March 2026

ಬೈಕ್‌ಗೆ ಕಾರು ಡಿಕ್ಕಿ; ಸವಾರ ಚಿದಾನಂದ ಗೌಡ ಸಾವು

ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಸಮೀಪದ 34 ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ಭಾನುವಾರ ನಡೆದಿದೆ. ಬಂದಾರು ಗ್ರಾಮದ ಕುರಾಯ ನಿವಾಸಿ, ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಚಿದಾನಂದ ಗೌಡ (56) ಮೃತ ಬೈಕ್ ಸವಾರ. ಚಿದಾನಂದ ಗೌಡರವರು ಕಾರ್ಯನಿಮಿತ್ತ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಬೊಳ್ಳಾರ್ ಎಂಬಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಲ್ಲಿ ಅವರು ಚಿಕಿತ್ಸೆಗೆ […]

ಬೈಕ್‌ಗೆ ಕಾರು ಡಿಕ್ಕಿ; ಸವಾರ ಚಿದಾನಂದ ಗೌಡ ಸಾವು Read More »

ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ

ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ಇಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಡ್ಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಬೇಡಿಕೆ ಅಹವಾಲುಗಳ ಬಗ್ಗೆ ಚರ್ಚಿಸಿ ಮಾತನಾಡಿ ಸುಳ್ಯದ ಜನತೆ ಪ್ರೀತಿ ನೀಡಿದ್ದಾರೆ. ತಮ್ಮ ಅಭಿಮಾನ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ತಮ್ಮ ಸಮಸ್ಯೆ ಅಹವಾಲುಗಳಿಗೆ ಬ್ಲಾಕ್ ಅಧ್ಯಕ್ಷರು ಮತ್ತು ಪಕ್ಷದ ನಾಯಕರೊಂದಿಗೆ ಸ್ಪಂದಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಕೆಪಿಸಿಸಿ ಸದಸ್ಯ, ಉದ್ಯಮಿ ಹೆಚ್ ಎಂ ನಂದಕುಮಾರ್ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ Read More »

ಸುಳ್ಯ : ಕಲ್ಕುಡ,ಕಲ್ಲುರ್ಟಿ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದ ನೂತನ ಶಿಲಾಮಯ ಗುಡಿಯ ನಿರ್ಮಾಣದ ಪೂರ್ವ ಭಾವಿಯಾಗಿ ಶ್ರೀ ಕಲ್ಕುಡ,ಕಲ್ಲುರ್ಟಿ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಮಾ. 9 ರಂದು ಜರುಗಿತು.ದೇಲಂಪಾಡಿ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿ ಯವರ ಮಾರ್ಗದರ್ಶನದಲ್ಲಿ ಪೂರ್ವಾಹ್ನ ಸಾನಿಧ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆದು 10.47 ರ ಮುಹೂರ್ತದಲ್ಲಿ ಪ್ರಾರ್ಥನೆ ನೆರವೇರಿಸಿ ಮೂಲಸ್ಥಾನದ ಗುಡಿಯಿಂದ ಶ್ರೀ ಕಲ್ಕುಡ ಮತ್ತು ಸಹಪರಿವಾರ ದೈವಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಅಭಿಷೇಕವಾಗಿ ಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಈ ಸಂದರ್ಭದಲ್ಲಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ

ಸುಳ್ಯ : ಕಲ್ಕುಡ,ಕಲ್ಲುರ್ಟಿ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ Read More »

ಜಾತಿ ಭೇದ ಭಾವ ಬಿಟ್ಟು ಹಿಂದುಗಳಾದ ನಾವು ಒಗ್ಗಟ್ಟಿನಿಂದ ಶ್ರದ್ಧಾ ಕೇಂದ್ರದಲ್ಲಿ ದುಡಿಯಬೇಕು : ಮಾಣಿಲಶ್ರೀ

