October 2025

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಅಪಾಯಕಾರಿ ಮರಗಳ ತೆರವು

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಹಾಸ್ಪಾರೆ ಎಂಬಲ್ಲಿ ರಸ್ತೆಗೆ ಹಾಗೂ ವಿದ್ಯುತ್ ಲೈನ್ ಗೆ ಬಾಗಿಕೊಂಡಿದ್ದ ಎರಡು ಮರಗಳನ್ನು ತೆರವುಗೊಳಿಸಲಾಯಿತು.ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇದರ ಸದಸ್ಯರ ಉಸ್ತುವಾರಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಅರಂತೋಡು, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯವರ ಸಮನ್ವಯ ಕಾರ್ಯಾಚರಣೆಯೊಂದಿಗೆ ತೆರವುಗೊಳಿಸಲಾಯಿತು.ಅಪಾಯಕಾರಿ ಮರ ತೆರವುಗೊಳಿಸುವಲ್ಲಿ ಅನೇಕ ಮಂದಿ ಸಹಕರಿಸಿದರು.

ಎಲಿಮಲೆ-ಅರಂತೋಡು ಜಿಲ್ಲಾ ಮುಖ್ಯ ರಸ್ತೆಯ ಅಪಾಯಕಾರಿ ಮರಗಳ ತೆರವು Read More »

ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ

ನಾಳೆ ದಿನ (ಅ.17) ಕೊಡಗು ಜಿಲ್ಲೆಯ ಕುಲ ದೇವತೆ, ಆರಾಧ್ಯ ದೇವಿ ಶ್ರೀ ಕಾವೇರಿ ಮಾತೆಯು ಐತಿಹಾಸಿಕ ಹಿನ್ನಲೆಯಂತೆ ವರ್ಷದ ಒಂದು ದಿನವಾದ ತುಲಾ ಸಂಕ್ರಮಣ ದಿನದಂದು ತಲಕಾವೇರಿಯಲ್ಲಿ ಶ್ರೀ ಕಾವೇರಿಯಮ್ಮ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವ ತೀರ್ಥ್ತೋದ್ಭವದ ಸಂಭ್ರಮ, ಸಡಗರದ ಕಾವೇರಿ ಜಾತ್ರೆಯ ಪುಣ್ಯ ದಿನ. ಮಧ್ಯಾಹ್ನ 1ಗಂಟೆ, 44 ನಿಮಿಷದ ಶುಭ ಮುಹೂರ್ತದಲ್ಲಿ ತೀರ್ಥ್ತೋದ್ಭವದ ಆಗಲಿದೆ.ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟಿನ ಇತಿಹಾಸದ ಹಿನ್ನಲೆಯೇ ರೋಚಕ.ಸ್ಕಂದ ಪುರಾಣದಂತೆ ಕವೇರ ಮುನಿಗಳು

ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ Read More »

ಇಹ ಲೋಕ ತ್ಯಜಿಸಿದ ಪ್ರಸಿದ್ಧ ಭಾಗತ ದಿನೇಶ್ ಅಮ್ಮಣ್ಣಾಯ

ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಗುರುವಾರ(ಅ16) ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ಪ್ರಾಯವಾಗಿತ್ತು.ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ಭಾಗವತರಾಗಿ ಕಲಾ ಸೇವೆ ಮಾಡಿ ಯಕ್ಷ ಅಭಿಮಾನಿಗಳ ಮನಗೆದ್ದಿದ್ದರು.ಆ ಕಾಲದ ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರದ್ದು.ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರ‌.ಎಡನೀರು

ಇಹ ಲೋಕ ತ್ಯಜಿಸಿದ ಪ್ರಸಿದ್ಧ ಭಾಗತ ದಿನೇಶ್ ಅಮ್ಮಣ್ಣಾಯ Read More »

ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪಾಪಿ ವೈದ್ಯ

ಬೆಂಗಳೂರು; ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯ 6 ತಿಂಗಳ ಬಳಿಕ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಆರೋಪಿ ವೈದ್ಯನ ನೀಚ ಕೆಲಸ ಬಯಲಾಗಿದ್ದು ಆತನನ್ನು ಉಡುಪಿಯ ಮಣಿಪಾಲದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ಬಂಧಿತ ಆರೋಪಿ‌ ಎಂದು ತಿಳಿದು ಬಂದಿದೆ. ವಿಕ್ಟೋರಿಯಾ ಆಸ್ಪತ್ರೆಯಯಲ್ಲಿ ಸಿಬ್ಬಂದಿಯಾಗಿದ್ದ ಆಗಿದ್ದ ಕೃತಿಕಾ ರೆಡ್ಡಿ ಕೊಲೆಯಾದವರು.ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ

ಪತ್ನಿಯನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪಾಪಿ ವೈದ್ಯ Read More »

ಇಂದು ಭಾರೀ ಮಳೆ ಸಾಧ್ಯತೆ

ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಇಂದೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಮೂರು ದಿನ ಸಾಧಾರಣ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಅಕ್ಟೋಬ‌ರ್ 18ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಇಂದು ಭಾರೀ ಮಳೆ ಸಾಧ್ಯತೆ Read More »

ಪುಣಚ ಗ್ರಾಪಂ ಪ್ರಭಾರ ಪಿಡಿಓ ಆಗಿ ಸಂಪಾಜೆ ಗ್ರಾಮದ ಸೃಜನ್ ಎ.ಜಿ ಅಧಿಕಾರ ಸ್ವೀಕಾರ

ಪುಣಚ ಗ್ರಾಮ ಪಂಚಾಯತ್‌ನ ನೂತನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ರವಿಯವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸೃಜನ್ ಎ.ಜಿಯವರು ಅಧಿಕಾರ ವಹಿಸಿಕೊಂಡಿದ್ದಾರೆ.ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿಯಾಗಿರುವ ಸೃಜನ್‌ರವರು ಈ ಹಿಂದೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮ ಪಂಚಾಯತ್‌ನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲಿಂದ ಪುಣಚ ಗ್ರಾಪಂ ಗೆ ವರ್ಗಾವಣೆಗೊಂಡು ಹೆಚ್ಚುವರಿಯಾಗಿ ಕರೋಪಾಡಿ ಗ್ರಾಪಂನ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ.

ಪುಣಚ ಗ್ರಾಪಂ ಪ್ರಭಾರ ಪಿಡಿಓ ಆಗಿ ಸಂಪಾಜೆ ಗ್ರಾಮದ ಸೃಜನ್ ಎ.ಜಿ ಅಧಿಕಾರ ಸ್ವೀಕಾರ Read More »

ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ.

ಸುಳ್ಯ ಶಿವ ಕೃಪಾ ಸಭಾಭವನದಲ್ಲಿ ಅ. 13ರಂದು ಪ್ರಜಾಧ್ವನಿ ಕರ್ನಾಟಕ ಕೇಂದ್ರೀಯ ಸಮಿತಿ ಸುಳ್ಯ ಇದರ ವಿಶೇಷ ಸಭೆಯು ಸಮಿತಿ ಉಪಾಧ್ಯಕ್ಷರಾದ ಪ್ರವೀಣ್ ಮುಂಡೋಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.ಸಭೆಯಲ್ಲಿ ಮುಂದಿನ ನವಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಆಚರಿಸುವಂತೆ ನಿರ್ಣಯಿಸಲಾಯಿತು.ಸಮಿತಿಯ ವಾರ್ಷಿಕೋತ್ಸವವನ್ನು ಅದೇ ದಿನ ಆಚರಣೆ ಮತ್ತು ಪ್ರಜಾಧ್ವನಿ ಕರ್ನಾಟಕ ಹೆಸರಿನಲ್ಲಿ ನೂತನವಾಗಿ ಯೂಟ್ಯೂಬ್ ಒಂದನ್ನು ಉದ್ಘಾಟನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅಲ್ಲದೇ ಭಾರತದ ಸಂವಿಧಾನದ ವಿಚಾರವಾಗಿ ದೇಶದ ಸರ್ವ ಪ್ರಜೆಗಳು ದೇಶದ ಸಂವಿಧಾನವನ್ನು ರಾಷ್ಟ್ರೀಯ

