November 2025

ವಿದ್ಯುತ್ ಕಂಬವೇರಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಪ್ರಭಾರ ಜೆ.ಇ

ಅರಂತೋಡು ಮೆಸ್ಕಾಂ ಶಾಖೆಯ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ ರವರು ಲೈನ್ ದುರಸ್ತಿ ವೇಳೆ ಪವ‌ರ್ ಮ್ಯಾನ್ ಜತೆಗೆ ತಾನೂ ಕೂಡ ಕಂಬ ಹತ್ತಿ ಕೆಲಸ ನಿರ್ವಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನ.10 ರಂದು ಅರಂತೋಡು ಭಾಗಕ್ಕೆ ವಿದ್ಯುತ್‌ ಸಂಪರ್ಕಿಸುವ ಲೈನ್ ನಲ್ಲಿ ಅರಂಬೂರು ಸಮೀಪ ತುರ್ತು ದುರಸ್ತಿ ಆಗಬೇಕಿತ್ತು. ಆ ವೇಳೆಗೆ ಓರ್ವ ಸಿಬ್ಬಂದಿ ಮಾತ್ರ ಇದ್ದ ಹಿನ್ನೆಲೆಯಲ್ಲಿ ಪ್ರಭಾರ ಜೆ.ಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪರಶುರಾಮ ವಳಲಂಬೆ […]

ವಿದ್ಯುತ್ ಕಂಬವೇರಿ ವಿದ್ಯುತ್ ಲೈನ್ ದುರಸ್ತಿ ಮಾಡಿದ ಪ್ರಭಾರ ಜೆ.ಇ Read More »

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ವಿನ್ಯಾ ಪಿ.ಸಿ ಪ್ರಥಮ

ಪಂಜಾಬ್ ನ ಜಾಲಂದರ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ಕು.ವಿನ್ಯಾ ಪಿ.ಸಿ ಪ್ತಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿನ್ಯಾ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮದ ಚೆನ್ನಪ್ಪ ಗೌಡ ಹಾಗೂ ಪವಿತ್ರಾ ದಂಪತಿಗಳ ಪುತ್ರಿ.

ರಾಷ್ಟ್ರ ಮಟ್ಟದ ವಿದ್ಯಾ ಭಾರತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ವಿನ್ಯಾ ಪಿ.ಸಿ ಪ್ರಥಮ Read More »

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ

ಬಳ್ಪ : ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿ ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ. ಸುಬ್ಬಪ್ಪ ಗೌಡ ಎಂಬವರ ಪುತ್ರ ಚನ್ನಕೇಶವ ಜೋಗಿ ಮನೆ (61) ನಾಪತ್ತೆಯಾದವರು. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.ಚೆನ್ನಕೇಶವ ಅವರು ಗಾರೆ ಕೆಲಸಕ್ಕೆಂದು ಹೋಗುತ್ತೆನೆಂದು ಹೇಳಿ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಮನೆಯವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಪತ್ತೆಯಾದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

ಬಳ್ಪ : ಗಾರೆಕೆಲಸಕ್ಕೆ ತೆರಳಿದ ವ್ಯಕ್ತಿ ನಾಪತ್ತೆ Read More »

