December 2025

ಸುಳ್ಯ ಜೇನು ಸೊಸೈಟಿ ಆಧುನಿಕ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳ ಭೇಟಿ

ಸುಳ್ಯದ ಜೇನು ಸೊಸೈಟಿಯ ಆಧುನಿಕ ಸಂಸ್ಕರಣಾ ಘಟಕಕ್ಕೆ ಮಂಗಳೂರಿನ ಕೃಷಿ ಇಲಾಖೆಯ ಜಾಯಿಂಟ್ ಡೈರೆಕ್ಟರ್ ಹೋನಪ್ಪ ಗೌಡ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಹಕಾರಿ ರತ್ನ ಚಂದ್ರ ಕೋಲ್ಚಾರು ಅವರು ಅವರನ್ನು ಸನ್ಮಾನಿಸಿದರು.ಅಧಿಕಾರಿಗಳು ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಉತ್ತಮ ಗುಣಮಟ್ಟದ ಜೇನು ನೈಸರ್ಗಿಕವಾಗಿ ಜೇನು ಹಾಗೂ ಜೇನಿನಿಂದ ತಯಾರಾಗಿರುವ ಹನಿ ಚಾಕೊಲೇಟ್ ಮತ್ತು ಹನಿ ಪೇಪರ್ ಚಾಕೊಲೇಟ್‌ಗಳನ್ನು ಪರಿಶೀಲಿಸಿದರು. ಯಾವುದೇ ಕಲಬೆರಕೆಯಿಲ್ಲದೆ, ಸಂಪೂರ್ಣ […]

ಸುಳ್ಯ ಜೇನು ಸೊಸೈಟಿ ಆಧುನಿಕ ಸಂಸ್ಕರಣಾ ಘಟಕಕ್ಕೆ ಅಧಿಕಾರಿಗಳ ಭೇಟಿ Read More »

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಅಜ್ಜ ಅಜ್ಜಿ ದಿನಾಚರಣೆ ಆಚರಣೆ

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಡಿ.6ರಂದು ಪ್ರತಿ ವರ್ಷದಂತೆ ಈ ಬಾರಿಯು ಅಜ್ಜ – ಅಜ್ಜಿಯರ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಆಗಮಿಸಿ ಅಜ್ಜ ಅಜ್ಜಿಯರ ಜೀವನದ ಮೌಲ್ಯವನ್ನು ತಿಳಿಸಿ ಈ ಶಾಲೆಯಲ್ಲಿಯೇ ಮೊದಲು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದೆಂದು ಪ್ರಶಂಶಿಸಿದರು. ಶಾಲೆಯ ಸಂಚಾಲಕರು ಗೀತಾಂ ಜಲಿಯವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.ಅಜ್ಜ ಅಜ್ಜಿಯರೆಲ್ಲ ಕಥೆ, ಅಭಿನಯಗೀತೆ ,ಮಕ್ಕಳ ಹಾಡನ್ನು ಹಾಡಿ ಮೊಮ್ಮಕ್ಕಳನ್ನು

ಅಂಜಲಿ ಮಾಂಟೆಸ್ಸರಿ ಸ್ಕೂಲ್ ನಲ್ಲಿ ಸುಳ್ಯದಲ್ಲಿ ಮೊದಲ ಬಾರಿಗೆ ಅಜ್ಜ ಅಜ್ಜಿ ದಿನಾಚರಣೆ ಆಚರಣೆ Read More »

