December 2025

ಸುಳ್ಯ : ಸುಚಿ 2025’ ಆರೋಗ್ಯ ಅರಿವು ಕಾರ್ಯಕ್ರಮ ಯಶಸ್ವಿ

‘ ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್ ಬೈಲ್, ಸುಳ್ಯ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ- 2025 ಕಾರ್ಯಕ್ರಮದ ಅಂಗವಾಗಿ ‘ಶುಚಿ 2025’ ಆರೋಗ್ಯ ಅರಿವು ಕಾರ್ಯಕ್ರಮವು ದಿನಾಂಕ 13-12-2025ರಂದು ಕಾಲೇಜು ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್ ಬೈಲ್, ಸುಳ್ಯ ಇದರ ವಾಣಿಜ್ಯ ಶಾಸ್ತ್ರ ವಿಭಾಗದ […]

ಸುಳ್ಯ : ಸುಚಿ 2025’ ಆರೋಗ್ಯ ಅರಿವು ಕಾರ್ಯಕ್ರಮ ಯಶಸ್ವಿ Read More »

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ‌ ಭಕ್ತರ ಸಂಖ್ಯೆ ಹೆಚ್ಚಳ

ದಕ್ಷಿಣ ಭಾರತದ ಪ್ರಸಿದ್ದ ನಾಗ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಡಿ.15ರಂದು ಆಗಮಿಸಿದ್ದರು.ದೇವಾಲಯ ಮತ್ತು ಪರಿಸರದಲ್ಲಿ ಭಕ್ತರೇ ತುಂಬಿ ಹೋಗಿದ್ದರು. ದೇವರ ದರ್ಶನಕ್ಕೂ, ಭೋಜನ‌ ಶಾಲೆಯಲ್ಲಿಯೂ ಭಾರೀ ಉದ್ದದ ಸರತಿಯ ಸಾಲು ಕಂಡು ಬಂತು. ದೇವಾಲಯದ ಹೊರಭಾಗದಲ್ಲೂ ಭಕ್ತರೇ ತುಂಬಿದ್ದು, ಪಾರ್ಕಿಂಗ್ ಸ್ಥಳಗಳು ಪೂರ್ಣ ಪ್ರಮಾಣದಲ್ಲಿ ತುಂಬಿ ರಸ್ತೆ ಬದಿ ನಿಲ್ಲಿಸುವ ಪರಿಸ್ಥಿತಿಯೂ ಬಂದಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ‌ ಭಕ್ತರ ಸಂಖ್ಯೆ ಹೆಚ್ಚಳ Read More »

ಡಿ.16ರಿಂದ ಜ.14ರ ತನಕ‌ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳ ಪಕ್ರತಿಯ ರಮಣೀಯ ಹಸಿರ ಸಿರಿಯ ತಾಣದಲ್ಲಿ ಕಂಗೊಳಿಸುತ್ತಿದೆ. ಇಲ್ಲಿ ಡಿ.16ರಿಂದ ಜ. 14.1. 2026ರ ತನಕ ಧನು ಪೂಜೆ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವ ಸ್ಥಾನದಲ್ಲಿ ಅನೇಕ ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈ ಸಿದ್ದು, ಕಳೆದ 2017ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿರುತ್ತದೆ. ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ

ಡಿ.16ರಿಂದ ಜ.14ರ ತನಕ‌ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ Read More »

ಡಿ.16ರಂದು ಸುಳ್ಯದಲ್ಲಿ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶನ

ಸುಳ್ಯ : ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ, ಭಾರತೀಯ ಮದ್ದೂರು ಸಂಘ ಸಂಯೋಜಿತ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸುವ ನಾಟಕ ನಿಜಮಹಾತ್ಮ ಬಾಬಾಸಾಹೇಬ ಪ್ರದರ್ಶನ ಡಿ. ೧೬ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ರಾಷ್ಟ್ರ ಚಿಂತನ ವೇದಿಕೆ ಸುಳ್ಯ ಇದರ ಸಂಚಾಲಕ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.ಅವರು ಡಿ.೧೩ರಂದು .ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪರು ಈ

ಡಿ.16ರಂದು ಸುಳ್ಯದಲ್ಲಿ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶನ Read More »

ಡಿ.25 ಮತ್ತು 26ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಕಾರ್ಯಕ್ರಮ

ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ದಶಂಬರ 25 ಮತ್ತು 26 ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸುಳ್ಯ ಚೆನ್ನಕೇಶವ ದೇವಾಲಯದ ವಠಾರದಲ್ಲಿ ನಡೆಯಲಿದೆ ಎಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ತಿಳಿಸಿದ್ದಾರೆ.ಡಿ.೧೩ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ದ.೨೫ ರಂದು ಬೆಳಿಗ್ಗೆಯಿಂದ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆನ್ನಕೇಶವ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಆಯೋಜಿಸಲಾಗಿದೆ. ಸಂಜೆ ಸಭಾ ಕಾರ್ಯಕ್ರಮಕ್ಕೂ

ಡಿ.25 ಮತ್ತು 26ರಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಕಾರ್ಯಕ್ರಮ Read More »

