January 2026

ಆಂಬ್ಯುಲೆನ್ಸ್ ನಲ್ಲಿ‌ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆ

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮಹಿಳೆ ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಇಂದು (ಜ. 15) ಮುಂಜಾನೆ ಪಂಜದಿಂದ ವರದಿಯಾಗಿದೆ.ಕುತ್ಕುಂಜ ಗ್ರಾಮದ ಯೋಗೇಶ್ ಎಂಬವರ ಪತ್ನಿ ಯಶಕಲ ಅವರಿಗೆ ಇಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪಂಜದ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಜೀವರಕ್ಷಕ ಆಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.​ಆದರೆ, ಮುಂಜಾನೆ ಸುಮಾರು 5.10 ರ ವೇಳೆಗೆ ಆಂಬ್ಯುಲೆನ್ಸ್ ಪಂಜ ಪೇಟೆ ಸಮೀಪ ತಲುಪುತ್ತಿದ್ದಂತೆಯೇ […]

ಆಂಬ್ಯುಲೆನ್ಸ್ ನಲ್ಲಿ‌ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ವತಿಯಿಂದ ಸಂಕ್ರಾಂತಿ ಅಂಗವಾಗಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ‌ ಯಶಸ್ವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ವತಿಯಿಂದ ಜ. ೦೭ ರಿಂದ ಜ. ೧೩ರವರೆಗೆ ಮಕರ ಸಂಕ್ರಾಂತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಾಧಿಕಾರಿ ಡಾ|| ಡಿ ವೀರೆಂದ್ರ ಹೆಗ್ಗಡೆಯವರ ಆಶಯದಂತೆ ನಮ್ಮ ಊರು ನಮ್ಮ ಶ್ರದ್ದಾ ಕೇಂದ್ರ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಅನೇಕ ದೇವಸ್ಥಾನ, ದೈವಸ್ಥಾನ,ಸರಕಾರಿ ಶಾಲಾ ಆವರಣ,ಭಜನಾ ಮಂದಿರಗಳ ಆವರಣ ಹಾಗೂ ಇತರೆ ಸ್ಥಳಗಳಲ್ಲಿ ಒಟ್ಟು ೭೬ ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು.ತಾಲೂಕಿನಾದ್ಯಂತ ಒಟ್ಟು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ವತಿಯಿಂದ ಸಂಕ್ರಾಂತಿ ಅಂಗವಾಗಿ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ‌ ಯಶಸ್ವಿ Read More »

ತೊಡಿಕಾನ : ದೇವಳಕ್ಕೆ ಸರಮಾಲೆ ದೀಪ ಕೊಡುಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೊಡಿಕಾನ ಗ್ರಾಮದ ಬಾಲೆಂಬಿ ಹಾಸ್ಪಾರೆ ಮನೆತನದ ಬೋಜಪ್ಪ ಗೌಡ ಮಾಲತಿ ದಂಪತಿ ಪುತ್ರಿ ಚರಿಷ್ಮಾ ಅವರು ರೂ.60 ಸಾವಿರ ಮೂಲ್ಯದ ಸರಮಾಲೆ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಒಟ್ಟು 16 ಸೆಟ್ ಸರಮಾಲೆ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ‌.ಚರಿಷ್ಮಾ ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದಾರೆ.

ತೊಡಿಕಾನ : ದೇವಳಕ್ಕೆ ಸರಮಾಲೆ ದೀಪ ಕೊಡುಗೆ Read More »

ಅರಂತೋಡು :ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶಸೇವೆ,ಕುಣಿತ ಭಜನೆ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ ಜ 14ರಂದು ಮಕರ ಸಂಕ್ರಮಣದಂದು ಕಲಶ ಸೇವೆ ನಡೆಯಿತು.ನಂತರ ಪ್ರಸಾದ ವಿತರಣೆ ನಡೆಯಿತು. ಉಳ್ಳಾಕುಲು ಮಕ್ಕಳ ಕುಣಿತ ಭಜನೆ ತಂಡ, ಅಮೈಮಡಿಯಾರು ಉಬರಡ್ಕ ಮಿತ್ತೂರು ಮತ್ತು ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ಅಮೈಮಡಿಯಾರು ಉಬರಡ್ಕ ಮಿತ್ತೂರು ಇವರಿಂದ ಕುಣಿತ ಭಜನೆ ಕ್ಷೇತ್ರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನೂರಾರು ಭಕ್ತರು ಉಪಸ್ಥಿತರಿದ್ದರು.

