November 2025

ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಗಣ್ಯರು

ಉಡುಪಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಗಣ್ಯರು ಅವರನ್ನು ಸ್ವಾಗತಿಸಿದರು.ಬೆಳಿಗ್ಗೆ 10.25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಪ್ರಧಾನಮಂತ್ರಿಗಳನ್ನು, ರಾಜ್ಯ ಸರಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌, ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನ‌ರ್ ಸುಧೀರ್ […]

ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಗಣ್ಯರು Read More »

ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿಯ ವಿದ್ಯಾರ್ಥಿನಿ,ಹಲವರ ವಿರುದ್ಧ ಪ್ರಕರಣ ದಾಖಲು!

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ.ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದ ವಿಷಯವನ್ನು ಮುಚ್ಚಿಟ್ಟ ಆರೋಪದ ಮೇಲೆ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತುಗೊಳಿಸಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕ ಹನುಮನಗೌಡ ಬತ್ತಿಯನ್ನು ಬಂಧಿಸಲಾಗಿದೆ. ಶಿಕ್ಷಕರು, ವೈದ್ಯಾಧಿಕಾರಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ

ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿಯ ವಿದ್ಯಾರ್ಥಿನಿ,ಹಲವರ ವಿರುದ್ಧ ಪ್ರಕರಣ ದಾಖಲು! Read More »

ಸಂಪಾಜೆ : ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವು

ಸುಳ್ಯ ತಾಲೂಕಿ ಸಂಪಾಜೆ ಗ್ರಾಮದ ಗಡಿಕಲ್ಲಿ ನಲ್ಲಿ ನ. 27ರಂದು ಸಂಜೆ ವೇಳೆಗೆ ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕಮಲ ಎಂಬವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತುಚಿಕಿತ್ಸೆ ಫಲಿಸದೇ ನವೆಂಬರ್ 27 ರಂದು ರಾತ್ರಿ 11.30 ರ ವೇಳೆಗೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.

ಸಂಪಾಜೆ : ಮಹಡಿ ಮೇಲಿಂದ ಬಿದ್ದು ಮಹಿಳೆ ಸಾವು Read More »

ಅರೆಭಾಷೆ ಬೆಳವಣಿಗೆಗೆ ಅರೆಭಾಷೆ ನಾಟಕ ಅಪ್ಪ ಪೂರಕವಾಗಲಿ : ಡಾ.ಕೆ.ವಿ ಚಿದಾನಂದ

ಅರೆಭಾಷೆ ಬೆಳವಣಿಗೆಗೆ ಅಪ್ಪ ನಾಟಕ ಪೂರಕವಾಗಲಿ.ಅರೆಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಕಾಡೆಮಿ ಆಪ್ ಲಿಬರಲ್ ಏಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಚಿದಾನಂದ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಅರೆಭಾಷೆ ನಾಟಕ ಅಪ್ಪ ಉದ್ಘಾಟನೆ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಅರೆಭಾಷೆ ನಾಟಕ ಅಪ್ಪ ಅತೀ ಹೆಚ್ಚು ಪ್ರದರ್ಶನ ಕಾಣಲು ಅರೆಭಾಷೆ ಅಕಾಡೆಮಿ ಕಡೆಯಿಂದ ಗುರಿ ಇರಿಸಿಕೊಳ್ಳಲಾಗಿದೆ.ಎಲ್ಲಾರು

ಅರೆಭಾಷೆ ಬೆಳವಣಿಗೆಗೆ ಅರೆಭಾಷೆ ನಾಟಕ ಅಪ್ಪ ಪೂರಕವಾಗಲಿ : ಡಾ.ಕೆ.ವಿ ಚಿದಾನಂದ Read More »

ಡಿ.21ಕ್ಕೆ‌‌ ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘ (ರಿ)ತಾಲೂಕು ಮಹಿಳಾ ಘಟಕ ವತಿಯಿಂದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ

ಸುಳ್ಯ:ಗೌಡರ ಯುವ ಸೇವಾ ಸಂಘ (ರಿ)ತಾಲೂಕು ಮಹಿಳಾ ಘಟಕ ವತಿಯಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಸಮುದಾಯದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ ‘ಗೌಡ ಮಹಿಳಾ ಕಪ್’ ಡಿ.21 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಬಳಿಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗೌಡ ಮಹಿಳೆಯರಿಗಾಗಿ ಪ್ರಥಮ ಭಾರಿಗೆ

ಡಿ.21ಕ್ಕೆ‌‌ ಸುಳ್ಯದಲ್ಲಿ ಗೌಡರ ಯುವ ಸೇವಾ ಸಂಘ (ರಿ)ತಾಲೂಕು ಮಹಿಳಾ ಘಟಕ ವತಿಯಿಂದ ಮಹಿಳೆಯರ ಹಗ್ಗಜಗ್ಗಟ ಮತ್ತು ತ್ರೋಬಾಲ್ ಪಂದ್ಯಾಟ Read More »

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ!

