ಜಾತಿ, ಧರ್ಮ, ಪಕ್ಷ ರಾಜಕೀಯದ ಹಂಗಿಲ್ಲದೆ ಧಾರ್ಮಿಕತೆಯನ್ನು ಕಾಪಾಡುವಲ್ಲಿ ಸುಳ್ಯ ದಸರಾ ಶ್ರೇಷ್ಠತೆ ಉಳಿಸಿಕೊಂಡಿದೆ: ರಾಜೇಶನಾಥಜೀ
ಸುಳ್ಯ: ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಮಕ್ಕಳು ಕೂಡ ಸುಳ್ಯ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾತೆಯರು ಪ್ರೇರೇಪಿಸಬೇಕು. ಜಾತಿ, ಧರ್ಮ, ಪಕ್ಷ ಹಾಗೂ ರಾಜಕೀಯದ ಹಂಗಿಲ್ಲದೆ ಧಾರ್ಮಿಕತೆಯನ್ನು ಕಾಪಾಡುವಲ್ಲಿ ಸುಳ್ಯ ದಸರಾ ತನ್ನದೇ ಆದ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ ಎಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಮರ್ಕಂಜದ ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿಗಳಾದ ರಾಜೇಶನಾಥಜೀ ಹೇಳಿದರು.ಅ.16ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆದ 55ನೇ ವರ್ಷದ ಶ್ರೀ ಶಾರದಾಂಬ ಉತ್ಸವದ

