January 2026

ಪಂಜ : ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಧನುಪೂಜೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಭಾಗಿ

ಪಂಜ ಸಾವಿರ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲ ಕ್ಕೆ ಇಂದು ಧನು ಪೂಜೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ರವರು ಆಗಮಿಸಿ ಧನು ಪೂಜೆಯ ವಿಶೇಷ ಪ್ರಸಾದವನ್ನು ಸ್ವೀಕರಿಸಿದರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ ಧರ್ಮಣ್ಣ ನಾಯ್ಕ ಗರಡಿ, ಪವಿತ್ರ ಮಲ್ಲಿಟ್ಟಿ, ಮಾಲಿನಿ ಕುದ್ವ ಉಪಸ್ಥಿತರಿದ್ದರು

ಪಂಜ : ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಧನುಪೂಜೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಭಾಗಿ Read More »

ವಿದ್ಯಾರ್ಥಿನಿ ಆತ್ಮಹತ್ಯೆ, 6 ಉಪನ್ಯಾಸಕರು ವಜಾ

ಬೆಂಗಳೂರಿನ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಉಪನ್ಯಾಸಕರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಕುಟುಂಬಸ್ಥರು ಹಾಗೂ ಸಹಪಾಠಿಗಳು ಆರೋಪಿಸಿದ್ದರು. ಯಶಸ್ವಿನಿ ಮೈಬಣ್ಣ ಹಾಗೂ ಬಟ್ಟೆ ಬಗ್ಗೆ ನಿಂದನೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಆರು ಉಪನ್ಯಾಸಕರನ್ನು ವಜಾಗೊಳಿಸಿದೆ. ಈ ಸಂಬಂಧ ಪ್ರಾಂಶುಪಾಲರು ಸೇರಿದಂತೆ ಐವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿದ್ಯಾರ್ಥಿನಿ ಆತ್ಮಹತ್ಯೆ, 6 ಉಪನ್ಯಾಸಕರು ವಜಾ Read More »

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿರೋ 3 ಹೆಣ್ಣು ಮಕ್ಕಳ ತಂದೆಗೆ ಬೇಕಿದೆ ಸಹಾಯ ಹಸ್ತ

ಸುಳ್ಯ ತಾ.ನಿಡ್ಯಮಲೆಯ ಯತೀಶ ಎನ್.ಎಂ.ರವರಿಗೆ (45 ವರ್ಷ) ಇತ್ತೀಚೆಗೆ ಅಚಾನಕ್ ಮೆದುಳಿನಲ್ಲಿ ರಕ್ತದ ಗಟ್ಟಿಕೆ (Brain Blood Clot) ಉಂಟಾಗಿ, ಪ್ರಜ್ಞಾಹೀನತೆ ಬಂದಿದೆ. ಇದರ ಪರಿಣಾಮವಾಗಿ ಅವರ ದೇಹದ ಬಲ ಭಾಗ ಸಂಪೂರ್ಣವಾಗಿ ಚಲಿಸಲಾರದ ಸ್ಥಿತಿ ಉಂಟಾಗಿದೆ. ಪ್ರಸ್ತುತ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.ಇವರು ಹಿಂದೆ ರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಆದರೆ ಇದೀಗ ಆರೋಗ್ಯ ಸಮಸ್ಯೆಯಿಂದಾಗಿ ಯಾವುದೇ ಕೆಲಸ ಮಾಡಲು ಸಾಧ್ಯವಾಗದೆ, ಮನೆ

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿರೋ 3 ಹೆಣ್ಣು ಮಕ್ಕಳ ತಂದೆಗೆ ಬೇಕಿದೆ ಸಹಾಯ ಹಸ್ತ Read More »

ಶಾಸಕ ಯತ್ನಾಳ್ ವಿರುದ್ಧ ಬೇಲ್ ರಹಿತ ಬಂಧನ ವಾರೆಂಟ್

ಮಾನಹಾನಿ ಆರೋಪ ಪ್ರಕರಣದಲ್ಲಿ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಸಚಿವ ಶಿವಾನಂದ ಪಾಟೀಲ್ ದಾಖಲಿಸಿರುವ ಖಾಸಗಿ ದೂರು ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಯತ್ನಾಳ್‌ ಗೈರು ಹಾಜರಾಗಿದ್ದರಿಂದ ಈ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಜ.20ಕ್ಕೆ ಮುಂದೂಡಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಯತ್ನಾಳ್ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ

ಶಾಸಕ ಯತ್ನಾಳ್ ವಿರುದ್ಧ ಬೇಲ್ ರಹಿತ ಬಂಧನ ವಾರೆಂಟ್ Read More »

