October 2026

ರೈತ ಖಾತೆಗಳಿಗೆ ಕಡಿಮೆ ಪ್ರಮಾಣದಲ್ಲಿ ಜಮೆಯಾಗುತ್ತಿರುವ ಬೆಳೆ ವಿಮೆ ಪರಿಹಾರ : ರೈತರ ಆಕ್ರೋಶ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರ ಬ್ಯಾಂಕ್ ಖಾತೆಗಳಿಗೆ ಬೆಳೆ ವಿಮೆ ಪರಿಹಾರದ ಹಣ ಜಮೆಯಾಗಲು ಆರಂಭವಾಗಿದೆ. ಆದರೆ, ವಿಮಾ ಪರಿಹಾರದ ಮೊತ್ತ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಅಸಮಾಧಾನ ಕೆಲವು ರೈತರಿಂದ ವ್ಯಕ್ತವಾಗುತ್ತಿದೆ.ಮಂಗಾರು ಹಂಗಾಮಿನಲ್ಲಿ ಹವಾಮಾನ ವೈಪರೀತ್ಯ ಹಾಗೂ ವಿವಿಧ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ ಕೃಷಿಕರು ಬೆಳೆ ವಿಮೆಯನ್ನೇ ಆಧಾರವಾಗಿ ನಿರೀಕ್ಷಿಸುತ್ತಾರೆ. ಬೆಳೆ ವಿಮೆ ಪಾವತಿಸಿದ ರೈತರಿಗೆ ನಷ್ಟಕ್ಕೆ ಅನುಗುಣವಾಗಿ ಪರಿಹಾರ ದೊರೆಯಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.2024–25ನೇ ಸಾಲಿನಲ್ಲಿಯೂ

ರೈತ ಖಾತೆಗಳಿಗೆ ಕಡಿಮೆ ಪ್ರಮಾಣದಲ್ಲಿ ಜಮೆಯಾಗುತ್ತಿರುವ ಬೆಳೆ ವಿಮೆ ಪರಿಹಾರ : ರೈತರ ಆಕ್ರೋಶ Read More »

ಕದ್ರಿ ಪಾರ್ಕ್‌ನಲ್ಲಿ ಕೆಆರ್‌ಎಸ್ ಪಕ್ಷದಿಂದ ಗಾಂಧಿ ಜಯಂತಿ ಆಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೆಆರ್‌ಎಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿಯನ್ನು ಮಂಗಳೂರಿನಲ್ಲಿ ಆಚರಿಸಲಾಯಿತು. ನಗರದ ಕದ್ರಿ ಪಾರ್ಕ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರೋಷನ್ ಲೋಬೋ, ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪ್ರಬಲ ಅಸ್ತ್ರಗಳನ್ನಾಗಿ ಬಳಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು

ಕದ್ರಿ ಪಾರ್ಕ್‌ನಲ್ಲಿ ಕೆಆರ್‌ಎಸ್ ಪಕ್ಷದಿಂದ ಗಾಂಧಿ ಜಯಂತಿ ಆಚರಣೆ Read More »

ಆಲೆಟ್ಟಿ: ಹೃದಯಾಘಾತದಿಂದ ನಾಗರಾಜ ಭಟ್ ನಿಧನ

ಸುಳ್ಯ, ಅ.2: ಆಲೆಟ್ಟಿ ಗ್ರಾಮದ ಬಿಸಿಲುಮಲೆ ನಿವಾಸಿ, ಬಲೆಕ್ಕಳ ಮನೆತನದ ದಿ. ಗೋಪಾಲ ಭಟ್ ಅವರ ಹಿರಿಯ ಪುತ್ರ, ಪ್ರಗತಿಪರ ಕೃಷಿಕ ನಾಗರಾಜ ಭಟ್ (74) ಅವರು ಹೃದಯಾಘಾತದಿಂದ ನಿಧನರಾದರು.ಅ.2ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಕಾಂಪ್ಲೆಕ್ಸ್‌ನಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಕಚೇರಿಗೆ ನಾಗರಾಜ ಭಟ್ ಆಗಮಿಸಿದ್ದರು. ಕಚೇರಿಯಲ್ಲಿ ಕುಳಿತಿದ್ದ ವೇಳೆ ಅವರಿಗೆ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡಿತು.ತಕ್ಷಣ ಗಮನಿಸಿದ ಚಾರ್ಟರ್ ಅಕೌಂಟೆಟ್ ನಾಗರಾಜ ಭಟ್ ಅವರಿಗೆ ನೆರವಾಗಿ ತಮ್ಮ ಕಾರಿನಲ್ಲಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು.

