವಿ ಮಾನಿಟರ್ ಕೊಡುಗೆ

ಅರಂತೋಡು ತೊಡಿಕಾನದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಹಾಗೂ ಸರ್ವ ಸದಸ್ಯರು ಮತ್ತು ಸೊಸೈಟಿಯ ಅಧಿಕಾರಿ ಸಿಬ್ಬಂದಿಗಳು ಸೊಸೈಟಿಯ ವತಿಯಿಂದ ಸುಳ್ಯ ಠಾಣೆಗೆ ಸಿಸಿಟಿವಿ ಮಾನಿಟರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅರಂತೋಡು : ಸಹಕಾರಿ ಸಂಘದ ವತಿಯಿಂದ ಸಿಸಿ ಟಿವಿ ಮಾನಿಟರ್ ಕೊಡುಗೆ Read More »

ಅ.26: ಅರೆಭಾಷೆ ಅಕಾಡೆಮಿಯಿಂದ ಬಡ್ಡಡ್ಕದಲ್ಲಿ ಗ್ರಾಮೋತ್ಸವ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅಕ್ಟೋಬರ್ 26ರ ಭಾನುವಾರದಂದು ಬಡ್ಡಡ್ಕದಲ್ಲಿ ಆಲೆಟ್ಟಿ ಕಲ್ಲಪ್ಪಳ್ಳಿ ವ್ಯಾಪ್ತಿಯ ಗ್ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅರೆಭಾಷೆ ಮತ್ತು ಅರೆಭಾಷೆ ಸಂಸ್ಕೃತಿ ಆಚಾರ ವಿಚಾರಗಳು ಮರೆತು ಹೋಗದಂತೆ ಹಾಗೂ ಭಾಷೆಯ ಮೇಲೆ ಪ್ರೀತಿ ಅಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ಪೀಳಿಗೆಗೆ ಭಾಷೆಯನ್ನು ಕೊಂಡೊಯ್ಯಲು ಭಾಷೆಯನ್ನು ಉಳಿಸಿ ಬೆಳೆಸಿ ಹಬ್ಬಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಅಕಾಡೆಮಿಯು ರೂಪುಗೊಳಿಸಿದೆ.ಇಡೀದಿನ ನಡೆಯುವ ಕಾರ್ಯಕ್ರಮವನ್ನು ಮುಂಜಾನೆ 9.30ಕ್ಕೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ

ಅ.26: ಅರೆಭಾಷೆ ಅಕಾಡೆಮಿಯಿಂದ ಬಡ್ಡಡ್ಕದಲ್ಲಿ ಗ್ರಾಮೋತ್ಸವ Read More »

ತೊಡಿಕಾನ : ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮುಂದಿನ‌ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದಲ್ಲಿ ಅ.18ರಂದು ನಡೆಯಿತು.ಈ ಸಂದರ್ಭದಲ್ಲಿ,ಸಂತೋಷ್ ಕುತ್ತ ಮೊಟ್ಟೆ , ಆನಂದ ಕೆ ಎಲ್ ಕಲ್ಲಗದ್ದೆ ,ಕೆ ಕೆ ನಾರಾಯಣ ಕುಂಟುಕಾಡು’ಚಂದ್ರಶೇಖರ ಬಾಳೆಕಜೆ ,ಕೇಶವ ಯು ಕೆ ಕೊಳಲುಮೂಲೆ ,ದೀಪಕ್ ಕುತ್ತಮೊಟ್ಟೆ ,ರವೀಂದ್ರ ಪೂಜಾರಿ,ವೆಂಕಟ್ರಮಣ ಪೆತ್ತಾಜೆ ‘ತಿಮ್ಮಯ್ಯ ಮೆತ್ತಡ್ಕ, ಹಿಮಕರ ಬಾಳೆಕಜೆ,ಪ್ರಶಾಂತ್ ಕಾಪಿಲ ,ಜಗದೀಶ್ ಬಾಳೆಕಜೆ ,ಗೋಪಾಲಕೃಷ್ಣ ಗುಂಡಿಗದ್ದೆ ,ಮಾಲತಿ ಬೋಜಪ್ಪಮಿಥುನ್ ಹಾಸ್ಪರೆ,ಆಕಾಶ್ ಪಾರೆಪ್ಪಾಡಿ,ಮೋನಪ್ಪ

ತೊಡಿಕಾನ : ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ತಾಯಿಯನ್ನೇ ಹತ್ಯೆಗೈದ ಮಗ