ಅರಂತೋಡು : ಜ.14ಕ್ಕೆ ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ

ಅರಂತೋಡು ಸ್ವಾಮಿ ಕೊರಗಜ್ಜ ದೈವಸ್ಥಾನ ಕೊಡಂಕೇರಿಯಲ್ಲಿ ದಿನಾಂಕ 14-01-2026 ರ ಮಕರ ಸಂಕ್ರಮಣದಂದು ಕಲಶ ಸೇವೆ ಇರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ *ಅನ್ನಸಂತಪ್ರಣೆ ರಾತ್ರಿ ಗಂಟೆ 7:30ಕ್ಕೆ* ನಡೆಯಲಿದೆ.ಈ‌ ದಿವಸ ಅಗೇಲು ಸೇವೆ ಇರುವುದಿಲ್ಲ.ಹಾಗೂ ಶ್ರೀ ಮಿತ್ತೂರು ಉಳ್ಳಾಕುಲು ಮಕ್ಕಳ ಕುಣಿತ ಭಜನೆ ತಂಡ, ಅಮೈಮಡಿಯಾರು ಉಬರಡ್ಕ ಮಿತ್ತೂರು ಮತ್ತುಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಉಬರಡ್ಕ ಮಿತ್ತೂರು ಇವರಿಂದ ಕುಣಿತ ಭಜನೆ ಸಂಜೆ ಗಂಟೆ 6:15 ರಿಂದ 7:30 ರ

ಅರಂತೋಡು : ಜ.14ಕ್ಕೆ ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶ ಸೇವೆ ಮತ್ತು ಕುಣಿತ ಭಜನೆ Read More »

ಭಾ ಕೃ ಅ ಪ ರಾಷ್ಟ್ರೀಯ ಸಸ್ಯಜನ್ಯ ಸಂಪನ್ಮೂಲಗಳ ಬ್ಯೂರೋ (ಎಂ ಬಿ ಪಿ ಜಿ ಆರ್) ಪುಸ ಕ್ಯಾಂಪಸ್ ನವದೆಹಲಿ ವತಿಯಿಂದ ಪರಿಶಿಷ್ಟ ಜಾತಿ ರೈತರಿಗೆ ಜೇನುಪೆಟ್ಟಿಗೆ ವಿತರಣೆ

ಎನ್ ಬಿ ಪಿ ಜಿ ಆರ್ ನವದೆಹಲಿ, ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಸಂಜೀವಿನಿ ಎನ್ ಆರ್ ಎಲ್ ಎಂ ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಸಂಪಾಜೆ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟ ಸಂಪಾಜೆ ಸಹಯೋಗದಲ್ಲಿ ಗ್ರಾಮದ ಪರಿಶಿಷ್ಟ ಜಾತಿಯ ರೈತ ಬಾಂಧವರಿಗೆ ಸಂಸಾರ ಸಮೇತ ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಹನೀಫ್ ಎಸ್ ಕೆ, ಮಾಜಿ ಅಧ್ಯಕ್ಷರಾದ ಜಿಕೆ ಹಮೀದ್, ಪಂಚಾಯತ್ ಸದಸ್ಯರಾದ ಸುಂದರಿ

ಭಾ ಕೃ ಅ ಪ ರಾಷ್ಟ್ರೀಯ ಸಸ್ಯಜನ್ಯ ಸಂಪನ್ಮೂಲಗಳ ಬ್ಯೂರೋ (ಎಂ ಬಿ ಪಿ ಜಿ ಆರ್) ಪುಸ ಕ್ಯಾಂಪಸ್ ನವದೆಹಲಿ ವತಿಯಿಂದ ಪರಿಶಿಷ್ಟ ಜಾತಿ ರೈತರಿಗೆ ಜೇನುಪೆಟ್ಟಿಗೆ ವಿತರಣೆ Read More »

