July 9, 2026

ಮರ್ಕಂಜ : ಪಾಲದಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು

ಸುಳ್ಯ ತಾಲೂಕಿನ ಮರ್ಕಂಜದಲ್ಲಿ ತೋಟದ ಪಾಲದಿಂದ ಬಿದ್ದು ಮೃತಪಟ್ಟ ಘಟನೆ ಮರ್ಕಂಜದ ಜೋಗಿಮೂಲೆಯಿಂದ ವರದಿಯಾಗಿದೆ.ಮರ್ಕಂಜ ಜೋಗಿಮೂಲೆ ನಿವಾಸಿ ಚಂದ್ರಶೇಖರ (64 ವರ್ಷ) ಎಂಬವರೇ ಮೃತಪಟ್ಟ ವ್ಯಕ್ತಿ.ಜು. 8ರಂದು ಮನೆಯಿಂದ ತೆರಳಿದ್ದ ಚಂದ್ರಶೇಖರರವರು ಮನೆಗೆ ಹಿಂತಿರುಗುವಾಗ ತೋಟದ ಪಾಲದಿಂದ ಬಿದ್ದು ಮೃತಪಟ್ಟಿದ್ದರು.ಚಂದ್ರಶೇಖರರವರು ಹಿಂದುರುಗಿ ಬಾರದ ಕಾರಣ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಸಂಜೆಯ ವೇಳೆಗೆ ಅವರ ಮಗ ಅದೇ ದಾರಿಯಾಗಿ ಹೋಗುತ್ತಿದ್ದಾಗ ಚಂದ್ರಶೇಖರ ಶವ ತೋಡಿನಲ್ಲಿ ಬಿದ್ದಿರುವುದು ಕಂಡು‌ ಬಂತು‌. ಇದೀಗ ಮೃತದೇಹವನ್ನು […]

ಮರ್ಕಂಜ : ಪಾಲದಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಸುಳ್ಯ ನಗರ ಸಮೀಪದ ತೋಟಗಳಲ್ಲಿ ಕಾಡಾನೆಗಳಿಂದ ಕೃಷಿ ನಾಶ !

ದಿನ ಕಳೆದಂತೆ ರೈತರಿಗೆ ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ಹೆಚ್ಚುತ್ತಿದ್ದು ಕಳೆದ ರಾತ್ರಿ( ಜೂ.8) ಸುಳ್ಯ ಗಾಂಧಿನಗರ ಕೆ.ಪಿ.ಎಸ್.ಶಾಲೆಯ. ಸುಮಾರು 350 ಮೀ.ಅಂತರ ದೂರದ ರೈತರ ತೋಟಗಳಿಗೆ ಕಾಡಾನೆಗಳು ನುಗ್ಗಿ ಕೃಷಿಗಳನ್ನು ನಾಶ ಮಾಡಿದ ಘಟನೆ ವರದಿಯಾಗಿದೆ.ಉಬರಡ್ಕ ರಸ್ತೆ ಕಡೆಯಿಂದ ಬಂದ ಕಾಡಾನೆಗಳು ಅಟಲ್ ನಗರ,ದೇಂಗೋಡಿ,ಅಳಿಕೆ ಮಜಲು‌,ಕಾಯರ್ತೋಡಿ ಬೈಲಿಗೆ ನುಗ್ಗಿ ಸುಮಾರು 15ಕ್ಕೂ ಅಧಿಕ ರೈತರ ತೋಟಗಳಲ್ಲಿ ಕ್ರಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕೆಲವೆಡೆ ಆವರಣ ಗೋಡೆಗಳನ್ನು ಆನೆಗಳು ಹುಡಿ ಮಾಡಿ ಹಾಕಿವೆ.

ಸುಳ್ಯ ನಗರ ಸಮೀಪದ ತೋಟಗಳಲ್ಲಿ ಕಾಡಾನೆಗಳಿಂದ ಕೃಷಿ ನಾಶ ! Read More »

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ

ಜಮ್ಮುವಿನಲ್ಲಿ ದೇಶದ ಭದ್ರತಾ ಸೇವೆಯಲ್ಲಿದ್ದ ಕಡಬ ತಾಲೂಕಿನ ಯೋಧನೊಬ್ಬ ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿಯಾದ, ಸಿಐಎಸ್ಎಫ್ ಯೋಧ ಸೀತಾರಾಮ ಗೌಡರು ಮಂಗಳೂರಿನ ಕೆಪಿಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ ಯೋಧರಾಗಿದ್ದಾರೆ.ಮಂಗಳೂರು ನಗರದ ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.CISF ನಲ್ಲಿ ಸೇವೆ ಸಲ್ಲಿಸುತ್ತಿರುವ ಸೀತಾರಾಮ ಗೌಡರವರು ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲ್‌ನಲ್ಲಿ ಕರ್ತವ್ಯ

ಕಡಬ : ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಸೀತಾರಾಮ ಗೌಡ ರಸ್ತೆ ಅಪಘಾತಕ್ಕೆ ಬಲಿ Read More »

error: Content is protected !!
Scroll to Top