December 2025

ಸಿಡಿಲು ಬಡಿದು ಮರಕ್ಕೆ ಹಾನಿ

ಸುಳ್ಯದಲ್ಲಿ ಡಿ.3ರಂದು ಸುರಿದ ಭಾರಿ ಮಳೆಯ ಸಂದರ್ಭ ಉಂಟಾದ ಸಿಡಿಲ ಅಘಾತದಿಂದ ಸುಳ್ಯ ತಾಲೂಕು ಕಚೇರಿ ಬಳಿ ರಸ್ತೆ ಬದಿಯ ಮರಕ್ಕೆ ಸಿಡಿಲು ಬಡಿದು ಮರ ಹಾನಿಗೊಂಡ ಘಟನೆ ವರದಿಯಾಗಿದೆ.ಈ ಸಮಯದಲ್ಲಿ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತೆ ಆಗಿದೆ.

ಸಿಡಿಲು ಬಡಿದು ಮರಕ್ಕೆ ಹಾನಿ Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನವರ 2026 ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ

ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸುಂತೋಡು ಎಂಪೋರಿಯಂ ಲ್ಲಿರುವ ಸ್ವರ್ಣಂ ಜ್ಯುವೆಲ್ಲರ್ ನಲ್ಲಿ 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಡಿ. 2ರಂದು ನಡೆಯಿತು. ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ ವಿಶ್ವನಾಥರವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭ ಬಿಲ್ಡಿಂಗ್ ಮಾಲಕ ಸೂರಯ್ಯ ಸುಂತೋಡು, ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸಂಸ್ಥೆಯ ಆಡಳಿತ ಪಾಲುದಾರರಾದ ಪ್ರವೀಣ್ ಬಿ. ಗೌಡ, ಸಂಜೀವ, ಲೋಕೇಶ್, ಭವಿತ್, ಸಿಬ್ಬಂದಿ ವರ್ಗ

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನವರ 2026 ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ Read More »

ಸುಳ್ಯ : ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ

ಸುಳ್ಯಕ್ಕೆ ಒಂದಲ್ಲ ಒಂದು ಹೊಸ ತನಗಳು ಪರಿಚಯವಾಗುತ್ತ ಇರುತ್ತವೆ. ಮುಂಬರುವ ಹಬ್ಬಗಳ ಸಂಭ್ರಮ ಸುಳ್ಯ ಜಾತ್ರೋತ್ಸವಕ್ಕೆ ಸುಳ್ಯ ಸಿದ್ದಗೊಳ್ಳುತ್ತಿದ್ದಂತೆ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ ಆಯೋಜನೆಂಡಿದೆ. ಬೆಳಗ್ಗೆಯಿಂದಲೇ ಫುಲ್ ರೆಸ್ಪಾನ್ಸ್ ಕಂಡು ಬರುತ್ತಿದೆ.ಡಿಸೆಂಬರ್ ತಿಂಗಳ 1 ರಿಂದ 15ನೇ ತಾರೀಕಿನ ತನಕ ಬೃಹತ್ ಸಾರಿಗಳ ಮಹಾಸಾಗರ ಅನಾವರಣಗೊಳ್ಳಲಿದ್ದು ಪ್ರತಿಷ್ಠಿತ ಕಂಪೆನಿಗಳ ಸಾರಿಗಳು ಫ್ಯಾಕ್ಟರಿ ದರದಲ್ಲಿ ದೊರೆಯಲಿದೆ. ಎಲ್ಲ ತರಹದ ಸಾರಿಗಳ ಸಂಗ್ರಹವೂ ಇಲ್ಲಿ ಇರಲಿದ್ದು ಪ್ರತೀ ದಿನವೂ ಹೊಸ ಹೊಸ ಸಂಗ್ರಹ ಇರುತ್ತದೆ.

ಸುಳ್ಯ : ಲಯನ್ಸ್ ಸೇವಾ ಸದನದಲ್ಲಿ ಸಿಂಧೂರ ಸಾರಿ ಮೇಳ Read More »

ಟಿಸಿ ನೀಡಲು ವಿಳಂಬ ಮಾಡಿದ್ರೆ ಕಠಿಣ ಕ್ರಮ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ, ಶಿಕ್ಷಣ ಇಲಾಖೆಯು ಎಲ್ಲಾ ಶಾಲೆಗಳಿಗೆ ಅರ್ಜಿ ಸ್ವೀಕರಿಸಿದ 15 ದಿನಗಳಲ್ಲಿ ವರ್ಗಾವಣೆ ಪ್ರಮಾಣಪತ್ರ (TC) ನೀಡುವಂತೆ ಸೂಚಿಸಿದೆ. ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಟಿಸಿ ಸಿಗದಿದ್ದರೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ವಿನಂತಿ ಸಲ್ಲಿಸಬಹುದು. ಈ ಆದೇಶವು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ವರ್ಗಾವಣೆಗೊಳ್ಳುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಬಾಕಿ ಶುಲ್ಕದ ಸಮಸ್ಯೆ ಇದ್ದರೆ, ಬಿಇಒ ಶಾಲೆಗಳಿಗೆ ಸಹಾಯ ಮಾಡುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್

