November 2025

ನ.16ಕ್ಕೆ ವಳಂಬೆಯಲ್ಲಿ ಪಂಜ ಹೋಬಳಿ ಮಟ್ಟದ ಅದ್ದೂರಿ ಸಾಹಿತ್ಯ ಸಮ್ಮೇಳನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯಲಿದೆ ಎಂದುಪಂಜ ಹೋಬಳಿ ಸಾಹಿತ್ಯ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅವರು ನ.8ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆ ಪತ್ರಿಕಾಗೋಷ್ಠಿಯಲ್ಲಿ […]

ನ.16ಕ್ಕೆ ವಳಂಬೆಯಲ್ಲಿ ಪಂಜ ಹೋಬಳಿ ಮಟ್ಟದ ಅದ್ದೂರಿ ಸಾಹಿತ್ಯ ಸಮ್ಮೇಳನ Read More »

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ-2025 ಸಮಾರೋಪ ಮತ್ತು ಸನ್ಮಾನ

ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಭ್ರಮ -2025 ಇದರ ಸಮಾರೋಪ ಸಮಾರಂಭ- ಸನ್ಮಾನ , ಗಾನ ವೈಭವ ಕಾರ್ಯಕ್ರಮ ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಹಾಗೂ ಕುರಲ್ ತುಳುಕೂಟ ದುಗ್ಗಲಡ್ಕ ಇದರ ಸಹಯೋಗದೊಂದಿಗೆ ದುಗ್ಗಲಡ್ಕದ ಅಯ್ಯಪ್ಪ ಭಜನಾ ಭಜನಾ ಮಂದಿರದ ಸಭಾಭವನದಲ್ಲಿ ನ.7 ರಂದು ಸಂಜೆ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಸಮಾರೋಪ ಭಾಷಣ ಮಾಡಿದ ಸು‌ಳ್ಯ ನಗರ ಯೋಜನಾ ಪ್ರಾಧಿಕಾರದ

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ-2025 ಸಮಾರೋಪ ಮತ್ತು ಸನ್ಮಾನ Read More »

2024ರ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2024 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು ಇದೇ ನವೆಂಬರ್ 30 ರಂದು ಬೆಂಗಳೂರಿನ ರವೀಂದ್ರ ಕಲಾಕೇತದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಹಸ್ತಾಂತರಿಸಲಾಗುವುದು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವವನ್ನು ಒಳಗೊಂಡಿರುತ್ತದೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಣೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅವರು ಸುಳ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತ‌ನಾಡಿದರು.2024 ನೇ ಸಾಲಿನ ಪ್ರಶಸ್ತಿಗೆ ಅರೆಭಾಷೆ ಸಾಹಿತಿ ಹಾಗೂ ನಿಘಂಟು ತಯಾರಕರು ಆಗಿರುವ ಕೆ.ಆರ್.

2024ರ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ Read More »

ಮಡಪ್ಪಾಡಿ : ಒಕ್ಕೂಟದ ಮಾಸಿಕ ಸಭೆ ಹಾಗೂ ಕೃಷಿಕರಿಗೆ ಕೃಷಿ ಮಾಹಿತಿ ಕಾರ್ಯಕ್ರಮ

ಸುಳ್ಯ, ಮಡಪ್ಪಾಡಿ – 06 ಅಕ್ಷಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಡಪ್ಪಾಡಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) ಕೇಂದ್ರ ವಿಟ್ಲ3F ಆಯಿಲ್ ಪಾಮ್ ಪ್ರೈ. ಲಿ., ದ. ಕ., ಉಡುಪಿ ಸಹಯೋಗ ದಲ್ಲಿ ಯುವಕ ಮಂಡಲ ಸಭಾಭವನದಲ್ಲಿ ಒಕ್ಕೂಟದ ಮಾಸಿಕ ಸಭೆ ಹಾಗೂ ಕೃಷಿಕರಿಗೆ ಕೃಷಿ ಮಾಹಿತಿ ನೀಡಲಾಯಿತು.ರೈತರ ಬೇಡಿಕೆಯಂತೆ ಪ್ರಮುಖವಾಗಿ ತಾಳೆ, ರೇಷ್ಮೆ ಹಾಗೂ ಗೇರುಕೃಷಿ ಕುರಿತು ಮಾಹಿತಿಯನ್ನು ನೀಡಲಾಯಿತು.*ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಾಣಿ ಎಂ.ಸಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತ

ಮಡಪ್ಪಾಡಿ : ಒಕ್ಕೂಟದ ಮಾಸಿಕ ಸಭೆ ಹಾಗೂ ಕೃಷಿಕರಿಗೆ ಕೃಷಿ ಮಾಹಿತಿ ಕಾರ್ಯಕ್ರಮ Read More »

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ದಿನಾಂಕ 7/11/2025 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಚಂದ್ರಾವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ , ಕಥೆ ಹಾಗೂ ಹಾಡಿನ ಮೂಲಕ ಕನ್ನಡದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ಶ್ರೀಮತಿ.ಗೀತಾಂಜಲಿ ಟಿ.ಜಿ ಅವರು ವಹಿಸಿದ್ದರು.ಪುಟಾಣಿ ಮಕ್ಕಳು ಕನ್ನಡ ಗೀತೆ , ಕನ್ನಡ ಗಾದೆಮಾತುಗಳು , ಕನ್ನಡ ನುಡಿಮುತ್ತುಗಳನ್ನು ಹೇಳಿದರು ಹಾಗೂ ಕನ್ನಡದ ಕುರಿತು ಮಾತನಾಡಿದರು.ಪುಟಾಣಿಗಳಾದ ರಯಾನ್ ಸ್ವಾಗತಿಸಿ , ಶಜ್ನಾ

ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ 70 ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ Read More »

