July 22, 2026

ಶಾಲಾ ಬಸ್‌ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಯ ಬರಿಮಾರು ಸಮೀಪ ಕಲ್ಲಡ್ಕ ಶ್ರೀರಾಮ ಶಾಲೆಯ ಬಸ್‌ ಮೇಲೆ ಬೃಹತ್ ಮರ ಬಿದ್ದು ಐದು ವರ್ಷದ ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ದಾರುಣವಾಗಿ ಮೃತಪಟ್ಟಿದ್ದಾಳೆ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ಆಕಸ್ಮಿಕ ದುರಂತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ ಮತ್ತಿಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬಿಳಿಯೂರಿನ ತೋಟ ನಿವಾಸಿ ನಿವಾಸಿ ಚಂದ್ರಹಾಸ್ ಎಂಬವರ ಪುತ್ರಿ ಎಲ್ […]

ಶಾಲಾ ಬಸ್‌ ಮೇಲೆ ಮರ ಬಿದ್ದು ಯುಕೆಜಿ ವಿದ್ಯಾರ್ಥಿನಿ ಚಿರಾನ್ವಿ ಸಾವು Read More »

ಭಾರೀ ಮಳೆ ಸಾಧ್ಯತೆ; ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ,ಪಿಯುಗೆ ರಜೆ

ಭಾರತೀಯ ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಗೆ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಜು.23 ರಂದು ಅಂಗನವಾಡಿ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಸಾಧ್ಯತೆ; ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ,ಪಿಯುಗೆ ರಜೆ Read More »

ಅರಂತೋಡು : ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ

ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ನಡೆದಿದೆ.ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಅರಂತೋಡು ಗ್ರಾಮದ ಬಿಳಿಯಾರು ಬನ ಸುಬ್ರಾಯ ಅವರ ಮಗ ಸಂತೋಷ್ ಎಂದು ಗುರುತಿಸಲಾಗಿದೆ.ಗಾಯಾಳುವನ್ನು‌ ಶರತ್ ಅಡ್ಯಡ್ಕ ಅವರು ಸ್ಥಳೀಯರ ಸಹಕಾರದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದಿದ್ದಾರೆ.

ಅರಂತೋಡು : ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ Read More »

ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ ಕಾರ್ಯಕ್ರಮ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಜು. 22 ರಂದು ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ” ಆಟಿ ಆಚರಣೆಯಿಂದ ಹಿಂದಿನ ಜೀವನದ ಅನುಭವವನ್ನು ಮತ್ತೆ ನೆನಪಿಸಿದಂತಾಗುದೆ.ನಮ್ಮ ಹಿರಿಯರು ಮಾಡುವ ಕಾರ್ಯ ಮೂಢನಂಬಿಕೆಯಲ್ಲ. ಮೂಲ ನಂಬಿಕೆಯಾಗಿದ್ದು, ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಅಗತ್ಯ” ಎಂದರು. ಸಾಮಾಜಿಕ ಪಿಡುಗಾದ ಲಂಚ ಭ್ರಷ್ಟಾಚಾರವನ್ನು ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡೋಣ. ನನ್ನಲ್ಲಿಗೆ

ಸುಳ್ಯದಲ್ಲಿ ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಆಟಿಕೂಟ Read More »

error: Content is protected !!
Scroll to Top