ಸುಳ್ಯ ತಾಲೂಕಿನ ಮರ್ಕಂಜದಲ್ಲಿ ತೋಟದ ಪಾಲದಿಂದ ಬಿದ್ದು ಮೃತಪಟ್ಟ ಘಟನೆ ಮರ್ಕಂಜದ ಜೋಗಿಮೂಲೆಯಿಂದ ವರದಿಯಾಗಿದೆ.
ಮರ್ಕಂಜ ಜೋಗಿಮೂಲೆ ನಿವಾಸಿ ಚಂದ್ರಶೇಖರ (64 ವರ್ಷ) ಎಂಬವರೇ ಮೃತಪಟ್ಟ ವ್ಯಕ್ತಿ.
ಜು. 8ರಂದು ಮನೆಯಿಂದ ತೆರಳಿದ್ದ ಚಂದ್ರಶೇಖರರವರು ಮನೆಗೆ ಹಿಂತಿರುಗುವಾಗ ತೋಟದ ಪಾಲದಿಂದ ಬಿದ್ದು ಮೃತಪಟ್ಟಿದ್ದರು.
ಚಂದ್ರಶೇಖರರವರು ಹಿಂದುರುಗಿ ಬಾರದ ಕಾರಣ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇಂದು ಸಂಜೆಯ ವೇಳೆಗೆ ಅವರ ಮಗ ಅದೇ ದಾರಿಯಾಗಿ ಹೋಗುತ್ತಿದ್ದಾಗ ಚಂದ್ರಶೇಖರ ಶವ ತೋಡಿನಲ್ಲಿ ಬಿದ್ದಿರುವುದು ಕಂಡು ಬಂತು. ಇದೀಗ ಮೃತದೇಹವನ್ನು ಸುಳ್ಯಕ್ಕೆ ಮರೋಣತ್ತತ ಪರೀಕ್ಷೆಗಾಗಿ ತರಲಾಗಿದೆ.
































































