October 26, 2026

ಕಡೆಪಾಲ : ಸ್ವಾಮಿಕೊರಗಜ್ಜ ದೈವಸ್ಥಾನದ ಬಳಿ ಲಾರಿ ಪಲ್ಟಿ; ಮೂವರು ಅಪಾಯದಿಂದ ಪಾರು

ಕಲ್ಲುಗುಂಡಿ, ಅ.26: ಕಲ್ಲುಗುಂಡಿ ಸಮೀಪದ ಕಡೆಪಾಲ ಸ್ವಾಮಿಕೊರಗಜ್ಜ ದೈವಸ್ಥಾನದ ದ್ವಾರದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾದ ಘಟನೆ ಅ.26ರಂದು ನಡೆದಿದೆ. ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಲಾರಿ, ಕಡೆಪಾಲ ಸ್ವಾಮಿಕೊರಗಜ್ಜ ದೈವಸ್ಥಾನದ ದ್ವಾರದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಸೇರಿದಂತೆ ಮೂವರು ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಡೆಪಾಲ : ಸ್ವಾಮಿಕೊರಗಜ್ಜ ದೈವಸ್ಥಾನದ ಬಳಿ ಲಾರಿ ಪಲ್ಟಿ; ಮೂವರು ಅಪಾಯದಿಂದ ಪಾರು Read More »

ಅರಂತೋಡು: 89ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ

ಅರಂತೋಡು: ಅರಂತೋಡು ಗ್ರಾಮ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಜಂಟಿ ಸಹಯೋಗದೊಂದಿಗೆ 89ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಅ.25 ರಂದು ಯಶಸ್ವಿಯಾಗಿ ನಡೆಯಿತು.ಕಳೆದ 2018ರ ಡಿಸೆಂಬರ್‌ನಲ್ಲಿ ಚಾಲನೆ ಪಡೆದುಕೊಂಡ ಈ ಹೆದ್ದಾರಿ ಸ್ವಚ್ಛತಾ ಅಭಿಯಾನವು, ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಿರಂತರವಾಗಿ ನಡೆಯುತ್ತಾ ಬಂದಿದೆ. ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ಈ ಶ್ರಮದಾನವು ಯಶಸ್ವಿ 89ನೇ ಕಾರ್ಯಕ್ರಮವನ್ನು ಪೂರೈಸಿರುವುದು ವಿಶೇಷವಾಗಿದೆ.ಇಂದಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್

ಅರಂತೋಡು: 89ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ Read More »

error: Content is protected !!
Scroll to Top