October 29, 2026

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಕನ್ನಡ ಯಾತ್ರಾ ರಥಕ್ಕೆ ಜಾಲ್ಸೂರಿನಲ್ಲಿ ಭವ್ಯ ಸ್ವಾಗತ

ಸರಕಾರಿ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಅಭಿಯಾನದ ರಾಜ್ಯ ಯಾತ್ರೆ ಶ್ಲಾಘನೀಯ : ವೈ ಎಸ್ ಹರಗಿ ಕನ್ನಡ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯ ‘ಕನ್ನಡ ಯಾತ್ರೆ’ ಕಾರ್ಯಕ್ರಮ ಶ್ಲಾಘನೀಯ ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಸ್ ಹರಗಿ ಯವರು ಹೇಳಿದರು. ಅ 28ರಂದು ಚಾಲ್ಸೂರಿನಲ್ಲಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ‘ಕನ್ನಡ ಯಾತ್ರಾ’ ರಥದ ಸ್ವಾಗತ ಕಾರ್ಯಕ್ರಮ ವನ್ನು

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಕನ್ನಡ ಯಾತ್ರಾ ರಥಕ್ಕೆ ಜಾಲ್ಸೂರಿನಲ್ಲಿ ಭವ್ಯ ಸ್ವಾಗತ Read More »

ಸುಳ್ಯ ತಹಶೀಲ್ದಾರ್ ಮಂಜುಳಾ ಮಂಗಳೂರಿಗೆ ವರ್ಗಾವಣೆ

ಸುಳ್ಯ: ಕಳೆದ ಎರಡು ವರ್ಷಗಳಿಂದ ಸುಳ್ಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಸುಮಾರು 20 ದಿನಗಳ ಹಿಂದೆ ಮಂಜುಳಾ ಅವರನ್ನು ಕೆಎಎಸ್ ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ ಸರಕಾರ ಆದೇಶಿಸಿತ್ತು. ಇದೀಗ ಅವರನ್ನು ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರನ್ನಾಗಿ ನೇಮಕ ಮಾಡಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ.

ಸುಳ್ಯ ತಹಶೀಲ್ದಾರ್ ಮಂಜುಳಾ ಮಂಗಳೂರಿಗೆ ವರ್ಗಾವಣೆ Read More »

error: Content is protected !!
Scroll to Top