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದಲ್ಲಿ ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ 28 ವರ್ಷದ ವೆಂಕಟೇಶ್ ಗಿರಿಸಾಗರ ಎಂಬಾತ ತನ್ನ 58 ವರ್ಷದ ತಾಯಿ ಶಾವಕ್ಕ ಗಿರಿಸಾಗರ ಅವರ ಕೈಕಾಲು ಕಟ್ಟಿ, ಬಾಯಲ್ಲಿ ಬಟ್ಟೆ ತುರುಕಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಗುರುವಾರ ಈ ಘಟನೆ ನಡೆದಿದ್ದು, ತಾಯಿ ಕೂಲಿ ಮಾಡಿ ತಂದ ಹಣವನ್ನು ಮಗ ಕುಡಿತಕ್ಕೆ ಬಳಸುತ್ತಿದ್ದನು. ಹಣ ಕೊಡಲು ನಿರಾಕರಿಸಿದಾಗ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿ ವೆಂಕಟೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ತಾಯಿಯನ್ನೇ ಹತ್ಯೆಗೈದ ಮಗ Read More »

ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ

ಅಕ್ಟೋಬರ್ 19 2025 ರಂದು ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿ, ಜೆಡ್ಡು ಅಳಿಕೆ ಗ್ರಾಮ ಇಲ್ಲಿ ನಡೆಯಲಿರುವ ಶ್ರೀ ಧನ್ವಂತರಿ ಜಯಂತಿಯ ಶುಭ ಸಂದರ್ಭದಲ್ಲಿ ಕುಮಾರಿ: ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಇವರು ಪ್ರಸಿದ್ಧ ಚಕ್ರ ಕೋಡಿ ಮನೆತನಕ್ಕೆ ಸೇರಿದ ನಿವೃತ್ತ ಶಿಕ್ಷಕ ರಘುರಾಮ ಶಾಸ್ತ್ರಿ ಹಾಗೂ ಖ್ಯಾತ ಸಂಗೀತ ವಿದುಷಿ ಸವಿತಾ ಶಾಸ್ತ್ರಿ ದಂಪತಿಗಳ ಸುಪುತ್ರಿ. ಸಂಗೀತ ಹಾಗೂ ನಾಟ್ಯ ಎರಡರಲ್ಲಿಯೂ ಅತ್ಯಂತ ಪ್ರೌಢಿಮೆಯನ್ನು ಗಳಿಸಿರುವ ಮಾನ್ಯರು ಹಲವಾರು ರಾಜ್ಯ

ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ Read More »

ಸುಳ್ಯ : ತ್ಯಾಜ್ಯ ತೆರವುಗೊಳಿಸಲು ಕಲ್ಚೆರ್ಪೆ ನಿವಾಸಿಗಳಿಂದ ನಗರ ಪಂಚಾಯತ್ ಎದರು ಧರಣಿ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ರಾಶಿ ಹಾಕಲಾದ ಕಸವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ನಗರ ಪಂಚಾಯತ್ ಎದುರು ಧರಣಿ ನಡೆಸಿದರು.ತ್ಯಾಜ್ಯಗಳನ್ನು ತೆರವುಗೊಳಿಸಬೇಕೆಂದುನಗರ ಪಂಚಾಯತ್ ಗೆ ಮನವಿ ಸಲ್ಲಿಸಲು ಸ್ಥಳೀಯ ನಿವಾಸಿಗಳು ಆಗಮಿಸಿದ್ದರು.ಈ ಸಂಧರ್ಭದಲ್ಲಿ ನಗರ ಪಂಚಾಯತ್ ನಲ್ಲಿ ಮನವಿ ಸ್ವೀಕರಿಸಿಲ್ಲವೆಂದು ಕಲ್ಚೆರ್ಪೆ ನಿವಾಸಿಗಳು ಧರಣಿ ಕುಳಿತರು.ಬಳಿಕ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಮುಖ್ಯಾಧಿಕಾರಿ ಬಸವರಾಜು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.ನಂತರ ಕಲ್ಚೆರ್ಪೆ ನಿವಾಸಿಗಳಿಂದ ಮನವಿ ಸ್ವೀಕರಿಸಿದರು. ಸೂಕ್ತ ಭರವಸೆಯ ಬಳಿಕ ಧರಣಿಯನ್ನು ಹಿಂದಕ್ಕೆ ಪಡೆಯಲಾಯಿತು.ಕಲ್ಚೆರ್ಪೆಯ

ಸುಳ್ಯ : ತ್ಯಾಜ್ಯ ತೆರವುಗೊಳಿಸಲು ಕಲ್ಚೆರ್ಪೆ ನಿವಾಸಿಗಳಿಂದ ನಗರ ಪಂಚಾಯತ್ ಎದರು ಧರಣಿ Read More »