ಬಾಲಕನ‌ ಶವ ನದಿಯಲ್ಲಿ ಪತ್ತೆ

ಉಡುಪಿ: ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಎಂಬ ಬಾಲಕನ ಮೃತದೇಹವು ಸೋಮವಾರ ಪೆರ್ಡೂರು ಬಳಿಯ ಅಲಂಗಾರು ಹೊಳೆಬಾಗಿಲು ನದಿಯಲ್ಲಿ ಪತ್ತೆಯಾಗಿದೆ.ಶ್ರೀಶಾನ್ ಭಾನುವಾರ ತನ್ನ ಸ್ನೇಹಿತನೊಂದಿಗೆ ಸ್ನಾನ ಮಾಡಲು ನದಿಗೆ ಹೋಗಿದ್ದನು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಭಯಭೀತನಾದ ಅವನ ಸ್ನೇಹಿತನು ನಡೆದ ಸಂಗತಿಯನ್ನು ಬಹಿರಂಗಪಡಿಸಿರಲಿಲ್ಲ.ಸಂಬಂಧಿಕರು ಬಾಲಕನಿಗಾಗಿ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಲಿಲ್ಲ. ನಂತರ, ಪೊಲೀಸರು ಶ್ರೀಶಾನ್ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದಾಗ ಘಟನೆಯ ಬಗ್ಗೆ ತಿಳಿದುಬಂದಿದೆ.ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ‌ ಶವ ನದಿಯಲ್ಲಿ ಪತ್ತೆ Read More »

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸುಂದರಿ ಮುಂಡಡ್ಕ ಆಯ್ಕೆ

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಆದೇಶದ ಮೇರೆಗೆ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಶ್ರೀಮತಿ ಸುಂದರಿ ಮುಂಡಡ್ಕ ಆಯ್ಕೆಯಾಗಿದ್ದಾರೆ‌. ಇವರನ್ನು .ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚಾನ್ ಆಯ್ಕೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಸುಂದರಿ ಮುಂಡಡ್ಕ ಆಯ್ಕೆ Read More »

ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ 15 ಮಂದಿಗೆ ಪೋತ್ಸಾಹಕ ಬಹುಮಾನ

*ಗ್ರಾಹಕರಿಗಾಗಿ ಆರಂಭಿಸಿರುವ  ಸುಲಭ ಖರೀದಿಯ ಕಂತುಗಳ ಯೋಜನೆಯಲ್ಲಿ ನವಂಬರ್  ತಿಂಗಳ 05 ತಾರೀಕಿನ ಒಳಗಾಗಿ ಕಂತುಗಳನ್ನು ಪಾವತಿಸಿ ಪ್ರೋತ್ಸಾಹಿಸಿದ  ಫಲಾನುಭವಿ ಗ್ರಾಹಕರಗಳ ಪೈಕಿ 15 ಅದೃಷ್ಟ ಗ್ರಾಹಕರ ಆಯ್ಕೆಯು ನಡೆದಿದ್ದು , ಈ ಕೆಳಗಿನ ಗ್ರಾಹಕ ಮಿತ್ರರು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ, ಬಂಪರ್ ಬಹುಮಾನದ ಡ್ರಾ ನ. 15 ರಂದು ಸಂಸ್ಥೆಯ ಕಚೇರಿ ಅಂಬೆಟಡ್ಕದಲ್ಲಿ ನಡೆಯಲಿದ್ದು, ಕಾರ್ಡ್ ಪಡೆದು ಯೋಜನೆಯ ಪ್ರಯೋಜನ ಬೇಕಾದವರು ಶೀಘ್ರದಲ್ಲಿ ಪಡೆದು ಕೊಳ್ಳಬೇಕಾಗಿ ವಿನಂತಿ*1.    2149 ವಾಸುದೇವ ಕಾಯರ್ತೋಡಿ2.     3896 ಸುರೇಖಾ ಮದೆನಾಡು3.   

ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ 15 ಮಂದಿಗೆ ಪೋತ್ಸಾಹಕ ಬಹುಮಾನ Read More »