ಆಲೆಟ್ಟಿ: ಹೃದಯಾಘಾತದಿಂದ ನಾಗರಾಜ ಭಟ್ ನಿಧನ Read More »

ಪೆರಾಜೆ : ಜ್ಯೋತಿ‌ ಪ್ರೌಢಶಾಲೆಯಲ್ಲಿ‌ ಗಾಂಧಿಜಯಂತಿ‌ ಆಚರಣೆ

ಜ್ಯೋತಿ ಪ್ರೌಢ ಶಾಲೆಯಲ್ಲಿ ಇಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಜಯಂತಿ ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀಮಹೇಶ್ ಕುಮಾರ್ ಮೇನಾಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೋಷಕ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಸುಳ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಸಿಬ್ಬಂಧಿಗಳು.ಹಾಜರಿದ್ದರು. ವಿದ್ಯಾರ್ಥಿಗಳು ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ನಾಗರಾಜು ಜಿ ಆರ್ ಮತ್ತು ಶ್ರೀ ಅಶೋಕ್ ಪೀಚೆ ಉಪಸ್ಥಿತರಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ವರ ಬಗ್ಗೆ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕಿ ಅರ್ಚನಕುಮಾರಿ

ಪೆರಾಜೆ : ಜ್ಯೋತಿ‌ ಪ್ರೌಢಶಾಲೆಯಲ್ಲಿ‌ ಗಾಂಧಿಜಯಂತಿ‌ ಆಚರಣೆ Read More »

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ಸ್ವಚ್ಛತಾ ಅಭಿಯಾನ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಅ. 02 ರಂದು ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿಯಘಟಕಾಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಲ. ವಿನೋದ್ ಲಾಸ್ರಾದೊ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.ನಿಲಯ ಮೇಲ್ವಿಚಾರಕರಾದ ಶ್ರೀಮತಿ ಗೀತಾ

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ – ಸ್ವಚ್ಛತಾ ಅಭಿಯಾನ Read More »

ಗಾಂಧೀಜಿಯವರ ಕನಸಿನ ಭಾರತ ನಮ್ಮ ಪ್ರತಿಜ್ಞೆಯಾಗಬೇಕು: ಭರತ್ ಮುಂಡೋಡಿ

ಸುಳ್ಯ, ಅ.2: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಭಾರತದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಸಂದೇಶ ಭಾಷಣ ಮಾಡಿದರು. ಯಾವುದೇ ರಾಜಕೀಯ ಉನ್ನತ ಹುದ್ದೆಯನ್ನು ಹೊಂದಿರದ ನಾಯಕ ನಿಧನರಾದಾಗ ವಿಶ್ವಸಂಸ್ಥೆಯಲ್ಲಿ ಧ್ವಜವನ್ನು ಅರ್ಧಕ್ಕೆ

ಗಾಂಧೀಜಿಯವರ ಕನಸಿನ ಭಾರತ ನಮ್ಮ ಪ್ರತಿಜ್ಞೆಯಾಗಬೇಕು: ಭರತ್ ಮುಂಡೋಡಿ Read More »

ಲಾಲ್ ಬಹದ್ದೂರ್ ಶಾಸ್ತ್ರಿ – ಮಹಾನ್ ದೇಶಭಕ್ತ

ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಸರಳತೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಗೆ ಹೆಸರಾದ ಮಹಾನ್ ನಾಯಕರು. 1904ರ ಅಕ್ಟೋಬರ್ 2ರಂದು ಜನಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಕ್ಕಾಗಿ ಜೈಲುವಾಸ ಅನುಭವಿಸಿದರು.1964ರಲ್ಲಿ ಭಾರತದ ಪ್ರಧಾನಮಂತ್ರಿಯಾದ ಅವರು ದೇಶದ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ನಾಯಕತ್ವ ವಹಿಸಿದರು. ರೈತರು ಮತ್ತು ಸೈನಿಕರ ಮಹತ್ವವನ್ನು ಸಾರಲು “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆ ನೀಡಿದರು.ಅಧಿಕಾರದಲ್ಲಿದ್ದರೂ ಸರಳ ಜೀವನ ನಡೆಸಿದ ಶಾಸ್ತ್ರಿಯವರು ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಮಾದರಿಯಾಗಿದ್ದರು. 1966ರಲ್ಲಿ ಅವರು ನಿಧನರಾದರೂ, ಅವರ

ಲಾಲ್ ಬಹದ್ದೂರ್ ಶಾಸ್ತ್ರಿ – ಮಹಾನ್ ದೇಶಭಕ್ತ Read More »

ಮಹಾತ್ಮ ಗಾಂಧೀಜಿ ಏಕೆ ಆದರ್ಶರು?