ಕಲ್ಚೆರ್ಪೆಯಲ್ಲಿ ಗಬ್ಬೆದ್ದು ನಾರುತ್ತಿದೆ ಸುಳ್ಯ ನಗರದ ಕಸದ ರಾಶಿ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಸುಳ್ಯ ನಗರದ ತ್ಯಾಜ್ಯಗಳನ್ನು  ಬರ್ನಿಂಗ್ ಮಾಡಲಾಗುತ್ತಿದ್ದು ಕಳೆದ ಕೆಲವು ಸಮಯದಿಂದ ತ್ಯಾಜ್ಯಗಳು ಬರ್ನಿಂಗ್ ಆಗದೆ ರಾಶಿ ಬಿದ್ದುಕೊಂಡು ದುರ್ವಾಸನೆ ಬೀರುತ್ತಿದೆ‌.ಸುಳ್ಯ ನಗರದ ಪಂಚಾಯತ್ ವ್ಯಾಪ್ತಿಯ ತ್ಯಾಜ್ಯಗಳನ್ನುಇದೀಗ ನೇರವಾಗಿ   ದಿನ ನಿತ್ಯ ತಂದು ರಾಶಿ ಹಾಕಲಾಗುತ್ತದೆ.ಯಂತ್ರ ಕೆಟ್ಟು ಹೋದ ಹಿನ್ನಲೆಯಲ್ಲಿ ಅವೈಜ್ಞಾನಿಕ ವಾಗಿ ಡಿಸೇಲ್ ಪೆಟ್ರೋಲ್ ಸುರಿದು ಸ್ವಲ್ಪ ಪ್ರಮಾಣದ ಕಸವನ್ನು ಸುಡಲಾಗುತ್ತಿದೆ‌.ಇದರಿಂದ ಸುತ್ತಲ ಪರಿಸರದಲ್ಲಿ ವ್ಯಾಪಕವಾಗಿ ಹೊಗೆ ಕಾಣಿಸಿಕೊಂಡು ಸ್ಥಳೀಯರಿಗೆ ಸಮಸ್ಯೆಯಾಗಿದೆ‌ ಎಂದು ಸ್ಥಳೀಯರು ದೂರಿದ್ದಾರೆ.*ಗಬ್ಬು ವಾಸನೆ*ಕಲ್ಚೆರ್ಪೆ ತ್ಯಾಜ್ಯ ಘಟಕದಲ್ಲಿ

ಕಲ್ಚೆರ್ಪೆಯಲ್ಲಿ ಗಬ್ಬೆದ್ದು ನಾರುತ್ತಿದೆ ಸುಳ್ಯ ನಗರದ ಕಸದ ರಾಶಿ Read More »

ಇಂದು ಹಲವು ಜಿಲ್ಲೆಗಳಲ್ಲಿ ಭಾರೀ ಸುರಿಯುವ ಸಾಧ್ಯತೆ

ಇಂದು (ಅ. 17) ರಾಜ್ಯದ ಹಲವೆಡೆ ಮಳೆಯಾಗುವ ನಿರೀಕ್ಷೆಯಿದ್ದು, 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಬಳ್ಳಾರಿ ,ದ.ಕ‌ ಉಡುಪಿ ಭಾಗದಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಒಣ ಹವೆ ಅಥವಾ

ಇಂದು ಹಲವು ಜಿಲ್ಲೆಗಳಲ್ಲಿ ಭಾರೀ ಸುರಿಯುವ ಸಾಧ್ಯತೆ Read More »

ಅಪ್ರಾಪ್ತ ಯುವತಿಯ ಗರ್ಭಿಣಿಯಾಗಿಸಿದ ಆರೋಪಿಯ ಬಂಧನ

ಅಪ್ರಾಪ್ತ ಯುವತಿಯೊಬ್ಬಳನ್ನು ಗರ್ಭಿಣಿಯಾಗಿಸಿದ ಆರೋಪದಲ್ಲಿ ಯುವಕನೋರ್ವನನ್ನು ಸುಳ್ಯ ‌ಬಂಧಿಸಿದ್ದಾರೆ. ಯುವತಿಯ ಮನೆಯವರ ದೂರಿನ ಮೇರೆಗೆ ಬಂಧಿಸಿರುವುದಾಗಿ ತಿಳಿದು ಬಂದಿದೆ.ಮಂಡೆಕೋಲು ಗ್ರಾಮದ ದಿವಾಕರ ಮತ್ತು ಅದೇ ಗ್ರಾಮದ 14 ವರ್ಷ ಪ್ರಾಯದ ಯುವತಿ ಪ್ರೀತಿಸುತ್ತಿದ್ದರೆನ್ನಲಾಗಿದ್ದು ಯುವಕ ಆಕೆಯನ್ನು ಕೆಲ ತಿಂಗಳ ಹಿಂದೆ ದೈಹಿಕವಾಗಿ ಬಳಸಿಕೊಂಡ ಪರಿಣಾಮ ಆಕೆ ಗರ್ಭಧರಿಸಿದ್ದಾಳೆ. ಕಳೆದ ವಾರ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮನೆಯವರು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಯಿತು. ಬಳಿಕ ಪೋಲೀಸರಿಗೆ ದೂರು ನೀಡಿದರು. ವಿಚಾರಣೆ

ಅಪ್ರಾಪ್ತ ಯುವತಿಯ ಗರ್ಭಿಣಿಯಾಗಿಸಿದ ಆರೋಪಿಯ ಬಂಧನ Read More »

error: Content is protected !!
Scroll to Top