ಸುಳ್ಯ : ವೇಟ್ ಲಿಪ್ಟಿಂಗ್ ಸ್ಪರ್ಧೆಗೆ ಚಾಲನೆ

ಕರ್ನಾಟಕ ರಾಜ್ಯ ವೇಟ್ ಲಿಪ್ಟರ್ಸ್ ಸಂಸ್ಥೆ ಬೆಂಗಳೂರು ಇವರ ಮಾನ್ಯತೆಯೊಂದಿಗೆ ಸುಳ್ಯಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಇದರ ಆಯೋಜನೆಯಲ್ಲಿಸಂಘಟನಾ ಸಮಿತಿ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಚಾಂಪಿಯನ್‌ಶಿಪ್ ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ನಡೆಯುವರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಗೆ ನ. 7 ರಂದು ಚಾಲನೆ ನೀಡಲಾಯಿತು.ಸ್ಟೇಡಿಯಂ ನಲ್ಲಿ 1 ಮತ್ತು 2 ಸಂಖ್ಯೆಯ ಕೋರ್ಟಿನಲ್ಲಿ ಸ್ಪರ್ಧೆಯು ಆರಂಭ ಗೊಂಡಿದೆಸ್ಪರ್ಧೆ ನ. 7ರಿಂದ ಮೂರು ದಿನಗಳು ಸ್ಪರ್ಧೆಯು ನಿರಂತರವಾಗಿ ನಡೆಯಲಿರುವುದು.ರಾಜ್ಯದ ಸುಮಾರು 360 ಮಂದಿ ಸ್ಪರ್ಧಿಗಳು

ಸುಳ್ಯ : ವೇಟ್ ಲಿಪ್ಟಿಂಗ್ ಸ್ಪರ್ಧೆಗೆ ಚಾಲನೆ Read More »

ತೊಡಿಕಾನ‌ : ಮರುವಳ ಸುಶೀಲ ಭಟ್ ನಿಧನ

ಸುಳ್ಯ ತಾಲೂಕು ತೊಡಿಕಾನ ಗ್ರಾಮದ ದಿ. ನಾರಾಯಣ ಭಟ್‌ರವರ ಪತ್ನಿ ಸುಶೀಲ ಭಟ್‌ರವರು ನ. ೭ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ರಾಜೇಂದ್ರಪ್ರಸಾದ್, ಪುತ್ರಿಯರಾದ ವಿಜಯಕುಮಾರಿ, ಶಶಿಕಲಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ತೊಡಿಕಾನ‌ : ಮರುವಳ ಸುಶೀಲ ಭಟ್ ನಿಧನ Read More »

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಕ್ತಾಯ

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವವಧಿ ನ.5ರಂದು ಮುಕ್ತಾಯಗೊಂಡಿದ್ದು ಸರಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಮಾಡಿದೆ. ನ.6ರಂದು ಸುಳ್ಯನಗರ ಪಂಚಾಯತ್ ಗೆ ಸುಳ್ಯ ತಹಶೀಲ್ದಾರ್ ಮಂಜುಳಾ ರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಸುಳ್ಯ ನಗರ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಕ್ತಾಯ Read More »

ಬಾರ್ ನಡೆಸುತ್ತಿದ್ದ ವ್ಯಕ್ತಿಯ ಶವ ನದಿಯ ತಟದಲ್ಲಿ ಪತ್ತೆ

ನೆಲ್ಯಾಡಿಯ ಬಾರೊಂದನ್ನು ನಡೆಸುತ್ತಿದ್ದ ವ್ಯಕ್ತಿಯ ಶವ ನದಿ ತಟದಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಅಭಿಷೇಕ್‌ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ನೆಲ್ಯಾಡಿಯ ಚರಣ್ ಬಾರ್ & ರೆಸ್ಟೋರೆಂಟ್ ಅನ್ನು ಲೀಜ್ ಗೆ ಪಡೆದು ಉದ್ಯಮ ನಡೆಸುತ್ತಿದ್ದರು. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಭೀಷೇಕ್ ಕಂಬಳ ಪ್ರೇಮಿಯಾಗಿದ್ದರು.

ಬಾರ್ ನಡೆಸುತ್ತಿದ್ದ ವ್ಯಕ್ತಿಯ ಶವ ನದಿಯ ತಟದಲ್ಲಿ ಪತ್ತೆ Read More »

ಮುಳ್ಯ : ಮಿನಿಲಾರಿ ಪಲ್ಟಿಯಾಗಿ ಓರ್ವನಿಗೆ ಗಾಯ

ಅಜ್ಜಾವರ ಗ್ರಾಮದ ಮುಳ್ಯದಲ್ಲಿ ಇಂಟರ್ ಲಾಕ್ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ಪಲ್ಟಿಯಾಗಿ ಓರ್ವ ಗಾಯಗೊಂಡ ಘಟನೆ ನ.7ರಂದು ವರದಿಯಾಗಿದೆ.ಇತ್ರೀಚೆಗೆ ಕಾಂತಮಂಗಲ ಸಮೀಪ ಗುತ್ತಿಗಾರು ಗಟ್ಟಿಗಾರಿನ ವ್ಯಕ್ತಿಯೊಬ್ಬರು ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಿದ್ದರು.ಮನೆಯ ಅಂಗಳಕ್ಕೆ ಇಂಟರ್ ಲಾಕ್ ಹಾಕಲು ಮಿನಿಲಾರಿಯಲ್ಲಿ ಇಂಟರ್ ಲಾಕ್ ಸಾಗಾಟ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.

ಮುಳ್ಯ : ಮಿನಿಲಾರಿ ಪಲ್ಟಿಯಾಗಿ ಓರ್ವನಿಗೆ ಗಾಯ Read More »

error: Content is protected !!
Scroll to Top