March 2026

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ : ಶಾಸಕಿ ಭಾಗೀರಥಿ ಮುರುಳ್ಯ

ಬ್ರಿಟಿಷ ವಿರುದ್ಧ ಹೋರಾಟ ಮಾಡಿದಸಮರವೀರ ಕೆದಂಬಾಡಿ ರಾಮಯ್ಯ ಗೌಡರನ್ನು ನೆನಪಿಸುವ ಮೂಲಕ ಅವರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಾ. 31 ರಂದು ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಬೆಳ್ಳಾರೆಯಲ್ಲಿ ರಾಮಯ್ಯ‌ಗೌಡರ ಪತ್ಥಳಿ ಸ್ಥಾಪನೆ ಮಾಡುವುದರ ಮೂಲಕ ಬೆಳ್ಳಾರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಬೇಡಿಕೆ ಇದೆ.ಈ ನಿಟ್ಟಿನಲ್ಲಿ ಇಲ್ಲಿಗೆ ರೂ.25ಕೋಟಿ […]

ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಮುಂದಿನ‌ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕು‌ : ಶಾಸಕಿ ಭಾಗೀರಥಿ ಮುರುಳ್ಯ Read More »

ಕೊರಗ ಸಮುದಾಯ ಸಬಲೀಕರಣಕ್ಕೆ ಉತ್ತೇಜನ: ಸಮುದಾಯಕ್ಕೆ ಸೀಲಿಂಗ್ ಯಂತ್ರ ವಿತರಣೆ

ಸುಳ್ಯ, ಮಾ.28: ಅರಂತೋಡು ಗ್ರಾಮದ ಪ್ರಕೃತಿ ವನ್ ಧನ್ ವಿಕಾಸ್ ಕೇಂದ್ರದ ಮೂಲಕ ಆದಿವಾಸಿ ಸಮುದಾಯಗಳ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿ ₹41,000 ಮೌಲ್ಯದ ಸೀಲಿಂಗ್ ಯಂತ್ರವನ್ನು ವಿಶೇಷವಾಗಿ ದುರ್ಬಲ ಆದಿವಾಸಿ ಗುಂಪಾದ ಕೊರಗ ಸಮುದಾಯಕ್ಕೆ ವಿತರಿಸಲಾಯಿತು.ಕೇಂದ್ರ ಸರ್ಕಾರದ ಗಿರಿಜನ ವ್ಯವಹಾರಗಳ ಸಚಿವಾಲಯದ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಅರಣ್ಯ ಸಂಪನ್ಮೂಲಗಳ ಸತತ ಬಳಕೆಯ ಮೂಲಕ ಆದಾಯ ಹೆಚ್ಚಿಸುವುದನ್ನು ಉದ್ದೇಶಿಸಿದೆ. ಸೀಲಿಂಗ್ ಯಂತ್ರದ ಸಹಾಯದಿಂದ ಉತ್ಪನ್ನಗಳ ಪ್ಯಾಕೇಜಿಂಗ್ ಸುಧಾರಿಸಿ, ಮಾರುಕಟ್ಟೆ ಮೌಲ್ಯ ಹೆಚ್ಚಿಸುವಲ್ಲಿ ನೆರವಾಗಲಿದೆ.ಈ ನೆರವು ಐಸಿಎಆರ್-ಡಿಸಿಆರ್, ಪುತ್ತೂರು

ಕೊರಗ ಸಮುದಾಯ ಸಬಲೀಕರಣಕ್ಕೆ ಉತ್ತೇಜನ: ಸಮುದಾಯಕ್ಕೆ ಸೀಲಿಂಗ್ ಯಂತ್ರ ವಿತರಣೆ Read More »

ಗೂನಡ್ಕ ಹಾಡುಹಗಲೇ ಕಳ್ಳತನ ಮಸೀದಿಯ ಕಾಣಿಕೆ ಹುಂಡಿ ಕಳವು

ಗೂನಡ್ಕ: ಬದ್ರಿಯಾ ಜುಮ್ಮಾ ಮಸೀದಿಯ ಹರಕೆ ಹುಂಡಿಯನ್ನು ಕಳವು ಮಾಡಿರುವ ಘಟನೆ ಮಾ.30 ರಂದು ಗೂನಡ್ಕ ದಿಂದ ವರದಿಯಾಗಿದೆ .ಮದ್ಯಾಹ್ನ ಹೊತ್ತಿಗೆ ವ್ಯಕ್ತಿ ಯೊಬ್ಬರು ಮಸೀದಿ ಒಳಗೆ ನುಗ್ಗಿ ಕಾಣಿಕೆ ಹುಂಡಿ ಹೊಡೆದು ಹಣವನ್ನು ದೋಚಿದಾನೆ.ಸಿಸಿಟಿವಿ ದೃಶ್ಯ ದಲ್ಲಿ ವ್ಯಕ್ತಿಯ ಚಹರೆ ಗುರುತು ಪತ್ತೆಯಾಗಿದೆ. ನಡೆದಿದ್ದು, ಕಳ್ಳತನದ ಪಕ್ಕಾ ಮಾಹಿತಿ ಲಭ್ಯವಾಗಿದೆ.ಸೋಮವಾರ ಮಧ್ಯಾಹ್ನ ಸರಿಯಾಗಿ 12:10 ಗಂಟೆಗೆ ವ್ಯಕ್ತಿಯೊಬ್ಬ ಮಸೀದಿಯ ಆವರಣ ಪ್ರವೇಶಿಸಿ ಹರಕೆ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಸಂಪೂರ್ಣ ಕೃತ್ಯವು ಮಸೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ

ಗೂನಡ್ಕ ಹಾಡುಹಗಲೇ ಕಳ್ಳತನ ಮಸೀದಿಯ ಕಾಣಿಕೆ ಹುಂಡಿ ಕಳವು Read More »

ಇಂದು (ಮಾ.31) ಸುಳ್ಯ ಮತ್ತು ಅರಂತೋಡಿನಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಹಸಿರುವಾಣಿ ಸಂಗ್ರಹಣೆ ಮತ್ತು ಆಮಂತ್ರಣ ಪತ್ರಿಕೆ ಹಂಚಿಕೆಯ ಪೂರ್ವಭಾವಿ ಸಭೆ

ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು(ಮಾ.31) ಮಂಗಳವಾರ ಸುಳ್ಯ ಮತ್ತು ಅರಂತೋಡು ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಯು.ಕೆ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.ಸುಳ್ಯಕಾಯರ್ತೋಡಿಸ್ಥಳ: ಶ್ರೀ ಮಹಾವಿಷ್ಣು ದೇವಸ್ಥಾನಸಮಯ :ಸಂಜೆ 4:00ಕ್ಕೆಅರಂತೋಡುಅರಂತೋಡು ಪೇಟೆ -ಕಲ್ಲುಗದ್ದೆ -ಶುಂಟ್ಯಡ್ಕಸ್ಥಳ :ಶ್ರೀ ದುರ್ಗಾಮಾತಾ ಭಜನಾ

ಇಂದು (ಮಾ.31) ಸುಳ್ಯ ಮತ್ತು ಅರಂತೋಡಿನಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಹಸಿರುವಾಣಿ ಸಂಗ್ರಹಣೆ ಮತ್ತು ಆಮಂತ್ರಣ ಪತ್ರಿಕೆ ಹಂಚಿಕೆಯ ಪೂರ್ವಭಾವಿ ಸಭೆ Read More »

ಪಟಾಕಿ ಸಿಡಿಸಿದ್ದರಿಂದ ರೊಚ್ಚಿಗೆದ್ದ ಕಾಡಾನೆ ಆಟೋವನ್ನು ಮಾಡಿದ್ದೇನು ನೋಡಿ!

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ದೈತ್ಯ ಒಂಟಿಸಲಗ ಗ್ರಾಮಕ್ಕೆ ನುಗ್ಗಿ, ಕೃಷ್ಣಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಜಖಂಗೊಳಿಸಿದೆ. ಆನೆಯನ್ನು ಓಡಿಸಲು ಪಟಾಕಿ ಸಿಡಿಸಿದಾಗ, ಅದು ರೊಚ್ಚಿಗೆದ್ದು ಆಟೋ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ವಾರದಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಕೃಷಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.

ಪಟಾಕಿ ಸಿಡಿಸಿದ್ದರಿಂದ ರೊಚ್ಚಿಗೆದ್ದ ಕಾಡಾನೆ ಆಟೋವನ್ನು ಮಾಡಿದ್ದೇನು ನೋಡಿ! Read More »

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ

ಮಧ್ಯಪ್ರಾಚ್ಯದ ಯುದ್ದದಿಂದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೀಮೆಎಣ್ಣೆ ನೀಡಲು ಕೇಂದ್ರ ಸರ್ಕಾರ ತಾತ್ಕಾಲಿಕ ಅನುಮತಿ ನೀಡಿದೆ. ಪ್ರತಿ ಜಿಲ್ಲೆಯ ತೈಲ ಕಂಪನಿಗಳು 5,000 ಲೀಟರ್ ಸಂಗ್ರಹಿಸಲು ಸೂಚಿಸಲಾಗಿದ್ದು, ಅಡುಗೆ ಮತ್ತು ದೀಪಗಳ ಬಳಕೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸೀಮೆಎಣ್ಣೆ ಮುಕ್ತವೆಂದು ಘೋಷಿತವಾದ ಪ್ರದೇಶಗಳಿಗೂ ಇದು ಅನ್ವಯಿಸಲಿದೆ

21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಅನುಮತಿ Read More »

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ?