ಪ್ರಜಾಧ್ವನಿ ಕರ್ನಾಟಕ, ಕೇಂದ್ರೀಯ ಸಮಿತಿ ಸಭೆ. Read More »

ಕೊಯನಾಡು : ಕಾಡಾನೆ ತೋಟಕ್ಕೆ ದಾಳಿ

ಕೊಯನಾಡು ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು ಸ್ಥಳೀಯರ ತೋಟಗಳಿಗೆ ನುಗ್ಗಿಕೃಷಿ ನಾಶ ಮಾಡಿದ ಘಟನೆ ವರದಿಯಾಗಿದೆ.ಮಂಗಳವಾರ ರಾತ್ರಿ ಹಿಂಡಾನೆಗಳು ಇಲ್ಲಿಯ ಕೇನಾಜೆ ಉಲ್ಲಾಸ ಮತ್ತು ಇತರ ತೋಟಕ್ಕೆ ನುಗ್ಗಿ ಕೃಷಿಯನ್ನು‌ ಧ್ವಂಸ ಗೊಳಿಸಿದೆ. ಈ ಭಾಗದಲ್ಲಿ ನಿರಂತರ ಆನೆದಾಳಿಯಿಂದ ಕೃಷಿಕರು ಕಂಗೆಟ್ಟಿದ್ದಾರೆ.

ಕೊಯನಾಡು : ಕಾಡಾನೆ ತೋಟಕ್ಕೆ ದಾಳಿ Read More »

ಶಿರೋಮಣಿ ಅಕಾಲಿ ದಳದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಬಿಜೆಪಿ ಸೇರ್ಪಡೆ

ಚಂಡಿಗಡ್‌ನ ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಅವರು ಮಂಗಳವಾರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಚೀಮಾ ಪಂಜಾಬ್‌ನ ಮಾಜಿ ಸಚಿವ ರಣಧೀರ್ ಸಿಂಗ್ ಚೀಮಾ ಅವರ ಪುತ್ರ. ಅವರು 2012 ರಲ್ಲಿ ಅಮೋಹ್ ಮತ್ತು 2022 ರಲ್ಲಿ ಫತೇಘರ್ ಸಾಹಿಬ್‌ನಿಂದ ಎಸ್‌ಎಡಿ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

ಶಿರೋಮಣಿ ಅಕಾಲಿ ದಳದ ಮಾಜಿ ನಾಯಕ ಜಗದೀಪ್ ಸಿಂಗ್ ಚೀಮಾ ಬಿಜೆಪಿ ಸೇರ್ಪಡೆ Read More »

ಮುಂದಿನ ಆರು ತಿಂಗಳ ಒಳಗಾಗಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಧ್ಯತೆ

ಕರ್ನಾಟಕದಲ್ಲಿ ತಾಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ‌ ತಿಂಗಳ ಒಳಗಾಗಿ ನಡೆಯುಲಿದೆ ಎಂದು ಮಾಹಿತಿ ಲಭ್ಯವಾಗಿದೆ.ನಾಲೈದು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೇ ಸೊರಗಿದ್ದ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಬೃಹತ್ ಬೆಂಗಳೂರು ಪಾಲಿಕೆಯ ಐದು ಉಪಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ಮುಂದಿನ ಚುನಾವಣೆಗೆ ಸಜ್ಜಾಗಲು ಸೂಚನೆ ನೀಡಿದ್ದು, ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಸೂಚನೆ ನೀಡಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ಐದರಿಂದ ಆರು ತಿಂಗಳೊಳಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ

ಮುಂದಿನ ಆರು ತಿಂಗಳ ಒಳಗಾಗಿ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಧ್ಯತೆ Read More »

error: Content is protected !!
Scroll to Top