ಜಾತಿ ಭೇದ ಭಾವ ಬಿಟ್ಟು ಹಿಂದುಗಳಾದ ನಾವು ಒಗ್ಗಟ್ಟಿನಿಂದ ಶ್ರದ್ಧಾ ಕೇಂದ್ರದಲ್ಲಿ ದುಡಿಯಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಸೋಣಂಗೇರಿ ಶ್ರೀ ಕೃಷ್ಣ ಭಜನಾ ಜೀರ್ಣೊದ್ದಾರಗೊಳ್ಳುತ್ತಿದ್ದು ಇದರ ವೀಕ್ಷಣೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾ.9 ರಂದು ಭೇಟಿ ನೀಡಿ ಆಶೀರ್ವಾಚನ ನೀಡಿದರು.ಜಾತಿ ಭೇದ ಭಾವ ಮೇಲು ಕೀಳು ಎಂಬುದು ಹಿಂದು ಧರ್ಮಕ್ಕೆ ಇರುವ ಹಿನ್ನಡೆ.ಹಾಗೆಯೇ ಜಾತಿ ಬೇದ ಭಾವ, ಮೇಳು-ಕೀಳು, ಮದ-ಮತ್ಸರವನ್ನು ಬಿಟ್ಟು ಇನ್ನೊಬ್ಬರ ಏಳಿಗೆ ಮತ್ತು ಸಂತೋಷದಲ್ಲಿ

ಜಾತಿ ಭೇದ ಭಾವ ಬಿಟ್ಟು ಹಿಂದುಗಳಾದ ನಾವು ಒಗ್ಗಟ್ಟಿನಿಂದ ಶ್ರದ್ಧಾ ಕೇಂದ್ರದಲ್ಲಿ ದುಡಿಯಬೇಕು : ಮಾಣಿಲಶ್ರೀ Read More »

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ 2026 ಖರ್ಚು ವೆಚ್ಚಗಳ ಸಭೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ 2026 ಖರ್ಚು ವೆಚ್ಚಗಳ ಸಭೆ ಮಾ.9ರಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ಇವರ ಅಧ್ಯಕ್ಷತೆಯಲ್ಲಿ ದೇಗುಲದಲ್ಲಿ ಜರುಗಿತು ವೇದಿಕೆಯಲ್ಲಿ ವ್ಯವಸ್ತಾಪನ ಸಮಿತಿಯ ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ, ಪರಮೇಶ್ವರ ಗೌಡ ಬಿಳಿಮಲೆ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಫಲತಡ್ಕ ಮೈಲಪ್ಪ ಗೌಡ ಎಣ್ಮೂರು ಪಟ್ಟೆ, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಮಾಲಿನಿ ಕುದ್ವ, ಪವಿತ್ರ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ 2026 ಖರ್ಚು ವೆಚ್ಚಗಳ ಸಭೆ Read More »

ಪುತ್ತೂರು : ಭಾ.ಕೃ. ಸಂ. ಪ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಭಾ. ಕೃ. ಸಂ. ಪ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಮತ್ತು ಲೀಲಾವತಿ ಟಿ ಅಡ್ವೊಕೇಟ್ ಪುತ್ತೂರು ಇವರನ್ನು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಡಾ. ದಿನಕರ್ ಅಡಿಗ ಹಾಗೂ ಡಾ. ಕೆ.ವನಿತಾ ವಿಜ್ಞಾನಿಗಳು ಸನ್ಮಾನಿಸಿ ಗೌರವಿಸಿದರು. ಸುಳ್ಯ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ)ಅವರು ICAR–DCR ಪುತ್ತೂರು ವತಿಯಿಂದ ಆಯೋಜಿಸಲಾದ ತರಬೇತಿಗಳಲ್ಲಿ ಸಕ್ರಿಯವಾಗಿ

ಪುತ್ತೂರು : ಭಾ.ಕೃ. ಸಂ. ಪ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ Read More »