ಕುತ್ಕೂಂಜ : ಮ್ಯಾಟ್ ಕಬಡ್ಡಿ ಪಂದ್ಯಾಟದ ಸಭಾ ಮತ್ತು ಸನ್ಮಾನ ಕಾರ್ಯಕ್ರಮ

ಶಿವಾಜಿ ಯುವಕ ಮಂಡಲ (ರಿ.) ಕೂತ್ಕುಂಜ, ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ (ರಿ.)ಇವರ ಸಹಭಾಗಿತ್ವದಲ್ಲಿ ಪ್ರೋ ಮಾದರಿಯ ಸುಳ್ಯ ವಿಧಾನಸಭಾ ಕ್ಷೇತ್ರದ 8 ತಂಡಗಳ ಸೂರ್ಯ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಜ.10 ರಂದು ಕೂತ್ಕುಂಜ ಅಟಲ್ ಜೀ ಕ್ರೀಡಾಂಗಣದಲ್ಲಿ ನಡೆಯಿತು.ಸಂಜೆ ಸಭಾ ಮತ್ತು ಸನ್ಮಾನ ಸಮಾರಂಭ ನಡೆಯಿತು.ಶಾಸಕಿ ಕು.ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಮೂವತ್ತೈದು ವರ್ಷಗಳಿಂದ ಶಿವಾಜಿ ಯುವಕ ಮಂಡಲ ಅನೇಕ ಸಾಮಾಜಿಕ ಸೇವೆಗಳೊಂದಿಗೆ ಗುರುತಿಸಿ ಕೊಂಡಿದೆ.ಮುಂದೆ ಯುವಕ

ಕುತ್ಕೂಂಜ : ಮ್ಯಾಟ್ ಕಬಡ್ಡಿ ಪಂದ್ಯಾಟದ ಸಭಾ ಮತ್ತು ಸನ್ಮಾನ ಕಾರ್ಯಕ್ರಮ Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.11ರಂದು ವರದಿಯಾಗಿದೆ.ಕರುಣಾಕರ ಕಟ್ಟತ್ತಾರು ( 32)ಎಂಬವರು ಮನೆಯ ಸಮೀಪದ ಕೊಟ್ಟಿಗೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸುತ್ತಿರುವುದಾಗಿ ತಿಳಿದು ಬಂದಿದೆ.

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಇಂದು ಪೇರಡ್ಕ ಗೂನಡ್ಕ ಮಖಾಂ ಉರೂಸ್ ಸಮಾಪ್ತಿ

ಸುಳ್ಯ ತಾಲೂಕಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪೇರಡ್ಕ ಗೂನಡ್ಕ ದರ್ಗಾ ಶರೀಫಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ ಈ ವರ್ಷದ ಸಮಾರೋಪ ಸಮಾರಂಭ ಇಂದು ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಳೆದೆರಡು ದಿನಗಳಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ಧ ವಾಗ್ಮಿಗಳ ಧಾರ್ಮಿಕ ಉಪನ್ಯಾಸ ನಡೆದಿದ್ದು, ಸಮಾರೋಪ ದಿನವಾದ ಇಂದು ಸಯ್ಯಿದ್ ದುಗಲಡ್ಕ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಅಹ್ಮದ್ ನ‌ಈಂ ಮ‌ಅಬರಿ ಫೈಝಿ ಧಾರ್ಮಿಕ ಉಪನ್ಯಾಸ ಮತ್ತು

ಇಂದು ಪೇರಡ್ಕ ಗೂನಡ್ಕ ಮಖಾಂ ಉರೂಸ್ ಸಮಾಪ್ತಿ Read More »

ವೈಭವದಿಂದ ನಡೆದ ಸುಳ್ಶ ಶ್ರೀ ಚೆನ್ನಕೇಶವ ದೇವರ ರಥೋತ್ಸವ

ಸುಳ್ಯ ಶ್ರೀ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಜ.10ರಂದು ವೈಭವದಿಂದ ನಡೆಯಿತು.ದೇವಳದಲ್ಲಿ ಶ್ರೀ ದೇವರ ಉತ್ಸವ ಬಲಿ ಪಲ್ಲಕ್ಕಿ ಸೇವೆಯ ಬಳಿಕ ದೇವರನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿದ ಬಳಿಕ ದೇವರಿಗೆ ದೇವಳದ ತಂತ್ರಿಯವರು ಪೂಜಾ ವಿಧಿ ವಿಧಾನ ನಡೆಸಿದರು.ಬಳಿಕ ರಥದಲ್ಲಿ ಆರೂಢರಾದ ಶ್ರೀ ಚೆನ್ಮಕೇಶವ ದೇವರ ಪಾದಕ್ಕೆ ಗೋವಿಂದ ಕೂಗುತ್ತಾ ಭಕ್ತರು ಬ್ರಹ್ಮರಥ ಎಳೆದರು.ಸಾವಿರಾರು ಭಕ್ತರು ಶ್ರೀ ಚೆನ್ನಕೇಶವ ದೇವರ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಿದರು.

ವೈಭವದಿಂದ ನಡೆದ ಸುಳ್ಶ ಶ್ರೀ ಚೆನ್ನಕೇಶವ ದೇವರ ರಥೋತ್ಸವ Read More »

error: Content is protected !!
Scroll to Top