✍️ಧನ್ಯಾ ಬಾಳೆಕಜೆಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಐ ಮುಖಾಂತರ ಎಡಿಟ್‌ ಮಾಡಿರುವುದು ಎನ್ನಲಾದ ಫೋಟೋಗಳು ಹರಿದಾಡುತ್ತಿದ್ದವು. ಬೆಳಗ್ಗೆ ಎದ್ದ ಕೂಡಲೇ ಫೇಸ್ಬುಕ್‌ ತೆರೆದಾಗ ಹರಿದಾಡುತ್ತಿದ್ದ ಇಂತಹ ಫೋಟೋಗಳು ನಿಜವೇ ಆಗಿರಬೇಕು ಎನ್ನುವಷ್ಟು ಸಹಜವಾಗಿದ್ದವು ಮತ್ತು ಈಗಲೂ ಅಂತಹ ಫೋಟೋಗಳು ನಿಜವೇ ಇರಬಹುದಲ್ಲವೇ ಎಂಬಷ್ಟು ಗೊಂದಲಗಳು ಮನಸ್ಸಿನೊಳಗೆ ಕೊರೆಯುವಷ್ಟು ಸಹಜವಾದ ಎಡಿಟ್‌ ಮಾಡಲಾದ ಫೋಟೋಗಳವು.ಆ ಫೋಟೋಗಳು ಯಾವುವು, ಅದರಲ್ಲಿದ್ದ ವ್ಯಕ್ತಿಗಳು ಯಾರು ಎಂಬುದೆಲ್ಲ ಇಲ್ಲಿ ಅನಗತ್ಯ. ಆದರೆ ಇಂತಹ ಫೋಟೋಗಳನ್ನು ಸೃಷ್ಟಿ ಮಾಡಲು ಬಳಸಿಕೊಂಡ ತಂತ್ರಜ್ಞಾನದ

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ! Read More »

ಪ್ರಧಾನಿ ಮೋದಿ ಆಗಮನ – ನವೆಂಬರ್ 28 ರಂದು ಶಾಲಾ-ಕಾಲೇಜುಗಳಿಗೆ ರಜೆ

ನವೆಂಬರ್ 28, ಶುಕ್ರವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಪಿಗೆ ಭೇಟಿ ನೀಡಲಿದ್ದಾರೆ. ಶ್ರೀಕೃಷ್ಣ ದೇವರ ದರ್ಶನ ಪಡೆದು, ‘ಲಕ್ಷ ಕಂಠ ಗೀತ ಗಾಯನ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತವು ನಗರದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಪ್ರಧಾನಮಂತ್ರಿಗಳ ಭದ್ರತಾ ವ್ಯವಸ್ಥೆಗಳಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ್ ತಿಳಿಸಿದ್ದಾರೆ

ಪ್ರಧಾನಿ ಮೋದಿ ಆಗಮನ – ನವೆಂಬರ್ 28 ರಂದು ಶಾಲಾ-ಕಾಲೇಜುಗಳಿಗೆ ರಜೆ Read More »

ಕನಿಕರಪಳ್ಳ : ತೆರೇಸಾ ಡಿ.ಸೋಜಾ ನಿಧನ

ಸುಳ್ಯ ನಾವೂರು ಕನಿಕರಪಳ್ಳ ಜೋಸೆಫ್ ಮೊಂತೇರೊ (ಮೇಸ್ತ್ರಿ )ಎಂಬವರ ಪತ್ನಿ ತೆರೇಸಾ ಡಿ.ಸೋಜಾರವರು ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು(ನ.26) ಮುಂಜಾನೆ ನಿಧನರಾದರು.ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತಿ ಮತ್ತು ಪುತ್ರ ಮೊಂತೇರೊ ರವರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯ ನಾಳೆ ಸುಳ್ಯ ಚರ್ಚ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಕನಿಕರಪಳ್ಳ : ತೆರೇಸಾ ಡಿ.ಸೋಜಾ ನಿಧನ Read More »

ಶ್ರದ್ಧಾ, ಭಕ್ತಿಯಿಂದ ನಡೆದ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರದ ವಾದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಬುಧವಾರ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸ ಶ್ರದ್ಧಾ, ಭಕ್ತಿಯಿಂದ ನಡೆಯಿತು.ಚಿಕ್ಕ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರು ಆಸೀನರಾಗಿದ್ದರು. ಬ್ರಹ್ಮರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಆಸೀನರಾಗಿದ್ದರು. ಸುವರ್ಣ ವೃಷ್ಟಿ, ಚಿಕ್ಕ ರಥೋತ್ಸವ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ರಥೋತ್ಸವ ವೇಳೆ ಸಾವಿರಾರು ಭಕ್ತರು ಜಯಘೋಷ ಕೂಗಿದರು. ರಥೋತ್ಸವ ಬಳಿಕ ಷಷ್ಠಿ ಕಟ್ಟೆಯಲ್ಲಿ

ಶ್ರದ್ಧಾ, ಭಕ್ತಿಯಿಂದ ನಡೆದ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹಾರಥೋತ್ಸವ Read More »

ಪೆಲ್ತಡ್ಕ : ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ತೆಂಗು ಇತರ ಬೆಳೆ ನಾಶ

ಸಂಪಾಜೆ ಗ್ರಾಮದ ಪೆಲ್ತಡ್ಕ ಗೋಪಾಲ ಅವರ ತೋಟಕ್ಕೆ ನ. 25ರ ರಾತ್ರಿ ಕಾಡಾನೆಗಳು ತೋಟಕ್ಕೆನುಗ್ಗಿ ಅಪಾರ ಕ್ರಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.ಕಾಡಾನೆಗಳು ತೆಂಗು ಹಾಗೂ ಇತರ ಕ್ರಷಿಗಳ‌ನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ.ಸುಳ್ಯ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ದಾಳಿಯಿಂದ ರೈತರು ಸಮಸ್ಯೆಗೊಳಗಾಗುತ್ತಿದ್ದಾರೆ.

ಪೆಲ್ತಡ್ಕ : ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ತೆಂಗು ಇತರ ಬೆಳೆ ನಾಶ Read More »

error: Content is protected !!
Scroll to Top