ಟಿಸಿ ನೀಡಲು ವಿಳಂಬ ಮಾಡಿದ್ರೆ ಕಠಿಣ ಕ್ರಮ Read More »

ಋತುಚಕ್ರ ರಜೆ ಸೌಲಭ್ಯ: ಸರ್ಕಾರದಿಂದ ಅಧಿಕೃತ ಆದೇಶ

ಕರ್ನಾಟಕ ಸರ್ಕಾರವು ರಾಜ್ಯದ ಮಹಿಳಾ ನೌಕರರ ಕಲ್ಯಾಣಕ್ಕಾಗಿ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಖಾಯಂ, ಗುತ್ತಿಗೆ, ಮತ್ತು ಹೊರಗುತ್ತಿಗೆ ನೌಕರರಾಗಿರುವ 18 ರಿಂದ 52 ವಯೋಮಿತಿಯ ಮಹಿಳೆಯರಿಗೆ ವೇತನ ಸಹಿತ ಋತುಚಕ್ರ ರಜೆ ಸೌಲಭ್ಯವನ್ನು ಕಲ್ಪಿಸಿ ಅಧಿಕೃತ ಆದೇಶ ನೀಡಲಾಗಿದೆ. ಈ ಸೌಲಭ್ಯದ ಅಡಿಯಲ್ಲಿ, ಮಹಿಳಾ ನೌಕರರು ಪ್ರತಿ ತಿಂಗಳು ಒಂದು ದಿನದಂತೆ, ವಾರ್ಷಿಕವಾಗಿ ಒಟ್ಟು 12 ದಿನಗಳ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ

ಋತುಚಕ್ರ ರಜೆ ಸೌಲಭ್ಯ: ಸರ್ಕಾರದಿಂದ ಅಧಿಕೃತ ಆದೇಶ Read More »

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿ ಆಯ್ಕೆ

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪದ್ಮರಾಜ ಪಟ್ಟಾಜೆಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು 19 ನಿರ್ದೇಶಕರ ಪೈಕಿ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆದು ಸಹಕಾರ ಭಾರತಿ ಬೆಂಬಲಿತ ಎಲ್ಲಾ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.ಡಿ.2ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.ಈ ಸಂದರ್ಭದಲ್ಲಿ ನಿರ್ದೇಶಕರಾದ ಮುರಳೀಕೃಷ್ಣ ಚಳ್ಳಂಗಾರು, ಪುರುಷೋತ್ತಮ ಭಟ್, ಮಹೇಶ್ ಚೌಟ, ದಯಾನಂದ ಹೆಗ್ಡೆ,

ಕ್ಯಾಂಪ್ಕೋ‌ ಅಧ್ಯಕ್ಷರಾಗಿ ಎಸ್. ಆರ್.ಸತೀಶ್ಚಂದ್ರ ಎರಡನೇ ಬಾರಿ ಆಯ್ಕೆ Read More »

ತೊಡಿಕಾನ : ಮನೀಶ್‌ – ಮೈತ್ರಿ ಶುಭವಿವಾಹ

ತೊಡಿಕಾನ ಗ್ರಾಮದ ಮರ್ಪಂಗಲ್ಲು, ಅಮೆಮನೆ ಶ್ರೀಮತಿ ಸೋಜಾವತಿ ಮತ್ತು ದಿ. ಎ.ಜಿ. ವೆಂಕಟ್ರಮಣ ದಂಪತಿಯ ಪುತ್ರ ಮನೀಶ್‌ ಎ.ವಿ. ಯವರ ವಿವಾಹವು ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನಗರ ನಿವಾಸಿ, ಶ್ರೀಮತಿ ಮಂಜುಳ ಮತ್ತು ಕೆ. ಮಹೇಶ್ವರಪ್ಪ ದಂಪತಿಯ ಪುತ್ರಿ ಮೈತ್ರಿ ಕೆ. ಎಂ. ರವರೊಂದಿಗೆ ನ.30ರಂದು ವೀರಶೈವ ಸಾಂಸ್ಕೃತಿಕ ಭವನ, ಜೆ.ಹೆಚ್‌. ಪಟೇಲ್‌ ಬಡಾವಣೆ, ಸೋಮಿನಕೊಪ್ಪ ರಸ್ತೆ, ಶಿವಮೊಗ್ಗದಲ್ಲಿ ನಡೆಯಿತು.ಅತಿಥಿ ಸತ್ಕಾರ ಡಿ. 2 ರಂದು ಆರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.

