June 7, 2026

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪದ ಬ್ರಹತ್ ಗಾತ್ರದ ಅಪಾಯಕಾರಿ ಮರ ತೆರವು

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪ ಜಾಲ್ಸೂರು–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ಬೃಹತ್ ಗಾತ್ರದ ಅಪಾಯಕಾರಿ ಮರವನ್ನು ಅಧಿಕಾರಿಗಳ ಅನುಮತಿಯೊಂದಿಗೆ ತೆರವುಗೊಳಿಸಲಾಗಿದೆ.ಈ ಕುರಿತು ಕಳೆದ ಎರಡು ವರ್ಷಗಳಿಂದ ಸತ್ಯಶಾಂತಿತ್ಯಾಗಮೂರ್ತಿ ಸೋಣಂಗೇರಿಯವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಿ. ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡುತ್ತಿದ್ದರು. ಮನವಿಗೆ ಕೂಡಲೇ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮರವನ್ನು ಅಪಾಯಕಾರಿ ಎಂದು ಗುರುತಿಸಿ ಅದನ್ನು ತೆರವುಗೊಳಿಸಲು ಅಧಿಕೃತ ಆದೇಶ ನೀಡಿದ್ದರು.ಮರದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು […]

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪದ ಬ್ರಹತ್ ಗಾತ್ರದ ಅಪಾಯಕಾರಿ ಮರ ತೆರವು Read More »

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು

ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಜೂ 7ರಂದು ಸಂಭವಿಸಿದ ಗ್ಯಾಸ್ ಸೋರಿಕೆಯಿಂದ ಮೈಸೂರು ಮೂಲದ ಮಹಿಳೆ ಮೃತಪಟ್ಟ ಘಟನೆ ವರದಿಯಾಗಿದೆ. ಕೊಡಗಿಗೆ ಪ್ರವಾಸ ಬಂದಿದ್ದ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೆ ಅಲ್ಲಿ ಉಳಿದುಕೊಂಡಿದ್ದರು.ಬೆಳಿಗ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ.ಬಾತ್ ರೂಮಿನಲ್ಲಿ ಕಿಟಕಿ ಇರಲಿಲ್ಲವೆಂದು ಹೇಳಲಾಗಿದೆ.ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಗೀಸರ್ ನ ಗ್ಯಾಸ್ ಸೋರಿಕೆಯಾಗಿ ಮಹಿಳೆ ಸಾವು Read More »

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

ಸುಳ್ಯದ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ 3ನೇ ವರ್ಷದ ವಾರ್ಷಿಕ ಮಹಾಸಭೆಯು ಜೂ. 7 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜನಾರ್ಧನ ದೋಳ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು 2023ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದು 2025- 26ನೇ ಸಾಲಿನಲ್ಲಿ ಸದಸ್ಯರ ಸಹಕಾರದೊಂದಿಗೆ ಒಟ್ಟು ರೂ. 44.02 ಕೋಟಿ ವ್ಯವಹಾರ ನಡೆಸಿ ರೂ. 7.06 ಲಕ್ಷ ನಿವ್ವಳ ಲಾಭ

ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ Read More »

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯದ ತ್ರೈಮಾಸಿಕ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು.ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯದ ತ್ರೈಮಾಸಿಕ ಸಭೆಯನ್ನು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕಲ್ಲು ಗುಂಡಿಯಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಭಾರತಿ ಪುರುಷೋತ್ತಮ ಉಳುವಾರು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ದೀಪ ಪ್ರಜ್ವಲನೆಯನ್ನು ಹಿರಿಯರಾದ ನಾರಾಯಣ ಭಟ್ ಕುಂದಲಕಾಡು ನೆರವೇರಿಸಿದರು.ಈ ಸಂದರ್ಭದಲ್ಲಿ ತಾಲೂಕುಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ್,ಪೈಕ , ಕಾರ್ಯದರ್ಶಿ ನಾರಾಯಣ ಅಜ್ಜಿ ಕಲ್ಲು, ಉಪಾಧ್ಯಕ್ಷರಾದ ಭಾರತಿ ಮೈರಾಜೆ, ಚಂದ್ರಶೇಖರ್ ಆಚಾರ್ಯ,

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಸಂಪಾಜೆ ವಲಯದ ತ್ರೈಮಾಸಿಕ ಸಭೆ Read More »

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕಗೊಂಡಿದ್ದು ದೇವಳದ ವ್ಯವಸ್ಥಾಪನಾ ಸಮಿತಿಯವರು ಸ್ವಾಗತಿಸಿದರು.ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ ಕಾನತ್ತೂರ್,ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತ್ಯ ನಾರಾಯಣ ಭಟ್, ಸಂತೋಷ ಕುಮಾರ್ ರೈ ಪಲತಡ್ಕ, ಮೈಲಪ್ಪ ಗೌಡ ಎಣ್ಮೂರು,ಧರ್ಮಪಾಲ ಗೌಡ ಮರಕಡ, ಧರ್ಮಣ್ಣ ನಾಯ್ಕ ಗರಡಿ, ಮಾಲಿನಿ ಕುದ್ವ,ಪವಿತ್ರ ಮೆಲ್ಲೆಟ್ಟಿ ಹಾಗೂ ಗೌರವ ಸಲಹೆಗಾರರಾದ ಪರಮೇಶ್ವರ ಗೌಡ ಬಿಳಿಮಲೆ ಉಪಸ್ಥಿತರಿದ್ದರು.

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಅರ್ಚಕರಾಗಿ ಮನೋಜ್ ಭಟ್ ಕನ್ಯಾನ ನೇಮಕ Read More »

error: Content is protected !!
Scroll to Top