ನಾಳೆ ಶಿಕ್ಷಕರ ಅರ್ಹತಾ ಪರೀಕ್ಷೆ

ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)-2025ನೇ ಸಾಲಿನ ಪರೀಕ್ಷೆಯು ಡಿಸೆಂಬರ್ 7ರಂದು ನಡೆಯಲಿದ್ದು, ಅಭ್ಯರ್ಥಿಗಳು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಲಾಗಿದೆ.ಪರೀಕ್ಷೆಯು ಬೆಳಗ್ಗೆ 9.30ರಿಂದ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ 4.30ರವರೆಗೆ ಜರುಗಲಿದೆ. ಅಭ್ಯರ್ಥಿಗಳು ಶೂ ಮತ್ತು ಬೆಲ್ಟ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಇದಲ್ಲದೇ ಪ್ರವೇಶ ಪತ್ರದಲ್ಲಿ ತಮ್ಮ ಸಹಿ ಮತ್ತು ಭಾವಚಿತ್ರ ಪ್ರಕಟವಾಗದಿರುವ, ಸಹಿ ಮತ್ತು ಭಾವಚಿತ್ರ ವ್ಯತ್ಯಾಸವಿರುವ ಅಭ್ಯರ್ಥಿಯು ತನ್ನೊಂದಿಗೆ ಆನ್‌ಲೈನ್ ಅರ್ಜಿ, ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಆಧಾರ್ ಕಾರ್ಡ್,

ನಾಳೆ ಶಿಕ್ಷಕರ ಅರ್ಹತಾ ಪರೀಕ್ಷೆ Read More »

ಪಂಜ : ರಾಜ್ಯಮಟ್ಟದ ಯುವ ಸಂಭ್ರಮಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ನೇತೃತ್ವದಲ್ಲಿ ಜ.17 ಮತ್ತು 18 ರಂದು ಪಂಜದಲ್ಲಿ ರಾಜ್ಯ ಮಟ್ಟದ ಯುವ ಸಂಭ್ರಮ 2025 ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ, ಸಾಂಘಿಕ ಪ್ರಶಸ್ತಿ, ಪಂಚಸಪ್ತತಿ -2025 ಪ್ರಶಸ್ತಿ ವಿತರಣೆ, ರಾಜ್ಯಮಟ್ಟದ ಜನಪದ ಸ್ಪರ್ಧೆ ಹಾಗೂ ಕೃಷಿ ಮೇಳ, ಆಹಾರ ಮೇಳ, ವಾಹನ ಮೇಳ, ವಾಹನ ಸಾಲ ಮೇಳ , ವಸ್ತು ಪ್ರದರ್ಶನ ನಡೆಯಲಿದ್ದು ಈ ಕುರಿತು ಪೂರ್ವ ಸಿದ್ಧತೆಗೆ ಯೋಜನೆ ರೂಪಿಸುವ ಸಲುವಾಗಿ ಡಿ.1 ರಂದು ಪಂಜ

ಪಂಜ : ರಾಜ್ಯಮಟ್ಟದ ಯುವ ಸಂಭ್ರಮಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ Read More »

ಇಲಿ ಪಾಷಾಣ ಸೇವಿಸಿದ ವಿದ್ಯಾರ್ಥಿನಿ ಸಾವು

ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ.ಗುತ್ತಿಗಾರಿನ ಚಿಕ್ಕುಳಿ ನಿವಾಸಿ ಶೇಷಪ್ಪ ಗೌಡರ ಪುತ್ರಿ ಕುಕ್ಕೆ ಸುಬ್ರಹ್ಮಣ್ಯದ ಕಾಲೇಜು ವಿದ್ಯಾರ್ಥಿನಿ ಪೂಜಾ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದಳು. ಅಸ್ವಸ್ಥಗೊಂಡ ಬಳಿಕ ವಿಷಯ ಗೊತ್ತಾಗಿ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಇಲಿ ಪಾಷಾಣ ಸೇವಿಸಿದ ವಿದ್ಯಾರ್ಥಿನಿ ಸಾವು Read More »