ತೊಡಿಕಾನ : ಮನೀಶ್‌ – ಮೈತ್ರಿ ಶುಭವಿವಾಹ Read More »

ತೊಡಿಕಾನ : ಮನೀಶ್ – ಮೈತ್ರಿ ಶುಭವಿವಾಹ

ತೊಡಿಕಾನ ಗ್ರಾಮದ ಮರ್ಪಂಗಲ್ಲು, ಅಮೆಮನೆ ಸೋಜಾವತಿ ಮತ್ತು ದಿ. ಎ.ಜಿ. ವೆಂಕಟ್ರಮಣ ದಂಪತಿಯ ಪುತ್ರ ಮನೀಶ್‌ ಎ.ವಿ. ಯವರ ವಿವಾಹವು ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ನಗರ ನಿವಾಸಿ, ಶ್ರೀಮತಿ ಮಂಜುಳ ಮತ್ತು ಕೆ. ಮಹೇಶ್ವರಪ್ಪ ದಂಪತಿಯ ಪುತ್ರಿ ಮೈತ್ರಿ ಕೆ. ಎಂ. ರವರೊಂದಿಗೆ ನ.30ರಂದು ವೀರಶೈವ ಸಾಂಸ್ಕೃತಿಕ ಭವನ, ಜೆ.ಹೆಚ್‌. ಪಟೇಲ್‌ ಬಡಾವಣೆ, ಸೋಮಿನಕೊಪ್ಪ ರಸ್ತೆ, ಶಿವಮೊಗ್ಗದಲ್ಲಿ ನಡೆಯಿತು.ಅತಿಥಿ ಸತ್ಕಾರ ಡಿ. 2 ರಂದು ಆರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.

ತೊಡಿಕಾನ : ಮನೀಶ್ – ಮೈತ್ರಿ ಶುಭವಿವಾಹ Read More »

ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತಿದ್ದಾರೆಂದು ಆರೋಗ್ಯ ರಕ್ಷಾ ಸಮಿತಿಯಿಂದ ಡಾ.‌ಶಾಲಿನಿಯವರಿಗೆ ಗೌರವ

ಸುಳ್ಯ ತಾಲೂಕು ಆಸ್ಪತ್ರೆಯ ಸ್ತ್ರೀರೋಗ ತಜ್ಞರಾಗಿರುವ ಡಾ.ಶಾಲಿನಿಯವರು ಅತ್ಯುತ್ತಮ ಸೇವೆ ನೀಡುತಿದ್ದಾರೆಂಬ ಕಾರಣಕ್ಕೆ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯವರು ಡಿ. 2ರಂದು ಗೌರವಿಸಿದರು.ಕಳೆದ ತಿಂಗಳು 60ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ. 25 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಡಾ. ಶಾಲಿನಿಯವರು ಮಾಡಿದ್ದಾರೆ. ಇವರ ಈ ಸೇವೆಗಾಗಿ ಅವರನ್ನು ಗೌರವಿಸಲಾಗಿದೆ ಎಂದು ರಕ್ಷಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ಶಹೀದ್ ಪಾರೆ ರಾಧಾಕೃಷ್ಣ ಪರಿವಾರಕಾನ, ಚಂದ್ರನ್ ಕೂಟೇಲು, ಅಚ್ಚು ಪ್ರಗತಿ, ಆಸ್ಪತ್ರೆ ಸಿಬ್ಬಂದಿ

ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತಿದ್ದಾರೆಂದು ಆರೋಗ್ಯ ರಕ್ಷಾ ಸಮಿತಿಯಿಂದ ಡಾ.‌ಶಾಲಿನಿಯವರಿಗೆ ಗೌರವ Read More »

ಮಾಜಿ‌ ಶಾಸಕ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜು ನಿಧನ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆಆಗಮಿಸಿದ್ದ ಬೆಂಗಳೂರಿನ ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ (67) ಅವರು ಸೋಮವಾರ ಮೈಸೂರಿನಲ್ಲಿ ಹ್ರದಯಘಾತದಿಂದ ನಿಧನರಾದರು.ಸೋಮವಾರ ಅವರು ಕುಟುಂಬ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ‌ ಶಾಸಕ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜು ನಿಧನ Read More »

error: Content is protected !!
Scroll to Top