ಅರಂತೋಡು :ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಕಲಶಸೇವೆ,ಕುಣಿತ ಭಜನೆ Read More »

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಾರ್ಯಕ್ರಮ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಜ.14ರಂದು ಆಚರಿಸಲಾಯಿತುಮ ಈ ಸಂದರ್ಭದಲ್ಲಿ ಮಕ್ಕಳು ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪು ಧರಿಸಿ ಹಬ್ಬದ ವೈಭವವನ್ನು ಹೆಚ್ಚಿಸಿದರು. ಸಂಕ್ರಾಂತಿಯ ಮಹತ್ವವನ್ನು ಶಾಲಾ ಸಂಚಾಲಕಿ ಶ್ರೀಮತಿ.ಗೀತಾಂಜಲಿ ಮೇಡಂ ಮಕ್ಕಳಿಗೆ ಸರಳವಾಗಿ ವಿವರಿಸಿದರು.ಕಾರ್ಯಕ್ರಮದ ಅಂಗವಾಗಿ ಎಳ್ಳು-ಬೆಲ್ಲ ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೇ ಮಾತನಾಡಿ ಎಂದು ಹಾರೈಸಿದರು. ಕಾರ್ಯಕ್ರಮದ ಕೊನೆಗೆ ಸಂಕ್ರಾಂತಿ ಹಾಡಿಗೆ– ಮಕ್ಕಳು ಉತ್ಸಾಹದಿಂದ ಕುಣಿದು ಸಂತೋಷಪಟ್ಟರು. ಶಿಕ್ಷಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಕಾರ್ಯಕ್ರಮ

ಅಂಜಲಿ ಮಾಂಟೆಸ್ಸರಿ ಸ್ಕೂಲ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಕಾರ್ಯಕ್ರಮ Read More »

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು

ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಮಕರ ಜ್ಯೋತಿಯ ಅದ್ಭುತ ದರ್ಶನವಾಯಿತು. ಸಂಜೆ ಸುಮಾರು 6.30ರಿಂದ 6.45ರ ಸುಮಾರಿಗೆ ಪೊನ್ನಂಬಲಮೇಡುವಿನಲ್ಲಿ ಗೋಚರಿಸಿದ ಜ್ಯೋತಿಯನ್ನು ಕಂಡು ಲಕ್ಷಾಂತರ ಅಯ್ಯಪ್ಪ ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಯೊಂದಿಗೆ ಭಕ್ತಿ ಪರವಶರಾದರು. ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಗಿರಿಯಲ್ಲಿ ದೈವಿಕ ಕಳೆ ತುಂಬಿದ್ದು, ಭಕ್ತಗಣವು ಈ ಪವಿತ್ರ ಕ್ಷಣವನ್ನು ಕಣ್ಣುಂಬಿಕೊಂಡು ಪುನೀತರಾದರು.

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಅಯ್ಯಪ್ಪ ಭಕ್ತರು Read More »

ಪಂಜ : ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಧನುಪೂಜೆ ಸಂಪನ್ನ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಡಿ.16ರಿಂದ ಆರಂಭ ಗೊಂಡ ಧನು ಪೂಜೆ ಜ. 14 ರಂದು ಸಂಪನ್ನ ಗೊಂಡಿತು.ಶ್ರೀ ದೇವರಿಗೆ ಪ್ರಾತಃ ಕಾಲ ರುದ್ರಾಭಿಷೇಕ, ಧನು ಪೂಜೆ,ಮಹಾಪೂಜೆ ಸೇವೆಗಳು, ಭಜನಾ ಸಂಕೀರ್ತನೆ ನಡೆಯಿತು. ಸೀಮೆಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಪ್ರತೀ ದಿನ ಬೆಳಗ್ಗಿನ ಫಲಾಹಾರದ ವ್ಯವಸ್ಥೆ ಇತ್ತು .ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ವ್ಯವಸ್ಥಾಪನಾ ಸಮಿತಿ ಸದಸ್ಯರಾದ,ಧರ್ಮಣ್ಣ ನಾಯ್ಕ ಗರಡಿ,ಮಾಯಿಲಪ್ಪ ಗೌಡ ಪಟ್ಟೆ ಎಣ್ಮರು, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ,