ಕಲ್ಲುಗುಂಡಿ : ಆತ್ಮಹತ್ಯೆಗೆ ಯತ್ನಿಸಿ ನೇಣು ಹಾಕಿಕೊಂಡು ಜಿಗಿದ ವ್ಯಕ್ತಿ ಆಸ್ಪತ್ರೆಗೆ ದಾಖಲು

ಅರಂತೋಡು : ಆತ್ಮಹತ್ಯೆಗೆ ಪ್ರಯತ್ನಿಸಿ ನೇಣು ಬಿಗಿದು ಜಿಗಿದ ವ್ಯಕ್ತಿಯ ತಲೆಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿಯಿಂದ ಡಿ.5ರಂದು ವರದಿಯಾಗಿದೆ.ಐವರ್ನಾಡು ಗ್ರಾಮದ ಮಾಧವ ಎಂಬ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿ ಬಿ ದ್ದು ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.ಕಲ್ಲುಗುಂಡಿ ಕೂಲಿಶೆಡ್ ಬಳಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ಕಲ್ಲುಗುಂಡಿ ಅವರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದು ಜಿಗಿದ ಸಂದರ್ಭ ಕೇಬಲ್ ಕಟ್ಟಾಗಿ ನೆಲಕ್ಕೆ ಬಿದ್ದು ತಲೆಗೆ ಗಾಯ ಮಾಡಿಕೊಂಡು

ಕಲ್ಲುಗುಂಡಿ : ಆತ್ಮಹತ್ಯೆಗೆ ಯತ್ನಿಸಿ ನೇಣು ಹಾಕಿಕೊಂಡು ಜಿಗಿದ ವ್ಯಕ್ತಿ ಆಸ್ಪತ್ರೆಗೆ ದಾಖಲು Read More »

ಅರಂತೋಡು: ಡಿಸೆಂಬರ್ 06 2025 ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನ 46 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ 46ನೇ ವರ್ಷದ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಡಿಸೆಂಬರ್ 6,2025 ಶನಿವಾರ ಸಂಸ್ಥೆಯ ಐಶ್ವರ್ಯ ಮದುವೆ ಗದ್ದೆ ಸಭಾಭವನದಲ್ಲಿ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಅಧ್ಯಕ್ಷರಾದ ಡಾ. ಚಿದಾನಂದ .ಕೆ.ವಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಸಂಸ್ಥೆಯ ಆಡಳಿತ ಮಂಡಳಿ ಪ್ಯಾಪುಲರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ದಿವಾಕರ್ ರೈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸರ್ಕಾರಿ ಪದವಿ ಕಾಲೇಜು , ಪುತ್ತೂರು ಪ್ರಾಂಶುಪಾಲರಾದ ಪ್ರೊಫೆಸರ್ ಸುಬ್ಬಪ್ಪ ಕೈಕಂಬ,ದಿಕ್ಸೂಚಿ

ಅರಂತೋಡು: ಡಿಸೆಂಬರ್ 06 2025 ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನ 46 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ Read More »

ʼಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ, ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ: ಚೌಟ

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಕಾರ್ಯಕರ್ತರ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿರುವ ಅತ್ಯಂತ ಗಂಭೀರ ವಿಚಾರವನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದ್ದಾರೆ. ಜಾರಿ ನಿರ್ದೇಶನಾಲಯದ(ಇಡಿ) 2025ರ ನವೆಂಬರ್ 8ರ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಎಸ್‌ಡಿಪಿಐಯು ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿಯಾಗಿ ಕೆಲಸ ಮಾಡುತ್ತಿದೆ.

ʼಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ, ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ: ಚೌಟ Read More »

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2025-26ನೇ ಸಾಲಿನ ವಿವಿಧ ಮಹಿಳಾ ಸಬಲೀಕರಣ ಹಾಗೂ ಪುನರ್ವಸತಿ ಯೋಜನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮಹಿಳೆಯರ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಉದ್ಯೋಗಿನಿ, ಚೇತನ, ಧನಶ್ರೀ ಹಾಗೂ ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಮತ್ತು ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮಹಿಳೆಯರು 2025 ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಳ ಅಡಿಯಲ್ಲಿ ಮಹಿಳೆಯರಿಗೆ 30 ಸಾವಿರದಿಂದ 3 ಲಕ್ಷಗಳವರೆಗೆ ಸಹಾಯ / ಪ್ರೋತ್ಸಾಹ ಧನ

ಉದ್ಯೋಗಿನಿ, ಚೇತನ, ಧನಶ್ರೀ ಯೋಜನೆಗಳಿಗೆ ಅರ್ಜಿ ಆಹ್ವಾನ Read More »

error: Content is protected !!
Scroll to Top