ಸತ್ಯ, ಅಹಿಂಸೆ ಮತ್ತು ಸರಳತೆಯ ಮೂಲಕ ಜಗತ್ತಿಗೆ ದಾರಿ ತೋರಿದ ಮಹಾನ್ ಚೇತನಒಬ್ಬ ವ್ಯಕ್ತಿ ಬದುಕುವುದು ತನ್ನ ಕುಟುಂಬಕ್ಕಾಗಿ, ತನ್ನ ಸಮಾಜಕ್ಕಾಗಿ ಅಥವಾ ತನ್ನ ದೇಶಕ್ಕಾಗಿ. ಆದರೆ ತನ್ನ ಜೀವನದ ಮೌಲ್ಯಗಳ ಮೂಲಕ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುವ ವ್ಯಕ್ತಿಗಳು ಇತಿಹಾಸದಲ್ಲಿ ಅಪರೂಪ. ಅಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ. ಅವರ ಜೀವನ ಕೇವಲ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲ; ಅದು ಸತ್ಯವನ್ನು ನಂಬಿ ಬದುಕುವ, ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲುವ ಮತ್ತು ಮನುಷ್ಯನನ್ನು

ಮಹಾತ್ಮ ಗಾಂಧೀಜಿ ಏಕೆ ಆದರ್ಶರು? Read More »

ಸೌಜನ್ಯ ಪ್ರಕರಣದ ಮರುತನಿಖೆಗೆ ಚಾಲನೆ,ನೂತನ ಎಸ್‌ಐಟಿ ತಂಡ ಮಂಗಳೂರಿಗೆ ಆಗಮನ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಚಿಸಲಾಗಿರುವ ನೂತನ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳೂರಿಗೆ ಆಗಮಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸಿದೆ.ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಈ ಪ್ರಕರಣದ ತನಿಖೆಗೆ ಇದೀಗ ಹೊಸ ತಂಡ ರಚನೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮತ್ತೊಮ್ಮೆ ಮಹತ್ವ ಬಂದಿದೆ. ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಿಂದಿನ ತನಿಖೆಯ ವಿವರಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳ ಕುರಿತು ಪರಿಶೀಲನೆ ನಡೆಸುವ ಪ್ರಕ್ರಿಯೆ ಆರಂಭಿಸಿದ್ದಾರೆ.ಪ್ರಕರಣದ ಹಿಂದಿನ

ಸೌಜನ್ಯ ಪ್ರಕರಣದ ಮರುತನಿಖೆಗೆ ಚಾಲನೆ,ನೂತನ ಎಸ್‌ಐಟಿ ತಂಡ ಮಂಗಳೂರಿಗೆ ಆಗಮನ Read More »

ಚೂರಿ ಇರಿತದ ನಡುವೆಯೂ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್

ನವದೆಹಲಿ: ನೂರಾರು ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿದ್ದ ವೇಳೆ ಕಾಕ್‌ಪಿಟ್‌ನಲ್ಲೇ ಚೂರಿ ಇರಿತಕ್ಕೆ ಒಳಗಾದರೂ ಕರ್ತವ್ಯದಿಂದ ಹಿಂದೆ ಸರಿಯದೆ 174 ಪ್ರಯಾಣಿಕರ ಜೀವ ರಕ್ಷಣೆಗೆ ಹೋರಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಹಾರಾಟದ ಮಧ್ಯೆ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್‌ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚೂರಿಯಿಂದ ದಾಳಿ ನಡೆದಿದೆ ಎನ್ನಲಾಗಿದೆ. ಏಕಾಏಕಿ ನಡೆದ ದಾಳಿಯಿಂದ

ಚೂರಿ ಇರಿತದ ನಡುವೆಯೂ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ Read More »

error: Content is protected !!
Scroll to Top