ಪತಿಯ ನಿಧನದ ನಂತರ ಅತ್ತೆ-ಮಾವಂದಿರ ಆಸ್ತಿಯಲ್ಲಿ ಸೊಸೆಯ ಹಕ್ಕಿನ ಕುರಿತು ಹಿಂದೂ ಉತ್ತರಾಧಿಕಾರ ಕಾಯ್ದೆ ಸ್ಪಷ್ಟನೆ ನೀಡಿದೆ. ಅತ್ತೆ-ಮಾವ ಸ್ವಯಾರ್ಜಿತವಾಗಿ (ಸ್ವಂತ ದುಡಿಮೆಯಿಂದ) ಗಳಿಸಿದ ಆಸ್ತಿಯಲ್ಲಿ ಸೊಸೆಗೆ ಕಾನೂನುಬದ್ದವಾಗಿ ನೇರ ಹಕ್ಕಿರುವುದಿಲ್ಲ. ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಪತಿಯ ಮರಣದ ನಂತರವೂ ಸೊಸೆಯು ಈ ಆಸ್ತಿಯಲ್ಲಿ ತನಗೆ ಪಾಲಿದೆ ಎಂದು ಕಾನೂನುಬದ್ಧವಾಗಿ ಹಕ್ಕು ಸಾಧಿಸಲು ಬರುವುದಿಲ್ಲ. ಮಾಲೀಕರು ವಿಲ್ (Will) ಮಾಡಿ ಮೃತಪಟ್ಟರೆ ಮಾತ್ರ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ನೀಡುವ ಸಂಪೂರ್ಣ

ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದೆಯಾ? Read More »

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ

ಮಾ.29 ರಂದು ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾ ಮಾತಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಅರಂತೋಡು ಇವುಗಳ ಸಹಯೋಗದಲ್ಲಿ ಪ್ರತಿ ತಿಂಗಳ ಕೊನೆಯ ಭಾನು ವಾರದಂದು ನಡೆಯುತ್ತಿರು ವ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಪೂ 7.30 ಯಿಂದ 9 30ರ ವರೆಗೆ ನಡೆದ ಹೆದ್ದಾರಿ ಸ್ಫಚತೆ ಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರು ಕೇಶವ ಅಡ್ತಲೆ,ಸಿಬ್ಬಂದಿಗಳು. ಸ್ವಚ್ಛತಾ ತಂಡದ ಸಿಬ್ಬಂದಿಗಳು ಹಾಗೂ ಸಂಜೀವಿನಿ ಒಕ್ಕೂಟದವರು ಭಾಗವಹಿಸಿದರು.

ಆರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ Read More »

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ:

ಬಂಟ್ವಾಳ:ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು,ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ,ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತು ಹೋಗಿದೆ ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಅನುರಾಧಾ ಕುರುಂಜಿ ಹೇಳಿದರು. ಬಂಟ್ವಾಳದಲ್ಲಿ ನಡೆದ ದ.ಕ.ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಸಾಹಿತ್ಯದ ಸ್ಥಿತ್ಯಂತರಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಆಧುನಿಕ ಯುಗದಲ್ಲಿ ನವೋದಯದಿಂದ ಪ್ರಾರಂಭಗೊಂಡು ಸಾಮಾಜಿಕ ಚಿಂತನೆ, ಮಹಿಳಾ ಧ್ವನಿ, ಯುವ ಲೇಖಕರ ಮೂಲಕ ಸಾಹಿತ್ಯ ಹೊಸ ರೂಪಗಳನ್ನು ಪಡೆದುಕೊಂಡಿದೆ. ರತ್ನಾಕರ ವರ್ಣಿಯಾದಿಯಾಗಿ ಮುದ್ದಣ, ಗೋವಿಂದ

ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ-ಡಾ.ಅನುರಾಧಾ ಕುರುಂಜಿ: Read More »

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ

ಹಾಸನದ ಅರಳೆಪೇಟೆಯ ಎಂಹೆಚ್ ಕನ್ವೆನ್ನನ್‌ಹಾಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಮಾರಾಮಾರಿ ನಡೆದಿದೆ. ಮಾರ್ಚ್ 29 ರಂದು ನಡೆದ ಈ ಘಟನೆಯಲ್ಲಿ ರಸ್ತೆ ಮಧ್ಯದಲ್ಲೇ ವಧು ಮತ್ತು ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಿರಿಯರ ಮಧ್ಯಪ್ರವೇಶದಿಂದ ಗಲಾಟೆ ತಣ್ಣಗಾಗಿದ್ದು, ಮಾರಾಮಾರಿಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಯಾಣ ಮಂಟಪದಲ್ಲಿ ವಧು-ವರರ ಸಂಬಂಧಿಕರ ನಡುವೆ ಹೊಡೆದಾಟ Read More »

error: Content is protected !!
Scroll to Top