ನಾಳೆ ಅರಮನೆಗಾಯ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ

. ಆರಂತೋಡು ಗ್ರಾಮ ಅಡ್ತಲೆ ವಾರ್ಡ್ನ ಅರಮನೆಗಯಾ ಎಂಬಲ್ಲಿ ಬಲ್ನಾಡ್ ಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಆ ಭಾಗದ ಜನರು ಸುಮಾರು 30ವರ್ಷ ಗಳಿಂದ ಸರಕಾರ ಕ್ಕೆ, ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದರು. ಅದಕ್ಕಾಗಿ ಪ್ರತಿಭಟನೆ, ಮತದಾನ ಬಹಿಷ್ಕಾರ ನಿಲುವು ವ್ಯಕ್ತಪಡಿಸುತ್ತಿದ್ದರು.ಕಳೆದ ವಿಧಾನಸಭಾ ಚುನಾವಣೆ. ಕಳೆದ ನಂತರ ಮಾನ್ಯ ಶಾಸಕರಾದ ಕು l ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿದ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದ್ದರು. ಇದೀಗ ಮಾನ್ಯ ಶಾಸಕರು ಕೊಟ್ಟ ಮಾತಿನಂತೆ ಸರಕಾರದಿಂದ

ನಾಳೆ ಅರಮನೆಗಾಯ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ Read More »

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ ಹಾಗೂ ಪ್ರಬಂಧ ಸ್ಪರ್ಧೆಯ ಫಲಿತಾಂಶ

ನವೆಂಬರ್ 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ “ಅಂಚೆ ಮೂಲಕ ಕಥೆ ಹಾಗೂ ನಾನು ಓದಿದ ಪುಸ್ತಕ” ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಪತ್ರಕರ್ತರಾದ ವಿನೋದ್ ಮೂಡಗದ್ದೆ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಬರಹಗಾರರಾದ ಶ್ರೀಮತಿ ಲತಾಶ್ರೀ ಸುಪ್ರೀತ್

ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ ಹಾಗೂ ಪ್ರಬಂಧ ಸ್ಪರ್ಧೆಯ ಫಲಿತಾಂಶ Read More »

ನ.16 ರಂದು ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ

ನವೆಂಬರ್ 16ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ಎ.ಕೆ ಹಿಮಕರ ರವರಿಗೆ ಅವರ ಮನೆಗೆ ತೆರಳಿ ವೀಳ್ಯ ನೀಡಿ ಆಹ್ವಾನಿಸಲಾಯಿತು.ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪಂಜ ಹೋಬಳಿ ಘಟಕದ ಅಧ್ಯಕ್ಷರಾದ ಬಾಬು ಗೌಡ ಅಚ್ರಪ್ಪಾಡಿ, ಸಂಘಟನಾ ಸಮಿತಿಯ ಕಾರ್ಯದರ್ಶಿ ಹೆಚ್.ಬಿ ಕೇಶವ ಹೊಸೊಳಿಕೆ, ಹೋಬಳಿ ಘಟಕದ ಕಾರ್ಯದರ್ಶಿ

ನ.16 ರಂದು ನಡೆಯಲಿರುವ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ Read More »

ಸುಳ್ಯ : ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆಳ್ವಾಸ್ ಕಾಲೇಜು ಚಾಂಪಿಯನ್- ಎಸ್‌ಡಿಎಂ ಸ್ಪೋರ್ಟ್ಸ್ ರನ್ನರ್

ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು, ಸುಳ್ಯದ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಹಾಗೂ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸಂಘಟನಾ ವತಿಯಿಂದ ಸುಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸಮಾಪನಗೊಂಡಿತು.ಮೂರು ದಿನಗಳ ಕಾಲ ನಡೆದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪಂದ್ಯಾಕೂಟದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು ೬ ವಿಭಾಗದಲ್ಲಿ ಒಟ್ಟು ೧೨೨೦ ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟಕ್ಕೇರಿತ್ತು. ಎಸ್‌ಡಿಎಂ ಸ್ಫೋರ್ಟ್ ಉಜಿರೆ ತಂಡ ೭೫೦ ಅಂಕಗಳನ್ನು ಪಡೆದು ರನ್ನರ್ಸ್

ಸುಳ್ಯ : ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಆಳ್ವಾಸ್ ಕಾಲೇಜು ಚಾಂಪಿಯನ್- ಎಸ್‌ಡಿಎಂ ಸ್ಪೋರ್ಟ್ಸ್ ರನ್ನರ್ Read More »

error: Content is protected !!
Scroll to Top