ಪಂಜ : ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದದಲ್ಲಿ ಧನುಪೂಜೆ ಸಂಪನ್ನ Read More »

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಒಂದು ತಿಂಗಳ ಕಾಲ ಶ್ರದ್ದಾ ಭಕ್ತಿಯಿಂದ ನಡೆದ ಧನುಪೂಜೆ ಸಂಪನ್ನ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಕಳೆದ ಡಿ.16ರಿಂದ ಆರಂಭಗೊಂಡ ಧನು ಧನುಪೂಜೆ ಇಂದು ಮಕರ ಸಂಕ್ರಣದಂದು (ಜ.14)ರಂದು ಸಂಪನ್ನಗೊಂಡಿತು. ಸಾವಿರಾರು ಭಕ್ತರು ಧನುಪೂಜೆಯಲ್ಲಿ ಭಾಗವಹಿಸಿದರು.ಪ್ರತಿವರ್ಷ ಧನುಪೂಜೆಯ ಕೊನೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ.ಅಂತೆಯೇ ಈ ವರ್ಷವು ಧನುಪೂಜೆಯ ಕೊನೆಯ ದಿನದಲ್ಲಿ ಭಕ್ತರು‌ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದರು.ಧನುಪೂಜೆಯ ಅಂಗವಾಗಿ ದೇವಳದಲ್ಲಿ ದಿನ ನಿತ್ಯ ಮುಂಜಾನೆ ಭಜನಾ ಸತ್ಸಂಗ ನಡೆಯಿತು. ಮಕರ ಸಂಕ್ರಮಣ ಪ್ರಯುಕ್ತ ಆಯಿರಕೊಡ ಅಭಿಷೇಕ ಮತ್ತು ಸಿಯಾಳಾಭಿಷೇಕ ಹಾಗೂ ಶತರುದ್ರಾಭಿಷೇಕ ರಾತ್ರಿ ರಂಗಪೂಜೆ

ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ಒಂದು ತಿಂಗಳ ಕಾಲ ಶ್ರದ್ದಾ ಭಕ್ತಿಯಿಂದ ನಡೆದ ಧನುಪೂಜೆ ಸಂಪನ್ನ Read More »

ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ

ಮಂಗಳೂರು: ಕರಾವಳಿ ಕರ್ನಾಟಕದ ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿ, ಮಂಗಳೂರು ಬೈಪಾಸ್‌ ಮೂಲಕ ಹಾದು ಹೋಗುವ ಸುರತ್ಕಲ್–ಬಿ.ಸಿ.ರೋಡ್‌ ಹೆದ್ದಾರಿ ಅಗಲೀಕರಣ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಎಚ್–66ರ ಹೆದ್ದಾರಿಯಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸಲು ಇದೀಗ ಅನುಮೋದನೆ ದೊರೆತಿದೆ. ಆ ಮೂಲಕ, ಕರಾವಳಿ ಜನರ ಬಹು ದಿನಗಳ ಬೇಡಿಕೆ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪರಿಶ್ರಮಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ. ಈ ಹೆದ್ದಾರಿಗಳು

ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ Read More »

ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ

ತೋಟಗಾರಿಕೆ ಇಲಾಖೆ ದಕ್ಷಿಣ ಕನ್ನಡ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಸುಳ್ಯ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇವರ ಸಹಯೋಗ ದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಗುಚ್ಛ ದ ರೈತರಿಗೆ ಸಾವಯವ ಕೃಷಿ, ಪಿ ಜಿ ಎಸ್ ದೃಡೀಕರಣ ಹಾಗೂ ಬೆಳೆ ರೋಗ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮ ಹಾಗೂ ಮಾಹಿತಿ ಕಾರ್ಯಾಗಾರ ಪಂಜ ಲಯನ್ಸ್ ಸಭಾಭವನ ದಲ್ಲಿ ಜ.13 ರಂದು ನಡೆಯಿತು. ಪರಿವಾರ ಪಂಜ ರೈತ ಉತ್ಪಾದಕ ಕಂಪನಿ

ಪರಂಪರಾಗತ ಕೃಷಿ ವಿಕಾಸ ಯೋಜನೆ ಮಾಹಿತಿ ಕಾರ್ಯಗಾರ Read More »

error: Content is protected !!
Scroll to Top