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ

ಕ್ರೀಡೆಯಿಂದ ಮಾನಸಿಕ- ದೈಹಿಕ ವಿಕಸನ ಸಾಧ್ಯ: ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡಾ ಕೂಟಗಳು ವಿದ್ಯಾರ್ಥಿಗಳ ಮಾನಸಿಕ – ದೈಹಿಕ ವಿಕಸನಕ್ಕೆ ಪೂರಕ ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಸದಾನಂದ ಮಾವಜಿ ಹೇಳಿದರು. ಅವರು ಶನಿವಾರ ನಡೆದ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಸದಾನಂದ ಜಾಕೆ ವಹಿಸಿ, ಮಾತನಾಡಿ,

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವಕ್ಕೆ ಚಾಲನೆ Read More »

ಕ್ಯಾನ್ಸರ್ ಜಾಗೃತಿ ಅಭಿಯಾನ ಅಂಗವಾಗಿ ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ

ಸಂಜೀವಿನಿ ಕ್ಯಾನ್ಸ‌ರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸುಳ್ಯ ವತಿಯಿಂದ ಕ್ಯಾನ್ಸರ್ ಜಾಗೃತಿ ಅಭಿಯಾನ ಇದರ ಅಂಗವಾಗಿ ಡಿ. 13 ರಂದು ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.ಸುಳ್ಯದ ರಥಬೀದಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡರವರು ಡೋಲು ಬಾರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ದಾಮೋದರ ಗೌಡ ನಾರ್ಕೋಡು, ಸುಳ್ಯ ಗೌಡ ಮಹಿಳಾ ಘಟಕದ

ಕ್ಯಾನ್ಸರ್ ಜಾಗೃತಿ ಅಭಿಯಾನ ಅಂಗವಾಗಿ ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ Read More »

ಕಲ್ಚೆರ್ಪೆ : ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 8 ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ನೇಮೋತ್ಸವ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 8 ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ನೇಮೋತ್ಸವವು ಡಿ.12 ರಂದು ಶ್ರದ್ದಾ ಭಕ್ತಿಯಿಂದ ಜರುಗಿತು.ಬ್ರಹ್ಮಶ್ರೀ ವೇದಮೂರ್ತಿ ಬಿ.ಎಸ್.ಎನ್ ಕಡಮಣ್ಣಾಯ ತಂತ್ರಿಯವರ ಮಾರ್ಗದರ್ಶನದಲ್ಲಿ ಪುರೋಹಿತರಾದ ಅಭಿರಾಮ್ ಭಟ್ ಅರಂಬೂರು ರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.ಬೆಳಗ್ಗೆ ಸ್ಥಳ ಶುದ್ಧಿ, ಗಣ ಹೋಮ, ತಂಬಿಲ ಸೇವೆಯಾಗಿ ಮಧ್ಯಾಹ್ನ ಮಹಾಪೂಜೆ ನಡೆದು

ಕಲ್ಚೆರ್ಪೆ : ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 8 ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಗುಳಿಗ ದೈವದ ನೇಮೋತ್ಸವ Read More »

ಅರಂತೋಡು : ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆ ಅವರಿಗೆ ಅದ್ದೂರಿ ಸ್ವಾಗತ

ಅರಂತೋಡು: 35ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ “ಪ್ಲೇಯರ್ ಆಫ್ ದಿ ಮ್ಯಾಚ್” ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ “ಬೆಸ್ಟ್ ಅಟ್ಯಾಕರ್ ಪ್ರಶಸ್ತಿ” ಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆಗೆ ಭಾಜನರಾದ ಸಂಸ್ಥೆಯ ಹೆಮ್ಮೆಯ ಕ್ರೀಡಾಪಟು ದ್ವಿತೀಯ ವಿಜ್ಞಾನ ವಿಭಾಗದ ಕುಮಾರಿ ಚಿಂತನಾ ಪೂಜಾರಿ ಮನೆ ಅವರನ್ನು ಸಂಸ್ಥೆಯ ವತಿಯಿಂದ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಅಲಂಕೃತ ತೆರೆದ ವಾಹನದಲ್ಲಿ

ಅರಂತೋಡು : ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆ ಅವರಿಗೆ ಅದ್ದೂರಿ ಸ್ವಾಗತ Read More »

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ನಡೆಯುವ ವಾರ್ಷಿಕ ಮಜಿಲಿಸ್ ನ್ನೂರ್ ಸಮಸ್ತ 100ನೇ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ 2025, ಡಿಸೆಂಬರ್ 20 ಮತ್ತು 21 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯುವ 7ನೇ ವಾರ್ಷಿಕ ಮಜಿಲಿಸ್ ನ್ನೂರ್, ಸಮಸ್ತ 100 ನೇ ಪ್ರಚಾರ ಸಮ್ಮೀಳನ ಮತ್ತು ಏಕದಿನ ಮತ ಪ್ರಭಾಷಣದ ಪೋಸ್ಟರನ್ನು dd xಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆಯವರು ಬಿಡುಗಡೆಗೊಳಿಸಿದರು. ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ಜತೆ ಕಾರ್ಯದರ್ಶಿ ಅಮೀರ್

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ನಡೆಯುವ ವಾರ್ಷಿಕ ಮಜಿಲಿಸ್ ನ್ನೂರ್ ಸಮಸ್ತ 100ನೇ ಪ್ರಚಾರ ಸಮ್ಮೇಳನದ ಪೋಸ್ಟರ್ ಬಿಡುಗಡೆ Read More »

error: Content is protected !!
Scroll to Top