ಅರಂತೋಡು ಉಮ್ರಾ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ

ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಜಮಾಅತ್ ಸದಸ್ಯರಾದ ಎ.ಎ ಅಬೂಬಕ್ಕರ್ ಸಿದ್ಧೀಕ್ ಹಾಗೂ ಎ.ಎ ತೆಯ್ಯುಬ್ ಇವರನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಪರವಾಗಿ ಬೀಳ್ಕೊಡಲಾಯಿತು.ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿ ಯಾತ್ರಾರ್ಥಿಗಳಿಗೆ ಶುಭಕೋರಿದರು. ಕಾರ್ಯದರ್ಶಿ ಕೆ.ಎಂ ಮೂಸಾನ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಅಮೀರ್ ಕುಕ್ಕುಂಬಳ, ಕೆ.ಎಂ ಮೊಯಿದು ಕುಕ್ಕುಂಬಳ, ಎ ಹನೀಫ್, ಮುಜೀಬ್, ಎ.ಅಬ್ದುಲ್ಲ ಮಾಸ್ತರ್,

ಅರಂತೋಡು ಉಮ್ರಾ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ Read More »

ನಾಳೆ (ಮಾ.9) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವದ ಖರ್ಚು ವೆಚ್ಚಗಳ ಸಾರ್ವಜನಿಕ ಸಭೆ

ನಾಳೆ (ಮಾ.9) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವದ ಖರ್ಚು ವೆಚ್ಚಗಳ ಸಾರ್ವಜನಿಕ ಸಭೆ ನಾಳೆ ಸಂಜೆ 5ಗಂಟೆಗೆ ದೇಗುಲದ ಪಾರ್ವತಿ ಸಭಾ ಭವನದಲ್ಲಿ ನಡೆಯಲಿದೆ .ಭಕ್ತಾಭಿಮಾನಿಗಳು ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್ ವಿನಂತಿಸಿರುತಾರೆ

ನಾಳೆ (ಮಾ.9) ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವದ ಖರ್ಚು ವೆಚ್ಚಗಳ ಸಾರ್ವಜನಿಕ ಸಭೆ Read More »

ನಾಳೆ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭೇಟಿ

ನಾಳೆ(ಮಾ.9) ಸೋಣoಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆಶ್ರೀ ಮೋಹನದಾಸ ಪರಮಹoಸ ಸ್ವಾಮೀಜಿ ಮಾಣಿಲ ಶ್ರೀಧಾಮ ಇವರು ಬೆಳ್ಳಿಗೆ 10ಗಂಟೆಗೆ ಮಂದಿರ ವೀಕ್ಷಣೆಗೆ ಭೇಟಿ ನೀಡಲಿದ್ದಾರೆ.ಎಲ್ಲಾ ಊರಿನ ಭಕ್ತ ಅಭಿಮಾನಿಗಳು ಭಾಗವಹಿಸಬೇಕೆಂದು ಮಂದಿರದಿಂದ ಪದಾಧಿಕಾರಿಗಳು ಕೋರಿದ್ದಾರೆ.

ನಾಳೆ ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರಕ್ಕೆಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಭೇಟಿ Read More »

ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ

ಸುಳ್ಯದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಚಿನ್ನದ ಮಳಿಗೆ ಸ್ವರ್ಣಂ ಜ್ಯುವೆಲ್ಲರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.೮ರಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.ಶ್ರಮಜೀವಿಗಳಾದ ಖಾಸಗಿ ಬಸ್ ನಿರ್ವಾಹಕಿ ಜಯಂತಿ, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಪುಷ್ಪಾವತಿ ಆಲೆಟ್ಟಿ, ಗೀತಾ ಜಯನಗರ, ಅಟೋ ಚಾಲಕಿ ಶ್ರೀಮತಿ ಗೀತಾ ಜಯನಗರ, ಪೌರ ಕಾರ್ಮಿಕೆಯವರಾದ ಶ್ರೀಮತಿ ಮಾಲಾಬಾಯಿ, ಶ್ರೀಮತಿ ಮಮತಾ, ಶ್ರೀಮತಿ ಲತಾರವರನ್ನು ಸುಳ್ಯ ಪಯಸ್ವಿನಿ ಜೇಸಿಐ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಸ್ವರ್ಣಂ ವತಿಯಿಂದ ನೀಡಿದ ಸೀರೆ,

ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ Read More »

error: Content is protected !!
Scroll to Top